ಸದಸ್ಯ:K C N Keerthi/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಬಹುರೂಪಿ ಶೇಕ್ಸ್ ಪಿಯರ್ ವಿಲಿಯಂ ಶೇಕ್ಸ್ ಪಿಯರ್ ಜಗತ್ತು ಕಂಡ ಅತ್ಯುತ್ತಮ ನಾಟಕಕಾರ, ತಾನು ರಚಿಸಿದ ನಾಟಕಗಳನ್ನು ತಾನೇ ರಂಗದ ಮೇಲೆ ರಚಿಸಿದ ನಾಟಕಗಳನ್ನು ತಾನೇ ರಂಗದ ಮೇಲೆ ಪ್ರಯೋಗಿಸಿದ ಅಪ್ರತಿಮ ನಟ. ಇಂಗ್ಲೆಂಡಿನ ರಾಷ್ಟ್ರಕವಿಯಾಗಿದ್ದ ಶೇಕ್ಸ್ ಪಿಯರ್ ಅವರ ೪೫೦ನೇ ಜನ್ಮ ವರ್ಷಾಚರನೆ ಈಗ ಜಗತ್ತಿನಾದ್ಯಂತ ವಿವಿಧ ರೂಪಗಳಲ್ಲಿ ನಡೆಯುತ್ತಿದೆ. ಹುಟ್ಟೂರು ಸ್ಟ್ರಾಟ್ಫೊರ್ಡ್ ಅಪಾನ್ ಏವನ್ ನಲ್ಲಿ ಗೌರವಾನ್ವಿತ ವ್ಯಾಪಾರಿ ಹಾಗೂ ಜಮೀನುದಾರನಾಗಿದ್ದ ಶೇಕ್ಸ್ ಪಿಯರ್ ಲಂಡನಿನಲ್ಲಿ ವಿಖ್ಯಾತ ನಾಟಕಕಾರ ಎನ್ನಿಸಿಕೊಂಡಿದ್ದರು. ನಟ, ನಾಟಕಕಾರ ಹಾಗೂ ಕವಿಯಾಗಿದ್ದ ಅವರು ರಚಿಸಿದ ಎಲ್ಲಾ ಸಾಹಿತ್ಯ ಪೂರ್ಣವಾಗಿ ಇಂದು ಲಭ್ಯವಿಲ್ಲ. ಬರೆದ ನಾಟಕಗಳ ಪೈಕಿ ಸಿಕ್ಕಿರುವುದು ೩೭ಮಾತ್ರ. ಶೇಕ್ಸ್ ಪಿಯರ್ ಹಸ್ತಪ್ರತಿಗಳೂ ದೊರಕಿಲ್ಲ. ಕರಪತ್ರಗಳು ಮುದ್ರಣವಾಗುವ ಕಳಪೆ ದರ್ಜೆ ಕಾಗದದಲ್ಲಿ ಮುದ್ರಣವಾದ ಕೆಲವು ನಾಟಕಗಳು ಪತ್ತೆಯಾಗಿವೆ. ೧೫೬೪ರಲ್ಲಿ ಹುಟ್ಟಿ, ೧೫೯೨ರ ವೇಳೆಗೆ ಯಶಸ್ವಿ ನಾಟಕಕಾರನೆಂದು ಹೆಸರು ಮಾಡಿದ ಶೇಕ್ಸ್ ಪಿಯರ್ ೧೬೧೩ ರಲ್ಲಿ ರಂಗಭೂಮಿ ಚಟುವಟಿಕೆಗಳಿಂದ ನಿವೃತ್ತಿ ಪಡೆದು ಹುಟ್ಟೂರಿಗೆ ವಪಸ್ಸಾದ. ಆಂಗ್ಲ ಭಾಷೆಗೆ ಹೊಸ ಹಾದಿ ತೋರಿದ ಶೇಕ್ಸ್ ಪಿಯರ್ ಆ ಭಾಷೆಗೆ ಹೊಸ ಹಾದಿ ತೋರಿದ ಶೇಕ್ಸ್ ಪಿರ್ಯರ್ ಆ ಭಾಷೆಗೆ ಒದಗಿಸಿದ ಹೊಸ ಪದಗಳು ೩೦೦೦ಕ್ಕೂ ಹೆಚ್ಚು ಚೆಲ್ಲಾಪಿಲ್ಲಿಯಾಗಿದ್ದ ಆತನ ನಾಟಕ ಬರಹಗಳನ್ನು ಒಟ್ಟುಗೂಡಿಸಿ ಮೊದಲ ಮುದ್ರಣ ಮಾಡುವ ವೇಳೆಗೆ ನಾಟಕಾಸಕ್ತರಿಗೆ ಸಾಕು ಸಾಕಾಗಿತ್ತು. ಮೊದಲಿಗೆ ಪ್ರಿಂಟಾಗಿದ್ದು ಒಂದೇ ಒಂದು ನಾಟಕ ಟಿಟೋಸ್ ಆಂಡ್ರೊವಿಕೋಸ್ (೧೫೯೪). ಎಷ್ಟೋ ಹಸ್ತಪ್ರತಿಗಳು ಕಳೆದುಹೋಗಿದ್ದವು. ೧೬೧೬ರಲ್ಲಿ ಶೇಕ್ಸ್ಪಿಯರ್ ನಿಧನರಾಗುವ ವೇಳೆಗೆ ಅವರ ೩೬ ನಾಟಕಗಳ ಸಂಪುಟವೊಂದು ಹೊರಬಂತು. ಶೇಕ್ಸ್ ಪಿಯರ್ ಬರಹಗಳನ್ನು ಅಧ್ಯಯನ ಮಾಡಿರುವ ಅನೇಕರ ಅಭಿಪ್ರಾಯದಂತೆ ಇವು ಕೂಡಾ ಅವರ ಒಟ್ಟು ಕೃತಿಗಳಲ್ಲ. ನಾಟಕಗಳಂತೆ ಶೇಕ್ಸ್ ಪಿಯರ್ ಪುಟ್ಟ ಪದ್ಯಗಳನ್ನೂ ರಚಿಸಿದರು. ಸಾನೆಟ್ ಗಳೆಂದು ಹೆಸರಾಗಿರುವ ಈ ಕವನಗಳಲ್ಲಿ ಈಗ ಲಭ್ಯವಿರುವುದು ೧೫೪ ಸಾನೆಟ್ ಗಳು ಇವು ಪ್ರಥಮವಾಗಿ ಪ್ರಕಟವಾಗಿದ್ದು ೧೬೦೯ರಲ್ಲಿ. ಶೇಕ್ಸ್ ಪಿಯರ್ ಇಂದು ಜಗತ್ತಿನಾದ್ಯಂತ ಜೀವಂತವಾಗಿರುವುದು ನಾಟಕಗಳಿಂದ ಅವರು ಬರೆದಿದ್ದು ಮೂರು ಬಗೆಯ ಚಾರಿತ್ರಿಕ ದುರಂತ ಮತ್ತು ಹಾಸ್ಯ ನಾಟಕಗಳನ್ನು ಮಿಡ್ ಸಮ್ಮರ್ ನೈಟ್ ದಿ ಮೇರಿ ವೈಪ್ಸ್ ಆಫ್ ವಿಂಡ್ಸರ್ ಹ್ಯಾಮ್ಲೆಟ್, ಒಥೆಲೊ, ಕಿಂಗ್ ಲಿಯರ್ ಹೀಗೆ ಪ್ರಸಿದ್ಧ ನಾಟಕಗಳ ಪಟ್ಟಿ ಬೆಳೆಯುತ್ತದೆ. ಹವ್ಯಾಸಿಗಳಾಗಲಿ, ವೃತ್ತಿ ನಾಟಕ ಕಂಪೆನಿಗಳಾಗಲಿ ಒಂದಾದರೂ ಶೇಕ್ಸ್ ಪಿಯರ್ ನಾಟಕಗಳನ್ನು ಅಡಿಯೇ ಅಡಿರುತ್ತಾರೆ ಎನ್ನುವುದು ವಿಶ್ವ ನಾಟಕಕಾರನ ಜನಪ್ರಿಯತೆಗೆ ಸಾಕ್ಷಿ. ಪ್ರಪಂಚದ ನೂರಕ್ಕೂ ಹೆಚ್ಚು ಶೇಕ್ಸ್ ಪಿಯರ್ ನಾಟಕಗಳು ಅನುವಾದಗೊಂಡಿವೆ ಎಂಬ ಅಂದಾಜಿದೆ. ಈತನ ನಾಟಕಗಳನ್ನು ಆಧರಿಸಿದ, ಪ್ರೇರಣೆ ಪಡೆದು ಪ್ರಕಟವಾದ ಪ್ರದರ್ಶನವಾದ ನಾಟಕಗಳಿಗೆ ಲೆಕ್ಕವಿಲ್ಲ. ಜಾಗತಿಕ ಸಾಹಿತ್ಯ, ಸಂಸ್ಕ್ರತಿಗೆ ಅನುಪಮ ಕೊಡುಗೆ ನೀಡಿರುವ ಶೇಕ್ಸ್ ಪಿಯರ್ ಕೃತಿಗಳು ನಾಟಕಗಳಾಗಿ, ಚಲನಚಿತ್ರಗಳಾಗಿ ಟಿವಿ ಧಾರಾವಾಹಿಗಳಾಗಿ ಪ್ರೇಕ್ಷಕರನ್ನು ಸೆಳೆಯುತ್ತಲೇ ಇವೆ. ರಂಗಪ್ರಯೋಗಗಳಂತೂ ನಡೆಯುವ ದಿನಗಳೇ ಇಲ್ಲ. ಮಾನವರ ಸಹಜ ಸ್ವಭಾವಗಳನ್ನು ಸಮಾಜದ ಸ್ಥಿತಿಗತಿಗಳನ್ನು ತಮ್ಮ ನಾಟಕಗಳಲ್ಲಿ ಸಮರ್ಥವಾಗಿ ಹಿಡಿದಿಟ್ಟು ಸಹಜವಾದ. ಸಂಭಾಷನೆಗಳನ್ನು ರಚಿಸಿರುವ ವಿಲಿಯಂ ಶೇಕ್ಸ್ ಪಿಯರ್ ಸಂದೇಶ ವಾಹಕಗಳೆಂದು ಹೆಸರಾಗಿರುವ ಅಂಚೆ ಚೀಟಿಗಳಲ್ಲಿ ಕಾಣಿಸಿಕೊಂದಿರುವುದು ವಿಶೇಷ ಆತನ ೪೦೦ನೇ ಜನ್ಮ ವರ್ಷಾಚರಣೆ ಸಂದರ್ಭಕ್ಕೆ (೧೯೬೪) ಆತನ ತಾಯ್ನಾಡಿನಲ್ಲಿ ಶುರುವಾದ ಅಂಚೆಚೀಟಿ ಪ್ರಸರಣ ಯುರೋಪಿನೆಲ್ಲೆಡೆ ಹರಡಿತು, ಸಾಂದರ್ಭಿಕವಾಗಿ ವಿಲಿಯಂ ಬಗೆಗಿನ ಅಂಚೆ ಚೀಟಿಗಳು ಈಗಲೂ ಬರುತ್ತಲೇ ಇವೆ. ಹ್ಯಾಮ್ಲೆಟ್, ರೋಮಿಯೋ ಜೂಲಿಯೆಟ್, ಮ್ಯಾಕ್ ಬೆಟತ್ ಹೀಗೆ ಶೇಕ್ಸ್ ಪಿಯರ್ ನಾಟಕಗಳೆಲ್ಲವೂ ಅಂಚೆಚೀಟಿಗಳಲ್ಲಿ ಮೂಡಿಬಂದಿವೆ. ಒಂದು ಅಂದಾಜಿನಂತೆ ಅವರ ಎಲ್ಲಾ ನಾಟಕಗಳ ಬಗ್ಗೆಯೂ ಅಂಚೆಚೀಟಿ ಪ್ರಕಟವಾಗಿದೆ. ಲಂಡನಿನ ನ್ಯೂಗ್ಲೋಬ್ ಥಿಯೇಟರಿನಲ್ಲಿ ಶೇಕ್ಸ್ ಪಿಯರ್ ನಾಟಕಗಳ ತಜ್ಞರಾದ ಸಿ.ವಾಲ್ಟರ್ ಹುಡ್ಗೇಸ್ ಅವರ ಪ್ರಕಾರ, ನಾಟಕಗಳ ಒಳಹೊರಗು ತಿಳಿಯದಿದ್ದರೆ ಅಂಚೆಚೀಟಿ ಮೇಲಿನ ಚಿತ್ರ ಏನೆಂದು ಅರ್ಥವಾಗುವುದು ಕಷ್ಟ. ಇಂಗ್ಲೆಂಡ್, ರಷ್ಯಾ, ಸ್ವೀಡನ್, ಸೈಪ್ರಸ್, ಲಿಬಿಯಾ, ಅಮೆರಿಕಾ ಸೇರಿದಂತೆ ೫೦ ಕ್ಕೂ ಹೆಚ್ಚು ದೇಶಗಳು ಶೇಕ್ಸ್ ಪಿಯರ್ ಕುರಿತ ಅಂಚೆಚೀಟಿಗಳನ್ನು ಹೊರತಂದಿವೆ. ಆತನ ೪೫೦ನೇ ವರ್ಷಾಚರಣೆಗಂತೂ ಅಂಚೆಚೀಟಿಗಳ ಮಹಾಪೂರವೇ ಹರಿದುಬಂದಿವೆ. ಈಗ ಮುದ್ರಣವಾಗಿರುವ ಅಂಚೆಚೀಟಿಗಳಲ್ಲಿ ಹ್ಯಾಮ್ಲೆಟ್ ನಾಟಕದ ಚಿತ್ರಗಳ ಹೆಚ್ಚು ವಿನ್ಯಾಸಕಾರರು ಆ ನಾಟಕದ ದೃಶ್ಯಾವಳಿಗಳನ್ನೂ ಅಂಚೆಚೀಟಿಗಳಲ್ಲಿ ಅನಾವರಣಗೊಳಿಸಿದ್ದಾರೆ. ಕೆಲವೆಡೆ ಯಥಾವತ್ತಾಗಿ ನಾಟಕಗಲ ಸನ್ನಿವೇಶಗಳೇ ಕಲಾಕಾರರಿಂದ ಚೀಟಿಗಳಲ್ಲಿ ಮೂಡಿಬಂದಿದ್ದರೆ, ಇನ್ನೂ ಕೆಲವು ಅಂಚೆಚೀಟಿಗಳಲ್ಲಿ ಚಿತ್ರಿಕೆಗಳು ಬಳಕೆಯಾಗಿವೆ. ಶೇಕ್ಸ್ ಪಿಯರ್ ಭಾವನೆಗಳನ್ನು ರಂಗದ, ಮೇಲೆ ಚಿತ್ರಪರದೆ ಮೇಲೆ ಹಿಡಿದಿಡುವ ಕಲಾವಿದರನ್ನು ಅಂಚೆಚೀಟಿಗಳಲ್ಲಿ ಚಿತ್ರಿಸುವುದು ಸವಾಲಿನ ಕೆಲಸ, ಅದನ್ನು ಚಾಚೂ ತಪ್ಪದಂತೆ ಚೀಟಿಗಳಲ್ಲಿ ಪಡಿಮೂಡಿಸುವುದು ಕಷ್ಟ ಎನ್ನುವ ವಾಲ್ಟರ್, ಇಂತಹ ಚೀಟಿಗಳಲ್ಲಿ ದು:ಖ ಸಂತಸಗಳೂ ಪ್ರತಿಬಿಂಬಿತವಾಗಿರುವುದು ವಿಶೇಷವೆನ್ನುತ್ತಾರೆ. ರೋಮಿಯೋ ಜೂಲಿಯೆಟ್ ಬ್ಯಾಲೆಯಾಗಿ ಹಲವು ದೇಶಗಳಲ್ಲಿ ಪ್ರಸಿದ್ಧಿ ಪಡೆದಿದೆ. ಅಂತಹ ದೇಶಗಳ ಅಂಚೆಚೀಟಿಗಳಲ್ಲಿ ಬ್ಯಾಲೆ ದೃಶ್ಯಗಳೇ ಚಿತ್ರಣವಾಗಿವೆ. ಆಯಾ ದೇಶಗಳ ಭೌಗೋಳಿಕ ಹಾಗೂ ಸಾಮಾಜಿಕ ಸ್ಥಿತಿಗತಿಗಳಿಗೆ ತಕ್ಕಂತೆ ಶೇಕ್ಸ್ ಪಿಯರ್ ಕೃತಿಗಳ ಅಂಚೆ ಚೀಟಿಗಳು ಪ್ರಕಟವಾಗಿವೆ. ನಾಟಕಗಳಲ್ಲಿ ಖ್ಯಾತಿ ಪಡೆದ ಚಲನಚಿತ್ರಗಳಲ್ಲಿ ಜನಪ್ರಿಯತೆ ಗಳಿಸಿದ ನಟನಟಿಯರ ಚಿತ್ರಗಳನ್ನೂ ಶೇಕ್ಸ್ ಪಿಯರ್ ಅಂಚೆಚೀಟಿಗಳು ಹೊತ್ತು ತಂದಿರುವುದುಂಟು. ಇವರ ಕ್ರತಿಗಳು ಕಾಮಿಕ್ಸ್ ಗಳಲ್ಲಿ ಟಿವಿಗಳಲ್ಲಿ ಹೆಸರಾಗಿದ್ದು ಅದನ್ನು ನೆನಪಿಸಿಕೊಳ್ಳುವ ಅಂಚೆಚೀಟಿಗಳೂ ಲಭ್ಯವಿದೆ.