ಸದಸ್ಯ:Kavitha Lakshminarayana/sandbox
ರಾಬರ್ಟ್ ಬಾಷ್ | |
---|---|
ಜನನ | ೧೮೬೧ ಸೆಪ್ಟೆಂಬರ್ ೨೩ ಜರ್ಮನ್ ನ ಅಲ್ ಬೆಕ್ |
ಮರಣ | ೧೯೪೨ ಮಾರ್ಚ್ ೧೨ |
ರಾಷ್ಟ್ರೀಯತೆ | ಜರ್ಮನ್ |
ವೃತ್ತಿ(ಗಳು) | ಉದ್ಯಮಿ , ವ್ಯಾಪಾರವ್ಯಕ್ತಿ |
ಮಕ್ಕಳು | ೪ಜನ ಮಕ್ಕಳು. |
Signature | |
ಜನನ
[ಬದಲಾಯಿಸಿ]ರಾಬರ್ಟ್ ಬಾಷ್ (23 ಸೆಪ್ಟೆಂಬರ್ 1861 - 12 ಮಾರ್ಚ್ 1942) ಒಬ್ಬ ಜರ್ಮನ್ ಕೈಗಾರಿಕೋದ್ಯಮಿ, ಎಂಜಿನಿಯರ್ ಮತ್ತು ಸಂಶೋಧಕ.ಅಂತೆಯೇ ರಾಬರ್ಟ್ ಬಾಷ್ ಜಿಎಂಬಿಹೆಚ್ ಕಂಪೆನಿಯ ಸಂಸ್ಥಾಪಕ.
ಜೀವನಚರಿತ್ರೆ
[ಬದಲಾಯಿಸಿ]ಬಾಷ್, ಉಲ್ಮ್ ಬಳಿಯ ಸ್ವಾಬಿಯನ್ ಹೈಲ್ಯಾಂಡ್ಸ್‌ನಲ್ಲಿರುವ ಅಲ್ಬೆಕ್‌ನಲ್ಲಿ ಜನಿಸಿದರು. ಅವರು ಸರ್ವೇಟಿಯಸ್ ಬಾಷ್ ಮತ್ತು ಮಾರಿಯಾ ಮಾರ್ಗರಿಟಾ ಡೊಲ್ಲೆಗೆ ಜನಿಸಿದ ಹನ್ನೆರಡು ಮಕ್ಕಳಲ್ಲಿ ಒಬ್ಬರು. ಸರ್ವೇಟಿಯಸ್ ಬ್ರೂವರಿಯನ್ನು ಒಳಗೊಂಡಿರುವ ದೊಡ್ಡ ಪ್ರಗತಿಪರ ಫಾರ್ಮ್ ಅನ್ನು ನಡೆಸುತ್ತಿದ್ದರು. ರಾಬರ್ಟ್ ಬಾಷ್ ಅವರ ಸೋದರಳಿಯ ಫ್ಯೂಚರ್ ನೊಬೆಲ್ ಪ್ರಶಸ್ತಿ ವಿಜೇತ ಕಾರ್ಲ್ ಬಾಷ್.
ಬಾಲ್ಯ
[ಬದಲಾಯಿಸಿ]ಇವರ ತಮ್ಮ ತಂದೆ-ತಾಯಿಗೆ ಹನ್ನೊಂದನೆಯ ಮಗ. ಇವರ ತಂದೆ ತಾಯಿಯವರು ಹಿಂದಿನಿಂದಲೂ ಸ್ಥಿತಿವಂತರು ಹಾಗೂ ಕೃಷಿ ಕುಟುಂಬಸ್ಥರು.ಇವರ ತಂದೆ ಕೂಡ ವಿಧ್ಯಾವಂತರಾಗಿದ್ದರಿಂದ ತಮ್ಮ ಮಕ್ಕಳಿಗೂ ಸಹ ಒಳ್ಳೆಯ ವಿಧ್ಯಾಭ್ಯಾಸವನ್ನು ನೀಡಿದ್ದಾರೆ.ರಾಬರ್ಟ್ ಬಾಷ್ ರವರು ತಮ್ಮ ಚಿಕ್ಕವಯಸ್ಸಿನಿಂದಲೂ ಎಲೆಕ್ಟ್ರಾನಿಕ್ ವಸ್ತುಗಳನ್ನು ಅಥವಾ ವಿಧ್ಯುತ್ ಸಂಬಂಧಿತ ವಸ್ತುಗಳನ್ನು ಜೋಡಿಸಿ ಹೊಸ ತರಹದ ಉಪಕರಣಗಳನ್ನಾಗಿ ಮಾಡಲು ಪ್ರಯತ್ನಿಸುತ್ತಿದ್ದರು ಹಾಗೂ ಈ ಕೆಲಸದಲ್ಲೇ ಬಾಷ್ ನವರು ಹೆಚ್ಚು ಸಮಯವನ್ನು ಕಳೆಯುತ್ತಿದ್ದರು. ರಾಬರ್ಟ್ ಆವರು ಯಾವಾಗಲೂ ಏನಾದರು ಸಾಧಿಸಬೇಕೆಂಬ ಛಲದಿಂದ ತಮ್ಮ ಬಾಲ್ಯವನ್ನು ಕಳೆದರು. ಇದೇ ಆಸಕ್ತಿ ಮತ್ತು ಛಲದಿಂದ ತಮ್ಮ ವಿಧ್ಯಾಭ್ಯಾಸವನ್ನು ಯಾಂತ್ರಿಕ ವಿಭಾಗನಲ್ಲೇ ಮುಂದುವರಿಸಿದರು.ಬಾಷ್ ನವರು ಎರಡು ಬಾರಿ ವಿವಾಹಿತರು ಹಾಗೂ ಇವರಿಗೆ ೪ಜನ ಮಕ್ಕಳು.
ಶಿಕ್ಷಣ
[ಬದಲಾಯಿಸಿ]ರಾಬರ್ಟ್ ಬಾಷ್ ನವರು ೧೮೬೯ ರಿಂದ ೧೮೭೬ರ ತನಕ ಸೆಕೆಂಡ್ ಟೆಕ್ನಿಕಲ್ ಶಾಲೆಯಲ್ಲಿ ಓದಿದರು. ನಂತರ ಇವರು ಅಲ್ಲೇ ಕೆಲಸಗಾರನಾಗಿ ಕೆಲಸವನ್ನು ಸಹ ನಿರ್ವಹಿಸಿದರು. ಇವರು ತಮ್ಮ ವಿಧ್ಯಾಭ್ಯಾಸದ ನಂತರ ಹಾಗೂ ಅವರ ಕೆಲಸದ ಅಭ್ಯಾಸದ ನಂತರ, ಬಾಷ್ ನವರು ವಿವಿಧ ರೀತಿಯ ಅನೇಕ ಸಂಸ್ಥೆಗಳಲ್ಲಿ ಅಂದರೆ ಥೋಮಸ್ ಎಡಿಸನ್ ಎಂಬ ಸಂಸ್ಥೆಯಲ್ಲಿ ಹಾಗೂ ಬ್ರಿಟನ್ ನ ಯು.ಕೆ ಎಂಬ ಸ್ಥಳದಲ್ಲೂ ಸಹ ೭ವರ್ಷಗಳ ಕಾಲ ಜರ್ಮನ್ ನಲ್ಲಿ ಕೆಲಸವನ್ನುನಿರ್ವಹಿಸಿದರು.
ವ್ಯಕ್ತಿತ್ವ
[ಬದಲಾಯಿಸಿ]ರಾಬರ್ಟ್ ಬಾಷ್ ರವರು ಯಾವತ್ತೂ ಕಾಸಿನ ವ್ಯಾಮೋಹ , ಕಂಪನಿಯನ್ನು ವಿಸ್ತಾರಿಸಿ ಲಾಭಪಟ್ಟು ಬದುಕಬೇಕು ಎಂಬ ದುರಾಸೆಯಿಂದ ಇದ್ದವರಲ್ಲ. ಅವರು ಯಾವಾಗಲೂ ಇತರರಿಗೆ ಸಹಾಯ ಮಾಡಲು ಪ್ರಯತ್ನಿಸುತ್ತಿದ್ದರು. ಬಾಷ್ ರವರು ತಮಗೆ ಬಂದ ಕಂಪನಿಯ ಲಾಭವನ್ನೆಲ್ಲಾ ಜರ್ಮನ್ ನ ಇತರೆ ಸಾಮಾಜಿಕ ಸುಧಾರಣೆಗೆ ದಾನವಾಗಿ ಕೊಡುತ್ತಿದ್ದರು. ಉದಾಹರೆಣೆಗೆ ಜರ್ಮನ್ ನಲ್ಲಿ ಕೆಲವು ಆಸ್ಪತ್ರೆಗಳನ್ನು ಪ್ರಾರಂಭಿಸಿದರು.ಇವರು ಶ್ರೀಮಂತರಾದರು ಹಣಕ್ಕಿಂತ ಜನರ ನಂಬಿಕೆಗೆ ಹೆಚ್ಚು ಪ್ರಾಮುಖ್ಯತೆಯನ್ನು ಕೊಡುತ್ತಿದ್ದರು.[೧]
ಆಸಕ್ತಿ
[ಬದಲಾಯಿಸಿ]ರಾಬರ್ಟ್ ಬಾಷ್ ನವರ ಕುಟುಂಬ ಹಿಂದಿನ ಕಾಲದಿಂದಲೂ ಸಹ ಕೃಷಿ ಕುಟುಂಬಕ್ಕೆ ಸೇರಿದ್ದರಿಂದ ಬಾಷ್ ನವರೂ ಸಹ ಕೃಷಿನಲ್ಲಿ ತುಂಬಾ ಆಸಕ್ತಿಯನ್ನು ತೋರಿಸುತ್ತಿದ್ದರು. ಇದರಿಂದ ಇವರಿಗೆ ತಮ್ಮದೇ ಆದ ಒಂದು ಹೊಲವನ್ನು ದಕ್ಷಿಣದ ಮೊನಿಚ್ ಎಂಬ ಸ್ಥಳದಲ್ಲಿ ಹೊಂದಿದ್ದರು, ಹಾಗೂ ಇವರಿಗೆ ಭೇಟೆ ಆಡುವುದೆಂದರೆ ತುಂಬಾ ಇಷ್ಟ.
ಅಭ್ಯಾಸ ಕೇಂದ್ರ
[ಬದಲಾಯಿಸಿ]ರಾಬರ್ಟ್ ಬಾಷ್ ನವರು ೧೮೮೬ರಲ್ಲಿ ನವೆಂಬರ್ ೧೫ರಂದು ತಮ್ಮದೆ ಆದ ಒಂದು ಅಭ್ಯಾಸ ಕೇಂದ್ರ ಅಂದರೆ ಮೆಕಾನಿಸಮ್ ಮತ್ತು ಎಲೆಕ್ಟ್ರಾನಿಕ್ ಇಂಜಿನೀರಿಂಗ್ ಗೆ ಸಂಬಂಧ ಪಟ್ಟ ಒಂದು ಚಿಕ್ಕದಾದ ಅಭ್ಯಾಸಕೇಂದ್ರವನ್ನು ಸ್ಟರ್ಟ್ ಗಾಡ್ ಎಂಬ ಸ್ಥಳದಲ್ಲಿ ಪ್ರಾರಂಭಿಸಿದರು. ಒಂದು ವರ್ಷದ ನಂತರ ಇವರು ವ್ಯಾಪಾರಕ್ಕೆ ಸನ್ನೆಯನ್ನು ಪಡೆಯದ ಡ್ಯೂಟ್ಝ್ ಎಂಬವರ ಒಂದು ದಹನ ಮ್ಯಾಗ್ನೆಟೋ , ಅಥವಾ ಉದ್ವಿಗ್ನತೆಯ ಮ್ಯಾಗ್ನೆಟೋ ಎಂಬ ಸಾಧನವನ್ನು ಉಪಯೋಗಕರವಾಗಿ ತಯಾರಿಸಿ ಅದರಿಂದ ಮೊದಲ ಯಶಸ್ಸನ್ನು ಕಂಡರು.೧೮೯೭ರಲ್ಲಿ ರಾಬರ್ಟ್ ಬಾಷ್ ನವರೆ ಮೊದಲ ಬಾರಿಗೆ ಇ ಉಪಕರಣವನ್ನು ಅಳವಡಿಸಿಕೊಡಿದ್ದು ಹಾಗೂ ನಾಸೆಂಟ್ ಎಂಬ ಆಟೋಮೇಟಿವ್ ಕಂಪನಿಯ ತಾಂತ್ರಿಕ ಸಮಸ್ಯೆಯನ್ನು ಸಹ ನಿವಾರಿಸಿದರು.[೨]
ಬಾಷ್ ಕಂಪನಿ
[ಬದಲಾಯಿಸಿ]ರಾಬರ್ಟ್ ಬಾಷ್ ನವರು ೧೯ನೇ ಶತಮಾನದ ಕೊನೆಯ ಹಂತದಲ್ಲಿ ತಮ್ಮ ಅಭ್ಯಾಸ ಕೇಂದ್ರವನ್ನು ಜರ್ಮನಿಯಲ್ಲಿ ವಿಸ್ತಾರಗೊಳಿಸಿದರು. ಇವರ ಕಂಪನಿಯ ವ್ಯಾಪಾರ ಕೇಂದ್ರಗಳು ಇಡೀ ಯು.ಕೆ ಹಾಗೂ ಯುರೋಪಿಯನ್ ದೇಶಗಳಲ್ಲಿ ಹಬ್ಬಿತು.೧೯೦೬ ಹಾಗೂ ೧೯೧೦ರಲ್ಲಿ ರಾಬರ್ಟ್ ಬಾಷ್ ನವರು ತಮ್ಮ ಮೊದಲ ವ್ಯಾಪಾರ ಕೇಂದ್ರಗಳನ್ನು ಮೊದಲ ಬಾರಿಗೆ ಅಮೆರಿಕಾದಲ್ಲಿ ಪ್ರಾರಂಭಿಸಿದರು.ಬಾಷ್ ಕಂಪನಿ ತಮ್ಮ ವ್ಯಾಪಾರ ಕೇಂದ್ರಗಳನ್ನು ಅಮೆರಿಕಾ, ಏಸಿಯಾ, ಅಫ಼್ರಿಕಾ, ಆಸ್ಟ್ರೇಲಿಯಾ ಮುಂತಾದ ದೇಶಗಳಲ್ಲಿ ವಿಸ್ತಾರಿಸಿದ್ದರಿಂದ ಈ ಕಂಪನಿಯ ಶೇಕಡ ೮೮ರಷ್ಟು ಎಲ್ಲಾ ವ್ಯಾಪಾರ ಸಂಬಂಧಗಳು ಜರ್ಮನ್ ಹೊರಗಡೆ ನಡೆಯುತ್ತಿತ್ತು.ಮೊದಲ ಪ್ರಪಂಚ ಯುದ್ಧದ ನಂತರ ೧೯೨೭ರಲ್ಲಿ ಬಾಷ್ ಕಂಪನಿ ಮೋಟರ್ ವಾಹನಗಳ ವೃದ್ಧಿಗೆ ಹೊಸ ಇಂಧನದ ಆವಿಷ್ಕಾರಕ್ಕೆ ನಾಂದಿಯಾಯಿತು. ೧೯೨೦ರ ಪ್ರಪಂಚ ಆರ್ಥಿಕ ಸಂದಿಗ್ಧ ಸಮಯದಲ್ಲಿ , ಬಾಷ್ ನಲ್ಲಿ ಅಮನೀಕರಣ ಮತ್ತು ವಿಕೇಂದ್ರೀಕರಣ ನಂತಹ ಕಠಿಣ ಬದಲಾವಣೆಗಳು ಕಾಣಿಸಿಕೊಂಡವು. ಕಡಿಮೆ ದಿನದಲ್ಲೇ ಬಾಷ್ ಕಂಪನಿ ತನ್ನ ಸಾಮ್ರಾಜ್ಯವನ್ನು ಆಟೋಮೇಟಿವ್ ಉತ್ಪಾದಕರಿಂದ ಒಂದು ದೊಡ್ಡ ಮಲ್ಟಿನಾಷನಲ್ ಕಂಪನಿಯ ಗುಂಪಿಗೆ ಸೇರಿತು. ೧೯೩೭ರಲ್ಲಿ ರಾಬರ್ಟ್ ಬಾಷ್ ನವರು ಬಾಷ್ ಸಂಸ್ಥೆಯನ್ನು ಒಂದು ಖಾಸಗಿ ಸಂಸ್ಥೆಯಾಗಿ ಪುನರ್ ರಚನೆ ಮಾಡಿದರು.
ವೃತ್ತಿ ತರಭೇತಿ ಕೇಂದ್ರ
[ಬದಲಾಯಿಸಿ]ಬಾಷ್ ರವರು ತಮ್ಮ ಕಂಪನಿಯ ಮೂಲಕ ವೃತ್ತಿ ತರಭೇತಿ ಕೇಂದ್ರಗಳನ್ನು ಪ್ರಾರಂಭಿಸಲು ಪ್ರಯತ್ನಿಸುತ್ತಿದ್ದರು. ನಂತರ ಇದೇ ಪ್ರಯತ್ನದಲ್ಲಿ ತಮ್ಮದೆ ಆದ ವೃತ್ತಿ ತರಭೇತಿ ಕೇಂದ್ರಗಳನ್ನು ಸ್ಥಾಪಿಸಿ , ಸಮಾಜಿಕ ಜವಬ್ಧಾರಿಯ ಬಗ್ಗೆ ಅವಗಾಹಣೆಯನ್ನು ಕೊಡುವ ಮೂಲಕ ತಮ್ಮ ತರಭೇತಿ ಕೇಂದ್ರವನ್ನು ಉತ್ತೇಜಿಸಿದರು ಹಾಗೂ ರಾಬರ್ಟ್ ಬಾಷ್ ರವರು ತಮ್ಮ ಕಂಪನಿಯಲ್ಲಿ ಮೊದಲ ಬಾರಿಗೆ ೮ ಗಂಟೆಗಳ ಕಾಲ ಕೆಲಸ ಮಾಡುವ ವ್ಯವಸ್ಥೆಯನ್ನು ಜಾರಿಗೆ ತಂದ ಮೊದಲ ವ್ಯಾಪಾರವ್ಯಕ್ತ. ಇ ವ್ಯವಸ್ಥೆಯ ಮುಖ್ಯ ಉದ್ದೇಶ ಸಮಾಜಿಕ ಆರ್ಥಿಕ ಬೆಳವಣಿಗೆ ಹಾಗೂ ಬಾಷ್ ಕಂಪನಿಯ ಕೆಲಸಗಾರರ ಸುಧಾರಣೆಗೆ ಈ ವ್ಯವಸ್ಥೆ ಜಾರಿಗೆ ತಂದರು.
ಸಾಮಾಜಿಕ ಕಾರ್ಯಕ್ರಮಗಳು
[ಬದಲಾಯಿಸಿ]ಇದೇ ರೀತಿಯಲ್ಲಿ ಬಾಷ್ ನವರು ತಮ್ಮದೇ ಆದ ಆಸ್ಪತ್ರೆಯನ್ನು ೧೯೪೦ರಲ್ಲಿ ಜರ್ಮನ್ ನ ಸ್ಟರ್ಟ್ ಗಾಡ್ ಎಂಬ ಸ್ಥಳದಲ್ಲಿ ಪ್ರಾರಂಭಿಸಿದರು.೧೯೨೦ ರಿಂದ ೧೯೩೦ರ ನಡುವೆ ಬಾಷ್ ರವರು ರಾಜಕೀಯವಾಗಿ ಕೆಲವು ಆರ್ಥಿಕ ಸಂಸ್ಥೆಗಳ ಅಧ್ಯಕ್ಷರಾಗಿ ಕಾರ್ಯನಿರತರಾಗಿದ್ದರು.ಜರ್ಮನ್ ಮತ್ತು ಫ಼್ರಾನ್ಸ್ ನಡುವಿನ ಆರ್ಥಿಕ ಸಂಬಂಧಗಳನ್ನು ಧೃಡಪಡಿಸುವಲ್ಲಿ ಸಫಲರಾದರು. ಈ ಪರಿಣಾಮಗಳು ಯುರೋಪ್ ನ ಆರ್ಥಿಕ ಮತ್ತು ಸಾಮಾಜಿಕ ಶಾಂತಿಗೆ ಕಾರಣಗಳಾದವು. ಜರ್ಮನ್ ನ ನಾಝಿಗಳ ಸಿದ್ಧಾಂತಗಳು ಬಾಷ್ ನ ಶಾಂತಿ ಸಿದ್ಧಾಂತಗಳಿಗೆ ವಿರುದ್ಧವಾಗಿದ್ದವು.ಆದ್ದರಿಂದ ಯುದ್ಧ ಖೈದಿಗಳನ್ನು ಬಲವಂತವಾಗಿ ಬಾಷ್ ನ ಕೈಗಾರಿಕ ಕೆಲಸದಲ್ಲಿರಿಸಬೇಕಾಗಿತ್ತು.ಬಾಷ್ ಸಂಸ್ಥೆಯ ಸಂಪಾದನೆಯ ಹೆಚ್ಚು ಭಾಗ ಸಾಮಾಜಿಕ ಕಾರ್ಯಕ್ರಮಗಳಿಗೆ ಉಪಯೋಗಿಸಬೇಕೆಂದು ತನ್ನ ಮೃತ್ಯು ಪತ್ರದಲ್ಲಿ ಉಲ್ಲೇಖಿಸಿದ್ದರು.
ಪ್ರಶಸ್ತಿಗಳು
[ಬದಲಾಯಿಸಿ]ಒಬ್ಬ ಒಳ್ಳೆಯ ನಾಯಕನಾಗಿ, ವ್ಯಾಪಾರವ್ಯಕ್ತನಾಗಿ , ಸಂಶೋದಕನಾಗಿ ಕಾರ್ಯಗಳನ್ನು ನಿರ್ವಹಿಸಿದ್ದರಿಂದ ಬಾಷ್ ನವರು ಅನೇಕ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಬಾಷ್ ರವರಿಗೆ ೧೯೮೩ರಲ್ಲಿ ದೀ ಆಟೊಮೇಟಿವ್ ಹಾಲ್ ಆಫ್ ಫೇಮ್ ಇನ್ದಂಕ್ಷನ್ ಅವಾರ್ಡ್ ಅಂದರೆ ಯಾರು ಆಟೋಮೋಬೈಲ್ ಸಂಸ್ಥೆಗಳಲ್ಲಿ ಅತ್ಯುತ್ತಮ ಸಾಧನೆಗಳನ್ನು ಸಾಸುವರೊ ಅವರಿಗೆ ಇ ಪ್ರಶಸ್ತಿಯನ್ನು ನೀಡಿ ಪುರಸ್ಕರಿಸುವರು ಹಾಗೂ ಡಿಸ್ಟಿಗೈಸ್ ಆಂಡ್ ಸೈಟೇಶನ್ ಅವಾರ್ಡ್ ಇ ಪ್ರಶಸ್ತಿ ಬಾಷ್ ಗೆ ಸಿಕ್ಕಿದ ಕಾರಣ ಎಂದರೆ ಬಾಷ್ ನವರು ತಮ್ಮದೇ ಆದ ಒಂದು ಸಂಸ್ಥೆಯನ್ನು ಸ್ಥಾಪಿಸಿ ಅದನ್ನು ಒಳ್ಳೆಯ ರೀತಿಯಲ್ಲಿ ಅಭಿವೃದ್ಧಿ ಪಥದಲ್ಲಿ ನಡೆಸಿದ್ದರಿಂದ ಅವರಿಗೆ ಇ ಪ್ರಶಸ್ತಿ ಸಿಕ್ಕಿದೆ.ನಂತರ ಬಾಷ್ ನವರಿಗೆ ಇನ್ಡಸ್ಟ್ರಿ ಲೀಡರ್ ಆಫ್ ದೀ ಇಯರ್ ಅವಾರ್ಡ್, ಯಂಗ್ ಲೀಡರ್ಷಿಪ್ ಆಂಡ್ ಎಕ್ಸೆಲೆಂಟ್ ಅವಾರ್ಡ್ ಮುಂತಾದ ಅನೇಕ ಪ್ರಶಸ್ತಿಗಳನ್ನು ಪಡೆದಿದ್ದಾರೆ.[೩]
ನಿಧನ
[ಬದಲಾಯಿಸಿ]ರಾಬರ್ಟ್ ಬಾಷ್ ನವರು ೧೯೪೨ ಮಾರ್ಚ್ ೧೨ರಂದು ನಿಧನರಾದರು.
ಬಾಷ್ ಎಲೆಕ್ಟ್ರಿಕ್ ಆಂಡ್ ಇಂಜಿನೀರಿಂಗ್ ಕಂಪನಿ
[ಬದಲಾಯಿಸಿ]ರಾಬರ್ಟ್ ಬಾಷ್ ರವರು ತನ್ನ ಜೀವನದಲ್ಲಿ ಇರತರರಿಗೆ ಸಹಾಯಕರಾಗಿ, ಬಾಷ್ ನವರು ಮರಣ ಹೊಂದಿದರೂ ಅವರು ಸ್ಥಾಪಿಸಿದ ಬಾಷ್ ಕಂಪನಿಯು ಬಾಷ್ ಎಲೆಕ್ಟ್ರಿಕ್ ಆಂಡ್ ಇಂಜಿನೀರಿಂಗ್ ಎಂಬ ಹೆಸರಿನಲ್ಲಿ ಇನ್ನು ಅಭಿವೃದ್ಧಿಯಲ್ಲಿ ನಡೆಯುತ್ತಿದೆ.ಇ ಬಾಷ್ ಕಂಪನಿ ಈಗ ಅನೇಕ ದೇಶಗಳಲ್ಲಿ ತನ್ನ ಸಾಮ್ರಾಜ್ಯವನ್ನು ಅನೇಕ ಭಾಗಗಳಲ್ಲಿ ಕೆಲಸವನ್ನು ನಿರ್ವಹಿಸುತ್ತಿದೆ.ಇ ಬಾಷ್ ಕಂಪನಿ ವಾಹನಗಳಿಗೆ ಸಂಬಂಧಿಸಿದ ಉಪಕರಣಗಳನ್ನು ಉತ್ಪಾದಿಸುವುದು, ಅದನ್ನು ಬೇರೆ ಕಂಪನಿಗೆ ಮಾರಾಟ ಮಾಡುವುದು, ಹಾಗೂ ಬಾಷ್ ಹೇಳಿದಂತೆ ಕಂಪನಿಗೆ ಬಂದ ಲಾಭದಲ್ಲಿ ಸ್ವಲ್ಪ ಮೊತ್ತವನ್ನು ಸಮಾಜಿಕ ಕಾರ್ಯಗಳಿಗೆ ಉಪಯೋಗಿಸುವರು.
ರಾಬರ್ಟ್ ಬಾಷ್ ಜರ್ಮನ್ ಮಲ್ಟಿನಾಷನಲ್ ಇಂಜಿನೀರಿಂಗ್ ಹಾಗೂ ಎಲೆಕ್ಟ್ರಾನಿಕ್ಸ್ ಕಂಪನಿ
[ಬದಲಾಯಿಸಿ]೧೮೮೬ ರಲ್ಲಿ ರಾಬರ್ಟ್ ಬಾಷ್ ನವರು ಇ ಕಂಪನಿಯನ್ನು ಸ್ಥಾಪಿಸಿದರು. ಈ ಆಟೋಮೇಟಿವ್ ಕಂಪನಿ ಅತಿ ಹೆಚ್ಚು ಆಟೋಮೇಟಿವ್ ಉತ್ಪಾದನೆಯ ಮಾರಾಟಗಾರರು ಎಂಬ ಹೆಸರನ್ನು ಹೊಂದಿದೆ. ಈ ಕಂಪನಿ ವಾಹನಗಳಿಗೆ ಸಂಬಂಧಿಸಿದ ಉಪಕರಣಗಳನ್ನು ಹಾಗೂ ಮಾನವನ ನಿತ್ಯವಸರ ಉಪಕರಣಗಳನ್ನು ಸಹ ಈ ಕಂಪನಿ ತಯಾರಿಸುವುದು ಹಾಗೂ ಈ ವಸ್ತುಗಳನ್ನು ಬೇರೆ ಕಂಪನಿಗಳಿಗೆ ಮಾರಾಟ ಮಾಡಲಾಗುವುದು. ಈ ಕಂಪನಿಯ ವಸ್ತುಗಳು ಜನರ ಮನಸಲ್ಲಿ ವಸ್ತುಗಳ ಮೇಲೆ ಒಳ್ಳೆ ರೀತಿಯ ಅಭಿಪ್ರಾಯ ಇದೆ.ರಾಬರ್ಟ್ ಬಾಷ್ ನವರು ಯಾವಾಗಲೂ ವಸ್ತುಗಳ ಗುಣಮಟ್ಟಕ್ಕೆ ಹೆಚ್ಚು ಪ್ರಾಧಾನ್ಯತೆಯನ್ನು ಕೊಡುತ್ತಿದ್ದರು.ಆದ್ದರಿಂದ ಇವರ ಕಂಪನಿ ಪ್ರಪಂಚದಲ್ಲೇ ಅತೀ ಹೆಚ್ಚು ಪ್ರಸಿದ್ಧತೆಯನ್ನು ಪಡೆದಿದೆ. ಈ ಕಂಪನಿ ಜರ್ಮನ್ ನ ಅಧ್ಯಕ್ಷರಿಂದ ಪ್ರಶಸ್ತಿಯನ್ನು ಸಹ ಪಡೆದುಕೊಂಡಿದೆ.[೪] ನಮ್ಮ ಭಾರತದಲ್ಲಿ ಈ ಬಾಷ್ ಕಂಪನಿ ೧೯೨೨ನಲ್ಲಿ , ಕೊಲ್ಕತ್ತಾದಲ್ಲಿ ಸ್ಥಾಪಿಸಿದರು. ಈ ಕಂಪನಿ ಮೊದಲು ವಸ್ತುಗಳನ್ನು ಆಮದಿಸುವ ರೀತಿಯಲ್ಲಿ ಪರಿಚಯವಾಗಿ ನಂತರ ತನ್ನದೇ ಆದ ಉತ್ಪಾದನಾ ಕೇಂದ್ರವನ್ನು ೧೯೫೧ರಲ್ಲಿ ಸ್ಥಾಪಿಸಿದರು.ಇದೇ ರೀತಿಯ ಬೆಳವಣಿಗೆಯಿಂದ ಬಾಷ್ ಕಂಪನಿ ೨ಬಿಲಿಯನ್ ಲಾಭದಿಂದ , ೨೬೦೦೦ ಕಾರ್ಮಿಕರನ್ನು , ೧೦ಕ್ಕೂ ಹೆಚ್ಚು ಸ್ಥಳಗಳಲ್ಲಿ ಭಾರತವನ್ನು ಆವರಿಸಿಕೊಂಡಿದೆ. ಹಾಗೂ ಬಾಷ್ ಕಂಪನಿ ಸಂಶೋಧನಾ ಮತ್ತು ಅಭಿವೃದ್ಧಿ ಕೇಂದ್ರಗಳನ್ನು ಕೋಯಿಂಬತ್ತೂರ್ , ಬೆಂಗಳೂರಿನಲ್ಲಿ ಸ್ಥಾಪಿಸಲಾಗಿದೆ.ರಾಬರ್ಟ್ ಬಾಷ್ ಕಂಪನಿ ಸ್ಟೋಕ್ ಎಕ್ಚೇಂಜ್ ನಲ್ಲಿಯೂ ಸಹ ಪ್ರಧಾನ ಪಾತ್ರವನ್ನು ಹೊಂದಿದೆ.೨೦೧೪ರಲ್ಲಿ ಬಾಷ್ ಕಂಪನಿ ನೇತ್ರ ಚಿಕಿತ್ಸೆಗೆ ಸಂಬಂಧಿಸಿದ ಉಪಕರಣಗಳನ್ನು ತಯಾರಿಸಿ ಕೊಟ್ಟಿದೆ. [೫]
ಗ್ರಂಥಸೂಚಿ
[ಬದಲಾಯಿಸಿ]- ರಾಬರ್ಟ್ ಬಾಷ್: ವಿಶ್ವ ಆರ್ಥಿಕ ವ್ಯವಸ್ಥೆಯಲ್ಲಿ ಭವಿಷ್ಯದ ಬಿಕ್ಕಟ್ಟುಗಳ ತಡೆಗಟ್ಟುವಿಕೆ. ಲಂಡನ್, ಕಾನ್ಸ್ಟೇಬಲ್, ೧೯೩೭ (ಜರ್ಮನ್ ಆವೃತ್ತಿ ೧೯೩೨)
- ಥಿಯೋಡರ್ ಹ್ಯೂಸ್: ರಾಬರ್ಟ್ ಬಾಷ್ - ಅವರ ಜೀವನ ಮತ್ತು ಸಾಧನೆಗಳು.ನ್ಯೂಯಾರ್ಕ್, ಹಾಲ್ಟ್, ೧೯೯೪. ಸುಸಾನ್ ಗಿಲ್ಲೆಸ್ಪಿ ರವರು ಅನುವಾದಿಸಿದ್ದಾರೆ.
- ಹ್ಯಾನ್ಸ್-ಎರ್ಹಾರ್ಡ್ ಲೆಸ್ಸಿಂಗ್: ರಾಬರ್ಟ್ ಬಾಷ್. ರೇನ್ಬೆಕ್ ೨೦೦೭ (ಜರ್ಮನ್ ಭಾಷೆಯಲ್ಲಿ).
ಉಲ್ಲೇಖಗಳು
[ಬದಲಾಯಿಸಿ]- ↑ http://www.bosch.com/en/com/bosch_group/history/theme_specials/robert_bosch/robert_bosch_special.html
- ↑ http://www.grin.com/en/e-book/204371/a-business-model-analysis-of-robert-bosch
- ↑ http://www.automotivehalloffame.org/inductee/robert-bosch/9/
- ↑ http://www.automotive-technology.com/reports/robert-bosch-gmbh-swot-analysis-review
- ↑ https://biz.yahoo.com/ic/41/41437.html