ಸದಸ್ಯ:Joswin lasrado 19/sandbox
ಕ್ಲೆಮೆಂಟ್ ಲಸ್ರಾದೋ ಮತ್ತು ಫೆಲ್ಸಿ ಲಸ್ರಾದೋ ಮಗಳಾದ ಜಾಸ್ವಿನ್ ಲಸ್ರಾದೋ ಎಂಬ ಕರ್ನಾಟಕ ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕು ಪಡೀಲ್ ಎಂಬಲ್ಲಿ ವಾಸವಾಗಿದ್ದೇನೆ. ನಾನು ಹುಟ್ಟಿನಿಂದ ಭಾರತೀಯ ಕ್ರಿಶ್ಚಿಯನ್ ಧರ್ಮಕ್ಕೆ ಸೇರಿದವಳಾಗಿದ್ದಾನೆ. ನಮ್ಮ ಕುಟುಂಬದಲ್ಲಿ ಒಟ್ಟು ೫ ಜನರಿದ್ದಾರೆ. ಮನೆಯವರು ನನ್ನನ್ನು ಪ್ರೀತಿಯಿಂದ ನೋಡುತ್ತಿದ್ದಾರೆ. ನಾನು ನನ್ನ ಪ್ರಾಥಮಿಕ ಮತ್ತು ಪ್ರೌಢಶಾಲೆ ಶಿಕ್ಷಣವನ್ನು ಸಂತ ಜೆರೋಸ ಶಾಲೆಯಲ್ಲಿ ಮುಗಿಸಿದ್ದೇನೆ. ೧೦ನೆ ತರಗತಿಯಲ್ಲಿ ೭೨ ಶೇ.ಅಂಕಗಳೊಂದಿಗೆ ಉತ್ತೀಣಳಾಗಿದ್ದೇನೆ. ನಾನು ಗೆಳತಿಯರೊಂದಿಗೆ ಸಮಯ ಕಳೆಯುವುದನ್ನು ಇಷ್ಟಪಡುತ್ತೇನೆ. ನಾನು ಪ್ರಸ್ತುತ ಅಲೋಶಿಯಸ್ ಕಾಲೇಜಿನಲ್ಲಿ ಬಿಕಾಂ ಶಿಕ್ಷಣ ನಡೆಸುತ್ತಿದ್ದು, ಇಲ್ಲಿನ ಶಿಕ್ಷಕ ವೃಂದದವರು ನನಗೆ ಹೆಚ್ಚು ಆಪ್ತರಾಗಿದ್ದಾರೆ. ನನ್ನ ಆಸಕ್ತಿಯ ಕ್ಷೇತ್ರವೆಂದರೆ ನೃತ್ಯ ಮತ್ತು ಸಂಗೀತ. ಬಾಲ್ಯದಲ್ಲಿಯೇ ನೃತ್ಯ ತರಗತಿಯಲ್ಲಿ ಅಭ್ಯಸಿಸಿದ್ದು, ಅನೇಕ ಕಾಯಕ್ರಮಗಳಲ್ಲಿ ಭಾಗವಹಿಸಿದ್ದೆ. ಯುವ ಕ್ಯಾಥೊಲಿಕ್ ಸಂಘಟನೆಯಾಗಿರುವ ವೈಸಿಎಸ್ ನಲ್ಲಿ ಕಾರ್ಯದರ್ಶಿಯಾಗಿದ್ದು, ಭೋಪಾಲ್, ಮೈಸೂರು ಹಾಗೂ ಇನ್ನಿತರ ಸ್ಥಳಗಳಲ್ಲಿ ಕಾರ್ಯನಿರ್ವಹಿಸಿದ್ದೇನೆ. ಈ ಸಂಘಟನೆಯಿಂದ ನನಗೆ ಹಲವಾರು ಜಜನರ ಪರಿಚಯವಾಗಿ ಅತ್ಯಂತ ಮಹತ್ವಪೂರ್ಣ ವಿಷಯಗಳನ್ನು ಕಲಿತಿದ್ದೇನೆ, ಕಳೆದ ದ್ವಿತೀಯ ಪಿಯು ಪರೀಕ್ಷೆಯಲ್ಲಿ ೮೬ ಶೇ. ಅಂಕಗಳನ್ನು ಗಳಿಸಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣಳಾಗಿದ್ದು, ಮುಂದೆ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಿದ್ಧತೆ ನಡೆಸುತ್ತಿದ್ದೇನೆ,