ಸದಸ್ಯ:Jyothi rai/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪ್ರತಿಮಾ ಬೇಡಿ[ಬದಲಾಯಿಸಿ]

ಪ್ರತಿಮಾ ಗೌರಿ ಬೇಡಿ ಭಾರತದ ಹಸರಾಂತ ಒಡಿಸ್ಸಿ ನೃತ್ಯಗಾತಿ. ಬೆಂಗಳೂರಿನ ಬಳಿ "ನೃತ್ಯ ಗ್ರಾಮ" ಎಂಬ ನೃತ್ಯಕ್ಕಾಗಿಯೇ ಮೀಸಲಿಟ್ಟ ಹಳ್ಳಿಯನ್ನು ಸ್ಥಾಪಿಸಿದವರು

ಆರಂಭಿಕ ಜೀವನ[ಬದಲಾಯಿಸಿ]

೧೯೪೮ ಅಕ್ಟೋಬರ್ ೧೨ ರಂದು ದೆಹಲಿಯಲ್ಲಿ ಇವರು ಜನಿಸಿದರು.ದೆಹಲಿಯಲ್ಲಿ ಜನಿಸಿದ ಪ್ರತಿಮಾ ಅವರಿಗೆ ನಾಲ್ವರು ಒಡಹುಟ್ಟಿದವರು. ಹರಿಯಾಣದ ಕರ್ನಾಲ್ ಜಿಲ್ಲೆಯ ಅಗರವಾಲ್ ಕುಟುಂಬಕ್ಕೆ ಸೇರಿದ ಲಕ್ಷ್ಮಿ ಚಂದ್ ಗುಪ್ತಾ ಇವರ ತಂದೆ. ಇವರ ತಾಯಿ ರೀಬಾ. ತನ್ನ ಒಂಬತ್ತನೆಯ ವಯಸ್ಸಿನ ಬಳಿಕ ಸ್ವಲ್ಪ ಸಮಯ ತಮ್ಮ ಚಿಕ್ಕಮ್ಮನ ಬಳಿಯಿದ್ದು ಕರ್ನಾಲ್ ಜಿಲ್ಲೆಯ ಸ್ಥಳೀಯ ಶಾಲೆಯಲ್ಲಿ ವಿದ್ಯಾಭ್ಯಾಸ ಪಡೆದರು. ಅಲ್ಲಿಂದ ಹಿಂದಿರುಗಿದ ಅವರು ಪಂಚಗಣಿ ಕಿಮ್ಮಿನ್ಸ್ ಹೈಸ್ಕೂಲ್ ನಲ್ಲಿ ಶಿಕ್ಷಣವನ್ನು ಪಡೆದರು. ಅವರು ತಮ್ಮ ಪದವಿ ಶಿಕ್ಷಣವನ್ನು ಮುಂಬೈಯ ಸೈಂಟ್ ಕ್ಸೇವಿಯರ್ ಕಾಲೇಜಿನಿಂದ ಪಡೆದರು.

ವೃತ್ತಿ ಜೀವನ[ಬದಲಾಯಿಸಿ]

ರೂಪದರ್ಶಿಯಾಗಿ ವೃತ್ತಿ ಜೀವನ ಆರಂಭಿಸಿದ ಇವರು, ೧೯೭೪ರ ವೇಳೆಗೆ ಮುಂಬೈನಲ್ಲಿ ತನ್ನ ವಿವಾದಾತ್ಮಕ ನಡೆಗಳಿಂದ ಬಹಳ ಪ್ರಖ್ಯಾತಿಯನ್ನು ಹೊಂದಿದ್ದರು. ಆಕಸ್ಮಿಕವಾಗಿ ಆಗಸ್ಟ್ ೧೯೭೫ ರಲ್ಲಿ ಭುಲಾಭಾಯ್ ಮೆಮೊರಿಯಲ್ ಇನ್ಸ್ಟಿಟ್ಯೂಟ್ ಗೆ ಭೇಟಿ ನೀಡಿದಾಗ ನೋಡಿದ ಇಬ್ಬರು ಯುವ ನೃತ್ಯಗಾರರ ನೃತ್ಯಪ್ರದರ್ಶನ ಅವರ ಜೀವನದ ದಿಕ್ಕನ್ನೇ ಬದಲಾಯಿಸಿತು. ಮೊದಲೆಂದೂ ನೋದದ, ಕಲಿಯದ ಅತ್ಯಂತ ಸಂಕೀರ್ಣವಾದ ಹಾವಭಾವವನ್ನು ಪ್ರದಶಿದಬೇಕಾದ ಒಡಿಸ್ಸಿ ನೃತ್ಯಚವನ್ನು ಅತ್ಯಂತ ಉತ್ಸಾಹದಿಂದ ಗುರುಗಳಾದ ಕೇಲುಚರಣ್ ಮಹಾಪಾತ್ರರ ಬಳಿ ಕಲಿತರು. ದಿನಕ್ಕೆ ೧೨ರಿಂದ ೧೪ ಗಂಟೆಗಳಷ್ಟು ಕಾಲ ಬಹಳಷ್ಟು ಕಷ್ಟ ಪಟ್ಟು ನೃತ್ಯಾಭ್ಯಾಸ ಮಾಡುತ್ತಿದ್ದರು. ತನ್ನ ಜೀವನದ ಆರಂಭಿಕ ದಿನಗಳಲ್ಲಿ ಆಧುನಿಕ ಉಡುಗೆ ತೊಡುಗೆಗಳೊಂದಿಗೆ ಗುರುತಿಸಿಕೊಂಡಿದ್ದ ಪ್ರತಿಮಾ ಗೌರಿ ನಂತರದ ದಿನಗಳಲ್ಲಿ ತನ್ನ ವಿರದ್ಯಾರ್ತಿಗಳಲ್ಲೆಲ್ಲಾ ಗೌರಿ ಅಮ್ಮ ಅಥವಾ ಗೌರಿ ಮಾ ಎಂದೇ ಗುರುತಿಸಲ್ಪಟ್ಟರು.


ಆಕೆಯ ನೃತ್ಯಕ್ಕೆ ಜೀವನದ ಒಂದು ಮಾರ್ಗವಾಗಿತ್ತು. ಅವಳು ಅತ್ಯುತ್ತಮ ವಿದ್ಯಾರ್ಥಿಯಾಗಿದ್ದಳು. ಆಕೆಯ ನೃತ್ಯವನ್ನು ಪರಿಪೂರ್ಣಗೊಳಿಸಲು, ಅವರು ಮದ್ರಾಸ್ನ ಗುರು ಕಲಾನಿಧಿ ನಾರಾಯಣರಿಂದ ಅಭಿನಯವನ್ನು ಅಧ್ಯಯನ ಮಾಡಲು ಪ್ರಾರಂಭಿಸಿದರು. ಅಲ್ಲಿಂದೀಚೆಗೆ ಅವರು ದೇಶಾದ್ಯಂತ ಪ್ರದರ್ಶನಗಳನ್ನು ನೀಡಲಾರಂಭಿಸಿದರು. ಅದೇ ಸಮಯದಲ್ಲೇ, ಮುಂಬೈಯ ಜುಹುನಲ್ಲಿ ಪೃಥ್ವಿ ಥಿಯೇಟರ್ನಲ್ಲಿ ಪ್ರೊಟಿಮಾ ತನ್ನ ನೃತ್ಯ ಶಾಲೆ ಪ್ರಾರಂಭಿಸಿದರು. ನಂತರ ಇದು ಒಡಿಸ್ಸಿ ನೃತ್ಯ ಕೇಂದ್ರವಾಯಿತು. 1978 ರಲ್ಲಿ ಕಬೀರ್ ಬೇಡಿಯಿಂದ ಅವಳನ್ನು ಬೇರ್ಪಡಿಸಿದ ನಂತರ, ಅವಳು ಆಂಕರ್ಗಾಗಿ ಹುಡುಕುತ್ತಿದ್ದಳು ಮತ್ತು ಅವಳು ಅದನ್ನು ತನ್ನ ನೃತ್ಯದಲ್ಲಿ ಕಂಡುಕೊಂಡಳು.

ಪೋಟೋಗಳು[ಬದಲಾಯಿಸಿ]

Karavali Wikipedians 24 June, 2017 - 3


ಉಲ್ಲೇಖಗಳು[ಬದಲಾಯಿಸಿ]