ವಿಷಯಕ್ಕೆ ಹೋಗು

ಸದಸ್ಯ:Koushik rajesh/WEP

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
  ಕಿಮ್ಮನೆ ರತ್ನಾಕರ್
      
ಕಿಮ್ಮನೆ ರತ್ನಾಕರ್ ಅವರು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನಲ್ಲಿ ೧೯೫೧ರಲ್ಲಿ ಜನಿಸಿದರು.ಅವರು ತಮ್ಮ ಶಾಲಾ ಶಿಕ್ಷಣವನ್ನು ತೀರ್ಥಹಳ್ಳಿಯಲ್ಲಿ ಮತ್ತು ಅವರ ಪದವಿಯನ್ನು ಕಾರ್ಕಳದ ಭುವೇಂದ್ರ ಕಾಲೇಜಿನಲ್ಲಿ ಪೂರ್ಣಗೊಳಿಸಿದರು.೧೯೬೬ರಲ್ಲಿ ಕಾನೂನು ಪದವಿಯನ್ನು ಬಿ.ಎಮ್.ಎಸ್ ಕಾನೂನು ಕಾಲೇಜಿನಲ್ಲಿ ಪೂರ್ಣಗೊಳಿಸಿದರು.ಕಿಮ್ಮನೆ ರತ್ನಾಕರ್ ಅವರು ಕರ್ನಾಟಕದ ಮಾಜಿ ಸಚಿವರಾಗಿದ್ದರು.ಅವರು ವೃತ್ತಿಪರ ವಕೀಲರಾಗಿದ್ದರು.ಅವರು ತೀರ್ಥಹಳ್ಳಿ ಕ್ಷೇತ್ರದ ಎಂ.ಎಲ್.ಎ ಆಗಿದ್ದಾರೆ.ರತ್ನಾಕರ್ ಅವರು ಭಾರತೀಯ ರಾಷ್ತ್ರೀಯ ಕಾಂಗ್ರೆಸ್ಸಿಗೆ ಸೇರಿದ್ದಾರೆ.೧೯೭೮ ಮತ್ತು ೧೯೮೩ರಲ್ಲಿ ತಾಲೂಕು ಮಂಡಳಿ ಸದಸ್ಯರಾಗಿದ್ದರು.೧೯೮೨ ಮತ್ತು ೨೦೦೫ರಲ್ಲಿ ತೀರ್ಥಹಳ್ಳಿಯ ಬಾರ್ ಅಸೋಸಿಯೇಷನ್ ಅಧ್ಯಕ್ಷರಾಗಿದ್ದರು.೨೦೦೮ರಲ್ಲಿ ಮೊದಲನೇ ಬಾರಿಗೆ ವಿಧಾನಸಭಾ ಸದಸ್ಯರಾಗಿ ಆಯ್ಕೆಯಾದರು. ೨೦೧೩ರಲ್ಲಿ ಕಿಮ್ಮನೆ ರತ್ನಾಕರ್ ಅವರು ಆರ್.ಎಮ್.ಮಂಜುನಾಥರನ್ನು ೧೩೪೩ ಮತಗಳಲ್ಲಿ ಸೋಲಿಸುವುದರ ಮೂಲಕ ಎರಡನೇ ಬಾರಿಗೆ ವಿಧಾನಸಭಾ ಸದಸ್ಯರಾಗಿ ಆಯ್ಕೆಯಾದರು.ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಕಿಮ್ಮನೆ ರತ್ನಾಕರ್ ಅವರನ್ನು ಶಿಕ್ಷಣ ಮಂತ್ರಿಯನ್ನಾಗಿ ಆಯ್ಕೆ ಮಾಡಲಾಯಿತು.ಕಿಮ್ಮನೆ ರತ್ನಾಕರ್ ಅವರು ತಮ್ಮ ಸಾಹಸ ಶೌರ್ಯಕ್ಕಾಗಿ ಹೆಸರಾಗಿದ್ದಾರೆ.ರತ್ನಾಕರ್ ಅವರು ಒಂದು ದಿನ ತಮ್ಮ ಅಧಿಕೃತ ಇನ್ನೊವಾ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಮುಳುಗಿ ಹೋಗುತ್ತಿರುವ ಕಾರನ್ನು ಗಮನಿಸಿ ತಮ್ಮ ಬೆಂಗಾವಲು ಪಡೆಗೆ ಕಾರನ್ನು ನಿಲ್ಲಿಸಲು ಆದೇಶಿಸಿದರು.ಕಿಮ್ಮನೆ ಮತ್ತು ಅವರ ಬಂದೂಕುದಾರಿ ಹಲ್ಸ್ವಾಮಿ ಚಾಲಕ ಚಂದ್ರಶೇಖರ್ ಮತ್ತು ಬೆಂಗಾವಲು ವಾಹನ ಚಾಲಕ ಕೃಷ್ಣಮೂರ್ತಿ ನದಿಗೆ ಕಾರಿನಲ್ಲಿ ಮುಳುಗುತ್ತಿರುವವರನ್ನು ಕಾಪಾಡಲು ಹಾರಿದರು.ನಾಲ್ವರು ಮುಳುಗುತ್ತಿರುವ ಕಾರಿನಲ್ಲಿ ಸಿಕ್ಕಿಹಾಕಿಕೊಡಿದ್ದವರ ಕಡೆ ಈಜಿದರು.ಚಂದ್ರಶೇಖರ್ ಹಿಂಭಾಗದ ಬಾಗಿಲನ್ನು ತೆರೆದು ಮೂರು ಮಕ್ಕಳನ್ನು ಹೊರಕ್ಕೆ ಎಳೆದು ದಡಕ್ಕೆ ಕರೆದುಕೊಂಡು ಬಂದರು.ನಾಲ್ವರು ನಂತರ ಆಳವಿಲ್ಲದ ಸರೋವರದ ತಳದಲ್ಲಿ ನೆಲೆಸಿದ್ದ ಕಾರಿಗೆ ಹಿಂದಿರುಗಿ ಕಾರಿನಲ್ಲಿದ್ದ ಮೂವರನ್ನು ರಕ್ಷಿಸಿದರು.ಅಷ್ಟರಲ್ಲಿ ಕಾರಿನ ಚಾಲಕ ಸುಪಾವಸ್ಥೆಯಲ್ಲಿದ್ದರು.ಕಿಮ್ಮನೆ ತಮ್ಮ ಗೆಳೆಯರ ಸಾಹಾಯದ ಮೂಲಕ ಅವರಿಗೆ ಉಪಹಾರ ಮತ್ತು ಔಷಧಿಯ ವ್ಯವಸ್ಥೆ ಮಾಡಿಸಿದರು.ತಮ್ಮ ಪ್ರಯಾಣವನ್ನು ಮುಂದುವರಿಸುವ ಮೊದಲು ತಮ್ಮ ಬಟ್ಟೆಗಳನ್ನು ನೀಡಿದರು.ತಮ್ಮ ಕರ್ತವ್ಯವನ್ನು ತಾವು ಮಾಡಿದರೆಂದು ಹೇಳುತ್ತ ನಾನು ಕಾರಿನಲ್ಲಿ ಮಕ್ಕಳಿರುವುದರ ಬಗ್ಗೆ ಅರಿತುಕೊಂಡು ನನ್ನ ಕಾರಿನ ಚಾಲಕ ಮತ್ತು ಬಂದೂಕುಗಾರ ಸಹಾಯದಿಂದ ನೀರಿಗೆ ಜಿಗಿದು ಅವರ ಪ್ರಾಣವನ್ನು ಉಳಿಸಿದೆವು ಎಂದರು.ಕಿಮ್ಮನೆ ರತ್ನಾಕರ್ ತಾವು ಶಿಕ್ಷಣ ಸಚಿವರಾಗಿದ್ದಾಗ ಸಮಸ್ಯೆಗಳ ಸರಣಿಯನ್ನು ಎದುರಿಸಿದ್ದರು.ಅವರ ಅವಧಿಯಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ನಡೆದ ಭ್ರಷ್ಟಾಚಾರಗಳಿಗೆ ನೇರ ಹೊಣೆ ಆದರು. ಅವರು ಪ್ರತಿಪಕ್ಷಗಳಿಂದ ಮತ್ತು ಶಿಕ್ಷಣತಗ್ನರಿಂದ ಶಾಲೆಗಳಲ್ಲಿ ಹೆಚ್ಚುತ್ತಿರುವ ಸಮಸ್ಯೆಗಳ ಬಗ್ಗೆ, ಪ್ರಶ್ನೆ ಪತ್ರಿಕೆಗಳಲ್ಲಿನ ತಪ್ಪುಗಳ ಬಗ್ಗೆ, ೧೨ನೇ ತರಗತಿಯ ವಿದ್ಯಾರ್ಥಿಗಳಿಗೆ ಕೃಪಾಂಕದ ಬಗ್ಗೆ,ಮೌಲ್ಯಮಾಪನದಲ್ಲಿ ದೋಷಗಳ ಬಗ್ಗೆ ಅನೇಕ ಟೀಕೆಗಳನ್ನು ಎದುರಿಸಿದ್ದರು.ಮೌಲ್ಯಮಾಪನದಲ್ಲಿ ದೋಷಗಳು ಹೇಗೆ ಕಂಡುಬಂತೆಂದರೆ ಪ್ರಾಯೋಗಿಕ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ಅನೇಕ ವಿದ್ಯಾರ್ಥಿಗಳಿಗೆ ಸಿದ್ಧಾಂತ ಪರೀಕ್ಷೆಯಲ್ಲಿ ಒಂದಂಕಿಯ ಅಂಕಗಳನ್ನು ಪಡೆದರು.ಇದೆಲ್ಲವೂ ಶಿಕ್ಷಣ ಸಚಿವರ ಹೆಗಲ ಮೇಲೆ ಬಂದಿತು.ಪಿ.ಯು ಮಂಡಳಿಯ ಅಧಿಕಾರಿಗಳು ಮಾಡಿದ ತಪ್ಪನ್ನು ಒಪ್ಪಿಕೊಂಡು,ಪ್ರತಿಭಟನೆ ಮಾಡುತ್ತಿದ್ದ ಸಾವಿರಾರು ವಿದ್ಯಾರ್ಥಿಗಳನ್ನು ಸಮಾದಾನ ಪಡಿಸುವಲ್ಲಿ ಕಿಮ್ಮನೆ ರತ್ನಾಕರ್ ವಿಫಲವಾದರು.ಶಿಕ್ಷಣವನ್ನು ಆಧುನೀಕರಿಸಲು ಡಿಸೆಂಬರ್ ೨೦ ೨೦೧೫ರಂದು ಉಚಿತ ರೋಬೋಮೇಟ್ ಅಪ್ಲಿಕೇಶನ್ ಪ್ರಾರಂಭಿಸಿದರು.ಅಧಿಕಾರಕ್ಕೆ ಬರುತ್ತಿದ್ದಂತೆ ಶಾಲೆಗಳಲ್ಲಿಇರುವ ಅಭದ್ರತೆಗಳನ್ನು ಗಮನಿಸಿದ ಕಿಮ್ಮನೆ ಅಧಿಕಾರಿಗಳಿಗೆ ಭದ್ರತಾ ಕ್ರಮಗಳನ್ನು ತೆಗೆದುಕೊಳ್ಳಲು ಆದೇಶಿಸಿದರು.ಶಾಲೆಗಳಲ್ಲಿ ಮೂಲಭೂತ ಸೌಲಭ್ಯಗಳಾದ ವಿದ್ಯುತ್,ಶೌಚಾಲಯ,ಆಟದ ಮೈದಾನ,ಕುಡಿಯುವ ನೀರಿನ ಸೌಲಭ್ಯವನ್ನು ನೀಡಲು ಕ್ರಮ ಕೈಗೊಂಡರು.