ಸದಸ್ಯ:Kavya.Kalmanja/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕಪಟರಾಳ ಕೃಷ್ಣರಾವ್[ಬದಲಾಯಿಸಿ]

ಹೈದ್ರಾಬಾದ್ ಕರ್ನಾಟಕದ ಹಿರಿಯ ಕನ್ನಡ ಸಾಹಿತಿ ಸಂಶೋದಕರಾದ ದಿ. ಶ್ರೀ ಕಪಟರಾಳ ಕೃಷ್ಣರಾಯರು ಕಟ್ಟಾ ಕನ್ನಡಾಭಿಮಾನಿ. ಕನ್ನಡ ಭಾಷೆ ಮತ್ತು ಸಂಸ್ಕøತಿ ಹಾಗೂ ಸಂಶೋಧನೆಗೆ ತಮ್ಮ ಬದುಕನ್ನೆ ಮುಡುಪಾಗಿಟ್ಟವರು. ಹೈದ್ರಾಬಾದ್ ಕರ್ನಾಟಕದ ಕಲಬುರ್ಗಿ ಐತಿಹಾಸಿಕವಾಗಿ ಸಾಹಿತ್ಯವಾಗಿ ಪ್ರಸಿದ್ದಿಯನ್ನು ಪಡೆದ ಪ್ರದೇಶ. ಚಾಲುಕ್ಯ, ರಾಷ್ಟ್ರಕೂಟ ಕಲಚೂರಿ ಮುಂತಾದ ಸಾಮ್ರಾಜ್ಯಗಳ ಆಳ್ವಿಕೆಗೆ ಒಳಪಟ್ಟ ಈ ಭಾಗ ಬೌದ್ದ, ಶೈವ, ಜೈನ, ವೈಷ್ಣವ, ವೀರಶೈವ ಇಸ್ಲಾಂ ಮುಂತಾದ ಧರ್ಮಗಳ ಸಾಮಾರಸ್ಯದ ಪ್ರದೇಶ. ಹೈದ್ರಾಬಾದ್ ಕರ್ನಾಟಕ ಪ್ರದೇಶದ ಕಲಬುರ್ಗಿ ಜಿಲ್ಲೆ ಬಹುಕಾಲ ಹೈದ್ರಾಬಾದ್ ನಿಜಾಮನ ಆಳ್ವಿಕೆಗೆ ಒಳಪಟ್ಟು ಉರ್ದು ಮಾಧ್ಯಮದ ಮೂಲಕವಾಗಿನ ಕನ್ನಡದ ಪರಿಸ್ಥಿತಿ ಅತ್ಯಂತ ದಯನೀಯವಾಗಿ, ಜೊತೆಗೆ ಮಹರಾಷ್ಟ್ರದ ಪ್ರಭಾವಕ್ಕೆ ಸಿಕ್ಕು ಮರಾಠಿ ಭಾಷೆ ಅತ್ಯಂತ ಪ್ರಬಲವಾಗಿರುವಾಗ ಕಲಬುರ್ಗಿಯಲ್ಲಿ ಕನ್ನಡವನ್ನು ಉಳಿಸಿ ಬೆಳೆಸುವ ಪಯತ್ನವನ್ನು ಮಾಡಿದಕೆಲವು ಮಹನೀಯರಲ್ಲಿ ಕಪಟರಾಳ ಕೃಷ್ಣರಾಯರು ಒಬ್ಬರು. ಕಲಬುರ್ಗಿ ಜಿಲ್ಲೆಯ ಜೀವರ್ಗಿ ತಾಲೂಕಿನ "ಹಾಲಗಡಲಿ" ಎಂಬ ಗ್ರಾಮದಲ್ಲಿ 1889ರಲ್ಲಿ ಜನಿಸಿದ ಕಪಟರಾಳರು ಕಲಬುರ್ಗಿಯಲ್ಲಿ ನೆಲೆಸಿ ತಮ್ಮ ಶಿಕ್ಷಣವನ್ನು ಮುಂದುವರೆಸಿದರು. ಆರಂಭಿಕ ಅಧ್ಯಯನವು ಆ ಕಾಲದಲ್ಲಿ ಅನಿವಾರ್ಯ ಮಾಧ್ಯಮಗಳಿದ್ದ ಉರ್ದು, ಫಾರಸಿ, ಭಾಷೆಯಲ್ಲಿಯೇ ಆಯಿತು. ಮರಾಠಿಯ ಪ್ರಭಾವದಿಂದಾಗಿ ಮರಾಠಿಯನ್ನು ಕಲಿಯುದು ಅನಿವಾರ್ಯವಾಯಿತು.

ಶ್ರೀಯುತ ಕಪಟರಾಳರು ಬಹುಭಾಷಾ ಬಲ್ಲಿದರಾಗಿರುವಂತೆ ಭಾಷ ಪ್ರೇಮಿಗಳು ಆಗಿದ್ದರು. ಪುಣೆಗೆ ಹೋಗಿ ಇಂಗ್ಲಿಷ್‍ನಲ್ಲಿ ಕಾನೂನು ಅಭ್ಯಾಸಮಾಡಿ ನ್ಯಾಯವಾದಿಯಾಗಿ ಸೇವೆ ಸಲ್ಲಿಸಲು ಪ್ರಯತ್ನಿಸಿದರು. ಕಲಬುರ್ಗಿ ಜಿಲ್ಲೆಯಲ್ಲಿ ಆಕಾಲದಲ್ಲಿ ಆಂಗ್ಲಭಾಷೆಯಲ್ಲಿ ವಕೀಲ ಶಿಕ್ಷಣವನ್ನು ಪಡೆದವರು ಇವರೊಬ್ಬರೆ ಆಗಿದ್ದರೆಂಬುದು ಗಮನಿಸಬೇಕಾದ ಸಂಗತಿ. ಇಂಗ್ಲಿಷ್, ಉರ್ದು, ಮರಾಠಿ, ಮತ್ತು ಫಾರಸಿ ಭಾಷೆಗಳಲ್ಲಿ ನೈಪುಣ್ಯತೆಯನ್ನು ಪಡೆದಿದ್ದರೂ ರಾಯರ ಮನಸ್ಸಿನಲ್ಲಿ ಕನ್ನಡ ಭಾಷಭಿಮಾನಕ್ಕೇನೂ ಕೊರತೆ ಇರಲಿಲ್ಲ. ಕನ್ನಡದ ಗಂಡು ಮೆಟ್ಟಿನ ಸ್ಥಳವಾದ ಕಲಬುರ್ಗಿಯಲ್ಲಿ ಇತರ ಭಾಷೆಗಳ ಪ್ರಾಬಲ್ಯದಿಂದಾಗಿ ಕನ್ನಡಕ್ಕೆ ಬಂದೊದಗಿದ ಅಧೋಗತಿಗೆ ಕಪಟರಾಳರ ಮನ ಮಿಡುಕುತ್ತಿತ್ತು. ಹೀಗಾಗಿ ಅವರು ಕನ್ನಡದ ಸಂಘಟನೆ, ಸಾಂಸ್ಕøತಿಕ ಚಟುವಟಿಕೆಗಳ ಕಾರ್ಯದಲ್ಲಿ ತಮ್ಮನ್ನು ತಾವೇ ತೊಡಗಿಸಿಕೊಂಡರು. ಕನ್ನಡ ಸಾಹಿತ್ಯ ಸಂಘದ ಕ್ರೀಯಾಶೀಲ ಸದಸ್ಯರಾಗಿ ವೈಭವದಿಂದ ನಾಡಹಬ್ಬಗಳನ್ನು ಸಂಘಟಿಸಿ ಕನ್ನಡ ಭಾಷೆ ಮತ್ತು ಸಂಸ್ಕøತಿಗೆ ಪ್ರಚೋದನೆಯನ್ನು ಕೊಟ್ಟರು. ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಸಮಿತಿಯ ಸದಸ್ಯರಾಗಿ ಕನ್ನಡ ಪರ ಕಾರ್ಯಚಟುವಟಿಕೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು. ಮರಾಠಿ ಮತ್ತು ಉರ್ದು ಮಾಧ್ಯಮಗಳ ಕಪಿಮುಷ್ಟಿಯಲ್ಲಿ ಸಿಲುಕಿದ ಕನ್ನಡವನ್ನು ಹೊರತಂದ ಕೀರ್ತಿ ಕಪಟರಾಳರಿಗೆ ಸಲ್ಲುತ್ತದೆ. ಕೇವಲ ಸಂಘ ಮತ್ತು ಸಾಂಸ್ಕøತಿಕ ಚಟುವಟಿಕೆಗಳಿಂದ ಕನ್ನಡ ಭಾಷೆ ಶ್ರೀಮಂತವಾಗಲಾರದು ಎಂಬ ಸತ್ಯವನ್ನು ಮನಗಂಡ ಕೃಷ್ಣರಾಯರು ಕನ್ನಡ ಸಾಹಿತ್ಯದ ಕೃಷಿಯಲ್ಲಿ ಅದು ಮುಖ್ಯವಾಗಿ ಸಂಶೊಧನೆಯ ಮಾರ್ಗದಲ್ಲಿ ಸಾಗುತ್ತಾ ಕನ್ನಡ ಸಾಹಿತ್ಯದ ಇತಿಹಾಸದ ಮೇಲೆ ಹೊಸ ಬೆಳಕನ್ನು ಬೀರಬಲ್ಲ ಉತ್ಕುಷ್ಟವಾದ ಕೃತಿಗಳನ್ನು ಕನ್ನಡಕ್ಕೆ ಕಾಣೆಕೆಯಾಗಿ ನೀಡಿದರು. ಕನ್ನಡದ ಕಾರ್ಯಕ್ಕಾಗಿ ತಮ್ಮ ವಕೀಲ ವೃತ್ತಿಯನ್ನು ತ್ಯಜಿಸುವುದಕ್ಕೆ ರಾಯರು ಹಿಂದೆ ಮುಂದೆ ನೋಡಲಿಲ್ಲ. ಆ ಸಂದರ್ಭದಲ್ಲಿ ಮಹಾತ್ಮಾ ಗಾಂಧೀಜಿಯವರು ಕರೆಕೊಟ್ಟ ರಾಷ್ಟ್ರೀಯ ಸ್ವಾತಂತ್ರ್ಯ ಹೋರಾಟದ ಚಳುವಳಿಯಲ್ಲಿಯೂ ಕೃಷರಾಯರು ಭಾಗವಹಿಸಿದರು. ವಕೀಲರಾಗಿ ಬಹುಭಾಷಾ ವಿದ್ವಾಂಸರಾಗಿ ಗಾಂಧಿವಾದಿಗಳಾಗಿ ದೇಶಭಕ್ತರಾಗಿ, ಕನ್ನಡದ ಸೇವಕರಾಗಿ, ಕಲಬುರ್ಗಿಯ ಹಿರಿಯ ಸಾಮಾಜಿಕ ಕಾರ್ಯಕರ್ತರಾಗಿ ಹಿರಿಯ ಚಿಂತಕರಾಗಿ, ಕನ್ನಡಿಗರ ಸಂಘಟಕರಾಗಿ, ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸದಸ್ಯರಾಗಿ, ಕನ್ನಡ ಚಟುವಟಿಕೆಗಳ ಸ್ಪೂರ್ತಿ-ಪ್ರೇರಣೆಯ ಶಕ್ತಿಯಾಗಿ ಹೀಗೆ ಶ್ರೀಯುತ ಕಪಟರಾಳ ಕೃಷ್ಣರಾಯರು ವಿವಿಧ ಮುಖಗಳ ಸುಸಂಸ್ಕøತ, ಸೌಜನ್ಯಪೂರ್ಣ, ಸ್ನೇಹಪರ ಜೀವಿಯಾಗಿದ್ದರು. ಕನ್ನಡ ಇತಿಹಾಸ ಸಂಶೋಧಕರಲ್ಲಿ ಅಗ್ರಗಣ್ಯರು ಮತ್ತು ಪ್ರಾತ; ಸ್ಮರಣೇಯರು. ಇಂತಹ ಕನ್ನಡದ ಹಿರಿಯ ಚೇತನ ತನ್ನ ಬದುಕಿನುದ್ದಕ್ಕೂ ಕನ್ನಡ ಸಾಹಿತ್ಯ ಸರಸ್ವತಿಯ ಸೇವೆಯನ್ನು ಮಾಡುತ್ತ 1996ರಲ್ಲಿ ನಮ್ಮಿಂದ ಅಗಲಿದರು. ಯಾವ ವರ್ಗ_ ವರ್ಣ ಲಿಂಗ ಭೇದವಿಲ್ಲದೆ ಅವರು ಮಾಡಿದ ಕಾರ್ಯ ಸಮಾಜಕ್ಕೆ ಅವರು ನೀಡಿದ ವಿಚಾರಪೂರ್ಣ ಮತ್ತು ಸಂಶೋಧನಾ ಕೃತಿಗಳು ತಮ್ಮದೆ ಆದ ಮಹತ್ವವನ್ನು ಹೊಂದಿವೆ ಎಂಬುದರಲ್ಲಿ ಎರಡು ಮಾತಿಲ್ಲ. ಕಪಟರಾಳ ಕೃಷ್ಣರಾಯರ ಬರಹಗಳನ್ನು ಮುಖ್ಯವಾಗಿ ಎರಡು ಭಾಗವಾಗಿಬವಿಂಗಡಿಸಬಹುದು. ಒಂದು; ಪತ್ರಿಕೆಯಲ್ಲಿ ಪ್ರಕಕಟಗೊಂಡ ಲೇಖನಗಳು. ಎರಡು; ಗ್ರಂಥಗಳು.

1.ಲೇಖನಗಳು ಕಪಟರಾಳರು ಮೊದಲು ತಮ್ಮ ಸಾಹಿತ್ಯ ಸೇವೆಯನ್ನು ಸಂಶೋಧನ ಕಾರ್ಯವನ್ನು ಆರಂಭಮಾಡಿದ್ದುಪತ್ರಿಕೆಗಳ ಮೂಲಕ. ಕನ್ನಡ ಭಾಷೆ, ಸಾಹಿತ್ಯ, ಸಂಸ್ಕøತಿಯ ಪರವಾಗಿ ಸಂಘಟನೆಯತ್ತ ಪೂರ್ಣಒಲವನ್ನು ಹೊಂದಿದ ರಾಯರು ಬಿಡಿ ಲೇಖನಗಳನ್ನು ಬರೆಯುದರ ಮೂಲಕವಾಗಿ ಸಂಶೋಧನಾ ಕ್ಷೇತ್ರವನ್ನು ಪ್ರವೇಶಿಸಿದರು. ಶರಣ ಸಾಹಿತ್ಯ ಪರಿಷತ್ ಪತ್ರಿಕೆ, ಪ್ರಬುದ್ದ ಕರ್ನಾಟಕ, ಹೈದ್ರಾಬಾದ್ ಇಂದು, ಸಂಯುಕ್ತ ಕರ್ನಾಟಕ, ಜಯಂತಿ ಮುಂತಾದ ಪತ್ರಿಕೆಗಳ ಮೂಲಕ ತಮ್ಮ ವಿಚಾರಪೂರ್ಣ ಲೇಖನಗಳನ್ನು ಪ್ರಕಟಿಸಿದರು. ಇವರ ಹಲವು ಲೇಖನಗಳನ್ನು ಸಂಗ್ರಹ ಮಾಡಿ"ಕರ್ನಾಟಕ ಸಂಸ್ಕøತಿಯ ಸಂಶೋಧನೆ' ಎಂಬ ಹೆಸರಿನಿಂದ ಪ್ರಕಟಿಸಿದ, ಕಪಟರಾಳರ ಸ್ನೇಹಿತರಾದ ರಾಯಚೂರು ಜಿಲ್ಲೆಯ ಕುರ್ಡಿ ಹನುಮಂತಾಚಾರ್ಯರು" ತಮ್ಮ ಸಂಪಾದಕನ ಸರಿಕೆ ಎಂಬ ಲೇಖನದಲ್ಲಿ"ಶ್ರೀ ಕೃಷ್ಣರಾಯರ ವಿದ್ವತ್ಪೂರ್ಣವಾದ ಪ್ರಚೋದನಾತ್ಮಕಾದ ಲೇಖನಗಳನ್ನು ನಮ್ಮ ಪ್ರಾಂತ್ಯದ ಒಂದು ಕಾಲದ ಇತಿಹಾಸ, ಸಂಸ್ಕøತಿ, ಧರ್ಮ- ದರ್ಶನಗಳ ಮೇಲೆ ಪ್ರಕಾಶ ಚಲ್ಲುತ್ತದೆ.....ರಾಯರ ಲೇಖನಗಳ ಸಂಗ್ರಹದ ಪ್ರಕಟನೆಯೂ ನಮ್ಮ ಭಾಗದ ಲೇಖಕರಿಗೆ ಮಾರ್ಗದರ್ಶಕರಾಗುವುದು' ಎಂದು ಹೇಳಿರುವ ಮಾತುಗಳಲ್ಲಿ ಯಾವ ಉತ್ಪ್ರೇಕ್ಷೆಯೂ ಇಲ್ಲ. ಇವರ ಲೇಖನದ ಕೃತಿಗೆ ಮುನ್ನುಡಿಯನ್ನು ಬರೆದ ಬಿ.ಶಿವಮೂರ್ತಿ ಶಾಸ್ತ್ರಿಯವರು " ಇವರ ಬರಹಗಳು ಓದುಗರ ಮನಸ್ಸಿನಲ್ಲಿ ವಿಚಾರ ಕ್ರಾಂತಿಯನ್ನುಂಟುಮಾಡುತ್ತದೆ. ಸತ್ಯದ ಬುನಾದಿಯನ್ನು ತಿಳಿಯಲು ಪ್ರಚೋದನೆಯನ್ನುಂಟುಮಾಡುತ್ತದೆ. ಹಲವು ಸಂದರ್ಭದಲ್ಲಿ ವಾಚಕರ ಮನಸ್ಸಿನಲ್ಲಿರುವ ಮೂಡನಂಬಿಕೆಗಳನ್ನು ಹೊಡೆದೊಡಿಸುತ್ತವೆ ಎಂದು ನಾನು ಹೇಳಬಯಸುತ್ತೇನೆ' ಎಂಬ ಮಾತುಗಳು ಕಪಟರಾಳರಲ್ಲಿದ್ದ ಸಂಶೋಧನಾ ಲೇಖನಗಳ ವೈಚಾರಿಕ ಪ್ರಖರತೆಯನ್ನು ಎತ್ತಿತೋರಿಸುತ್ತವೆ. ಎರಡನೆಯ ಮುನ್ನುಡಿಯನ್ನು ಬರೆದಿರುವ ವಿ.ಸೀತಾರಾಮಯ್ಯನವರು" ಮನಸ್ಸಿನ ಶ್ರದ್ಧೆ ಎಲ್ಲಿ ದೊಡ್ಡದಾಗುತ್ತಾದೆನೋ ಅಲ್ಲಿ ಬಡತನ-ಸಿರಿತನಗಳ ಲೆಕ್ಕ ಹತ್ತುವುದಿಲ್ಲ. ಅಂತಹ ಮನಸ್ಸು ಕೃಷ್ಣರಾಯರಲ್ಲಿದೆ. ಅಪಾರ ವಿದ್ಯಾ ಸಾಧನೆಯನ್ನು ಮಾಡಿದ್ದಾರೆ. ಸಂಶೋದಕನಿಗೆ ಇರಬೇಕಾದ ಸತ್ಯದೃಷ್ಟಿ, ಸತ್ಯದ ಅನ್ವೇಷಣೆ, ಪ್ರಮಾಣ ನಡೆಸಿದಲ್ಲಿಗೆ ಹೋಗುವ ಪ್ರಾಮಾಣೆಕತೆ ಬೇಕು. ಅನವಧಾನ ಪ್ರಮಾದ, ಹಠ, ಆಕ್ರೋಶ ಇಲ್ಲವೆ ಇನ್ನಾವದೋ ಸಾಧನೆಗಾಗಿರುವ ಪ್ರಮಾಣ ಬೇರಿದ್ದು ಇಂಥವೆಲ್ಲ ಸತ್ಯಸಾಧನೆಗೆ ಅಪಕಾರಕ. ಕೃಷರಾಯರ ಲೇಖನಗಳಲ್ಲಿ ಸಂಶೋಧನೆಗೆ ಇರಬೇಕಾದ ಎಲ್ಲಾ ಗುಣಗಳನ್ನು ಕಾಣುತ್ತೇವೆ.' ಎಂಬ ಮಾತುಗಳಲ್ಲಿ ಕಪಟರಾಳರ ಲೇಖನಗಳಲ್ಲಿರುವ ಸತ್ಯದೃಷ್ಟಿಯ ಅರ್ಹತೆಯನ್ನು ಕಾಣುತ್ತೇವೆ. ಬಹುಭಾಷಾ ವಿದ್ವಾಂಸರಾದ ಕಪಟರಾಳರ ಬರವಣೆಗೆ ಆರಂಭವಾದದ್ದು 1924ರಲ್ಲಿ, ಅವರ ಪ್ರಥಮ ಸಂಶೋಧನಾತ್ಮಕ ಲೇಖನ "ಕರ್ಮವೀರ"ವಾರ ಪತ್ರಿಕೆಯಲ್ಲಿ ಪ್ರಕಟಗೊಂಡಿರುವುದಾಗಿ ತಿಳಿದು ಬರುತ್ತದೆ ಜಯಂತಿ ಮತ್ತು ತತ್ವವಾದ ಪತ್ರಿಕೆಗಳಲ್ಲಿಯೂ ಅವರ ಲೇಖನಗಳು ಪ್ರಕಟವಾಗಿವೆ.

2. ಗ್ರಂಥಗಳು ಕೃಷ್ಣರಾಯರ ಬಹುಮಟ್ಟಿನ ಸಂಶೋಧನ ಲೇಖನಗಳು" ಕರ್ನಾಟಕ ಸಂಸ್ಕøತಿ ಸಂಶೋಧನೆ" ಎಂ£ಬ ಕೃತಿಯಲ್ಲಿ ಅಡಕವಾಗಿವೆ. ಹೆಚ್ಚಾಗಿ ಸಾಮಾಜಿಕ ಕಾರ್ಯಕರ್ತರಾಗಿ ಕಾರಣರಾದ ಕಪಟರಾಳರಿಗೆ ಹೆಚ್ಚು ಬರವಣೆಗೆ ಮಾಡಲು ಭಾಷೆಯ ಬೆಳವಣೆಗೆಗೆ ಕಾರಣರಾದ ಕಪಟರಾಳರಿಗೆ ಹೆಚ್ಚು ಬತವಣೆಗೆ ಮಾಡಲು ಸಾದ್ಯವಾಗಲಿಲ್ಲ ಎಂಬ ವಿಷಯ ತಿಳಿದು ಬರುತ್ತದೆ. ಆರ್ಥಿಕ ಪರಿಸ್ಥಿತಿಯ ದುಸ್ಥಿತಿಯಿಂದಾಗಿ ಕೃತಿಗಳನ್ನು ಪ್ರಕಟಿಸಲು ಅವರಿಗೆ ಪ್ರಕಟಿಸಲು ಸಾದ್ಯವಾಗಲಿಲ್ಲ. ಇವರ ಹರಿತವಾದ ಲೇಖನಿಯನ್ನು ದಾಖಲಿಸಬೇಕಾದ ಮಹತ್ವದ ಸಂಶೋಧನಾ ಕಾರ್ಯವನ್ನು ಗಮನಿಸಿದ ಕೆಲವು ಅಭಿಮಾನಿಗಳು ಇವರ ಕೃತಿಗಳನ್ನು ಹೊರತರುವಲ್ಲಿ ಪ್ರಯತ್ನಿಸಿದ್ದಾರೆ. ಪ್ರಕಟವಾದ ಕೃತಿಗಳು ನಮಗೆ ದೊರೆತಿರುವ ಮಾಹಿತಿಯ ಪ್ರಕಾರ ನಾಲ್ಕು. 1. ಕರ್ನಾಟಕದ ಲಾಕುಳ ಶೈವರ ಇತಿಹಾಸ. (ಕನ್ನಡ ಅಧ್ಯಯನ ಸಂಸ್ಥೆ; ಮೈಸೂರು, 1958) 2. ತಂದೆ ಮಗಳಿಗೆ ಬರೆದ ಪತ್ರಗಳು; (ಭಾಷಾಂತರ ಗ್ರಂಥ) 3. ಕರ್ನಾಟಕ ಸಂಸ್ಕøತಿ ಸಂಶೋಧನೆ: (28 ಲೇಖನಗಳ ಸಂಗ್ರಹ): ಉಷಾ ಸಾಹಿತ್ಯ ಮಾಲೆ: ಮೈಸೂರು, 1970 4 ಸುರಪುರ ಸಂಸ್ಥಾನದ ಇತಿಹಾಸ: ಪ್ರಕಾಶರು, ಮಂಜುನಾಥ ಪ್ರಕಾಶನ, ರಾಜಾಜಿನಗರ ಬೆಂಗಳೂರು, 1977

ಈ ಪ್ರಕಟವಾದ ಕೃತಿಗಳಲ್ಲದೆ ಶರಣಸಾಹಿತ್ಯ ಸಂಪುಟ -12 ಸಂಚಿಕೆ -47ರಲ್ಲಿ ಚೈತನ್ಯ ಸಂಪ್ರದಾಯ ಮತ್ತು ಶರಣ ಸಾತ್ಯದ ನವೆಂಬರ - ಡಿಸೆಂಬರವ ಸಂಚಿಕೆಯಲ್ಲಿ ಸಿದ್ಧಮಾರ್ಗವೂ ಮತ್ತು "ವೀರಶೈವ ಸಂಪ್ರದಾಯವೂ' ಎಂಬ ಲೇಖನಗಳು ಪ್ರಕಟವಾಗಿರುವುದಾಗಿ ತಿಳಿದು ಬರುತ್ತದೆ.

ಕರ್ನಾಟಕ ಸಂಸ್ಕøತಿಯ ಸಂಶೋಧನೆ

ಕನ್ನಡ ಸಾಹಿತ್ಯದ ವಿವಿಧ ಮುಖ ದರ್ಶಿಯರುಬ28 ಸಂಶೋಧನ ಲೇಖನಗಳ ಈ ಗ್ರಂಥದಲ್ಲಿ ಇವೆ. ಈ ಲೇಖನಗಳನ್ನು ಮೂರು ಭಾಗಗಳಲ್ಲಿ ವಿಂಗಡಿಸಲಾಗಿದೆ. ಮೊದಲನೆಯ ಭಾಗದಲ್ಲಿ 18 ಲೇಖನಗಳು, ಎರಡನೆಯ ಭಾಗದಲ್ಲಿ 3 ಲೇಖನಗಳು, ಮೂರನೆಯ ಭಾಗದಲ್ಲಿ 7 ಲೇಖನಗಳು ಪ್ರಕಟವಾಗಿದ್ದರೂ ಕೃತಿಯ ಕೊನೆಗೆ ಪರಿಶಿಷ್ಟದಲ್ಲಿ ಆಯಾ ಲೇಖನಗಳು ಪ್ರಕಟವಾದ ಪತ್ರಿಕೆ ಮತ್ತು ವರ್ಷಗಳ ವಿವರಗಳನ್ನು ಪಟ್ಟಿಮಾಡಿಕೊಡಲಾಗಿದೆ. ಈ ಕೃತಿಗೆ ಮೊದಲನೆಯ ಮುನ್ನುಡಿಯನ್ನು ಶಿವಮೂರ್ತಿ ಶಾಸ್ತ್ರಿಗಳು ಬರೆದಿದ್ದಾರೆ. ಎರಡನೆಯ ಮುನ್ನುಡಿಯನ್ನು ವಿ. ಸೀತಾರಾಮಯ್ಯನವರು ಬರೆದಿದ್ದಾರೆ. ಇದನ್ನು ಸಂಪಾದಿಸಿದವರು ವಿದ್ವಾನ್ ಕುರಡಿ ಹನುಮಂತಾಚಾರ್ಯರು ವಿಷ್ಣು ವಿವರಗಳ ಈ ಗ್ರಂಥದ ಭಾಹ್ಯ ದರ್ಶನವಾದರೆ, ಕೃತಿಯ ಒಳಹೊಕ್ಕಾಗ ಮೊದಲ ಭಾಗದಲ್ಲಿ ಬರುವ ಲೇಖನಗಳು-

1. ರೇವಣಸಿದ್ದನ ಉತ್ಪತಿಯ ಕಲ್ಪನೆಯ ವಿಕಾಸ ಮತ್ತು ಅವನ ಕಾಲ. 2. ಹರಿಹರನು ನಿರೂಪಿಸಿದ ರೇವಣಸಿದ್ಧೇಶ್ವರನ ಸಮಕಾಲೀನವರು. 3. ಸಿದ್ಧೇಶ್ವರನ ಸಂಪ್ರದಾಯ ಯಾವುದು? 4. ಸಿದ್ಧರಾಮೇಶ್ವರನಿಗೆ ಚೆನ್ನಬಸವೇಶ್ವರನಿಂದ ಶಿವದೀಕ್ಷೆ ಯಾದುದು ಐತಿಹಾಸಿಕವೆ?

   5. ಮಹಾನುಭಾವ ಪಂಥ ಶಿವಾನುಭವ ಪಂಥಗಳ ಹಿನ್ನಲೆ.

6. ವೀರಶೈವರಲ್ಲಿ ಸಾಂಪ್ರಾದಾಯಿಕ ಭೇದವಿಲ್ಲವೆ? 5. ಅಲ್ಲಮ ಪ್ರಭು ಮತ್ತು ನಾಥ ಸಂಪ್ರದಾಯ. 8. ಅಲ್ಲಮ ಪ್ರಭು 9. ಅಲ್ಲಮನೋ - ಅಲ್ಲಮಯ್ಯನೋ

  10. ಬಸವೇಶ್ವರನು ನಾಥ- ಸಿದ್ದ ಪಂಥದ ಅನುಯಾಯಿ
  11. ವಾದಭೂಮಿ - ಶ್ರೀ ಬಸವೇಶ್ವರ ಪಂಥ ವಿಚಾರ
  13. ಬಸವ-ಬಿಜ್ಜಳರ ಇತಿಹಾಸದ ಪುನರ್ ವಿಮರ್ಶೆ
  14. ಬಸವೇಶ್ವರನೂ ಸ್ತ್ರೀ ಸ್ವಾತಂತ್ರ್ಯವೂ
  15. ಸಾವಳಿ ಶಿವಲಿಂಗೇಶ್ವರ ಚರಿತ್ರೆ
  16. ವೀರಶೈವ ಸಂಶೋಧನೆ
  17. ಶಿವಾನುಭವ ಮಂಟಪವು ಐತಿಹಾಸಿಕವೆ? 
  18. ಕರ್ನಾಟಕ -ಮಹಾರಾಷ್ಟ್ರದಲ್ಲಿ ಚೈತನ್ಯ ಸಂಪ್ರದಾಯ ಎರಡನೆಯ ಭಾಗದಲ್ಲಿ
  19. ಹಳಗನ್ನಡ- ಹೊಸಗನ್ನಡ ಐತಿಹಾಸಿಕ ವಿಮೋಚನೆ
  20. ನಮ್ಮ ನಾಡು - ನುಡಿಯ ಇತಿಹಾಸ
  21. ಕನ್ನಡ ಶಾಸನಗಳ ಅಭ್ಯಾಸ ಮೂರನೆಯ ಭಾಗದಲ್ಲಿ
  22. ಕಂಪಿಲನೂ ಅವನ ಸ್ಥಾನಮಾನವೂ
  23. ಮೊದಲನೆಯ ಹರಿಹರರಾಯ
  24. ಶ್ರೀ ಚಂದ್ರಲಾ ಪರಮೇಶ್ವರಿ
  25. ಪುರುಷಾರ್ಥ ಪ್ರಭೋದ
  26. ಹರಿದಾಸರ ಪರಂಪರೆ
  27. ಸಾವಸಿಗರು ಕಾಶ್ಮೀರ ದೇಶದ ಬ್ರಾಹ್ಮಣರು 
  28. ವಸ್ತು ಸಂಗ್ರಹ
        ಇಲ್ಲಿ ಬರೆದಿರುವ ಒಂದೊಂದು ಸಂಶೋಧನಾ ಲೇಖನಗಳೂ ಸಹಿತ ಆಯಾ ವಿಷಯದ ಕುರಿತು ಹೊಸ ಬೆಳಕು, ಚಿಂತನೆಗೆ ಅಸ್ಪದ ನೀಡುತ್ತವೆ. ವಿಷಯ ಪ್ರತಿಪಾದನೆಗಾಗಿ ಲೇಖಕರು ಲಭ್ಯವಿರುವ ಶಾಸನಗಳು ಮತ್ತು ಕೃತಿಗಳನ್ನು ಆಧಾರವಾಗಿಟ್ಟುಕೊಂಡಿದ್ದಾರೆ. ಬರಹ ಅತ್ಯಂತ ಆಳವಾಗಿದ್ದು ಸಂಶೋಧನಾ ಸೂತ್ರಗಳ ಹಿನ್ನಲೆಯಲ್ಲಿ ಹೊಸ  ಆಕರಗಳನ್ನು ಸಂಗ್ರಹಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಿದ್ದಾರೆ. ಅವರ ಹಲವು ಲೇಖನಗಳಲ್ಲಿ ವಾದ ವಿವಾದವನ್ನು ಸೃಷ್ಟಿಸುವ ವಿಷಯಗಳಿದ್ದರೂ ಯಾವ ಪೂರ್ವಗ್ರಹ ಪೀಡಿತ ದೃಷ್ಟಿಯಿಲ್ಲದೆ ಆಕರಗಳ ನಿದರ್ಶನದ, ಹಿನ್ನಲೆಯಲ್ಲಿ ಚರ್ಚಿಸಲು ರಾಯರು ಹಿಂಜರಿಯಲಿಲ್ಲ. ಉದಾಹರಣೆಗೆ: ರೇವಣಸಿದ್ಧ, ಅಲ್ಲಮಪ್ರಭು, ಬಸವೇಶ್ವರ ಕುರಿತ ಲೇಖನಗಳನ್ನು ನೋಡಬಹುದು.

ಅದೇ ರೀತಿಯಾಗಿ ವೀರಶೈವರಲ್ಲಿ ಸಂಪ್ರದಾಯಿಕ ಭೇದವಿಲ್ಲವೆ? ಶಿವಾನುಭವ ಮಂಟಪವು ಐತಿಹಾಸಿಕವೆ? ಬಸವ - ಬಿಜ್ಜಳರ ಇತಿಹಾಸದ ಪುರರ್ ವಿಮರ್ಶೆಗಳ, ಹರಿದಾಸರ ಪರಂಪರೆ ಮುಂತಾದ ಲೇಖನಗಳು ಅವರ ಅಪಾರ ದೂರದೃಷ್ಟಿ ಸಂಶೋಧನೆಯ ಫಲವಾಗಿ ಸೃಷ್ಟಿಗೊಂಡಿವೆ. ನಮ್ಮ ನಾಡ- ನುಡಿಯ ಇತಿಹಾಸ 1942ರಲ್ಲಿ ಪ್ರಕಟಗೊಂಡ ಲೇಖನವಾಗಿದ್ದು ರಾಯಚೂರು ಮತ್ತು ಕಲಬುರ್ಗಿ ಜಿಲ್ಲೆಗಳ ಕನ್ನಡ ಸಾಂಸ್ಕøತಿಕ ಪರಂಪರೆಯನ್ನು ವಿವರಿಸಿದ್ದಾರೆ. ಶ್ರೀ ಚಂದ್ರಲಾ ಪರಮೇಶ್ವರಿ ಲೇಖನದಲ್ಲಿ ಸನ್ನತಿ ಕ್ಷೇತ್ರದ ಪ್ರಾಚೀನ ಅವಶೇಷಗಳ ಪೂರ್ಣ ವಿವರಗಳು ಲಭ್ಯವಾಗುತ್ತವೆ. ಹೀಗೆ ಇಲ್ಲಿರುವ ಪ್ರತಿಯೊಂದು ಲೇಖನವು ಕಪಟರಾಳರಲ್ಲಿರುವ ಅಧ್ಯಯನ, ಐತಿಹಾಸಿಕ ಪ್ರಜ್ಞೆಯ ದ್ಯೋತಕವಾಗಿ ನಿಲ್ಲುತ್ತದೆ.

      ಹಲವು ವಿಮರ್ಶಕರ ಅಭಿಪ್ರಾಯದಂತೆ ಈ ಕೃತಿಯ ಇತಿಹಾಸ ಸಂಶೋಧಕರಿಗೊಂದು ಕೈದೀವಟಿಗೆ.
         ಸುರಪುರ ಸಂಸ್ಥನಾದ ಇತಿಹಾಸ

"ಸುರಪುರ ಸಂಸ್ಥಾನದ ಇತಿಹಾಸ" ಕೃತಿಯು ಅತ್ಯಂತ ಮೌಲಿಕ ಸಂಶೋಧನಾ ಕೃತಿಯಾಗಿದೆ. ಈ ಪುಸ್ತಕದ ಪ್ರಕಾಶಕರು ಮಂಜುನಾಥ ಪ್ರಕಾಶಕನ, ರಾಜಾಜಿನಗರ ಬೆಂಗಳೂರು. 1997ರಲ್ಲಿ ಪ್ರಥಮ ಮುದ್ರಣ ಪ್ರಕಟವಾಗಿದೆ. ಸುರಪುರ ಸಂಸ್ಥಾನ ವಂಶಸ್ಥರು ಮತ್ತು ಮಾಜಿ ಲೋಕಸಭಾ ಸದಸ್ಯ ರಾಜಾ ವೆಂಕಟಪ್ಪ ನಾಯಕ ಅವರು ಈ ಪುಸ್ತಕಕ್ಕೆ ಮೊದಲ ಮಾತುಗಳನ್ನು ಬರೆದು ಕಪಟರಾಳರ ಕಾರ್ಯವನ್ನು, ಅವರ ಸಂಶೋಧನಾ ರೀತಿಯನ್ನು ಪ್ರಶಂಸಿಸಿದ್ದಾರೆ. ಆಗ ಕರ್ನಾಟಕ ಗೃಹ ನಿರ್ಮಾಣ ಮಂಡಳಿಯ ಮುಖ್ಯ ಇಂಜಿನಿಯರರಾಗಿದ್ದ ಆರ್ ಸಿದ್ದಯ್ಯನವರು ಸುರಪುರ ಇತಿಹಾಸದ ಬಗ್ಗೆ ಆಸಕ್ತಿ ಇದ್ದವರು ಆ ಸಂಸ್ಥಾನದ ಬಗ್ಗೆ ಹೆಚ್ಚಿನ ಇತಿಹಾಸ ತಿಳಿಯುವ ಕೂತುಹಲದಿಂದ ಕಪಟರಾಲ ಕೃಷ್ಣರಾವ್ ಅವರನ್ನು ಬೇಟಿಯಾದಗ " ಸುರಪುರ ಸಂಸ್ಥಾನದ ಇತಿಹಾಸ' ದ ಬಗ್ಗೆ ಹಸ್ತಪ್ರತಿಯನ್ನು ಓದಿದರು. ಇಂತಹ ಅಪೂರ್ವ ಸಂಶೋಧನ ಕೃತಿ 40 ವರ್ಷಗಳಿಂದ ಪ್ರಕಟವಾಗದೆ ಇದ್ದದ್ದು ಕಂಡು ಪ್ರಕಟಿಸಲು ಮುಂದಾದರು. ಕುರ್ಡಿ ಹನುಮಂತಾಚಾರ್ಯರ ಸಹಕಾರದಿಂದ ಪ್ರಕಟಿಸಿದರು. ಈ ಎಲ್ಲ ವಿಚಾರಗಳನ್ನು ಪ್ರಕಾಶಕರೇ ತಮ್ಮ " ಪ್ರಕಾಶನದ ನುಡಿ"ಯಲ್ಲಿ ಹೇಳಿದ್ದಾರೆ. ಒಟ್ಟು 285 ಪುಟಗಳ ಈ ಪುಸ್ತಕ ಇಡಿಯಾಗಿ " ಸುರಪುರ ಸಂಸ್ಥಾನದ ಇತಿಹಾಸ" ದರ್ಶನವನ್ನು ಓದುಗಾರಿಗೆ ಮಾಡಿಕೊಡುತ್ತದೆ. 12 ಪ್ರಕರಣಗಳ ಮೂಲಕ ಲೇಖಕರು "ಸುರಪುರ ಸಂಸ್ಥಾನದ ಇತಿಹಾಸವನು" ಅಮೂಲ್ಯ ದಾಖಲೆಗಳ ಸಹಿತ ಹಿಡಿದಿದ್ದಾರೆ. (1) ವಂಶ ಪರಂಪರೆ (2) ಗಡ್ಡಿ ಪಿಡ್ಡನಾಯಕ (3) ಹಸರಂಗಿ ಪಾಮನಾಯಕ (4) ಪೀತಾಂಬರ ಬಹಿರಿ ಪಿಡ್ಡನಾಯಕ (5) ಇಮ್ಮಡಿ ವೆಂಕಟಪ್ಪ ನಾಯಕ (6) ಮೊಂಡಗೈ ವೆಂಕಟಪ್ಪ ನಾಯಕ (7) ಮುಮ್ಮುಡಿ ಪಾಮನಾಯಕ - ಹೀಗೆ 12 ಪ್ರಕರಣ ಅಲ್ಲದೆ ಡೋಲರನ ಅಧಿಕ ಮಾತುಗಳು, ಉಪಾಸಂಹಾರವಲ್ಲದೆ ಅನುಬಂಧದಲ್ಲಿ ಸುರಪುರ ಸಂಸ್ಥಾನದ ವಂಶವಾಹಿನಿಯ ಪೂರ್ಣ ವಿವರಗಳನ್ನು ಕೊಟ್ಟಿದ್ದಾರೆ. "ವಂಶಪರಂಪರೆ" ಪ್ರಕರಣದಲ್ಲಿ ಸುರಪುರ ಸಂಸ್ಥಾನದ 14 ತಲೆಮಾರುಗಳ ವಂಶಸ್ಥರ ಪಟ್ಟಿಯನ್ನು ನೀಡಲಾಗಿದೆ. ಇತಿಹಾಸದ ವಿಷಯದ ವಿವರಣೆಯಲ್ಲಿ ಕಪಟರಾಳರು ಬಳಸಿದ ಭಾಷೆ, ಶೈಲಿ ಅತ್ಯಂತ ಸರಳ ಸಾಮಾನ್ಯ ಓದುಗರಿಗೂ ಅರ್ಥವಾಗುವಂತದ್ದು. ಉದಾಹರಣೆಗೆ" ಸುರಪುರ ಸಂಸ್ಥಾನದ ಅರಸರಿಗೆ " ಗೋಸಲ" ವಂಶದವರೆಂದು ಕರೆಯುವ ರೂಡಿ ಇದೆ. ಗೋವುಗಳನ್ನು ಸಲಹುತ್ತಿದ್ದರಿಂದ ಇವರಿಗೆ "ಗೋಸಲ"ದವರೆಂಬ ಹೆಸರು. ಈ ಅರಸರ ಪೂರ್ವಜರು ದಕ್ಷಣದಿಂದ ಬಂದವರೆಂದು ಐತಿಹವಿದೆ. ಮೂಲಪುರುಷನು ನರಸಿಂಹನಾಯಕ. ಇವನ ಮಗ ವೀರಬೊಮ್ಮನಾಯಕ, ಮಗ ಸಿಂಗಪ್ಪನಾಯಕ, ಮಗ ಬಡೊರನಾಯಕ, ಇವನ ಮಗ ಕಲ್ಲಪ್ಪ ನಾಯಕನು, ಇವರೆಲ್ಲ ಸಾರಂಗಕೊಳ್ಳ ಮುಂತಾದ ಸ್ಥಳಗಳಲ್ಲಿ ಇರುತ್ತಿದ್ದು ಅಲ್ಲಲ್ಲಿಯ ದೇಶಗತಿಯನ್ನು ಮಾಡಿತಿದ್ದಾರೆಂದು ಪ್ರಾಚೀನ ಕೈಪಿಯತ್ತುಗಳಿಂದ ತಿಳಿದು ಬರುತ್ತದೆ.

	ವಂಶಪರಂಪರೆ ಪ್ರಕರಣದಲ್ಲಿ ಸಂಸ್ಥಾನದ ರಾಜವಂಶದ 16 ತಲೆಮಾರುಗಳ ವಿವರಗಳಿವೆ. ಬಡೊರ ನಾಯಕನ ಮಗನಾದ ಕಲ್ಲಪ್ಪ ನಾಯಕನಿಂದ ಮನೆತನದ ಇತಿಹಾಸದ ಆರಂಭದಿಂದ ಸಂಸ್ಥಾನದ ಕೊನೆಯ ಅರಸ ವೆಂಕಟಪ್ಪ ನಾಯಕನ ಕಾಲದವರೆಗಿನ ವಂಶವಾಳಿ ವಿವರಗಳು ಇಲ್ಲಿವೆ. ಮುದಗಲ್ಲಿನ ಕಿಲ್ಲೇದಾರ ಮುಸ್ತಾಖಾನ್ ಎಬಾಂತನು ಕಲ್ಲಪ್ಪ ನಾಯಕನ್ನು ಮುದಗಲ್ಲಿಗೆ ಕರೆಸಿದನು. ಈ ನಾಯಕನಿಗೆ ಏಳು ಜನ ಮಕ್ಕಳು. ಹಿರಿಯ ಮಗ ಹನುಮಂತಪ್ಪ ನಾಯಕ ಕೊಡಕಲ್ ದೇಶಗತಿ ಪಡೆದನು. ಈತನ ಸಂತತಿಯವರೇ ಈಗಿನ ಕೊಡೆಕಲ್ ದೊರೆಗಳು. ಎರಡನೆಯ ಮಗ ಇಮ್ಮಡಿ ಹನುಮಪ್ಪ ನಾಯಕ ಸೊಂಡೊರು ಅಲ್ಲಿಂದ ಕೋಸಗಿ ದೇಶಗತಿ ಹೊಂದಿ ಅಲ್ಲೇ ನೆಲೆಸಿದ.  ಅದಾವನಿ ಸಮೀಪದ ಕೊಸಗಿಯಲ್ಲಿ ಈಗಲೂ ಈತನ ವಂಶದವರು ಇದ್ದಾರೆ. ಮೂರನೆಯ ಮಗ ಮುಮ್ಮಡಿ ಹನುಮಪ್ಪನಾಯಕ ಬೀದರ ಕೊಡೆಯತ್ತ ಹೋಗಿದ್ದನು. ಈತನ ಕುರಿತು ಹೆಚ್ಚಿನ ವಿವರಗಳು ಲಭ್ಯವಿಲ್ಲ ಎಂಬುದನ್ನು ಲೇಖಕರು ಒಪ್ಪಿಕೊಂಡಿದ್ದಾರೆ. 4, 5 ಮತ್ತು ಆರನೇಯ ಮಕ್ಕಳು ಕೌಲಗಿ, ನಿಡಗುಂದಿ ಕೆರೂರ ಮತ್ತು ದಕ್ಷಿಣದ ಭಾಗಕ್ಕೆ ತೆರಳಿ ನೆಲೆಸಿದರೆ ಏಳನೇಯ ಮಗ ಚಿನ್ನ ಹನುಮ ನಾಯಕ ಕಕ್ಕೇರಿಯಲ್ಲಿ ನೆಲೆಸಿದ. ಈತನ ವಂಶಜರೆ ಸುರಪುರ ಹಾಗೂ ಗುಡಗುಂಚಿ ಸಂಸ್ಥಾನಗಳ ಮೂಲಪುರುಷರು. ದೊರೆತಿರುವ ಮಾರಠಿ ಕೈಫಿಯತ್ತುಗಳಿಂದ ಸುರಪುರ ಸಂಸ್ಥಾನದ ಮೂಲ, ವಿಜಾಪುರ ಬಾದಶಾಹ ಯುಸುಫ ಆದಿಲಶಾಹ ಮತ್ತು ಕೃಷ್ಣದೇವರಾಯನ ಕಾಲದವರೆಗೆ ಸಂಬಂಧ ಇರುವ ವಿಷಯವನ್ನು ಕಪಟರಾಳರು ಇದರಲ್ಲಿ ಬಹಿರಂಗಗೊಳಿಸಿದ್ದಾರೆ.

ಮುಂದಿನ ಪ್ರಕರಣಗಳು ಆಯಾ ದೊರೆಗಳ ಬದುಕಿನ ವಿವರಗಳು, ಪ್ರಮುಖ ಘಟನೆಗಳು, ಅವರ ರಾಜಕೀಯ ಸಾಧನೆ. ಆಡಳಿತ ವೈಖರಿ ಈ ಎಲ್ಲ ವಿವರಗಳನ್ನು ಲೇಖಕರು ಇಸ್ವಿಗಳ ಸಹಿತ ನೀಡಿರುವುದು ಅವರ ಐತಿಹಾಸಿಕ ಪ್ರಜ್ಞೆಗೆ ಹಿಡಿದ ಕನ್ನಡಿಯಾಗಿದೆ.

ಲಾಕುಲ ಶೈವರ ಇತಿಹಾಸ ಕಪಟರಾಳರ ಈ ಗ್ರಂಥವು ಲಾಕುಲ ಶೈವ ಪಂಥದ ಬಗ್ಗೆ ತಮ್ಮದೆ ಆದ ಹೊಸ ವಿಚಾರಗಳನ್ನು ಓದುಗನ ಮನಕ್ಕೆ ಮುಟ್ಟಿಸುತ್ತದೆ. ಲಾಕುಳ ಶೈವ ಪಂಥದ ಉಗಮ- ವಿಕಾಸಗಳ ವಿವರಗಳೊಂದಿಗೆ ಶೈವ ಸಂಪ್ರಾದಾಯಕ್ಕೂ ಲಾಕೂಳಕ್ಕೂ ಇರುವ ವಿವಿಧ ಮುಖಗಳನ್ನು ಎತ್ತಿತೋರಿಸುತ್ತದೆ. ಕಪಟರಾಳರ ದೃಷ್ಟಿ ಸಂಶೋಧನೆಯದು. ಆದ್ದರಿಂದ ಲಾಕುಳ ಶೈವದ ಆಳವಾದ ವಿಚಾರಗಳು ಇಲ್ಲಿ ಒಡಗೂಡಿವೆ. ಮುಂದೆ ಬರುವ ವೀರಶೈವ ಸಂಪ್ರದಾಯವು ಮೂಲತಃ ಲಾಕುಳ ಶೈವದ ಪ್ರತಿನಿಧಿಯಾಗಿದೆ. ಎನ್ನುದನ್ನು ಅವರು ಪ್ರತಿಪಾದಿಸುತ್ತಾರೆ. ಲಾಕುಳ ಶೈವರಿಗೂ ಶೈವ ಸಂಪ್ರದಾಯಕ್ಕೂ ಇರುವ ಸಾಮ್ಯಗಳನ್ನು ಮತ್ತು ಭಿನ್ನತೆಗಳನ್ನು ಈ ಕೃತಿಯಲ್ಲಿ ಹಿಡಿದಿದ್ದಾರೆ. ಲಾಕುಳ ಶೈವರ ಇತಿಹಾಸ ಕುರಿತ ಕೃಷ್ಣರಾಯರ ಈ ಕೃತಿ ನಮ್ಮಿಂದ ಕಣ್ಮರೆಯಾಗುತ್ತಿರುವ ಪಂಥವೊಂದರ ವಿಸ್ತಾರವಾದ ಮುಖದರ್ಶನವನ್ನು ನಮಗೆ ಮಾಡಿ ಕೊಡುತ್ತದೆ. ಮೈಸೂರು ಸರಕಾರದ ವಿಶ್ರಾಂತಿ ವೇತನದ ಗೌರವ ಪ್ರಶಸ್ತಿ, ರಾಜ್ಯಸರಕಾರದ ಪ್ರಶಸ್ತಿ ಮತ್ತು ಕರ್ನಾಟಕ ಸಾಹಿತ್ಯ ಅಕಾಡಮಿಯ ಗೌರವಕ್ಕೂ ಪಾತ್ರರಾಗಿದ್ದಾರೆ. ಇವರ ಸಂಶೋಧನ ಕೃತಿಗಳು ಸಂಶೋಧನಾಸಕ್ತರಿಗೆ ದೊರೆಯುವಂತಹ ಪರಿಸ್ಥಿತಿ ಇಲ್ಲ. ಮರುಮುದ್ರಣದ ಅವಶ್ಯಕತೆ ಇದೆ. ಕಪಟರಾಳರು ಸಂಶೋಧನ ಕ್ಷೇತ್ರದಲ್ಲಿ ದುಡಿಯುವಾಗ ಸರಕಾರ ಮತ್ತು ಸಮಾಜದಿಂದ ಯಾವುದೆ ಅನುಕೂಲಗಳು ಇರದಂತಹ ಅವಧಿ ಎಂಬುದನ್ನು ನಾವು ಗಮನಿಸಿದಾಗ ಆ ಕಾಲದಲ್ಲಿ ಕನ್ನಡ ಸಂಸ್ಕøತಿ, ಭಾಷೆ ಮತ್ತು ಸಂಶೋಧನ ಕ್ಷೇತ್ರಕ್ಕೆ ಕೃಷ್ಣರಾಯರು ಸಲ್ಲಿಸಿದ ಸೇವೆ ಅತ್ಯಂತ ಮಹತ್ವಪೂರ್ಣವಾದದ್ದು ಎಂದು ಹೇಳಬಹುದಾಗಿದೆ.