ಸದಸ್ಯ:KISHORE KUMAR 619/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ನಗದಿ ವ್ಯವಹಾರಗಳ ತನಿಖೆ

ನಗದಿ ವ್ಯವಹಾರಗಳ ತನಿಖೆ

ಪೀಠಿಕೆ[ಬದಲಾಯಿಸಿ]

ಒಂದು ವ್ಯಾಪಾರಸಂಸ್ತೆಯಲ್ಲಿ ಎರಡು ವಿಧವಾದ ವ್ಯವಹಾರಗಳಿರುತ್ತವೆ.ನಗದಿ ವ್ಯವಹಾರ,ಸಾಲದ ವ್ಯವಹಾರ,ಚಿಕ್ಕ ಸಂಸ್ಥೆಗಳಲ್ಲಿ ನಗದಿ ವ್ಯವಹಾರಗಳು ಹೆಚ್ಚಾಗಿರುತ್ತದೆ.ಅದೆ ದೊಡ್ಡ ಸಂಸ್ಥೆಗಳಲ್ಲಿ ಹಣವನ್ನು ಚೆಕ್ಕುಗಳ ಮೂಲಕ ಪಾವತಿ ಮಾದುತ್ತರೆ.ಈ ಕ್ರಾಸ್ ಚೆಕ್ಕುಗಳನ್ನು ವ್ಯಾಪಾರ ಸಂಸ್ಥೆಯವರು ಬ್ಯಾಂಕಿನ ಲೆಕ್ಕಕ್ಕೆ ಜಮಾ ಮಾಡುತ್ತಾರೆ.ಹೆಚ್ಚಾಗಿ ನಗದಿನ ವ್ಯವಹಾರಗಳಿದ್ದಲ್ಲಿ ನಗದಿ ಸ್ವಲ್ಪ ಹಣವನ್ನು ದುರುಪಯೋಗಪದಿಸಿಕೊಳ್ಳಲು ಅವಕಾಶವಿರುತ್ತದೆ.ಇದನ್ನು ತಡೆಗಟ್ಟಲು ಸಂಸ್ಥೆಯು ಏನಾದರು ನಿಯಮಗಳನ್ನು ಅನುಸರಿಸುತ್ತಿದೆಯೇ ಎಂಬುದನ್ನು ಲೆಕ್ಕಪರಿಶೋಧಕನು ತಿಳಿದುಕೊಳ್ಳಬೇಕು .ಉತ್ತಮವಾದ ಒಳಪ್ರತಿಬಂಧ ಪದ್ಧತಿಯು ಆಚರಣೆಯಲ್ಲಿದ್ದ ಪಕ್ಷದಲ್ಲಿ ಮೋಸಕ್ಕೆ ಅಷ್ಟು ಅವಕಾಷವಿರುವುದಿಲ್ಲ.ಒಳಪ್ರತಿಬಂದ ಎಂದರೆ ನಗದಿ ಗುಮಾಸ್ತನು ಹಣವನ್ನು ಪಡೆದಾಗ ಅದಕ್ಕೆ ತಕ್ಕ ಲೆಕ್ಕ ಪತ್ರಗಳನಿಟ್ಟುಕೊಳ್ಳುವುದು ಮಾತ್ರವಲ್ಲದೆ ಸಂದಾಯವಾದ ಹಣಕ್ಕೆ ಸರಿಯಾದ ರಶೀತಿಯನ್ನು ಕೊಡಬೇಕು.ಈ ಎಲ್ಲ ಕೆಲಸವನ್ನು ಒಬ್ಬನೆ ಮಾಡಿದಲ್ಲಿ ಹಣದ ದುರುಪಯೋಗಕ್ಕೆ ಅವಕಾಶರುತ್ತದೆ.ಆದ್ದರಿಂದ ಮತ್ತೊಬ್ಬರು ಮೊಬಲಗನ್ನುಬರೆದಿಟ್ಟು,ಇನ್ನೊಬ್ಬರು ರಶೀತಿಯನ್ನು ಬರೆದು,ಕೊನೆಗೆ ಸಂಸ್ಥೆಯ ಮುಕ್ಯಸ್ಥನೊಬ್ಬನು ಅದಕ್ಕೆ ರುಜು ಹಾಕಿದರೆ ಹಣದ ದುರುಪಯಗಕ್ಕೆ ಅವಕಾಶವಿರುವುದಿಲ್ಲ.ಎಂತಹ ಪದ್ಧತಿಗೆ 'ಒಳಪ್ರತಿಬಂಧ ಪದ್ಧತಿ' ಎಂದು ಹೆಸರು.ನಾಲ್ಕಾರು ಜನ ಒಂದು ವ್ಯವಹಾರಕ್ಕೆ ಗಮನ ಕೊಡಬೆಕಾದಲ್ಲಿ,ಒಬ್ಬನೇ ಯಾವ ಮೋಸವನ್ನು ಮಾಡಲು ಸಾಧ್ಯವಾಗುವುದಿಲ್ಲ.ಹಾಗೆ ಮೋಸ ಮಡಬೇಕಾದರೆ ಎಲ್ಲರು ಒಟ್ಟಿಗೆ ಸೆರಬೇಕಾಗುತ್ತದೆ.ಇದು ಅಷ್ಟು ಸುಲಭವಲ್ಲ.ನಾಲ್ಕಾರು ವ್ಯಕ್ತಿಗಳ ಮನೋಭಾವ,ಬರಿ ನೀತಿ ನಿಯಮಗಳು ಒಂದೆ ಆಗಿರುವುದಿಲ್ಲ.ಒಟ್ಟಿಗೆ ಸೆರುವ ಬದಲು ಅದರಲ್ಲಿ ಯಾರಾದರು ಒಬ್ಬರಿಬ್ಬರು ಇತರರ ಮೋಸದ ಪ್ರಯತ್ನದ ಬಗ್ಗೆ ಅಧಿಕಾರ ವರ್ಗದವರಿಗೆ ತಿಳಿಸಬಿದಡಬಹುದು.ಆದರಿಂದ ತಾವು ಒಳ್ಳೆಯವರು ಎಂಬ ಹೆಸರನ್ನು ಪಡೆಯಲು ಪ್ರಯತ್ನಿಸಬಹುದು.ಒಟ್ಟಿನಲ್ಲಿ ಲೆಕ್ಕ ಪರಿಶೋಧಕನು ಈ ವಿಷಯಗಳಲ್ಲಿ ಆಚಾರಣೆಯಲ್ಲಿರುವ ನಿಯಮಗಳೇನು ಎಂಬುದನ್ನು ತಿಳೀದುಕೊಂಡು ತನಿಕ್ರಎಯನ್ನು ಪ್ರಾರಂಭಿಸಬೇಕು.

ಮುಕ್ಯವಾದ ಅಂಶಗಳು[ಬದಲಾಯಿಸಿ]

೧.ಚೆಕ್ಕುಗಳು ಮತ್ತು ಹಣದ ಪತ್ರಗಳನ್ನೋಳಗೊಂಡ ಕಾಗದಗಳನ್ನು ನೋಡುವವರಾರು? ೨.ಹಾಗೆ ಅದರಲ್ಲಿ ಚೆಕ್ಕುಗಳೂ ಮತ್ತು ಎತರ ಹಣದ ಪತ್ರಗಳೂ ಎದ್ದಲ್ಲಿ ಆವನ್ನು ಕೂಡಲೆ ಕ್ರಾಸ್ ಮಾಡಿ ತಮ್ಮ ಲೆಕ್ಕವಿರುವ ಹಣದ ಸಂಸ್ಥೆಗೆ ಕಳುಹಿಸುವರೇ? ೩.ಜಮಾ ಆದ ಹಣದ ವಿಷಯದಲ್ಲಿ ಯಾವ ರೀತೆ ಲೆಕ್ಕ್ವನ್ನು ಎಟ್ಟಿರುವರು? ೪.ಹಾಗೆ ಸಂದ ಹಣಕ್ಕೆ ರಶಿದಿಯನ್ನು ಬರೆಯುವವರಾರು? ಪಕ್ಕ ಪತ್ರಿಗಳಲ್ಲಿ ವಿವರಗಳನ್ನು ಸರಿಯಾಗಿ ಬರೆದಿಟ್ಟುಕೊಳ್ಳುವವರೇ?ಈ ರಶೀತಿಗೆ ರುಜು ಹಾಕುವವರು ಯಾರು?ಸಾಧಾರಣವಗಿ ಮೇಲು ರುಜು ಇದ್ದರೆ ಒಳ್ಳೆಯದು. ೫.ಪಾವತಿಯಾದ ನಗದಿ ಹಣವನ್ನು ಆಯಾಯ ದಿನವೆ ಲೆಕ್ಕ ಸರಿ ನೋಡಿ ಮಾರನೆಯ ದಿನ ಬ್ಯಾಕಿಗೆ ಹಣವನ್ನು ಜಮಾ ಮಾಡುವುದರಲ್ಲಿ ಯಾವ ವಿಧವಾದ ಕಾಲವಿಳಂಬವೇಆಗಲೆ ಅಥವ ಉದಾಸೀನವೇ ಆಗಲೆ ನಡೆಯ ಕೂಡದು. ೬.ಕೆಲವು ವ್ಯಾಪಾರ ಸಂಸ್ಥೆಗಳಲ್ಲಿ ಸಂಸ್ಥೆಯ ಪ್ರತಿನಿಧಿಗಳು ಲೇಣಿ ದಾರದಿಂದ ತಾವೆ ಹಣವನ್ನು ವಸೂಲು ಮಾಡಿ,ತಾತ್ಕಾಲಿಕ ರಶೀತಿಯನ್ನು ಕೊಡಬಹುದು,ಅಂತಹ ಹಣವನ್ನು ಅವರು ತಕ್ಷಣ ಸಂಸ್ಥೆಗೆ ಕಳುಹಿಸಿ ಕೊಡಬೇಕು.ಸಂಸ್ಥೆಯವರು ಖಾಯಂ ರಶಿತಿಯನ್ನು ಲೇಣಿದಾರನಿಗೆ ಕಳುಹಿಸಬೇಕು ಮತ್ತು ಹಣವನ್ನು ಬ್ಯಾಂಕಿಗೆ ಜಮಾ ಮಾಡಬೇಕು. ಸಂಸ್ಥೆಯು ಎತರರಿಗೆ ಕೊಡುವ ಹಣದ ವಿಷಯದಲ್ಲಿ ಲೆಕ್ಕ ತನಿಕೆಗಾರನು ಈ ಕೆಳಕಂಡ ವಿಷಯಗಳನ್ನು ಗನಮನಿಸಬೇಕು. ೧.ಎಲ್ಲ ಮೊಬಲಗುಗಲೂ ಚೆಕ್ಕುಗಳ ಮೂಲಕ ಕೊಡಲ್ಪಡುತ್ತಿವೆಯೇ? ಸಾಧರಣವಾಗಿ,ದೊಡ್ಡ ವ್ಯಾಪಾರಸಂಸ್ಥೆಗಳು ಚಿಲ್ಲರೆ ಖರ್ಚುಗಳನ್ನು ಮಾತ್ರ ನಗದಿ ರೂಪದಲ್ಲಿ ಮಾಡುತ್ತವೆ.ಎತರ ಎಲ್ಲಾ ಮೊಬಲಗುಗಳನ್ನು ಕ್ರಾಸ್ ಚೆಕ್ಕುಗಳ ಮೂಲಕವೇ ಪಾವತಿ ಮಾಡುತ್ತರೆ. ೨.ಆ ರೀತಿ ಕೊಡಬೇಕಾದ ಹಣವನ್ನು ತೀರ್ಮಾನಿಸುವವರು ಯಾರು? ಚೆಕ್ಕುಗಳನ್ನು ಬರೆಯುವವರು ಯಾರು? ಎಂಬ ವಿಷಯವನ್ನು ಲೆಕ್ಕ ಪರಿಷೋಧಕನು ವಿಶ್ದವಾಗಿ ತಿಳಿದುಕೊಳ್ಳಬೇಕು. ೩.ಹಾಗೆ ಕೊಟ್ಟ ಹಣಕ್ಕೆತಕ್ಕ ಸಲ್ಲಿಕೆಯ ಚೀಟಿಯನ್ನುತಕ್ಷಣ ಪಡೆಯುವರೆ?ಅವನ್ನು ಸರಿಯಾಗಿ ಜೋಡಿಸಿಟ್ಟಿರುವರೆ? ಅವು ಸಂಖ್ಯಾಕ್ರಮದಲ್ಲಿರುವುದೆ? ನಿಯಮಕ್ಕನುಸಾರವಾಗಿ ಕೆಲವು ಸಲ್ಲಿಕೆ ಚೀಟಿಗಳಿಗೆ ತಕ್ಕ ರಶೀತಿ ಸ್ಟಾಂಪುಗಳನ್ನು ಲಗತ್ತಿಸಿದೆಯೇ ಎಂಬ ವಿಷಯಗಳನ್ನು ಗಮನಿಸಬೇಕು. ೪.ಚಿಲ್ಲರೆ ಖರ್ಚುಗಳ ವಿಷಯದಲ್ಲಿ ಅಂತಹ ಖರ್ಚನ್ನು ಅಪ್ಪಣೆ ಮಾಡುವವರು ಯಾರು,ಅವಕ್ಕೆ ತಕ್ಕ ಸಲ್ಲಿಕೆಚೀಟಿಗಳಿವೆಯೇ ಎಂಬುದನ್ನು ಸಹ ನೋಡಬೇಕು. ೫.ಕೆಲವು ಕೈಗಾರಿಕಾ ಸಂಸ್ಥೆಗಳಲ್ಲಿ,ಕೂಲಿ ಬಟವಾಡೆಯು ನಡೆಯುತ್ತಿದ್ದಲ್ಲಿ ಅವಕ್ಕೆ ತಕ್ಕ ನೀತಿ ನಿಯಮಗಳನ್ನು ಅನುಸರಿಸುತ್ತಿದ್ದಾರೆಯೇ ಎಂಬುದನ್ನು ಪರ್ಯಾಲೋಚಿಸಬೇಕು.

ಖರ್ಚಿನ ತನಿಖೆ[ಬದಲಾಯಿಸಿ]

ಪ್ರತಿಯೊಂದು ಖರ್ಚಿನ ಬಾಬತ್ತಿಗೂ ಸಲ್ಲಿಕೆಯ ರಶೀತಿಯು ಎದ್ದೇ ಎರಬೇಕು.ಮೊಬಲಗು ಎಷ್ಟೇ ಆಗಲಿ,ದೇಣೆದಾರರು ಯರೇ ಆಗಲಿ,ಈ ಸಲ್ಲಿಕೆ ಚೀಟಿಗಳನ್ನು ಸಂಸ್ಥೆಯು ಪಡೆದು,ಲೆಕ್ಕತನಿಕೆಯಾಗುವವರೆಗೂ ಜೋಪಾನವಾಗಿಟ್ಟಿರಬೇಕು.ಅವು ಯಾವುದೆಂದರೆ: ೧.ಅದು ಆ ವ್ಯಾಪಾರ ಸಂಸ್ಥೆಗೆ ದೇಣೇದಾರನು ಕೊಟ್ಟ ರಶೀತಿಯೇ?ಅಲ್ಲವೇ? ೨.ಅದರ ತಾರೀಖು ನಗದಿ ಪುಸ್ಥಕದಲ್ಲಿ ಖರ್ಚನ್ನು ಸೂಚಿಸಿರುವ ತಾರೀಖಿಗೆ ಸರಿಹೋಗುತ್ತದೆಯೆ? ೩.ಅದು ಸರಿಯಾದ ಕ್ರಮದಲ್ಲಿದೆಯೇ? ಸಧಾರಣವಾಗಿ ದೇಣೆದಾರರು ತಮ್ಮ ಹಣ ಸಂದ ರಶೀತಿಗಳನ್ನು ಅಚ್ಚುಹಾಕಿಸಿಟ್ಟಿರುವರು. ೪.ಸಲ್ಲಿಕೆಯ ಚೀಟಿಗೆ ಬೇಕಾದ ಸ್ಟಾಂಪು ಲಗತ್ತಿಸಲ್ಪಟ್ಟಿದೆಯೇ? ಈ ಎಲ್ಲ ವಿಷಯಗಳನ್ನು ಲೆಕ್ಕ ಪರಿಷೋಧಕನು ಗನಮನಿಸಬೇಕು. ಹಾಗೆ ದೇಣೆದಾರನಿಗೆ ಹಣ ಕೊಡುವುದಕ್ಕೆ ಮುನ್ನ ಅವನಿಗೆ ಕೊಡ ಬೇಕಾದ ಹಣವೆಷ್ಟು ಎಂಬುದನ್ನು ಕಚಿತವಗಿ ತಿಳಿದು,ಕೊಡಲು ಬೇಕಾದ ಅಪ್ಪಣೆಯನ್ನು ಮೇಲಧಿಕಾರಿಗಲಿಂದ ಪಡೆದು ಕೊಡಬೇಕು.ಈ ವಿಷಯದಲ್ಲಿ ತಮ್ಮ ಸಂಸ್ಥೆಯು ಕೊಂಡ ಸರಕಿನ ಪಟ್ಟಿಯನ್ನು ಪರಿಶೀಲಿಸಿ ಹಣವನ್ನು ಕೊಡಬೇಕು.ಕೆಲವು ಸಲ ಆ ಸರಕಿನ ಪಟ್ಟಿಯ ಮೇಲೆ ಸ್ವಲ್ಪ ಹಣವನ್ನುಮುಂಗಡವಾಗಿ ಕೊಟ್ಟಿರಬಹುದು.ಅಂತ ಸಂದರ್ಭದಲ್ಲಿ ಮುಂಗಡ ಕೊಟ್ಟ ಹಣ ಜಾತಾ,ಬಾಕಿ ಹಣವನ್ನು ಕೊಟ್ಟು ತಕ್ಕ ಸಲ್ಲಿಕೆಯ ಚೀಟಿಯನ್ನು ಪಡೆಯಬೇಕು.ಒಟ್ಟಿನಲ್ಲಿ ನಾವು ತೆರುವ ಪ್ರತಿ ಮೊಬಲಗಿಗು ಸರಿತೂಗುವ ಪ್ರತಿಫಲವನ್ನು ಪಡೆದಿರಬೇಕು.ಅಷ್ಟೆ ಅಲ್ಲದೆ ನವು ಕೊಡಬೇಕಾದ ಹಣವೆಷ್ಟು ಎಂಬ ವಿಷಯದಲ್ಲಿ ನಾವು ಕಚಿತವಾದ ಅಬಿಪ್ರಾಯವುಳ್ಳವರಾಗಿರಬೇಕು.ಇದಕ್ಕೆ ಬೇಕಾದ ಎಲ್ಲ ಲೆಕ್ಕಪತ್ರಗಳನ್ನು ಪತ್ರಿಕೆಗಳನ್ನು ಪರಿಕ್ಷಿಸಿರಬೇಕು,ಹಾಗೆ ನಾವು ಬಾಕಿ ಇರುವ ಹಣವನ್ನು ದೇಣೆದಾರನಿಗೆ ಪಾವತಿಮಾಡಲು ಮೇಲಧಿಕಾರಿಗಳ ಮೂಲಕ ಕೊಟ್ಟು ಅದಕ್ಕೆ ತಕ್ಕ ಹಣ್ಣಸಂದ ರಶೀತಿಗಳನ್ನು ಪಡೆಯಬೇಕು.

ಕಳೆದುಹೋದ ಸಲ್ಲಿಕೆಯ ಚೀಟಿಗಳು[ಬದಲಾಯಿಸಿ]

ಕೆಲವು ಸಲ ಕಕ್ಷಿಗಾರನು ಕೆಲವು ಸಲ್ಲಿಕೆಯ ಚೀಟಿಗಳನ್ನು ಜೋಪಾನವಾಗಿಡದೆ ಕಳೆದುಕೊಂಡಿರಬಹುದು.ಇದೇನೂ ಅಂತಹ ದೊಡ್ಡ ತಪ್ಪಲ್ಲ.ಏಕೆಂದರೆ ಹಣ ಪಾವತಿ ಮಾಡಿದುದಕ್ಕೆ ಬೇಕಾದ ವಿವರಗಳು ಇತರ ಲೆಕ್ಕ ಪತ್ರಗಳಲ್ಲಿ ಸಿಗಬಹುದು, ಹಾಗೂ ಬೇಕಾದಲ್ಲಿ ದೇಣೆದಾರನಿಂದ ಒಂದು ನಕಲು ಸಲ್ಲಿಕೆಯ ಚೀಟಿಯನ್ನು ಪಡೆಯಬಹುದು.ನಕಲಿ ಸಲ್ಲಿಕೆಯ ಚೀಟಿಗಳು ಕಂಡುಬಂದಲ್ಲಿ ಮೂಲಪ್ರತಿ ಏನಾಯಿತೆಂಬುದನ್ನು ವಿಚಾರಿಸಬೇಕು.ಅದು ಕಳೆದುಹೋಗಿದ್ದಲ್ಲಿ ಅದಕ್ಕೆ ಕಾರಣವನ್ನು ತಿಳಿದುಕೊಂಡಿರಬೇಕು.ಏಕೆಂದರೆ ಕೆಲವು ಸಲ ಮೋಸದಿಂದ ಹಣವನ್ನು ದುರುಪಯೋಗಪಡಿಸಲು ಮೂಲಪ್ರತಿಯ ತಾರೀಖನ್ನು ಬದಲಾಯಿಸಿ ಅದರ ಮೇಲೆ ಇನ್ನೊಂದು ಕಡೆ ಹಣವನ್ನು ಕೊಟ್ಟ ಹಾಗೆ ಲೆಕ್ಕಪತ್ರಗಳಲ್ಲಿ ತೋರಿಸಬಹುದು.ಲೆಕ್ಕಪರಿಶೋಧಕನು ಇಂತಹ ಮೋಸಕೃತ್ಯಗಳಿಗೆ ಅವಕಾಶಕೊಡದು.[೧],[೨]

ಉಲ್ಲೇಖನಗಳು[ಬದಲಾಯಿಸಿ]