ಸದಸ್ಯ:K.VINODINI 80/ನನ್ನ ಪ್ರಯೋಗಪುಟ/Cryptocurrency

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕ್ರಿಪ್ಟೋಕೂರ್ನ್ಸಿ (ಅಥವಾ ಕ್ರಿಪ್ಟೋ ಕರೆನ್ಸಿ)[ಬದಲಾಯಿಸಿ]

ಕ್ರಿಪ್ಟೋ ಕರೆನ್ಸಿ ಎನ್ನುವುದು ಗುಪ್ತ ಲಿಪಿಶಾಸ್ತ್ರವನ್ನು ಬಳಸಿಕೊಂಡು ವಹಿವಾಟುಗಳನ್ನು ರಕ್ಷಿಸುವ, ಹೆಚ್ಚುವರಿ ಘಟಕಗಳ ರಚನೆಯನ್ನು ನಿಯಂತ್ರಿಸುವ ಮತ್ತು ಆಸ್ತಿಗಳ ವರ್ಗಾವಣೆಯನ್ನು ಪರಿಶೀಲಿಸಲು ಬಳಸುವ ಮಾಧ್ಯಮವಾಗಿ, ಕಾರ್ಯನಿರ್ವಹಿಸಲು ವಿನ್ಯಾಸಗೊಳಿಸಲಾದ ಒಂದು ಡಿಜಿಟಲ್ ಆಸ್ತಿಯಾಗಿದೆ. ಕ್ರಿಪ್ಟೋ ಕರೆನ್ಸಿಯನ್ನು ಡಿಜಿಟಲ್ ಕರೆನ್ಸಿಗಳ ಉಪವಿಭಾಗ ಎಂದು ವರ್ಗೀಕರಿಸಲಾಗಿದೆ ಮತ್ತು ಆಲ್ಟರ್ನೇಟಿವ್ ಕರೆನ್ಸಿ ಮತ್ತು ವರ್ಚುವಲ್ ಕರೆನ್ಸಿಗಳ ಉಪವಿಭಾಗವಾಗಿಯೂ ವರ್ಗೀಕರಿಸಲಾಗಿದೆ.

೨೦೦೯ ರಲ್ಲಿ ರಚಿಸಲ್ಪಟ್ಟಿರುವ ಬಿಟ್ಕೋಯಿನ್, ಮೊದಲ ವಿಕೇಂದ್ರೀಕೃತ ಕ್ರಿಪ್ಟೋ ಕರೆನ್ಸಿಯಾಗಿದೆ.

ಅಂದಿನಿಂದ, ಹಲವಾರು ಕ್ರಿಪ್ಟೋ ಕರೆನ್ಸಿಗಳನ್ನು ರಚಿಸಲಾಗಿದೆ. ಇವುಗಳನ್ನು ಆಗಾಗ್ಗೆ ಬಿಟ್ಕೋಯಿನ್ ಪರ್ಯಾಯದ ಮಿಶ್ರಣವಾಗಿ ಅಲ್ಟ್ಕೋಯಿನ್ಸ್ ಎಂದೂ ಕರೆಯಲಾಗುತ್ತದೆ. ಕೇಂದ್ರೀಕೃತ ಎಲೆಕ್ಟ್ರಾನಿಕ್ ಹಣ ಅಥವಾ ಕೇಂದ್ರೀಕೃತ ಬ್ಯಾಂಕಿಂಗ್ ವ್ಯವಸ್ಥೆಗಳಿಗೆ ವಿರುದ್ದವಾಗಿ ಬಿಟೋಯಿನ್ ಮತ್ತು ಅದರ ಉತ್ಪನ್ನಗಳು, ವಿಕೇಂದ್ರೀಕೃತ ನಿಯಂತ್ರಣವನ್ನು ಬಳಸುತ್ತವೆ. ವಿಕೇಂದ್ರೀಕೃತ ನಿಯಂತ್ರಣವು, ವಿತರಣೆ ಲೆಡ್ಜರ್ನ ಪಾತ್ರದಲ್ಲಿ, ಬಿಟೋಯಿನ್ನ ಬ್ಲಾಕ್ಚೈನ್ ವಹಿವಾಟಿನ ಡೇಟಾಬೇಸಿನ ಬಳಕೆಗೆ ಸಂಬಂಧಿಸಿದೆ.

ಅವಲೋಕನ[ಬದಲಾಯಿಸಿ]

ವಿಕೇಂದ್ರೀಕೃತ ಕ್ರಿಪ್ಟೋ ಕರೆನ್ಸಿಯು ಒಟ್ಟಾದ ಇಡೀ ಕ್ರಿಪ್ಟೋ ಕರೆನ್ಸಿ ವ್ಯವಸ್ಥೆಯ ಮೂಲಕ ನಿರ್ಮಿಸಲಾಗಿದೆ. ವ್ಯವಸ್ತೆಯನ್ನು ರಚಿಸಿದ್ದಾಗ ಮತ್ತು ಅದನ್ನು ಸಾರ್ವಜನಿಕವಾಗಿ ಗೊತ್ತಿಮಾಡಿದಾಗ, ವ್ಯಾಖ್ಯಾನಿಸಲ್ಪಡುವ ದರದಲ್ಲಿ ಇದನ್ನು ನಿರ್ಮಿಸಲಾಗಿದೆ. ಕೇಂದ್ರೀಕೃತ ಬ್ಯಾಂಕಿಂಗ್ ಮತ್ತು ಆರ್ಥಿಕ ವ್ಯವಸ್ಥೆಗಳಾದ ಫೆಡರಲ್ ರಿಸರ್ವ್ ಸಿಸ್ಟಮ್ಗಳನ್ನು, ಸಾಂಸ್ಥಿಕ ಮಂಡಳಿಗಳು ಅಥವಾ ಸರ್ಕಾರಗಳು ಕರೆನ್ಸಿಯ ಪೂರೈಕೆಯನ್ನು ಫಿಯಟ್ ಹಣದ ಮುದ್ರಣ ಘಟಕಗಳ ಮೂಲಕ ಅಥವಾ ಡಿಜಿಟಲ್ ಬ್ಯಾಂಕಿಂಗ್ ಲೆಡ್ಜರ್ಸ್ ಸೇರ್ಪಡೆ ಬೇಡಿಕೆಗಳ ಮೂಲಕ ನಿಯಂತ್ರಿಸುತ್ತವೆ. ವಿಕೇಂದ್ರೀಕೃತ ಕ್ರಿಪ್ಟೋ ಕರೆನ್ಸಿಯ ವಿಚಾರದಲ್ಲಿ, ಕಂಪನಿಗಳು ಅಥವಾ ಸರ್ಕಾರಗಳು ಹೊಸ ಘಟಕಗಳನ್ನು ಸೃಷ್ಟಿಸಲು ಸಾಧ್ಯವಿಲ್ಲ. ಸತೋಶಿ ನಕಾಮೊಟೊ ಎಂದು ಕರೆಯಲಾಗುವ ಗುಂಪು ಅಥವಾ ವ್ಯಕ್ತಿಯು ಈ ತಾಂತ್ರಿಕ ವ್ಯವಸ್ತೆಯನ್ನು ರಚಿಸಿದ್ದರು.

ಸೆಪ್ಟೆಂಬರ್ ೨೦೧೭ ರ ವೇಳೆಗೆ, ಸಾವಿರಕ್ಕೂ ಹೆಚ್ಚಿನ ಕ್ರಿಪ್ಟೋ ಕರೆನ್ಸಿಯ ವಿಶೇಷಣಗಳು ಅಸ್ತಿತ್ವಕ್ಕೆ ಬಂದಿವೆ; ಹೆಚ್ಚಿನವುಗಳನ್ನು, ಮೊದಲು ಸಂಪೂರ್ಣವಾಗಿ ಜಾರಿಗೊಳಿಸಲಾಗಿರುವ ವಿಕೇಂದ್ರೀಕೃತ ಕ್ರಿಪ್ಟೋ ಕರೆನ್ಸಿಯಾದ, ಬಿಟ್ಕೋಯಿನ್ ಇಂದ ಪಡೆದಿವೆ.

ನ್ಯಾಯಬದ್ಧತೆ[ಬದಲಾಯಿಸಿ]

ಕ್ರಿಪ್ಟೋ ಕರೆನ್ಸಿಗಳ ಕಾನೂನು ಸ್ಥಿತಿಯು ದೇಶದಿಂದ ದೇಶಕ್ಕೆ ಗಣನೀಯವಾಗಿ ಬದಲಾಗುತ್ತದೆ ಮತ್ತು ಅದು ಇನ್ನು ನಿಕೃಷ್ಟವಾಗಿ ಹೇಳದಂತಿರುವ ಅಥವಾ ಅನೇಕ ಬಾರಿ ಬದಲಾಗುತ್ತಿರುವಂತಹದ್ದಾಗಿದೆ. ಕೆಲವು ದೇಶಗಳು, ಅವುಗಳ ಬಳಕೆ ಮತ್ತು ವ್ಯಾಪಾರವನ್ನು ಪ್ರಕಟವಾಗಿ ಅನುಮತಿಸಿದ್ದರೂ, ಇತರರು ಅದನ್ನು ನಿಷೇಧಿಸಿದ್ದಾರೆ ಅಥವಾ ನಿರ್ಬಂಧಿಸಿದ್ದಾರೆ. ತದ್ವತ್ತಾಗಿ, ವಿವಿಧ ಸರ್ಕಾರಿ ಏಜೆನ್ಸಿಗಳು, ಇಲಾಖೆಗಳು ಮತ್ತು ನ್ಯಾಯಾಲಯಗಳು ಬಿಟ್ಕೋಯಿನ್ಗಳನ್ನು ವಿಭಿನ್ನವಾಗಿ ವರ್ಗೀಕರಿಸಿದ್ದಾರೆ. ಚೀನಾದ ಸೆಂಟ್ರಲ್ ಬ್ಯಾಂಕ್, ೨೦೧೪ ರಂದು ಚೀನಾದಲ್ಲಿ ಹಣಕಾಸು ಸಂಸ್ಥೆಗಳು ಬಿಟ್ಕೋಯಿನ್ಗಳನ್ನು ನಿಭಾಯಿಸುವ ಅಧಿಕಾರವನ್ನು ನಿಷೇದಿಸಿತು. ರಶಿಯಾದಲ್ಲಿ, ಕ್ರಿಪ್ಟೋ ಕರೆನ್ಸಿಗಳು ಕಾನೂನುಬದ್ಧವಾಗಿದ್ದರೂ ಸಹ, ರಷ್ಯಾದ ರೂಬಲ್ ಹೊರತುಪಡಿಸಿ ಬೇರೆ ಯಾವುದೇ ಕರೆನ್ಸಿಗಳಿಂದ ಸರಕುಗಳನ್ನು ಖರೀದಿಸುವುದು ಕಾನೂನು ಬಾಹಿರವಾಗಿದೆ.

೨೫, ಮಾರ್ಚ್ ೨೦೧೪ ರಂದು, ಯುನೈಟೆಡ್ ಸ್ಟೇಟ್ಸ್ ಇಂಟರ್ನಲ್ ರೆವೆನ್ಯು ಸರ್ವೀಸ್ (ಐಆರ್ಎಸ್), ಕರೆನ್ಸಿಗೆ ವಿರುದ್ದವಾಗಿ ಬಿಟ್ಕೋಯಿನ್ಗಳನ್ನು ತೆರಿಗೆ ಉದ್ದೇಶಗಳಿಗಾಗಿ ಆಸ್ತಿಯಾಗಿ ಪರಿಗಣಿಸಲಾಗುವುದು ಎಂದು ತೀರ್ಪು ನೀಡಿತು. ಇದರ ಅರ್ಥ ಬಿಟ್ಕೋಯಿನ್ನ ಬಂಡವಾಳ ಲಾಭ ತೆರಿಗೆಗೆ ಒಳಪಟ್ಟಿರುತ್ತದೆ. ಈ ತೀರ್ಪಿನ ಒಂದು ಪ್ರಯೋಜನವೆಂದರೆ ಅದು ಬಿಟ್ಕೋಯಿನ್ನ ಕಾನೂನುಬದ್ಧತೆಯನ್ನು ಸ್ಪಷ್ಟಗೊಳಿಸುತ್ತದೆ. ಇನ್ನು ಮುಂದೆ, ಹೂಡಿಕೆದಾರರು ಬಿಟ್ಕೋಯ್ನ್ಗಳ ಹೂಡಿಕೆಗಳನ್ನು ಅಥವಾ ಲಾಭಾಂಶಗಳನ್ನು ಕಾನೂನುಬಾಹಿರವೋ ಅಥವಾ ಐಆರ್ಎಸ್ಗೆ ಹೇಗೆ ವರದಿ ಮಾಡಬೇಕೋ ಎಂಬ ಚಿಂತೆಯನ್ನು ಮಾಡಬೇಕಿಲ್ಲ.

ಆರ್ಥಿಕತೆ[ಬದಲಾಯಿಸಿ]

ಕ್ರಿಪ್ಟೋ ಕರೆನ್ಸಿಗಳನ್ನು ಪ್ರಥಮಿಕವಾಗಿ ಹೊರಗಿನ ಅಸ್ತಿತ್ವದಲ್ಲಿರುವ ಬ್ಯಾಂಕಿಂಗ ಮತ್ತು ಸರ್ಕಾರಿ ಸಂಸ್ಥೆಗಳಲ್ಲಿ ಬಳಸಲಾಗುತಿತ್ತು ಮತ್ತು ಇಂಟರ್ನೆಟ್ನಲ್ಲಿ ವಿನಿಮಯ ಮಾಡಿಕೊಳ್ಳಾಲಾಗುತಿತ್ತು.

ಜೂನ್ ೨೦೧೭ರ ವೇಳೆಗೆ, ಕ್ರಿಪ್ಟೋ ಕರೆನ್ಸಿಗಳ ಒಟ್ಟು ಮಾರುಕಟ್ಟೆ ಬಂಡವಾಳೀಕರಣವು $೧೦೦ ಶತಕೋಟಿ ಗಿಂತ ಹೆಚ್ಚಾಗಿದೆ ಮತ್ತು ದಾಖಲೆಯು ಪ್ರತಿದಿನದ ಸಂಪುಟ $೬ ಶತಕೋಟಿ ಗಿಂತ ಹೆಚ್ಚಾಗಿದೆ. ಸೆಪ್ಟೆಂಬರ್ ೨೦೧೭ರ ಹೊತ್ತಿಗೆ, ೧೧೦೦ ಡಿಜಿಟಲ್ ಕರೆನ್ಸಿಗಳು ಅಸ್ತಿತ್ವದಲ್ಲಿ ಇದ್ದವು.

ಟೈಮ್ಸ್ಟ್ಯಾಂಪಿಂಗ್[ಬದಲಾಯಿಸಿ]

ಕ್ರಿಪ್ಟೋ ಕರೆನ್ಸಿಗಳು, ಬ್ಲಾಕ್ಚೈನ್ ಲೆಡ್ಜರ್ಗೆ ಸೇರಿಸಲಾದ ಟೈಮ್ಸ್ಟ್ಯಾಂಪಿಂಗ್ ವಹಿವಾಟುಗಳಿಗೆ, ವಿಶ್ವಾಸಾರ್ಹ ಮೂರನೇ ವ್ಯಕ್ತಿಯ ಅಗತ್ಯವನ್ನು ತಪ್ಪಿಸಲು, ವಿವಿಧ ಟೈಮ್ಸ್ಟ್ಯಾಂಪಿಂಗ್ ಸ್ಕೀಮ್ಸ್ ಗಳಾದ ಪ್ರೂಫ್ ಆಫ್ ವರ್ಕ್ ಸ್ಕೀಮ್ಸ್, ಪ್ರೂಫ್ ಆಫ್ ಸ್ಟೇಕ್ ಆನ್ಡ್ ಕಂಬಾಯಿನ್ಡ್ ಸ್ಕೀಮ್ಸ್ಗಳನ್ನು ಬಳಸುತ್ತಿವೆ.

ಪ್ರಯೋಜನೆ[ಬದಲಾಯಿಸಿ]

  1. ಮೋಸಗಾರಿಕೆ- ಪ್ರತಿಯೊಬ್ಬರ ಕ್ರಿಪ್ಟೋ ಕರೆನ್ಸಿಯು ಡಿಜಿಟಲ್ ಆಗಿದ್ದು, ಕಳುಹಿಸುವ ಸಮಯದಲ್ಲಿ ನಕಲಿಯಾಗಿ ಅಥವಾ ಅನಿಯಂತ್ರಿತವಾಅಗಿ ಹಿಂತಿರುಗಿಸಲಾಗುವುದಿಲ್ಲ, ಕ್ರೆಡಿಟ್ ಕಾರ್ಡ್ ಚಾರ್ಚ್-ಬೆಕ್ಸ್ಗಳ ಹಾಗೆ.
  2. ತಕ್ಷಟದ ವಸಾಹತು- ಬ್ಲಾಕ್ಚೈನ್ ಒಂದು "ದೊಡ್ಡ ಆಸ್ತಿ ಹಕ್ಕುಗಳ ದತ್ತಸಂಚಯ" ದಂತೆ ಎಂದು ಗಲ್ಲಪ್ಪಿ ಹೇಳಿದ್ದಾರೆ. ಬಿಟ್ಕೊಯಿನ್ ಒಪ್ಪಂದಗಳಲ್ಲಿ ಮೂರನೇ ವ್ಯಕ್ತಿಯ ಅನುಮೋದನೆಗಳನ್ನು ತೆಗೆದು ಹಾಕಲು ಬಹುದು ಅಥವಾ ಸೇರಿಸಲೂಬಹುದು.
  3. ಕಡಿಮೆ ಶುಲ್ಕ- ಕ್ರಿಪ್ಟೋ ಕರೆನ್ಸಿ ಎಕ್ಸ್ಚೇಂಜ್ಗಳಿಗೆ ಸಾಮಾನ್ಯವಾಗಿ ವ್ಯವಹಾರ ಶುಲ್ಕಗಳು ಇಲ್ಲ, ಏಕೆಂದರೆ ಮೈನರ್ಸ್ಗಳಿಗೆ ನೆಟ್ವರ್ಕ್ನಿಂದ ಪರಿಹಾರವಿದೆ.
  4. ಗುರುತಿನ ಕಳ್ಳತನ- ಕ್ರಿಪ್ಟೋ ಕರೆನ್ಸಿಯು "ಫುಶ್" ಯಾಂತ್ರಿಕತೆಯನ್ನು ಬಳಸುತ್ತದೆ. ಯಾವುದು ಕ್ರಿಪ್ಟೋ ಕರೆನ್ಸಿ ಹೊಂದಿರುವವರಿಗೆ ಯಾವುದೆ ಮಾಹಿತಿಯ ನೀಡದೆ ವ್ಯಾಪಾರ ಮಾಡಬಹುದು ಮತ್ತು ಆತನಿಗೆ ಬಯಸಿದ್ದನ್ನು ನಿಖರವಾಗಿ ಕಳುಹಿಸಲು ಅನುವು ಮಾಡಿಕೊಡುತ್ತದೆ.
  5. ವಿಕೇಂದ್ರೀಕೃತ- ಬಿಟ್ಕೊಯಿನ್ ಒಂದು ನೆಟ್ವರ್ಕ್ ಮೂಲಕ ನಿರ್ವಹಿಸಲಾಗಿದೆ, ಮತ್ತು ಯಾವುದೆ ಒಂದು ಕೇಂದ್ರ ಅಧಿಕಾರಿಯೂ ನಿರ್ವಹಿಸುತಿಲ್ಲ.
  6. ಸಾರ್ವತ್ರಿಕ ಮಟ್ಟದಲ್ಲಿ ಗುರುತು- ವಿನಿಮಯ ದರಗಳು, ಬಡ್ಡಿದರಗಳು, ವಹಿವಾಟು ಶುಲ್ಕಗಳು ಅಥವಾ ಯಾವುದೇ ದೇಶದ ಇತರ ಶುಲ್ಕಗಳು ಕ್ರಿಪ್ಟೋ ಕರೆನ್ಸಿಗಳಿಗೆಬದ್ದವಾಗಿಲ್ಲ, ಹಾಗಾಗಿ ಯಾವುದೇ ಸಮಸ್ಯೆಗಳನ್ನು ಅನುಭವಿಸದೆಯೇ ಅಂತರರಾಷ್ಟ್ರೀಯ ಮಟ್ಟದಲ್ಲಿ ಅದನ್ನು ಬಳಸಬಹುದು.[೧]

ವಿಮರ್ಶೆ[ಬದಲಾಯಿಸಿ]

  • ಹಲವು ಬ್ಯಾಂಕುಗಳು ಕ್ರಿಪ್ಟೋ ಕರೆನ್ಸಿಗಳ ಸೇವೆಗಳನ್ನು ನೀಡುವುದಿಲ್ಲ ಮತ್ತು ವರ್ಚುವಲ್ ಕರೆನ್ಸಿಯ ಕಂಪನಿಗಳಿಗೆ ಸೇವೆಗಳನ್ನು ನೀಡಲು ನಿರಾಕರಿಸುತ್ತವೆ.
  • ಮಾಲ್ವೇರ್ ಅಥವಾ ಡೇಟಾ ಕಳೆದುಹೋಗುವ ಕಾರಣಗಳಿಂದಾಗಿ ಸ್ಥಳೀಯ ಸಂಗ್ರಹಗಳಿಂದ ಕ್ರಿಪ್ಟೋ ಕರೆನ್ಸಿಗಳನ್ನು ಶಾಶ್ವತವಾಗಿ ಕಳೆದುಕೊಳ್ಳುವ ಸಾಧ್ಯತೆಗಳು ಹೆಚ್ಚಾಗಿವೆ.
  • ಕ್ರಿಪ್ಟೋ ಕರೆನ್ಸಿಯು ಮುಖ್ಯವಾಹಿನಿಯಾಗುವ ಮೊದಲು ಹಲವಾರು ಮಾನದಂಡಗಳನ್ನು ತಲುಪಬೇಕು. ಉದಾಹರಣೆಗೆ, ಕ್ರಿಪ್ಟೋ ಕರೆನ್ಸಿಗಳನ್ನು ಸ್ವೀಕರಿಸುವ ವ್ಯಪಾರಿಗಳ ಸಂಖ್ಯೆಯು ಕಡಿಮೆ, ಆದರೆ ಹೆಚ್ಚುತ್ತಿದೆ.
  • ಬಿಟ್ಕೋಯಿನ್ನಂತಹ ಕ್ರಿಪ್ಟೋ ಕರೆನ್ಸಿಗಳಲ್ಲಿ ಆದ ತಾಂತ್ರಿಕ ಪ್ರಗತಿಗಳು, ವಿಶೇಷ ಯಂತ್ರಾಂಶ ಮತ್ತು ಸಾಫ್ಟ್ವೇರ್ ಅಗತ್ಯವಿರುವ ಬಿಟ್ಕೋಯಿನ್ ಮೈನರ್ಸ್ಗಳ ಪ್ರವೇಶದ ವೆಚ್ಚವನ್ನು ಹೆಚ್ಚಾಗಿಸುತ್ತದೆ.
  • ಕೆಲವು ಸಂಖ್ಯೆಯ ಬ್ಲಾಕ್ಗಳು ತಮ್ಮ ವ್ಯವಹಾರವನ್ನು ದೃಡಪಡಿಸಿದ ನಂತರ ಕ್ರಿಪ್ಟೋ ಕರೆನ್ಸಿಯ ವಹಿವಾಟುಗಳನ್ನು ಸಾಮಾನ್ಯವಾಗಿ ಬದಲಾಯಿಸಲಾಗುವುದಿಲ್ಲ. ಕ್ರೆಡಿಟ್ ಕಾರ್ಡುಗಳಿಗೆ ಹೋಲಿಸಿದರೆ ಕ್ರಿಪ್ಟೋ ಕರೆನ್ಸಿಯ ಒಂದು ವೈಶಿಷ್ಟ್ಯ ಕೊರತೆಯು ವಂಚನೆ ವಿರುದ್ದ ಗ್ರಾಹಕರ ರಕ್ಷಣೆ, ಉದಾಹರಣೆಗೆ ಜಾರ್ಜ್ಬ್ಯಾಕ್ಗಳು.
  • ಕ್ರಿಪ್ಟೋ ಕರೆನ್ಸಿಗಳು ಡಿಜಿಟಲ್ ಕರೆನ್ಸಿಗಳಾಗಿದ್ದು, ಅವು ಎನ್ಕೈಪ್ಶನ್ ತಂತ್ರಗಳ ಮೂಲಕ ನಿರ್ವಹಿಸಲ್ಪಡುತ್ತದೆ. ಹಲವು ಸರ್ಕಾರಗಳು ತಮ್ಮ ನಿಯಂತ್ರಣದ ಕೊರತೆಯಾಗಬಹುದೋ ಎಂದು ಹೆದರಿ ಮತ್ತು ಆರ್ಥಿಕ ಬದ್ರತೆಯ ಮೇಲಾಗುವ ಪರಿಣಾಮಗಳಿಂದಾಗಿ ಅವುಗಳ ಬಗ್ಗೆ ಎಚ್ಚರಿಕೆಯ ಮಾರ್ಗವನ್ನು ವಹಿಸಿದ್ದಾರೆ.
  • ಸೆಪ್ಟೆಂಬರ್ ೨೦೧೭ರಲ್ಲಿ, ಜೇಮೀ ಡಿಮನ್ ರವರು ಬಿಟ್ಕೋಯಿನನ್ನು 'ಫ್ರಾಡ್' ಎಂದು ಕರೆದಿದ್ದಾರೆ.
  • ಅಕ್ಟೋಬರ್ ೨೦೧೭ರಲ್ಲಿ, ಬ್ಲ್ಯಾಕ್ರಾಕ್ ಸಿಇಒ ಲ್ಯಾರಿ ಫಿಂಕ್ "ಮನಿ ಲಾಂಡರಿಂಗ್ ಸೂಚ್ಯಾಂಕ" ಬಿಟ್ಕೋಯಿನ್ ಎಂದು ಕರೆದಿದ್ದಾರೆ. "ಬಿಟ್ಕೋಯಿನ್ ಕೇವಲ ವಿಶ್ವದಲ್ಲೇ ಮನಿ ಲಾಂಡರಿಂಗ್ಗೆ ಎಷ್ಟು ಬೇಡಿಕೆ ಇದೆ ಎಂಬುದನ್ನು ತೋರಿಸುತ್ತದೆ", ಎಂದು ವಿಶ್ವದ ಅತಿದೊಡ್ಡ ಆಸ್ತಿ ನಿರ್ವಹಣೆ ಸಂಸ್ಥೆಯ ಮುಖ್ಯಸ್ಥರು ಹೀಗೆ ಹೇಳಿದ್ದಾರೆ. [೨]
  1. https://www.huffingtonpost.com/ameer-rosic-/7-incredible-benefits-of-_1_b_13160110.html
  2. https://en.wikipedia.org/wiki/Cryptocurrency