ಸದಸ್ಯ:Khatheejath Rasheeda
ಗೋಚರ
"ನನ್ನ ಪರಿಚಯ"
ನನ್ನ ಹೆಸರು ಖತೀಜತ್ ರಶೀದ. ನನ್ನ ಜನನ ಬಂಟ್ವಾಳ ತಾಲೂಕಿನ ಮಂಚಿ ಎಂಬಲ್ಲಿ ಆಯಿತು. ನನ್ನ ತಂದೆ ಅಬ್ಬಾಸ್.ಅವರು ಕುವೈತ್ ನಲ್ಲಿ ಕೆಲಸ ಮಾಡೂತ್ತ್ತಿದ್ದಾರೆ. ತಾಯಿ ಸೆಲೀಕತ್ ಬೀಬಿ. ನಾವು ಮೂರು ಜ಼ನ ಮಕ್ಕಳು.ನಾನು ದೊಡ್ಡವಳು. ಎರಡನೆಯವನು ತಮ್ಮ ರಾಝೀಕ್. ಇವನು ೭ನೆಯ ತರಗತಿಯಲ್ಲಿ ಓದುತ್ತಿದ್ದಾನೆ. ಮೂರನೆಯವಳು ತಂಗಿ.ಇವಳಿಗೆ ಈಗ ತಾನೆ ಒಂದು ವರ್ಷ ಕಳಿಯಿತು.ನನಗೆ ನನ್ನ ಕುಟುಂಬವೆಂದರೆ ತುಂಬಾ ಇಷ್ಟ. ನನ್ನ ಅಣ್ಣ-ತಮ್ಮ ಅಕ್ಕ-ತಂಗಿ ಹೀಗೆ ಎಲ್ಲರೂ ತುಂಬಾ ಪ್ರೀತಿಯಿಂದ ಇರುತ್ತೇವೆ.ನನ್ನ ತಂಗಿಯ ಮೊದಲನೆಯ ಹುಟ್ಟುಹಬ್ಬ ಬಹಳ ಸಂಭ್ರಮದಿಂದ ಆಚರಿಸಲಾಯಿತು.ನನ್ನ ತಂಗಿಯ ಮುಗ್ದತನ,ನಗು,ಪುಟ್ಟ-ಪುಟ್ಟ ಕಣ್ಣು,ಹಲ್ಲು,ಕಾಲು ಎಲ್ಲಾ ನನಗೆ ಸಂತೋಷ ಕೊಡುತ್ತದೆ.
ನನ್ನ ಪ್ರಾಥಮಿಕ ವಿದ್ಯಾಭ್ಯಾಸ ನಮ್ಮ ಮನೆಯ ಪಕ್ಕವಿರುವ ಶಾಲೆಯಲ್ಲಿ ಮಾಡಿದೆ. ಆ ಶಾಲೆ ನನಗೆ ತುಂಬಾ ಇಷ್ಟ. ಅಲ್ಲಿ ನಾನು ಎಲ್ಲಾ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದೆ. ನಾನು ೪ನೇಯ ತರಗತಿಯಲ್ಲಿರುವಾಗ ”ಖೋ-ಖೋ” ಕ್ರೀಡೆಯನ್ನು ಕಲಿತೆ. ೬ನೇಯ ತರಗತಿಯಲ್ಲಿ ”ತ್ರೋ-ಬಾಲ್” ಆಟಗಾರಿಯಾದೆ.”ಖೋ-ಖೋ” ಆಟದಲ್ಲಿ ನಾನು ತಾಲೂಕು ಮಟ್ಟದಲ್ಲಿ ವಿಜೇತೆಯಾಗಿ ಜಿಲ್ಲಾ ಮಟ್ಟದಲ್ಲಿ ಭಾಗವಹಿಸಿದ್ದೇನೆ.ನಾನು ಅಥ್ಲೆಟಿಕ್ ಆಟಗಾರ್ತಿಯೂ ಹೌದು. ನನ್ನ ಹೈಸ್ಕೂಲ್ ಶಿಕ್ಷಣ ’ಸರಕಾರಿ ಫ್ರೌಡಶಾಲೆ ಮಂಚಿ ಕೊಳ್ನಾಡು’ ಎಂಬಲ್ಲಿ ಮಾಡಿದೆನು.ಹೈಸ್ಕೂಲು ಶಾಲೆಯ ನೆನಪುಗಳು ಇನ್ನೂ ನನ್ನ ಮನಸ್ಸಿನಲ್ಲಿ ಉಳಿದಿದೆ.ನನ್ನ ಗೆಳತಿಯರು,ಅಧ್ಯಾಪಕರು ಎಲ್ಲರೂ ತುಂಬಾ ಪ್ರೀತಿಯಿಂದ ಇರುತ್ತಿದ್ದರು. ಅಲ್ಲಿಯ ಆಟ,ವಾತವರಣ ಎಂದರೆ ನನಗೆ ತುಂಬಾ ಇಷ್ಟ.ಈ ಶಾಲೆಯಿಂದ ನಾನು ೧೦ನೇ ತರಗತಿಯಲ್ಲಿ ಪ್ರವಾಸ ಹೊಗಿದ್ದೆವು. ಆ ಕ್ಷಣಗಳು ಇನ್ನೂ ನನ್ನ ಮನಸ್ಸಿನಲ್ಲಿ ಶಾಶ್ವತವಗಿ ಉಳಿದಿದೆ. ೧೦ನೇ ತರಗತಿಯಲ್ಲಿ ನಾನು ೭೮% ಅಂಕಗಳೊಂದಿಗೆ ಉತ್ತಿರ್ಣನಾಗಿದ್ದೇನೆ. ಮುಂದೆ ನಾನು ಪಿ.ಯು.ಸಿ ವಿಧ್ಯಾಭ್ಯಾಸವನ್ನು ”ಕಣಚೂರು ಮಹಿಳಾ ಕಾಲೇಜಿನಲ್ಲಿ ಮುಂದುವರಿಸಿದೆ. ಈ ಕಾಲೇಜಿನಲ್ಲಿ ತುಂಬಾ ಖುಷಿಪಟ್ಟಿದ್ದೇನೆ.ಎರಡು ವರ್ಷ ಹೇಗೆ ಮುಗಿಯಿತು ಅಂತ ಗೊತ್ತಾಗಲಿಲ್ಲ. ಪ್ರಸ್ತುತ ನಾನು ಪ್ರಥಮ ಬಿ.ಎ.ಸ್ಸಿ.”ಸಂತ ಅಲೋಶಿಯಸ್ ಕಾಲೇಜಿ”ನಲ್ಲಿ ಕಲಿಯುತ್ತಿದ್ದೇನೆ. ಈ ಕಾಲೇಜಿನ ವಾತವರಣ ತುಂಬಾ ಸುಂದರವಾಗಿದೆ.ಈ ಕಾಲೇಜಿಗೆ ೧೩೫ ವರ್ಷದ ಹಿನ್ನಲೆ ಇದೆ.
ನನ್ನ ಹವ್ಯಾಸ ಆಟ ಆಡುವುದು,ಚಿತ್ರ ಬರೆಯುವುದು,ಟಿ.ವಿ ನೋಡುವುದು.
ಈ ಸಮಾಜದಲ್ಲಿ ನಾನು ಒಂದು ಮುಖ್ಯ ವ್ಯಕ್ತಿಯಾಗಿ ಗುರುತಿಸಲ್ಪಡುವುದೇ ನನ್ನ ಜೀವನದ ಮುಖ್ಯ ಉದ್ದೇಶ.