ವಿಷಯಕ್ಕೆ ಹೋಗು

ಸದಸ್ಯ:Keerthikrishna1910264/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

thumb




ನನ್ನ ಜೀವನ

[ಬದಲಾಯಿಸಿ]
ಚಿತ್ರ:Keerthi indo.jpg

ಬಾಲ್ಯದ ಸವಿನೆನಪುಗಳು

ನನ್ನ ಹೆಸರು ಕೀರ್ತಿ.ಕೆ. ಕ್ರೈಸ್ಟ ವಿಶ್ವವಿದ್ಯಾಲಯದ ಮೊದಲನೆಯ ಬಿ.ಕಾಂ ವಿದ್ಯಾರ್ಥಿನಿ. ಕರ್ನಾಟಕದ ಉದ್ಯಾನ ನಗರಿ ಬೆಂಗಳೂರಿನಲ್ಲಿ ೧೮ .೧೨. ೨೦೦೧ ರಂದು ಜನಿಸಿದೆ. ನನ್ನ ತಂದೆಯ ಹೆಸರು ಕೃಷ್ಣ , ನನ್ನ ತಾಯಿಯ ಹೆಸರು ಮಾಲಿನಿ. ನನ್ನ ಅಪ್ಪ ಮತ್ತು ಅಮ್ಮ ಇಬ್ಬರೂ ಉದ್ಯಮಿಗಳಾದ್ದರಿಂದ ನಾನು ನನ್ನ ಅಜ್ಜಿಯ ಮನೆಯಲ್ಲಿ ಬೆಳೆಯಬೇಕಾಯಿತು. ಆ ಪರಿಸರ , ಪ್ರಕೃತಿ ನನ್ನ ಮೇಲೆ ಬಹಳಷ್ಟು ಪ್ರಭಾವವನ್ನು ಬೀರಿದೆ. ನಾನು ನನ್ನ ಪೋಷಕರೊಂದಿಗೆ ಬೆಂಗಳೂರಿಗೆ ಬಂದಾಗ ಅವರ ಜೊತೆ ಕಬ್ಬನ್ ಪಾರ್ಕ್ , ಲಾಲ್ ಬಾಗ್, ಮುಂತಾದ ಉದ್ಯಾನವನಗಳಿಗೆ ಹಾಗೂ ಐತಿಹಾಸಿಕ ಪ್ರದೇಶಗಳಿಗೆ ಹೋಗಿ ಆನಂದದಿಂದ ಕಾಲವನ್ನು ಕಳೆದಿದ್ದೇನೆ. ಈ ರೀತಿ ನನ್ನ ಬಾಲ್ಯದ ಕ್ಷಣಗಳು ಅತ್ಯಾಮೂಲ್ಯವಾಗಿವೆ.

ನನ್ನ ವಿದ್ಯಾಭ್ಯಾಸ

ನನ್ನ ವಿದ್ಯಾಭ್ಯಾಸವು ಸಿಂಧಿ ಶಾಲೆಯಲ್ಲಿ ನಡೆಯಿತು. ನಾನು ಎಲ್ಲಾ ಸಾಂಸ್ಕೃತಿಕ ಮತ್ತು ಕ್ರೀಡೆಗಳಲ್ಲಿ ಭಾಗವಹಿಸಿದ್ದೆನು. ಸುಮಾರು ೩೨ ಚಿನ್ನ , ೧೨ ಬೆಳ್ಳಿ ಪದಕಗಳನ್ನು ಪಡೆದಿದ್ದೇನೆ. ಹಲವಾರು ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿದೆ. ನಾನು ಗ್ರಂಥಾಲಯದಲ್ಲಿರುವ ಪುಸ್ತಕಗಳನ್ನು ಓದುತ್ತಿದ್ದೆ. ಇದು ನನ್ನ ನೆಚ್ಚಿನ ಜಾಗ ಎಂದರೆ ತಪ್ಪಾಗಲಾರದು.ನನಗೆ ಹಲವಾರು ಮಂದಿ ಗೆಳೆಯರು ಇದ್ದರು. ಹೀಗೆ ೧೩ ಸಂವತ್ಸರಗಳು ಹೇಗೆ ಕಳೆದವು ಎಂಬುದೇ ತಿಳಿಯಲಿಲ್ಲ.ಇನ್ನು ನನ್ನ ಆ ಸವಿನೆನಪುಗಳು ಅಚ್ಚಳಿಯದೆ ಉಳಿದಿವೆ. ೧೦ನೆ ತರಗತಿಯಲ್ಲಿ ಎಲ್ಲಾ ಶಿಕ್ಷಕರ ಸಹಾಯ,ಸಲಹೆಗಳಿಂದ ೯೨% ಅಂಕಗಳನ್ನು ಪಡೆದಿದ್ದೇನೆ.ಅನಂತರ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ೧೨ನೆ ತರಗತಿಯಲ್ಲಿ ಉಪನ್ಯಾಸಕರ ನೀಡಿದ ಪ್ರೋತ್ಸಾಹದಿಂದ ೯೧% ಅಂಕಗಳನ್ನು ಪಡೆದಿದ್ದೇನೆ.ಇದಕ್ಕೆ ನನ್ನ ಶ್ರಮ ಮತ್ತು ನನ್ನ ತಾಯಿಯ ಪ್ರೋತ್ಸಾಹದ ಪಾಲು ದೊಡ್ಡದಾಗಿದೆ.ಈಗ ಕ್ರೈಸ್ಟ ವಿಶ್ವವಿದ್ಯಾಲಯದ ಮೊದಲನೆಯ ಬಿ.ಕಾಂ ಪದವಿಯನ್ನು ಮಾಡುತ್ತಿದ್ದೇನೆ.ಇದು ಉತ್ತಮವಾದ ಕಾಲೇಜಾಗಿದ್ದು ,ಎಲ್ಲರಿಗೂ ವೃತ್ತಿಯನ್ನು ಒದಗಿಸುವ ಕಾಲೇಜಾಗಿದೆ.ಆ ಭರವಸೆಯಿಂದ ನಾನು ಸಹ ಇಲ್ಲಿಗೆ ಸೇರಿದ್ದೇನೆ. ನಾನು ದೊಡ್ಡ ಕಂಪನಿಯಲ್ಲಿ ಸಿ.ಎ. ಆಗಿ ಸೇವೆ ಸಲ್ಲಿಸಬೇಕೆಂಬ ಹೆಬ್ಬಯಕೆ ಇದೆ.

ಹವ್ಯಾಸಗಳು

ನನ್ನ ಬಿಡುವಿನ ವೇಳೆಯನ್ನು ಹಲವಾರು ಹವ್ಯಾಸಗಳ ಮೂಲಕ ಕಳೆಯುತ್ತೇನೆ. ನನ್ನ ಹವ್ಯಾಸಗಳಿಂದರೆ ಪುಸ್ತಕಗಳನ್ನು ಓದುವುದು, ನೃತ್ಯವನ್ನು ಮಾಡುವುದು , ಸಂಗೀತವನ್ನು ಕೇಳುವುದು ಚಿತ್ರಕಲೆ, ಹೊರಾಂಗಣ ಆಟಗಳನ್ನು ಆಡುತ್ತೇನೆ. ಇವು ನನ್ನ ಮನಸ್ಸಿಗೆ ಖುಷಿಯನ್ನು ತರುವುವು. ಅಲ್ಲದೆ ಮಕ್ಕಳಿಗೆ ಮನೆಪಾಠವನ್ನು ಉಚಿತವಾಗಿ ಮಾಡುತ್ತೇನೆ.ಇದು ಅತ್ಯಂತ ತೃಪ್ತಿ ತರುವ ಕೆಲಸವಾಗಿದೆ. ರಜಾ ದಿನಗಳಲ್ಲಿ ನಾನು ಮತ್ತು ನನ್ನ ಕುಟುಂಬದವರು ಪ್ರವಾಸಕ್ಕೆ ಹೋಗುತ್ತೇವೆ.ಇದರಿಂದ ನಾನು ಹಲವು ವಿಷಯಗಳನ್ನು ಕಲಿತ್ತಿದ್ದೇನೆ.ಆ ಪ್ರದೇಶಗಳಲ್ಲಿನ ಭಾಷೆ,ವೇಷಭೂಷಣ,ಸಂಸ್ಕೃತಿಯನ್ನು ಕಂಡು ಬೆರಗಾಗಿದ್ದೆ. ನನ್ನ ನೆಚ್ಚಿನ ಪ್ರವಾಸಿತಾಣಗಳೆಂದರೆ ಮೈಸೂರು, ಕೊಡಗು, ಮಂಗಳೂರು, ಹಂಪಿ ಮತ್ತು ಬೇಲೂರು .ಮೈಸೂರಿನ ಅರಮನೆ,ದಸರಾ ಉತ್ಸವವು ನಮ್ಮ ಪರಂಪರೆಆದರೆ, ಕೊಡಗಿನ ಸೌಂದರ್ಯವು ಮನಮೋಹಕವಾಗಿದೆ.ಮಂಗಳೂರಿನ ಕಡಲು ಮತ್ತು ಹಂಪಿಯ ಪ್ರದೇಶಗಳು ನನ್ನ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ.ನನಗೆ ಡೈರಿ ಬರೆಯುವ ಹವ್ಯಾಸವು ಇದೆ. ಇದರಲ್ಲಿ ನನ್ನ ಜೀವನದ ಶ್ರೇಷ್ಠ ದಿನಗಳು ಮತ್ತು ಅಮೂಲ್ಯ ಕ್ಷಣಗಳು ಬರೆಯಲಾಗಿದೆ. ನಮ್ಮ ಮನೆಯ ಬಳಿ ಸಣ್ಣ ಕೈತೋಟವನ್ನು ಮಾಡಿ , ಅಲ್ಲಿ ಹಲವು ಹೂವು ತರಕಾರಿಗಳ ಗಿಡಗಳನ್ನು ನೆಟ್ಟಿದ್ದೇನೆ.ಅವುಗಳನ್ನು ನೀರು ಹಾಕಿ ಪೋಷಿಸುವೆ.ಇದರಿಂದ ಒಳ್ಳೆಯ ಗಾಳಿ,ಪರಿಸರ ಸಿಗುವುದು.ನಮ್ಮ ಪರಿಸರವನ್ನು ಸ್ವಚ್ಛವಾಗಿ ಇಡುವುದು ನನ್ನ ಮತ್ತೊಂದು ಹವ್ಯಾಸವಾಗಿದೆ.ನನ್ನ ನೆಚ್ಚಿನ ಹವ್ಯಾಸವೆಂದರೆ ನಮ್ಮ ಮನೆಯ ಹತ್ತಿರ ಇರುವ ಭಾರತ್ ಸೇವಾಶ್ರಮಕ್ಕೆ ಹೋಗುತ್ತೇನೆ. ಅಲ್ಲಿನ ಅಂಗವಿಕಲ ಮಕ್ಕಳ ಜೊತೆ ಕಾಲವನ್ನು ಕಳೆಯುತ್ತಿದ್ದೆ. 'ಕೆರೆಯ ನೀರನು ಕೆರೆಗೆ" ಚೆಲ್ಲಿ ಎನ್ನುವಂತೆ ನನಗೆ ತಿಳಿದಿರುವ ವಿಷಯಗಳನ್ನು ಅವರ ಜೀವನದಲ್ಲಿ ಜ್ಯೋತಿಯಾಗಲಿವೆ. ಅವರು ನನ್ನನ್ನು ಅಕ್ಕ , ಅಕ್ಕ ಎಂದು ಕರೆಯುವಾಗ ನನಗಾದ ಅನುಭವವೇ ಬೇರೆ.ಅದು ಅನುಭವಿಸಿದಿರುವವರಿಗೆ ಗೊತ್ತು. ಆ ಮಕ್ಕಳ ಪ್ರೀತಿ, ಮುಗ್ದತೆ ನನ್ನನ್ನು ಮೂಕವಿಸ್ಮಯವಾಗಿಸಿದವು.ಈ ರೀತಿ ನಾನು ಸಮಾಜಕ್ಕೆ ಅಳಿಲು ಸೇವೆಯನ್ನು ಮಾಡುವೆನು.

ಮೌಲ್ಯಗಳು

ನಾನು ಎಲ್ಲಾ ರಾಷ್ಟ್ರೀಯ ಹಬ್ಬಗಳನ್ನು ಆಚರಿಸಿ ದೇಶಭಕ್ತರಿಗೊಂದು ನಮನವನ್ನು ಸಲ್ಲಿಸುವೆನು. ಧ್ವಜಾರೋಹಣವನ್ನು ಮಾಡಿ ಸಿಹಿಯನ್ನು ಹಂಚುವೆವು.ಈ ದಿನದಂದು ಬಡವರಿಗೆ ಸಹಾಯ ಮಾಡುವೆನು. ಮುಂದೊಂದು ದಿನ ನಮಗೂ ಸಹ ಸಹಾಯ ಹಸ್ತ ಸಿಗುವುದು. ಸಿರಿತನ ಬಂದಾಗ ಹಿಗ್ಗದೆ ಬಡತನ ಬಂದಾಗ ಕುಗ್ಗದೆ ಇರುವುದನ್ನು ಕಲಿತ್ತಿದ್ದೇನೆ.ನಿಷ್ಠೆ, ಪ್ರಾಮಾಣಿಕತೆ ,ಕರುಣೆ , ಪ್ರೀತಿ, ಶ್ರದ್ಧೆಗಳು ನನಗೆ ನಮ್ಮ ತಾಯಿಯಿಂದ ಬಂದ ಗುಣಗಳಾಗಿವೆ.ಸುಳ್ಳನ್ನು ಹೇಳದೆ ನಿಜವನ್ನೇ ಹೇಳುವ ಮೌಲ್ಯವಿದೆ. ದೊಡ್ಡವರಿಗೆ ಗೌರವವನ್ನು ನೀಡುವ ಗುಣ ನನ್ನದಾಗಿದೆ.ಮೇಲು ಕೀಳು ಎಂಬ ಭಾವನೆ ನನ್ನಲ್ಲಿದೆ.