ಸದಸ್ಯ:Kiran.bagade

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನನ್ನ ಹೆಸರು ಕಿರಣ್ ಬಾಗಡೆ ಶ್ರೀನಿವಾಸ, ನಾನು ನಂಜನಗೂಡಿನವ, ನಾನು ಇಂಜಿನಿಯರಿಂಗ್ ಪದವೀಧರನಾಗಿದ್ದು, ಪಕ್ಷಿವೀಕ್ಶಣೆ, ದಾಖಲಾತಿ, ಜಾಗೃತಿ ಕಾರ್ಯಕ್ರಮಗಳು ಮತ್ತು ಸಮೀಕ್ಶೆಯಲ್ಲಿ ಅದಮ್ಯ ಆಸಕ್ತಿ ಉಳ್ಳವನಾಗಿದ್ದು ಮುಖ್ಯವಾಗಿ ಮೈಸೂರು, ಕರ್ನಾಟಕದ ಇತರೆ ಭಾಗ ಮತ್ತು ಸುತ್ತಮುತ್ತಲಿನ ಮತ್ತು ಪೂರ್ವ ರಾಜ್ಯಗಳಲ್ಲಿ ವಿವಿಧ ಸಂಘ ಸಂಸ್ಥೆಗಳು ಮತ್ತು ಅರಣ್ಯ ಇಲಾಖೆಯವರೊಂದಿಗೆ ಸಮೀಕ್ಷೆಗಳಲ್ಲಿ ಪಾಲ್ಗೊಂಡಿದ್ದೇನೆ. ಕಪ್ಪೆ, ಚಿಟ್ಟೆ ಮತ್ತು ಜೇಡಗಳ ಗುರುತಿಸುವಿಕೆ ಮತ್ತು ಸಮೀಕ್ಷೆ ನನ್ನ ಇತರ ಹವ್ಯಾಸ. ಪ್ರಸ್ತುತ ಮೈಸೂರಿನ ವಿವೇಕಾನಂದ ಇನ್ಸ್ಟಿಟ್ಯೂಟ್ ಆಫ್ ಲೀಡರ್ಶಿಪ್ ಡೆವೆಲಪ್ಮೆಂಟ್ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿದ್ದೇನೆ. ವಿಕಿಪೀಡಿಯದಲ್ಲಿ ನಾನು ಬರೆದ ಮೊದಲ ಕನ್ನಡ ಲೇಖನವಿದು, ಇನ್ನೂ ಹೆಚ್ಚು ಲೇಖನಗಳನ್ನು ರಚಿಸಲು, ಕೈಲಾದ ಕೊಡುಗೆ ನೀಡಲು ಆಶಿಸುತ್ತೇನೆ.