ಸದಸ್ಯ:Jicksy Joy

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jicksy Joy
Jicksy Joy

ಕುಟುಂಬ[ಬದಲಾಯಿಸಿ]

ನನ್ನ ಹೆಸರು ಜಿಕ್ಸಿ ಜಾಯ್.ಪಿ ಜೆ ಜಾಯ್ ಮತ್ತು ಶೈಜಿ ಜಾಯ್ ಎಂಬ ದಂಪತಿಗೆ ೧೯೯೭ ಮಾರ್ಚ್ ೩ರಂದು ಬೆಂಗಳೂರಿನಲ್ಲಿ ಜನಿಸಿದೆನು.ನಾನು ಕ್ರೈಸ್ಟ್ ಪ್ರೌಢಶಾಲೆಯಲ್ಲಿ ಓದಿ ನಂತರ ಪಿ ಯು ಸಿ ಯನ್ನು ಕ್ರೈಸ್ಟ್ ಜೂನಿಯರ್ ಕಾಲೇಜಿನಿಂದ ಪಡೆದಿದ್ದೇನು.ನನ್ನ ತಮ್ಮನ ಹೆಸರು ಜಿಸನ್ ಜಾಯ್.ಈಗ ೯ನೇ ತರಗತಿಯಲ್ಲಿ ಓದುತಿದ್ದಾನೆ.ನನ್ನ ತಾಯಿಯವರು ನಾನು ಓದಿದ್ದ ಶಾಲೆಯಲ್ಲೆ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದರು.

ನನ್ನ ತಾಯಿಯ ಚಾರಿತ್ರ್ಯ[ಬದಲಾಯಿಸಿ]

ನನ್ನ ತಾಯಿಯೆ ನನ್ನ ಬಲ.ಅವರೆ ನನ್ನ ಅತ್ಯುತ್ತಮ ಗೆಳತಿ.ನನ್ನ ಸುಖ,ದುಃಖ,ಸಂತೋಷ,ನೋವು,ನಲಿವು ಎಲ್ಲವನ್ನು ಹಂಚಿಕೊಳ್ಳುತ್ತಿದ್ದೆ.ನನ್ನ ಪಾಲಿಗೆ ಒಳ್ಳೆಯ ಸ್ನೇಹಿತರು ಎನ್ನಲು ಯಾರೂ ಇರಲಿಲ್ಲ ಏಕೆಂದರೆ ನಾನು ಯಾವಾಗಲು ನನ್ನ ತಾಯಿಯ ಜೊತೆ ಅಂಟಿಕೊಳ್ಳುತ್ತಿದ್ದೆ.ಅವರೆ ನನ್ನ ಅನುಕರಣೀಯ ವ್ಯಕ್ತಿ.ಅವರು ಎಲ್ಲಾ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುತ್ತಿದ್ದರು.ಅವರು ಬಹಳ ತಾಳ್ಮೆಯುಳ್ಳ ವ್ಯಕ್ತಿಯಾಗಿದ್ದರು.ಎಲ್ಲರಿಂದಲು ಒಳ್ಳೆಯ ಹೆಸರನ್ನು ಪಡೆಯುತ್ತಿದ್ದರು.ಅವರು ಬಹು ದೊಡ್ಡ ಕಲಾವಂತರೂ ಹೌದು.ಹಲವಾರು ಕಲೆಗಳನ್ನು ಕಲಿತವರು.ತಮ್ಮ ಮಕ್ಕಳೂ ಕೂಡ ಒಳ್ಳೆಯ ಕಲಾವಂತರು ಹಾಗು ಬುದ್ದಿವಂತರಾಗಿರಬೇಕೆಂದು ಅವರ ಆಸೆ.ಆದುದ್ದರಿಂದ ಅವರು ನಮ್ಮಿಬರನ್ನು ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಹೇಳುತ್ತಿದ್ದರು.

ನನ್ನ ಆಸಕ್ತಿ[ಬದಲಾಯಿಸಿ]

ನಾನು ೩ನೇ ತರಗತಿಯಲ್ಲಿ ಓದುತ್ತಿದ್ದಾಗ ನನ್ನ ತಾಯಿಯವರು ನನ್ನನ್ನು ಭರತನಾಟ್ಯ ಶಾಸ್ತ್ರ ಕಲಿಯುವುದಕ್ಕೆ ಗೀತಾಲಯ ಅಕಾಡೆಮಿಯಲ್ಲಿ ಸೇರಿಸಿದರು.ಅಂದಿನಿಂದ ನನಗೆ ನೃತ್ತದಲ್ಲಿ ಆಸಕ್ತಿ ಮೂಡಿಬಂದಿತು.ನಾನು ೬ ವರುಷಗಳ ಕಾಲ ಭರತನಾಟ್ಯ ಕಲಿತಿದ್ದೇನೆ.

ಭರತನಾಟ್ಯದ ಪೌರಾಣಿಕ ಹಿನ್ನೆಲೆ[ಬದಲಾಯಿಸಿ]

ಭರತನಾಟ್ಯದ ಪೌರಾಣಿಕ ಹಿನ್ನೆಲೆ ಏನೆಂದರೆ ಒಮ್ಮೆ ದೇವಾನುದೇವತೆಗಳೆಲ್ಲರೂ ಒಟ್ಟು ಸೇರಿ,ಇಂದ್ರನನ್ನು ಮುಂದಿರಿಸಿಕೊಂಡು ಬ್ರಹ್ಮನ ಬಳಿಗೆ ಬಂದು,ತಮಗೆ ಕ್ರೀಡನೀಯಕವಾದ ವಿನೋದವನ್ನು ಕರುಣಿಸಬೇಕೆಂದು ಕೇಳಿಕೊಂಡರು.ಬ್ರಹ್ಮ ಅವರ ಮಾತನ್ನು ಕೇಳಿ ಯೋಚನಾಬದ್ಧನಾದ.ನಂತರ ಬ್ರಹ್ಮನ ಋಗ್ವೇದದಿಂದ ಪಾಠ,ಯಜುರ್ವೇದದಿಂದ ಅಭಿನಯ,ಸಾಮವೇದದಿಂದ ಸಂಗೀತ,ಅಥರ್ವಣವೇದದಿಂದ ರಸಗಳನ್ನು ಆಯ್ದು 'ನಾಟ್ಯವೇದ'ವನ್ನು ರಚಿಸಿದ.ಆ ವೇದವನ್ನು ಇಂದ್ರನಿಗೆ ಕೊಟ್ಟು ಅವನ್ನು ವ್ಯಾಸಂಗ ಮಾಡಲು ಹೇಳಿದಾಗ,ಇಂದ್ರ ಆ ನಾಟ್ಯಗ್ರಂಥವನ್ನು ಓದಿ,ಅರಗಿಸಿಕೊಳ್ಳಲು ತಾನು ಅಸಮರ್ಥನೆಂದು ಒಪ್ಪಿಕೊಂಡ.ಆ ವೇದವನ್ನು ಓದಿ ನಾಟ್ಯವನ್ನು ರಚಿಸುವ ಕಾರ್ಯಭಾರ ಭರತಮುನಿಗೆ ಸಂದಿತು.ಭರತಮುನಿಯು ಅದನ್ನು ಗ್ರಹಣ,ಧಾರಣ,ಅರಿವು ಮತ್ತು ಪ್ರಯೋಗಶಾಲಿಗಳಾದ ಶಿಷ್ಯರಿಗೆ ಭೋದಿಸಿದ.ಹೀಗೆ ಭರತನ ೧೦೧ ಶಿಷ್ಯರು 'ನಾಟ್ಯಷಾಸ್ತ್ರ'ವನ್ನು ಭೂಲೋಕದಲ್ಲಿ ಪ್ರಚಾರಕ್ಕೆ ತಂದರು.ನಟರಾಜ ಶಿವನು ತನ್ನ ನೃತ್ಯಗಳಾದ ತಾಂಡವಗಳನ್ನು ತನ್ನ ಗಣಗಳಲ್ಲಿ ಒಬ್ಬನಾದ ತಂಡು ಮುನಿಯ ಮೂಲಕ ಭರತ ಮುನಿಗೆ ಕಲಿಸಿದನೆಂಬ ಚರಿತ್ರ.ಪಾರ್ವತಿಯಿಂದ ಲಾಸ್ಯ ನೃತ್ತವು ದೇವತಾ ಸ್ತ್ರೀಯರಿಗೆ ಕಲಿಸಲ್ಪಟ್ಟಿತು.ಭರತಮುನಿಯಿಂದ ರಚಿತವಾಗಿರುವುದರಿಂದ ಭರತನಾಟ್ಯಂ ಎಂಬ ಹೆಸರು ಬಂದಿತು ಎಂದು ಶಾಸ್ತ್ರ ಹೇಳುತ್ತದೆ.

ಮುಕ್ತಾಯ ಭಾಗ[ಬದಲಾಯಿಸಿ]

ನನ್ನ ಬಾಲ್ಯ ತುಂಬ ಸ್ವಾರಸ್ಯವಾಗಿ ಹೋಗುತ್ತಿತ್ತು.ನನ್ನ ತಾಯಿ ಪ್ರತೀಕ್ಷಿಸಿದ ಹಾಗೆ ನಾನು ಈಗ ಒಳ್ಳೆಯ ವ್ಯಕ್ತಿಯಾಗಿ ಬೆಳೆದಿದ್ದೇನೆ,ಇನ್ನೂ ಬೆಳೆಯುತ್ತೇನೆ.ನನ್ನ ಗುರಿ ಎಂಬುದು ನಾನು ನನ್ನ ತಾಯಿಯ ಹಾಗೆ ಒಳ್ಳೆಯ ಅಧ್ಯಾಪಕಿಯಾಗಬೇಕೆಂದು.ತಿಳಿಯದಿರುವವರಿಗೆ ಅರಿವನ್ನು ಹಂಚಿಕೊಳ್ಳಬೇಕು.ಹೀಗೆ ನಾನೂ ಕೂಡ ನನ್ನ ತಾಯಿಯ ಹಾಗೆ ಮಕ್ಕಳಿಗೆ ಒಳ್ಳೆಯ ಮಾರ್ಗದರ್ಶಿಯಾಗಬೇಕು ಎಂಬುದು ನನ್ನ ಆಸೆ.ಇದೆಲ್ಲ ನೋಡುವುದಕ್ಕೆ ಹಾಗು ಅಭಿನಂದಿಸುವುದಕ್ಕೆ ಈಗ ನನ್ನ ಜೊತೆ ನನ್ನ ತಾಯಿ ಇಲ್ಲದ್ದರಿಂದ ತುಂಬ ಸಂಕಟವಾಗುತ್ತಿದೆ.ಏನಾದರೂ ಜೀವನವನ್ನು ಮುಂದೆ ಸಾಗಿಸಬೇಕು.ನನ್ನ ತಾಯಿ ನನ್ನ ಜೊತೆ ಇದ್ದಾರೆ ಎಂಬ ನಂಬಿಕೆಯಲ್ಲಿದ್ದೇನೆ.ನನ್ನ ಈ ಜೀವನ ನನ್ನ ತಾಯಿ ನನಗೆ ಕೊಟ್ಟ ಬಹುದೊಡ್ಡ ವರ.ಅದನ್ನು ಅವರ ಪಾದಕ್ಕೆ ಸಮರ್ಪಿಸುತ್ತೆನೆ.ಎಲ್ಲದಕ್ಕೂ ನನ್ನ ತಾಯಿಗೆ ನನ್ನ ನಮಸ್ಕಾರಗಳು.ಅವರು ಬಯಸಿದಂತೆ ನಾನು ಏನಾದರು ದೊಡ್ಡದಾಗಿ ಸಾಧನೆಯನ್ನು ಮಾಡುತ್ತೇನೆ.

This user is a member of WikiProject Education in India



ಉಪಪುಟಗಳು[ಬದಲಾಯಿಸಿ]

In this ಸದಸ್ಯspace:

ಸದಸ್ಯರ ಚರ್ಚೆಪುಟ:
Jicksy Joy