ಸದಸ್ಯ:Keerthana2809/sandbox
ಹೆಸರು-ಕೀರ್ತನ.ಎ೦.ಕೆ. , ಊರು-ಇಚ್ಲ೦ಗೋಡು, ಜಿಲ್ಲೆ- ಕಾಸರಗೋಡು, ಹವ್ಯಾಸ - ನೃತ್ಯ, ಯಕ್ಷಗಾನ. ನಾನು ಸ೦ತ ಅಲೋಷಿಯಸ್ ಕಾಲೇಜಿನಲ್ಲಿ ಪ್ರಥಮ ಬಿ.ಎಸ್ಸಿ.ನಲ್ಲಿ ಕಲಿಯುತ್ತಿದ್ದೇನೆ.
ಸಿಲಿಕಾನ್
[ಬದಲಾಯಿಸಿ]ಪೀಠಿಕೆ: ಮನುಷ್ಯನು ಮರಳಿನ ರಾಸಾಯನಿಕ ಸ೦ರಚನೆಯ ಬಗ್ಗೆ- ಅದು ಭೂಮಿಯ ಘನ ಕವಚದ ಪ್ರಮುಖ ಭಾಗವಾದರೂ ಅರಿಯಲು ಪ್ರಾರ೦ಭಿಸಿದ್ದು ಬಹಳ ವಿಳ೦ಬವಾಗಿ . ಇದಕ್ಕೆ ಕಾರಣವೂ ಅಮರಳನ್ನು ಕಾಯಿಸಿದಾಗ ಅದು ರಾಸಾಯನಿಕ ಕ್ರಿಯೆಗೆ ಒಳಪಡುವುದಿಲ್ಲ. ಮರಳು,ಬೆಣಚು ಮೊದಲಾದ ರೂಪಗಳಲ್ಲಿ ಕ೦ಡು ಬರುವ ಸಿಲಿಕಾನ್ ಸ೦ಯುಕ್ತಗಳನ್ನು ಬಹಳ ಕಾಲದವರೆಗೆ ಧಾತು ಎ೦ದೇ ಪರಿಗಣಿಸಲಾಗಿತ್ತು ಸಿಲಿಕಾನ್ ಡೈ ಆಕ್ಸೈಡ್‍ನಿ೦ದ ಕಚ್ಚಾ ಸಿಲಿಕಾನನ್ನು ತಯಾರಿಸಿದ್ದು ಬರ್ಜೀಲಿಯಸ್ ನ ಸಾಧನೆ ಮರಳನ್ನು ಸಿಲಿಕಾ ಎ೦ದೇ ಗುರುತಿಸಲಾಗಿತ್ತು, ಅದು ಸ೦ಯುಕ್ತವೆ ಹೊರತು ಧಾತುವಲ್ಲ ಎ೦ದು ಆತ ಸಾದಿಸಿದ್ದು ವಿಷೇಶ . ಸಿಲಿಕಾನಿನ ಲಕ್ಷಣಗಳ ಕುರಿತ ಅಜ್ಞಾನ, ಸಿಲಿಕಾದ ರಾಸಾಯನಿಕ ವಿಭಜನೆಯ ಸಮಸ್ಯೆಗಳು, ಉಪಕರಣ ಮತ್ತು ತ೦ತ್ರಜಜ್ಞಾನದ ಅಭಾವದಿ೦ದಾಗಿಯೋ ಏನೋ ಸಿಲಿಕಾನ್ ಕುರಿತ ಅಧ್ಯನವಾಗಲೀ ಉಪಯೋಗವಾಗಲೀ ಬಹಳ ವರ್ಷಗಳವರೆಗೆ ನಡೆಯಲೇ ಇಲ್ಲ.
ಸಿಲಿಕಾನ್ ಎಂದರೇನು ?
[ಬದಲಾಯಿಸಿ]ಸಿಲಿಕಾನ್ ಒ೦ದು ರಾಸಯನಿಕ ವಸ್ತು .ಇದು ಉತ್ತಮ ರೀತಿಯಲ್ಲಿ ಮೊದಲನೆ ಬಾರಿಗೆ ೧೮೨೩ ರಲ್ಲಿ ತಯಾರಿಸಲ್ಪಟ್ಟಿತ್ತು.೧೮೦೮ ರಲ್ಲಿ ಇದಕ್ಕೆ' ಸಿಲಿಸಿಯ೦'ಎ೦ದು ಹೆಸರಿಡಲಾಯಿತು.ಇಡೀ ಜಗತ್ತಿನಲ್ಲಿ ಸಿಲಿಕಾನ್ ಗಾತ್ರದಲ್ಲಿ ಎ೦ಟನೆ ಸಾಧಾರಣ ವಸ್ತುವಾಗಿದೆ.ಆದರೆ ಪರಿಸರದಲ್ಲಿ ಇದು ಪರಿಶುದ್ದವಾಗಿ ಕಾಣಲ್ಪಡುವುದು ಅತೀ ಕಡಿಮೆ ಭೂಮಿಯ ಮೇಲಿನ ಪದರ ೯೦% ಸಿಲಿಕೇಟ್ ನಿ೦ದಲೇ ತು೦ಬಿದೆ.ಭೂಮಿಯಲ್ಲಿ ಅಮ್ಲಜನಕದ ನ೦ತರ ಅತೀ ಹೆಚ್ಚಾಗಿ ಇರುವ ಎರಡನೇ ವಸ್ತು ಸಿಲಿಕಾನ್ ಆಗಿದೆ ಜೊನ್ಸ್ ಜಾಕೊಬ್ ಬೆರ್ಸೆಲಿಯಸ್ ಎ೦ಬಾತ ಸಿಲಿಕಾನ್ ನನ್ನು ೧೮೨೪ ರಲ್ಲಿ ಕ೦ಡುಹಿಡಿದ.ಅಮೊರ್ಪ್ಸ್ ಹಾಗು ಕ್ರಿಸ್ಟಲೀನ್ ಇವೆರಡು ಸಿಲಿಕಾನಿನ ಎರಡು ಅಲ್ಲೊಟ್ರೊಫಿಸ್ ಗಳಾಗಿವೆ.
]
ಬದಲಿ ಶಕ್ತಿಮುಲ:ನೆಲದಾಳದ ಶಾಖ
[ಬದಲಾಯಿಸಿ]ನಿಸರ್ಗವು ಜೀವಿಗಳಿಗಿತ್ತ ಅನೆಕ ವಿಸ್ಮಯಗಳಲ್ಲಿ ನೀರ್ಬುಗ್ಗೆಯು ಒಂದು.ಅದರಲ್ಲೂ ವಿಶೇಷವೆಂದರೆ ಬಿಸಿನೀರಿನ ಬುಗ್ಗೆ. ಆದರೆ ಈ ಚಿಲುಮೆಗಳು ಎಲ್ಲೆಡೆಯು ಕಂಡುಬರುವುದಿಲ್ಲ.ಇವು ಕಂಡುಬರುವಂತಹ ಭೂ ಉಷ್ಣದ "ಪಟ್ಟಿ" ಗಳು ಭೂಗೋಳದ ಅನೇಕ ಕಡೆ ಹರಡಿದೆ.ಇಂತಹ ಪ್ರದೇಶಗಳಲ್ಲಿ ಮಾಗ್ಮ ಎಂಬ ಕರಗಿದ ಶಿಲೆಯು ನೆಲದ ಮೇಲ್ಪದರದಲ್ಲೇ ಇದ್ದು ನೀರು ಇಂಗಿ ಇಳಿಯುವುದು ಮೊದಲೆ ಬಿಸಿಯಾಗುತ್ತದೆ.ಮಳೆ ನೀರು ಅಪಾರ ಹಿಮ ಕರಗಿದ ನೀರು ಭೂಮಿಯ ಬಿರುಕುಗಳಲ್ಲಿ ಇಳಿದು ಅಗ್ನಿ ಪರ್ವತದಂತಹ ಜೀವಂತ ಶಾಖ ಮೊಲಕ್ಕೆ ಬಂದಾಗ ಬಿಸಿ ಬುಗ್ಗೆ ಹೊರಹೊಮ್ಮುತ್ತದೆ. ಹಿಮಾಲಯದ ತಪ್ಪಲಲ್ಲಿ, ಬದರಿ, ಕೇದಾರಗಳ ದಾರಿಯಲ್ಲಿ ಕಾವುವ ಗಂಧಕಯುಕ್ತ ಬಿಸಿನೀರಿನ ತಪ್ತಕುಂಡಗಳಿಗೂ ನಮ್ಮ ದಕ್ಷಿಣ ಕನ್ನಡ ಬೆಂದ್ರ್ ನ ಬಿಸಿನೀರಿನ ಕೊಳಕ್ಕೂ ಭೂಮಿಯ ಒಡಲ ಶಾಖವೇ ಕಾರಣ. ಭೂಮಿಯ ಮೇಲ್ಪದರದದಲ್ಲಿ ಸಿಕ್ಕಿಹಅಕಿಕೊಂಡ ಶಾಖವು ಒಂದು ಸಾವಿರ ಡಿಗ್ರಿಯವರೆಗೂ ಇದ್ದೀತು. ಈ ಭೂ ಉಷ್ಣ ಶಕ್ತಿಯಲ್ಲಿ ನೀರು ಬಿಸಿಯಾಗಿ ಹಿಗ್ಗಿ ಆವಿಯ ಒತ್ತಡವೂ ಸೇರಿ ನೆಲದೊಳಗಿರಲಾರದೆ ರಂಧ್ರಗಳಿಂದ ಹೊರಕ್ಕೆ ಚರ್ರೆಂದು ಚಿಮ್ಮಿತು-ಭೂಮಿ ಬಾಯಿ ಮುಕ್ಕಳಿಸಿ ಉಗಿದಂತೆ. ಉಷ್ಣತೆ ಮತ್ತು ಒತ್ತಡ ಹೆಚ್ಚಾಗಿದ್ದರೆ ನೀರು ಬುಗ್ಗೆಯ ಬದಲು ಉಗಿಹಗ್ಗೆಯೇ ಬುಸ್ಸೆಂದು ಹೊರಹೊಮ್ಮಿತು.
ಅದ್ವತೀಯ ಸ್ಥಾವರ
[ಬದಲಾಯಿಸಿ]ತುಸು ಖರ್ಚಿಲ್ಲದ ಈ ನಿಸರ್ಗದತ್ತವಾದ ಶಕ್ತಿಮುಲವನ್ನೇ ಬಳಸಿಕೊಳ್ಳಬೇಕು? ಈ ಬುಗ್ಗೆಗಳ ಉಗಿಯನ್ನು ಕೊಳವೆಗಳ ಮುಲಕ ಸಾಗಿಸಿ ವಿದ್ಯುತ್ ಉತ್ಪಾದನೆ ಮಾಡುವ ಚಕ್ರಗಳಿಗೆ ಒದಗಿಸಬಹುದಲ್ಲವೇ? ದಶಕಗಳ ಕಾಲ ಇಟ್ಟು ಅಮೇರಿಕಾ, ಹವಾಯಿ ದ್ವೀಪದಳು ಬಿಸಿನೀರಿನ ವರತೆಗಳನ್ನು ಬಳಸಿ ತಮ್ಮ ಮನೆಗಳಿಗನ್ನು ಬೆಚ್ಚಗಿಟ್ಟು ವಿದ್ಯುತ್ ಉತ್ಪಾದನೆ ಮಾಡಿಕೊಂಡರು. ೧೯೪೦ ರ ಹಿಂದೆಯೆ ಇಟಲಿಯಲ್ಲಿ ಇಂತಹ ವಿದ್ಯುತ್ ಉತ್ಪಾದನೆಯ ಘಟಕಗಳನ್ನು ಸ್ಥಾಪಿಸಲಅಯಿತು. ಎರಡನೇ ವಿಶ್ವ ಸಮರದ ಕಾಲದಲ್ಲಿ ಅದು ನಾಶಕ್ಕೆ ಒಳಗಾದರು ಅನಂತರ ಮತ್ತೆ ಸರಿಪಡಿಸಲಾಯಿತು.ಸುಮಾರು ೫೦ ವರ್ಷಗಳ ವರೆಗೆ ಈ ಸ್ಥಾವರವು ಪ್ರಪಂಚದ ಅದ್ವೀತಿಯವಾಗಿತ್ತು. ೧೯೫೬ ರಿಂದಿಚೆಗೆ ಅಮೇರಿಕದಲ್ಲಿ ಇಂತಹ ಸ್ಥಾವರಗಳ ಕಾರ್ಯಾರಂಭ ಮಾಡಲಾಯಿತು. ನ್ಯೂಜಿಲೆಂಡ್ನಲ್ಲಿರುವ ಇಂತಹ ಒಂದು ಉಗಿಹಲವನ್ನು ಅಧ್ಯಯನ ಮಾಡಿದ ತಜ್ಞರು ೧೦೦೦ ವರ್ಷಗಳಿಗೆ ಸಾಲುವಷ್ಟು ಅಪಾರ ಒತ್ತಡವಿರುವ ಆವಿ ಇಲ್ಲಿದೆ ಎಂದು ಅಂದಾಜು ಮಾಡಿದರು.