ಸದಸ್ಯ:Kaushik Jadav/sandbox

ವಿಕಿಪೀಡಿಯ ಇಂದ
Jump to navigation Jump to search

ಶ್ರೀ ಪುರಂದರದಾಸರು

ದಾಸರೆಂದರೆ ಈ ನಮ್ಮ ಪುರಂದರದಾಸ ದಾಸಕೂಟದ ಶ್ರೇಷ್ಠ ಈ ಪುರಂದರದಾಸ ಹಣದಾಸೆ ಹೆಚ್ಚಾಗಿ ತಾನಾದ ಶ್ರೀನಿವಾಸ ಹಣದಾಸೆ ತೊರೆದು ಆಗಾದ ಹರಿದಾಸ ಹೆಗಲಲ್ಲಿ ತಂಬೂರಿ ಕೈಯಲ್ಲಿ ಚಿಟಕಿ ಹಿಡಿದಾತ ಹರಿವಿಠಲನ್ನ ನೆನೆಯುತ್ತ ನಡೆದಾತ ಕೀರ್ತನೆಯಲ್ಲಿ ಸಮಾಜದ ಕೊಳೆಯ ತೊಳೆದಾತ ಕನ್ನಡದ ಜನಮನದಲಿ ಭಕ್ತಿಭಾವ ಬೆಸೆದಾತ ಈ ನಮ್ಮ ಪುರಂದರದಾಸ

ಬಸವೇಶ್ವರ

ಬಾಗೇವಾಡಿಯಲ್ಲಿ ಹುಟ್ಟಿ ಕಪ್ಪಡಿಯಲಿ ನೀ ಬೆಳೆದೆ ಕೂಡಲ ಸಂಗಯ್ಯನ ಸವಿಗೂಸು ನೀನಾದೆ ಜಾತಿ ಜಾಡ್ಯಗಳ ನೀ ತೊರೆದು ಬಂದೆ ಕಲ್ಯಾಣ ಜ್ಯೋತಿಯಲಿ ನೀ ಬೆಳೆದು ನಿಂದೆ ಗುರುಲಿಂಗ ಜಂಗಮರು ನೀ ಒಂದೇ ಎಂದೆ ಕಾಯಕವೇ ಕೈಸಾಲವೆಂದರಿಯಿರೆಂದೆ ದಯೆಯೇ ಧರ್ಮದ ಮೂಲ ನೀನೆಂದೆ ಭಕ್ತಿಯ ಭಂಡಾರಿ ನೀನಾಗಿ ಮೆರೆದೆ. ಹೊಸಯುಗದ ಪ್ರವರ್ತಕನಾಗಿ ನೀನುಳಿದೆ.