ಸದಸ್ಯ:Joseph003/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
                                                     ಕಾರ್ಲ್ ಮಾರ್ಕ್

ಕಾರ್ಲ್ ಮಾರ್ಕ್[ಬದಲಾಯಿಸಿ]

ಕಾರ್ಲ್ ಹಾಯ್ನ್‌ರಿಕ್ ಮಾರ್ಕ್ಸ್ (ಮೇ/೫/೧೮೧೮ ರಿಂದ ಮಾರ್ಚ್/೧೪/೧೮೮೩) ಜರ್ಮನಿಯ ಒಬ್ಬ ತತ್ತ್ವಶಾಸ್ತ್ರಜ್ಞ, ರಾಜಕೀಯ, ಅರ್ಥಶಾಸ್ತ್ರಜ್ಞ, ಇತಿಹಾಸಕಾರ, ರಾಜಕೀಯ ಸಿದ್ಧಾಂತ ಪರಿಣತ, ಸಮಾಜಶಾಸ್ತ್ರಜ್ಞ, ಸಮತಾವಾದಿ ಮತ್ತು ಕ್ರಾಂತಿಕಾರಿಯಾಗಿದ್ದರು. ಇವರ ವಿಚಾರಗಳೇ ಸಮತಾವಾದದ ತಳಹದಿಗಳೆಂದು ನಂಬಲಾಗಿದೆ. ಮಾರ್ಕ್ಸ್, ತಮ್ಮ ಕಾರ್ಯವಿಧಾನವನ್ನು ೧೮೪೮ ರಲ್ಲಿ ಪ್ರಕಟನೆಗೊಂಡ ದ ಕಾಮ್ಯನಿಸ್ಟ್ ಮ್ಯಾನಫೆಸ್ಟೊದ ಮೊದಲನೆಯ ಅಧ್ಯಾಯದ ಮೊದಲ ಪಂಕ್ತಿಯಲ್ಲಿ ಸಂಕ್ಷೇಪಿಸಿದರು: “ಇಲ್ಲಿಯವರೆಗಿನ ಅಸ್ತಿತ್ವದಲ್ಲಿದ್ದ ಎಲ್ಲ ಸಮಾಜದ ಇತಿಹಾಸವು ವರ್ಗ ಹೋರಾಟಗಳ ಇತಿಹಾಸವಾಗಿದೆ.”

ಜೀವನಚರಿತ್ರೆ[ಬದಲಾಯಿಸಿ]

ಕಾರ್ಲ್ ಮಾರ್ಕ್ಸ್ ರವರು ಆರು ವರ್ಷದವರಿದ್ದಾಗ ಅವರ ಇಡೀ ಕುಟುಂಬವು ಕ್ರಿಶ್ಚಿಯನ್ ಮತಕ್ಕೆ ಮತಾಂತರಗೊಂಡಿತು. ಅದಕ್ಕೆ ಮುಖ್ಯ ಕಾರಣ ವೆಂದರೆ ಕಾರ್ಲ್ ಮಾರ್ಕ್ಸ್ ರವರು ಹುಟ್ಟಿದ ಟ್ರಿಯರ್ ನಗರವು ಒಂದು ಕಾಲದಲ್ಲಿ ರಾಜಕುಮಾರ ಜಾರ್ಚ್ ಬಿಷಪ್ ಆಡಳಿತ ಕೇಂದ್ರವಾಗಿತ್ತು. ಆದರೆ ಹತ್ತೊಂಭತ್ತನೆಯ ಶತಮಾನದ ಆರಂಭದಲ್ಲಿ ಫ್ರೆಂಚರಿಂದ ಆಕ್ರಮಿಸಲ್ಪಟ್ಟಿತ್ತು. ಫ್ರೆಂಚರ ಆಡಳಿತಕ್ಕೆ ಮುಂಚೆ ಯಹೂದಿ ಜನಾಂಗದವರು ನಾಗರಿಕ ಹಕ್ಕುಗಳ ದುರ್ಭರ ಗಮನಕ್ಕೆ ಒಳಗಾಗಿದ್ದರು. ಆದರೆ ಫ್ರೆಂಚರ ಆಳ್ವಿಕೆಯಲ್ಲಿ ಯಹೂದಿಗಳೂ ಸಹ ಇತರ ನಾಗರೀಕರಂತೆ ನಾಗರಿಕ ಹಕ್ಕುಗಳನ್ನು ಪಡೆದುಕೊಂಡರು. ಅಲ್ಲಿಯವರೆಗೂ ವ್ಯಾಪಾರ ಮತ್ತು ಉದ್ಯೋಗಗಳ ಬಾಗಿಲುಗಳು ಅವರ ಪಾಲಿಗೆ ಮುಚ್ಚಲ್ಪಟ್ಟಿದ್ದವು. ಆದರೆ ಫ್ರೆಂಚರ ಆಳ್ವಿಕೆಯಲ್ಲಿ ಆ ಮುಚ್ಚಲ್ಪಟ್ಟಿದ್ದ ಬಾಗಿಲುಗಳು ಅವರ ಪಾಲಿಗೂ ತೆರೆಯಲ್ಪಟ್ಟಿದ್ದವು. ಅವರೂ ಸಹ ಮನ ಬಂದ ವ್ಯಾಪಾರ ಇಲ್ಲವೆ ಉದ್ಯೋಗವನ್ನು ಪ್ರವೇಶಿಸಬಹುದಾದ ಮುಕ್ತ ಅವಕಾಶ ದೊರೆಯಿತು. ಆ ರೀತಿಯಲ್ಲಿ ನೆಪೋಲಿಯನ್ನನ ರಾಜ್ಯವು ತಮಗೆ ರಾಜಕೀಯ ಮುಕ್ತಿಯನ್ನು ಒದಗಿಸಿಕೊಟ್ಟಿದ್ದಕ್ಕಾಗಿ, ರೈನ್ ಪ್ರದೇಶದ ಯಹೂದಿ ಜನಾಂಗದ ಜನರು ಆ ರಾಜ್ಯಕ್ಕೆ ತಮ್ಮ ಸಂಪೂರ್ಣ ಬೆಂಬಲ ಮತ್ತು ಸಹಾನುಭೂತಿಗಳನ್ನು ವ್ಯಕ್ತಪಡಿಸಿದರು. ಆದರೆ ಅವರು, ನೆಪೋಲಿಯನ್ ಸೋತ ನಂತರ, ವಿಯನ್ನಾ ಕಾಂಕ್ರೆಸ್ ರೈನ್ ಲ್ಯಾಂಡನ್ನು ಪ್ರಷ್ಯಾ ಚಕ್ರಾಧಿಪತ್ಯದ ಆಡಳಿತಕ್ಕೆ ಒಳಪಡಿಸಿದ ಮೇಲೆ ಒಂದು ಮಹತ್ತರ ಸಂದಿಗ್ಧ ಪರಿಸ್ಥಿತಿಯನ್ನು ಎದುರಿಸಬೇಕಾಯಿತು. ಮತ್ತೆ ಯಹೂದಿಗಳು ತಮ್ಮ ನಾಗರಿಕ ಹಕ್ಕುಗಳಿಂದ ವಂಚಿತರಾದರು. ಅವರ ಪಾಲಿಗೆ ಬಹುತೇಕ ವ್ಯಾಪಾರ ಮತ್ತು ಉದ್ಯೋಗಗಳ ಬಾಗಿಲುಗಳೂ ಮುಚ್ಚಲ್ಪಟ್ಟವು. ಅವುಗಳಲ್ಲಿ ಕಾನೂನು ವೃತಿಯೂ ಒಂದಾಗಿತ್ತು. ಅಂತೆಯೇ ತನ್ನ ವಕೀಲ ವೃತ್ತಿಯನ್ನು ಕಳೆದುಕೊಳ್ಳಬಹುದಾದ ಆತಂಕವು ಕಾರ್ಲ್ ಮಾರ್ಕ್ಸ್ ರವರ ತಂದೆಯು ಇಡೀ ಕುಟುಂಬವನ್ನು ಕ್ರಿಶ್ಚಿಯನ್ ಮತಕ್ಕೆ ಮತಾಂತರ ಮಾಡಿಸಿದರು. ಆದರೆ ಧರ್ಮ, ಜಾತಿ ಮತ್ತು ಪಂಗಡಗಳು ಕಾರ್ಲ್ ಮಾರ್ಕ್ಸ್ ರವರ ಮೇಲೆ ಎಂದೂ ಪರಿಣಾಮ ಬೀರಲಿಲ್ಲ. ಮೊದಲಿನಿಂದಲೂ ಭಾವನೆಗಳಿಗಿಂತ ಆಲೋಚನೆಗಳಿಂದ ಬಹಳವಾಗಿ ಪ್ರಭಾವಿತರಾಗುತ್ತಿದ್ದ ಕಾರ್ಲ್ ಮಾರ್ಕ್ಸ್ ಹುಟ್ಟು ಬಂಡಾಯಗಾರರಾಗಿದ್ದರು.

ಪ್ರಾರಂಭದ ಜೀವನ[ಬದಲಾಯಿಸಿ]

ಯುವಕ ಕಾರ್ಲ್ ಮಾರ್ಕ್ಸ್ ರವರು ತಾವು ಹುಟ್ಟಿ ಬೆಳೆಯುತ್ತಿದ್ದ ಮನೆಯ ಪಕ್ಕದ ಮನೆಯಲ್ಲಿ ವಾಸಿಸುತ್ತಿದ್ದ, ಪ್ರಷ್ಯನ್ ಸರ್ಕಾರದ ಒಬ್ಬ ಪ್ರತಿಷ್ಠಿತ ಅಧಿಕಾರಿಯಾಗಿದ್ದ ಮತ್ತು ಹಲವಾರು ಭಾಷೆಗಳನ್ನು ಬಲ್ಲವರಾಗಿದ್ದ ಲೂಡ್ ವಿಗ್ ವಾನ್ ವೆಸಟ್ ಪೇಲಿನ್ ಎಂಬುವವರ ಜೊತೆ ನಿಕಟ ಸಹವಾಸವನ್ನಿಟ್ಟುಕೊಂಡಿದ್ದರು. ಸ್ವತಃ ವಿದ್ವಾಂಸರಾಗಿದ್ದ ಲೂಡ್ ವಿಗ್ ವಾನ್ ವೆಸ್ಟ್ ಪೇಲಿನ್ ರವರು ಕಾರ್ಲ್ ಮಾರ್ಕ್ಸ್ ರವರ ಆಸಕ್ತಿ ಹಾಗು ಬುದ್ದಿವಂತಿಕೆಯನ್ನು ಕಂಡು ಮೆಚ್ಚಿ ಪ್ರೋತ್ಸಾಹಿಸಿದರು. ಅನೇಕ ಪುಸ್ತಕಗಳನ್ನು ಕಾರ್ಲ್ ಮಾರ್ಕ್ಸ್ ರವರಿಗೆ ಕೊಟ್ಟು ಅವುಗಳ ಬಗ್ಗೆ ವಿವರಿಸಿ ಹೇಳಿ ಶ್ರದ್ಧೆಯಿಂದ ವಿವರವಾಗಿ ಓದಲು ಹೇಳಿದರು. ವಯಸ್ಸು ಹಾಗೂ ಪ್ರತಿಷ್ಠಿತ ಅಧಿಕಾರಿ ಸ್ಥಾನಮಾನವನ್ನು ಮರೆತು ಯುವಕ ಕಾರ್ಲ್ ಮಾರ್ಕ್ಸ್ ರವರ ಜೊತೆ ಗಂಟೆಗಟ್ಟಲೆ ಅನೇಕ ಪ್ರಾಚೀನ ಹಾಗೂ ಆಧುನಿಕ ತತ್ವಜ್ಞಾನಿಗಳ ಕೃತಿಗಳ ಬಗ್ಗೆ, ಅದರಲ್ಲಿಯೂ ಮುಖ್ಯ ಸೇಂಟ್ ಸೈಮನ್ ರವರ ಕೃತಿಗಳ ಬಗ್ಗೆ ಸುಧೀರ್ಘವಾಗಿ ಚರ್ಚಿಸುತ್ತಿದ್ದರು. ಕಾರ್ಲ್ ಮಾರ್ಕ್ಸ್ ತಮ್ಮ ಬಾಲ್ಯವನ್ನು ತುಂಬಾ ವಾತ್ಸಲ್ಯಪೂರಿತ ವಾತಾವರಣದಲ್ಲಿ ಸಂತೋಷದಾಯಕವಾಗಿ ಕಳೆದರು. ಅವರು ತಮ್ಮ ಜನ್ಮಸ್ಥಳವಾದ ಟ್ರಿಯರ್ ನಗರದಲ್ಲಿಯೇ ತಮ್ಮ ಶಾಲಾ ಶಿಕ್ಷಣವನ್ನು ಪಡೆದರು. ಅವರಿಗೆ ಆರಂಭದಿಂದಲೂ ಅರ್ಥಶಾಸ್ತ್ರದ ಬಗ್ಗೆ ಅಪಾರವಾದ ಆಸಕ್ತಿ ಇತ್ತು. ಎಳೆಯ ವಯಸ್ಸಿನಿಂದಲೇ ಹೆಚ್ಚು ಹೆಚ್ಚು ಅವಧಿ ಕುಳಿತು ಓದುವುದು ಮತ್ತು ಬುದ್ದಿವಂತರ ಜೊತೆ ಗಂಟೆಗಟ್ಟಲೇ ಚರ್ಚೆ ಮಾಡುವುದು ಕಾರ್ಲ್ ಮಾರ್ಕ್ಸ್ ರವರಿಗೆ ಬಹಳವಾಗಿ ಅಭ್ಯಾಸವಾಗಿತ್ತು. ಯುವಕ ಕಾರ್ಲ್ ಮಾರ್ಕ್ಸ್ ರವರು ತಮ್ಮ ತಂದೆಯವರ ಸಲಹೆಯ ಮೇರೆಗೆ ಕಾನೂನಿನ ಅಧ್ಯಯನಕ್ಕಾಗಿ ಬಾನ್ ವಿಶ್ವವಿದ್ಯಾನಿಲಯವನ್ನು ಸೇರಿದರು. ಆಗ ಅವರಿಗೆ ಹದಿನೇಳು ವರ್ಷ ವಯಸ್ಸಾಗಿತ್ತು. ಆದರೆ ಅವರು ೧೮೩೬ ರಲ್ಲಿ ಬಾನ್ ವಿಶ್ವ ವಿದ್ಯಾನಿಲಯವನ್ನು ಬಿಟ್ಟು ಬರ್ಲಿನ್ ವಿಶ್ವವಿದ್ಯಾನಿಲಯವನ್ನು ಸೇರಿದರು. ಅವರು ಬರ್ಲಿನ್ ವಿಶ್ವವಿದ್ಯಾಲಯವನ್ನು ಪ್ರವೇಶಿಸಿದ್ದು ಅವರ ಜೀವನದಲ್ಲಿ ಒಂದು ಹೊಸ ತಿರುವನ್ನು ಪಡೆಯುವಂತೆ ಮಾಡಿತು. ಅವರು ಅಲ್ಲಿ ಕಾನೂನಿನ ಜೊತೆಗೆ ತತ್ವಶಾಸ್ತ್ರ ಮತ್ತು ಇತಿಹಾಸಗಳನ್ನೂ ಅಧ್ಯಯನ ಮಾಡಿದರು. ಅವರು ಸಾಹಿತ್ಯದ ಬಗ್ಗೆಯೂ ಬಲವುಳ್ಳವರಾಗಿದ್ದು, ಕೆಲವಾರು ಪದ್ಯಗಳ ರಚನೆಯನ್ನೂ ಮಾಡಿದರು.

ಮರಣ[ಬದಲಾಯಿಸಿ]

ಕಾರ್ಲ್ ಮಾರ್ಕ್ಸ್ ಮತ್ತು ಫ್ರೆಡರಿಕ್ ಏಂಜೆಲ್ಸ್ ರವರ ಬರವಣಿಗೆಗಳು ರಷ್ಯಾ, ಚೀನಾ ದೇಶಗಳೂ ಸೇರಿದಂತೆ ಜಗತ್ತಿನ ಅನೇಕ ರಾಷ್ಟ್ರಗಳಲ್ಲಿ ನಡೆದ ರಾಜಕೀಯ ಹಾಗೂ ಆರ್ಥಿಕ ಪರಿವರ್ತನೆಗಳಿಗೆ ಕಾರಣವಾದವು. ಜಗತ್ತಿನ ಚಿಂತನ ಕ್ರಮವನ್ನೇ ವಿಶೇಷವಾಗಿ ಬದಲಿಸಿದ ಕಾರ್ಲ್ ಮಾರ್ಕ್ಸ್ ರವರು ೧೮೮೩ನೇ ಇಸವಿ ಮಾರ್ಚ್ ನಾಲ್ಕರಂದು ನಿಧನರಾದರು.