ಸದಸ್ಯ:LAKSHMAN PRASAD V/ನನ್ನ ಪ್ರಯೋಗಪುಟ
ಬೆಂಗಳೂರು ಬೆಂಗಳೂರು ಪೂರ್ವ ತಾಲ್ಲೂಕು, ವರ್ತೂರು ಹೋಬಳಿ, ಸರ್ಜಾಪುರ ಮುಖ್ಯ ರಸ್ತೆ, ಕಾರ್ಮೆಲರಂ ಅಂಚೆ, ಕೈಕೊಂಡ್ರಹಳ್ಳಿ ಗ್ರಾಮ ರಾಮಕ್ಕ ವಠಾರ ಮನೆ ನಂ.262ರಲ್ಲಿ ವಾಸವಾಗಿರುವ ಎಂ. ವೆಂಕಟೇಶ್ ರವರ ಧರ್ಮಪತ್ನಿಯಾದ ಸುಮಾರು 48 ವರ್ಷ ವಯಸ್ಸುಳ್ಳ ಶ್ರೀಮತಿ ಸರಸಮ್ಮ ಆದ ನಾನು ಈ ಮೂಲಕ ಪ್ರಮಾಣಿಕರಿಸುವುದೇನೆಂದರೆ
ಶ್ರೀಮತಿ ಸರಸಮ್ಮ ಆದ ನಾನು ಈ ಮೊಕದ್ದೊಮೆಯಲ್ಲಿ ಪಿರ್ಯಾದುದಾರಳಾಗಿರುತ್ತೇನೆ.
ಕಾರ್ಯನಿರ್ವಾಹಕ ಅಧಿಕಾರಿಗಳು, ತಾಲ್ಲೂಕು ಪಂಚಾಯಿತಿ ಬೆಂಗಳೂರು ಪೂರ್ವ ತಾಲ್ಲೂಕು, ಬೆಂಗಳೂರು.
ಹಾಲನಾಯಕನಹಳ್ಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ವರ್ತೂರು ಹೋಬಳಿ, ಬೆಂಗಳೂರು ಪೂರ್ವ ತಾಲ್ಲೂಕು, ಬೆಂಗಳೂರು, ಹಾಲನಾಯಕನಹಳ್ಳಿ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ವರ್ತೂರು ಹೋಬಳಿ, ಬೆಂಗಳೂರು ಪೂರ್ವ ತಾಲ್ಲೂಕು ಬೆಂಗಳೂರು ಇವರುಗಳ ವಿರುದ್ಧ ಆರೋಪವನ್ನು ಏರಿಸಿ ದೂರನ್ನು ಲಗತ್ತಿಸಿರುತ್ತೇನೆ. ನನ್ನ ದೂರಿನ ಒಳಾಂಶವನ್ನು ಈ ಪ್ರಮಾಣ ಪತ್ರದಲ್ಲಿ ಮುಖ್ಯ ಭಾಗವಾಗಿ ಓದಿಕೊಳ್ಳಬಹುದು.
ನಾನು ಈ ಮೇಲ್ಕಂಡ ವಿಳಾಸದಲ್ಲಿ ನನ್ನ ಗಂಡ ಮತ್ತು ನಾಲ್ಕು ಜನ ಮಕ್ಕಳೊಂದಿಗೆ ಕೂಲಿಕೆಲಸವನ್ನು ಮಾಡಿಕೊಂಡು ವಾಸವಾಗಿರುತ್ತೇನೆ. ನಾವು ತೀರಾ ಕಡುಬಡವರಾಗಿರುತ್ತೇವೆ. ಹಾಗೂ ನಾವು ಪರಿಶಿಷ್ಟ ಜಾತಿಗೆ ಒಳಪಟ್ಟಿರುತ್ತೇವೆ. ಈಗಿರುವಾಗ ನಮ್ಮ ಬಡಕುಟುಂಬಕ್ಕೆ ಕರ್ನಾಟಕ ಸರ್ಕಾರದಿಂದ ಆಶ್ರಯ ಯೋಜನೆಯಡಿಯಲ್ಲಿ ಬೆಂಗಳೂರು ಪೂರ್ವ ತಾಲ್ಲೂಕು,ವರ್ತೂರು ಹೋಬಳಿ ಹಾಲನಾಯಕನಹಳ್ಳಿ ಗ್ರಾಮ ಪಂಚಾಯಿತಿಗೆ ಒಳಪಟ್ಟಿರುವ ಎ.ಕ್ರಷ್ಣಪ್ಪ ನಗರ ಸರ್ವೆ ನಂ. 39 ಮತ್ತು 40 ರಲ್ಲಿ ನಕ್ಷೆ ಪ್ರಕಾರ ವಿಂಗಡಿಸಿರುವ ನಿವೇಶನ ಸಂಖ್ಯೆ 416/3ರರನ್ನು ನನ್ನ ಹೆಸರಿಗೆ ಸರ್ಕಾರದಿಂದ ಆಶ್ರಯ ಯೋಜನೆಯಡಿಯಲ್ಲಿ ನಿವೇಶನ ಹಕ್ಕುಪತ್ರವನ್ನು ದಿನಾಂಕ : 18-10-2002ರಂದು ಫಾರಂ ನಂ. 12 ಬಿ ನಿವೇಶನ ಹಕ್ಕು ಪತ್ರ ಸಂಖ್ಯೆ. 0208742ರಂತೆ ಪೂರ್ವ ಪಶ್ಚಿಮ 20 ಅಡಿಗಳು, ಉತ್ತರ ದಕ್ಷಿಣ 40 ಅಡಿಗಳುಳ್ಳ ನಿವೇಶನಕ್ಕೆ ಚಕ್ಕುಬಂದಿ, ಪೂರ್ವಕ್ಕೆ 416/2, ಪಶ್ಚಿಮಕ್ಕೆ ರಸ್ತೆ, ಉತ್ತರಕ್ಕೆ 417/2 ಬೇರೆಯವರ ಸ್ವತ್ತಾಗಿರುತ್ತದೆ, ದಕ್ಷಿಣಕ್ಕೆ ರಸ್ತೆ ಮತ್ತು ನನಗೆ ನಿವೇಶನವನ್ನು ನೀಡಿರುತ್ತಾರೆ.
ನಾನು ಮುಂದುವರೆದು ಪ್ರಮಾಣಿಕರಿಸುವುದೇನೆಂದರೆ ನನಗೆ ಸರ್ಕಾರದಿಂದ ನೀಡಿದ ನಿವೇಶನ ಹಕ್ಕು ಪತ್ರದಂತೆ ನಾನು ನನ್ನ ನಿವೇಶನದ ಹತ್ತಿರ ಹೋದಾಗ ಸರ್ಕಾರದವರು ನೀಡಿದ ನಿವೇಶನ ಎಲ್ಲಿದೆ ಎಂದು ಕಂಡುಹಿಡಿಯಲು ಸಾಧ್ಯವಗಲಿಲ್ಲ. ನಂತರ ದೊಡ್ಡ ಕನ್ನಲ್ಲಿ ಗ್ರಾಮಪಂಚಾಯಿತಿ ಕಾರ್ಯದರ್ಶಿಯವರನ್ನು ಭೇಟಿಯಾದಾಗ ನಮಗೆ ಈ ನಿವೇಶನವನ್ನು ತೋರಿಸುತ್ತೇವೆ ಎಂದು ಆಶ್ವಾಸನೆಯನ್ನು ನೀಡಿರುತ್ತಾರೆ. ನಂತರ ಅಧಿಕಾರಿಗಳನ್ನು ಹಲವಾರು ಭಾರಿ ಭೇಟಿಮಾಡಿದರು ಯಾವುದೇ ಪ್ರತಿ ಉತ್ತರ ಸಿಗಲಿಲ್ಲ. ನಂತರ ನಾನು ದಿನಾಂಕ:10-05-2005ರಂದು ಖಾತೆಯನ್ನು ಮಾಡಿಸಿಕೊಳ್ಳಲು ಅರ್ಜಿಯನ್ನು ಸಲ್ಲಿಸಿರುತ್ತೇನೆ.
ಸದರಿ ಅರ್ಜಿಯಂತೆ ಕಂದಾಯವನ್ನು ಕಟ್ಟಿಸಿಕೊಂಡು ಶ್ರೀಮತಿ ಸರಸಮ್ಮ ಎಂಬುವ ನನಗೆ ಖಾತೆ ಮಾಡಿಸಿಕೊಟ್ಟಿರುತ್ತಾರೆ. ನಂತರ ದಿನಾಂಕ :14-06-2005ರಂದು ಎ. ಕೃಷ್ಣಪ್ಪನಗರ ಸರ್ವೆ ನಂ. 39 ಮತ್ತು 40 ರಲ್ಲಿ ವಿಂಗಡಿಸಿರುವ ಬಡಾವಣೆ ನಕ್ಷೆಯನ್ನು ನೀಡಬೇಕೆಂದು ಅರ್ಜಿಯನ್ನು ಸಲ್ಲಿಸಿರುತ್ತೇನೆ. ಸದರಿ ಅರ್ಜಿಗೆ ದಿನಾಂಕ : 23-06-2005 ರಂದು ದೊಡ್ಡಕನ್ನಲ್ಲಿ ಗ್ರಾಮ ಪಂಚಾಯಿತಿ ಕಾರ್ಯಾಲಯದಿಂದ ಬಡಾವಣೆ ನಕ್ಷೆ,ಗ್ರಾಮ ಪಂಚಾಯಿತಿಯಲ್ಲಿ ಲಭ್ಯವಿಲ್ಲವೆಂದು ಹಿಂಬರಹವನ್ನು ನೀಡಿರುತ್ತಾರೆ. ನಂತರ ದಿನಾಂಕ : 05-09-2005 ರಂದು ಹಾಗೂ ದಿನಾಂಕ:28-06-2005ರಂದು ಕಾರ್ಯದರ್ಶಿ ಹಾಲನಾಯಕನಹಳ್ಳಿ ಗ್ರಾಮ ಪಂಚಾಯಿತಿರವರಿಗೆ ನಿವೇಶನಗಳನ್ನು ಹಂಚಿಕೆ ಮಾಡಿರುವ ವಿವರ ಪಟ್ಟಿಯ ಪ್ರತಿ ಹಾಗೂ ನಿವೇಶನದಾರರ ಹೆಸರುಗಳು ಮತ್ತು ವಿಳಾಸದ ಪೂರ್ಣ ಮಾಹಿತಿಯ ಪ್ರತಿಯ ನಕಲನ್ನು ನೀಡಬೇಕೆಂದು ಕೋರಿ ಅರ್ಜಿ ಸಲ್ಲಿಸಿರುತ್ತೇನೆ. ಅದೇ ರೀತಿ ಬೆಂಗಳೂರು ಪೂರ್ವ ತಾಲ್ಲೂಕು, ತಹಶೀಲ್ದಾರ್ ರವರಿಗೂ ದಿನಾಂಕ: 1/09/2008 ರಂದು ಅಕ್ರಮವಾಗಿ ಕಟ್ಟಿರುವ ಮನೆಯನ್ನು ತೆರವುಗೊಳಿಸಬೇಕೆಂದು ಅರ್ಜಿಯನ್ನು ಸಲ್ಲಿಸಿದ್ದು ಕಾರ್ಯನಿರ್ವಾಹಣ ಅಧಿಕಾರಿ ತಾಲ್ಲೂಕು ಪಂಚಾಯಿತಿರವರಿಗೆ ವರ್ಗಾಯಿಸಿ ಸದರಿ ವಿಷಯದ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲು ಆದೇಶವನ್ನು ನೀಡಿರುತ್ತಾರೆ.
ನಂತರ ಕಾರ್ಯನಿರ್ವಹಣಾಧಿಕಾರಿರವರಿಗೆ ದಿನಾಂಕ : 11-11-2011ರಂದು ನನ್ನ ನಿವೇಶನ ಅಕ್ಕಪಕ್ಕದ ನಿವೇಶನ ಸಂಖ್ಯೆ 416, 416/1, 416/2 ,416/3 ಈ ನಿವೇಶನಗಳಲ್ಲಿ ಅಕ್ರಮವಾಗಿ ಕಟ್ಟಿರುವ ಮನೆಗಳನ್ನು ತೆರೆವುಗೊಳಿಸಲು ಸಹಾ ಅರ್ಜಿಯನ್ನು ಸಲ್ಲಿಸಿರುತ್ತೇನೆ. ಸದರಿ ನಮ್ಮ ನಿವೇಶನದ ವಿಷಯಕ್ಕೆ ಸಂಬಂಧಿಸಿದಂತೆ ಹಾಲನಾಯಕನಹಳ್ಳಿ ಗ್ರಾಮ ಪಂಚಾಯಿತಿ ಕಾರ್ಯದರ್ಶಿಯಾದ ನಾಗರಾಜ್ ರವರು ನಿಮ್ಮ ನಿವೇಶನವನ್ನು ಒತ್ತುವರಿ ಮಾಡಿಕೊಂಡಿರುವ ಗುರುಮೂರ್ತಿರೆಡ್ಡಿಯವರು ಈಗಾಗಲೇ ಒತ್ತುವರಿಯಾಗಿರುವ ನಿಮ್ಮ ನಿವೇಶನಕ್ಕೆ ಸಂಬಂಧಿಸಿದಂತೆ ದಖಲೆಗಳನ್ನು ಮಾಡಿಸಿಕೊಂಡಿದ್ದಾರೆ. ನಿಮ್ಮ ನಿವೇಶನವು ಇನ್ನು ಮುಂದೆ ನಿಮಗೆ ಸಿಗುವುದಿಲ್ಲವೆಂದು ಹೇಳಿರುತ್ತಾರೆ. ನಿಮ್ಮ ನಿವೇಶನದ ಬದಲಿಗೆ ಬೇರೆ ನಿವೇಶನವನ್ನು ಕೊಡಿಸಲು ಮೇಲಾಧಿಕಾರಿಯವರ ಹತ್ತಿರ ಮಾತನಾಡಿ ಬೇರೆ ನಿವೇಶನವನ್ನು ಕೊಡಿಸಲು ಮೇಲಾಧಿಕಾರಿಯವರ ಹತ್ತಿರ ಮಾತನಾಡಿ ಬೇರೆ ನಿವೇಶನವನ್ನು ಕೊಡಿಸಿಕೊಡುತ್ತೇನೆ ಎಂದು ಹೇಳಿರುತ್ತಾರೆ. ನಮ್ಮ ಬಳಿಯಿದ್ದ ಮೂಲ ಹಕ್ಕುಪತ್ರ ಮತ್ತು ಎಲ್ಲಾ ದಾಖಲೆಗಳನ್ನು ಸಹ ತೆಗೆದುಕೊಂಡು, ಒಂದು ತಿಂಗಳ ನಂತರ ಬೇರೆ ನಿವೇಶನವನ್ನು ಕೊಡಿಸಿಕೊಡಲು ಒಂದುವರೆ ಲಕ್ಷ ರೂಪಾಯಿಗಳನ್ನು ಕೊಡಬೇಕೆಂದು ಕೇಳಿರುತ್ತಾರೆ. ಇದಕ್ಕೆ ಪ್ರತ್ಯುತ್ತರವಾಗಿ ನಾವು ಕಾರ್ಯದರ್ಶಿ ನಾಗರಾಜ್ ರವರಿಗೆ ಲಂಚ ಕೊಡುವಷ್ಟು ಆರ್ಥಿಕ ಸ್ಥಿತಿಯನ್ನು ಹೊಂದಿರುವುದಿಲ್ಲ. ಕೂಲಿ ಮಾಡಿ ದಿನನಿತ್ಯ ಜೀವನವನ್ನು ಸಾಗಿಸುವಂತಹ ಬಡತನದ ಸ್ಥಿತಿ ನಮ್ಮದಾಗಿರುತ್ತದೆ. ಆದ್ದರಿಂದ ನಮ್ಮ ನಿವೇಶನವನ್ನು ನಮಗೆ ಕೊಡಿಸಿಕೊಟ್ಟರೆ ಸಾಕು ಎಂದು ಕಾರ್ಯದರ್ಶಿ ನಾಗರಾಜ್ ರವರಲ್ಲಿ ಮನವಿ ಮಾಡಿಕೊಂಡಿರುತ್ತೇವೆ.
ನಂತರ ದಿನಾಂಕ:29-01-2013 ಮತ್ತು ದಿನಾಂಕ:11-11-2013 ಸದರಿ ನಿವೇಶನಗಳ ಮಾಲೀಕರನ್ನು ಕರೆಸಿ ಮತ್ತು ಅವರ ಬಳಿ ಇರುವ ನಿವೇಶನ ದಾಖಲೆಗಳನ್ನು ತರಿಸಿ ಪರಿಶೀಲನೆಯನ್ನು ಮಾಡಬೇಕಾಗಿ ಅರ್ಜಿಯನ್ನು ಸಲ್ಲಿಸಿರುತ್ತೇನೆ.ನಂತರ ದಿನಾಂಕ :೦5-12-2013 ಮಾಹಿತಿ ಹಕ್ಕು ಅಧಿನಿಯಮದಡಿಯಲ್ಲಿ ಕಾರ್ಯನಿರ್ವಾಹಕ ಅಧಿಕಾರಿ ತಾಲ್ಲೂಕು ಪಂಚಾಯಿತಿ ಬೆಂಗಳೂರುರವರಿಗೂ ಅರ್ಜಿಯನ್ನು ಸಲ್ಲಿಸಿರುತ್ತೇನೆ.
ನಂತರ ದಿನಾಂಕ :10-03-2015ರಂದು ಮಾಹಿತಿಹಕ್ಕು ಅಧಿನಿಯಮದಡಿಯಲ್ಲಿ ಕಾರ್ಯನಿರ್ವಾಹಕ ಅಧಿಕಾರಿ ತಾಲ್ಲೂಕು ಪಂಚಾಯಿತಿ ಬೆಂಗಳೂರು ಪೂರ್ವ ತಾಲ್ಲೂಕು ಬೆಂಗಳೂರುರವರಿಗೆ ನನ್ನ ಅಕ್ಕ ಪಕ್ಕದವರಾದ ಗುರುಮೂರ್ತಿ ರೆಡ್ಡಿ, ಶ್ರೀಮತಿ ಇಂದಿರಾ, ಶ್ರೀಮತಿ ವನಜಾಕ್ಷಿ ಮತ್ತು ಗ್ರಾಮ ಪಂಚಾಯಿತಿ ಕಾರ್ಯದರ್ಶಿಯಾದ ನಾಗರಾಜರವರನ್ನು ವಿಚಾರಣೆ ಮಾಡಬೇಕೆಂದು ಅರ್ಜಿ ಸಲ್ಲಿಸಿರುತ್ತೇನೆ. ಆದರೆ ಈ ಮೇಲ್ಕಂಡ ಎಲ್ಲಾ ಅಂಶಗಳಿಗೂ ತಾಲ್ಲೂಕು ಪಂಚಾಯಿತಿ ಕಾರ್ಯಾಲಯದಿಂದ ಯಾವುದೇ ಪ್ರತ್ಯುತ್ತರ ಸಿಕ್ಕಿರುವುದಿಲ್ಲ.
ನಾನು ಮುಂದುವರೆದು ಪ್ರಮಾಣಿಸುವುದೇನೆಂದರೆ ಹಾಲನಾಯಕನಹಳ್ಳಿ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಶ್ರೀ ಗುರುಮೂರ್ತಿ ರೆಡ್ಡಿರವರೊಂದಿಗೆ ಶಾಮಿಲಾಗಿ ನನಗೆ ಮೋಸ ಮಾಡುವ ಉದ್ದೇಶದಿಂದ ಶ್ರೀಮತಿ ವನಜಾಕ್ಷಿರವರ ನಿವೇಶನದ ವಿಸ್ತೀರ್ಣ 40*20 ನಿವೇಶನವನ್ನು 30*40 ನಿವೇಶನವನ್ನಾಗಿ ತಿದ್ದುಪಡಿ ಮಾಡಿ ಶ್ರೀಮತಿ ವನಜಾಕ್ಷಿರವರ ಹೆಸರಿನಲ್ಲಿದ್ದ ನಿವೇಶನವನ್ನು ಶ್ರೀ ಗುರುಮೂರ್ತಿರೆಡ್ದಿರವರ ಹೆಸರಿಗೆ ವರ್ಗಾಯಿಸಿ ಎಲ್ಲಾ ದಾಖಲೆಗಳನ್ನು ಶ್ರೀ ಗುರುಮೂರ್ತಿ ರೆಡ್ದಿರವರ ಹೆಸರಿಗೆ ವರ್ಗಾಯಿಸಿರುತ್ತಾರೆ. ನಂತರ ಶ್ರೀಮತಿ ಸರಸಮ್ಮ ಆದ ನಮ್ಮ ಹೆಸರಿನಲ್ಲಿರುವ ನಿವೇಶನದ ವಿಸ್ತೀರ್ಣ 20*40 ನಿವೇಶನವನ್ನು ಶ್ರೀ ಗುರುಮೂರ್ತಿ ರೆಡ್ಡಿರವರು ಅಕ್ರಮವಾಗಿ ವತ್ತುವರಿ ಮಾಡಿರುತ್ತಾರೆ. ಆನಂತರ ಶ್ರೀಮತಿ ವನಜಾಕ್ಷಿರವರ ಹೆಸರಿನಿಂದ ಗುರುಮೂರ್ತಿ ರೆಡ್ಡಿರವರ ಹೆಸರಿಗೆ ವರ್ಗಾಯಿಸಿದ ನಿವೇಶನ ಹಾಗೂ ಅಕ್ರಮವಾಗಿ ವತ್ತುವರಿ ಮಾಡಿದ ನಮ್ಮ ನಿವೇಶನ ಹಾಗೂ ಅಕ್ರಮವಾಗಿ ವತ್ತುವರಿ ಮಾಡಿದ ನಮ್ಮ ನಿವೇಶನ, ಈ ಎರಡೂ ನಿವೇಶನಗಳಲ್ಲಿ ಮನೆಗಳನ್ನು ಕಟ್ಟಿ ಬಾಡಿಗೆಗೆ ಕೊಟ್ಟಿರುತ್ತಾರೆ.
ಹೀಗಿರುವಾಗ ಹಾಲನಾಯಕನಹಳ್ಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ನನ್ನ ಮನವಿ ಪತ್ರಗಳನ್ನು ಮುಚ್ಚಿಟ್ಟು ನಮಗೆ ತುಂಬ ತೊಂದರೆ ನೀಡಿರುತ್ತಾರೆ. ಸದರಿ ನಿವೇಶನಕ್ಕೆ ಸಂಬಂಧಪಟ್ಟಂತೆ ಗುರುಮೂರ್ತಿರೆಡ್ಡಿಯವರ ಬಳಿ ಇರುವ ದಾಖಲೆಗಳನ್ನು ಹಾಗೂ ನನ್ನ ಬಳಿ ಇರುವ ದಾಖಲೆಗಳನ್ನು ಪರಿಶೀಲಿಸಿ ಅಕ್ರಮವಾಗಿ ಕಟ್ಟಿರುವ ಮನೆಗಳನ್ನು ತೆರವುಗೊಳಿಸಿ ನನ್ನ ನಿವೇಶನವನ್ನು ನನಗೆ ಕೊಡಿಸಿಕೊಟ್ಟು ತಪ್ಪಿತಸ್ತರ ಮೇಲೆ ಕಾನೂನು ಕ್ರಮವನ್ನು ಕೈಗೊಂಡು ನಾನು ಮತ್ತು ನನ್ನ ಕುಟುಂಬದವರು ನೆಮ್ಮದಿಯ ಜೀವನ ನಡೆಸಲು ಅವಕಾಶ ಮಾಡಿಕೊಡಬೇಕೆಂದು ಕೇಳಿಕೊಳ್ಳತ್ತೇನೆ. ಮತ್ತು ಸದರಿ ನಿವೇಶನಕ್ಕೆ ಸಂಬಧಪಟ್ಟ ದಾಖಲಾತಿಗಳನ್ನು ಲಗತ್ತಿಸಿರುತ್ತೇನೆ. ಮತ್ತು ಸದರಿ ಗುರುಮೂರ್ತಿರೆಡ್ಡಿರವರಿಗೆ ನೀಡಿರುವ ನಕಲಿ ಹಾಗೂ ತಿದ್ದುಪಡಿ ದಾಖಲೆಗಳನ್ನು ಲಗತ್ತಿಸಿರುತ್ತೇನೆ. ಈ ದೂರು ಅರ್ಜಿಯ ವಿವರಣೆಯನ್ನು ನಾನು ಓದಿದ್ದೇನೆ/ನನಗೆ ಓದಿ ಹೇಳಲಾಗಿದೆ. ಮತ್ತು ನಾನು ಅದನ್ನು ಅರ್ಥ ಮಾಡಿಕೊಂಡಿದ್ದೇನೆ, ಮತ್ತು ನನಗೆ ತಿಳಿದಿರುವಷ್ಟರ ಮಟ್ಟಿಗೆ ನನಗೆ ದೊರೆತ ಮಾಹಿತಿ ಮತ್ತು ಸಂಹಿತೆಯ ಆಧಾರದ ಮೇಲೆ ಅವು ಸತ್ಯವೆಂದು ನಾನು ಘೋಷಿಸಿ ದೃಢೀಕರಿಸುತ್ತೇನೆ ಎಂದು ಈ ಮೂಲಕ ಶ್ರದ್ದಾಪೂರ್ವಕವಾಗಿ ಪ್ರತಿಗ್ನೆಮಾಡುತ್ತೇನೆ.
ಸ್ಥಳ: ಬೆಂಗಳೂರು ದಿನಾಂಕ:22-03-2017