ಸದಸ್ಯ:Jessanajoseph/ನನ್ನ ಪ್ರಯೋಗಪುಟ/chandakocchar
ಚಂದ ಕೋಚಾರ್ ರವರು ೧೯೬೧ ನವೆಂಬರ್ ೧೭ ರಂದು ರಾಜಸ್ಥಾನದ ಜೋಧಪುರ್ ನಲ್ಲಿ ಜನಿಸಿದರು.ಇವರು ಪ್ರಸ್ತುತ ಐಸಿಐಸಿಐ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕಿ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದಾರೆ. ಭಾರತದಲ್ಲಿ ರಿಟೇಲ್ ಬ್ಯಾಂಕಿಂಗ್ ರೂಪಿಸುವಲ್ಲಿ ಇವರು ವ್ಯಾಪಕವಾಗಿ ಗುರುತಿಸಲ್ಪಟ್ಟಿದ್ದಾರೆ. ಆರಂಭಿಕ ಜೀವನ: ಕೋಚಾರ್ ಅವರು ರಾಜಸ್ಥಾನದ ಜೋಧಪುರಲ್ಲಿ ಜನಿಸಿ ರಾಜಸ್ಥಾನದ ಜೈಪುರದಲ್ಲಿ ಬೆಳೆದರು. ಅವರು ಜೈಪುರದ ಸೇಂಟ್ ಏಂಜೆಲಾ ಸೋಫಿಯಾ ಶಾಲೆಯಲ್ಲಿ ಶಿಕ್ಷಣ ಪಡೆದರು. ನಂತರ ಅವರು ಬಿ.ಕಾಂ ಪದವಿಗಾಗಿ ಮುಂಬೈ ವಿಶ್ವವಿದ್ಯಾಲಯದ ಜೈ ಹಿಂದ್ ಕಾಲೇಜಿಗೆ ಸೇರಿದರು, ೧೯೮೨ ರಲ್ಲಿ ಪದವೀಧಾರರಾದ ನಂತರ ಅವರು ಇನ್ಸ್ಟಿಟ್ಯೂಟ್ ಆಫ್ ಕಾಸ್ಟ್ ಅಕೌಂಟೆಂಟ್ಸ್ ಆಫ್ ಇಂಡಿಯಾ ದಿಂದ ಕಾಸ್ಟ್ ಅಕೌಂಟೆನ್ಸಿಯನ್ನು ಅಧ್ಯಯನ ಮಾಡಿದರು, ಇದಾದ ನಂತರ ಅವರು ಮುಂಬೈನ ಜಮ್ನಾಲಾಲ್ ಬಜಾಜ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಸ್ಟಡೀಸ್ ನಿಂದ ಎಂ.ಎಂ.ಎಸ್ ಪದವಿಯನ್ನು ಪಡೆದರು. ಅವರು ಮ್ಯಾನೇಜ್ಮೆಂಟ್ ಸ್ಟಡೀಸ್ ಹಾಗೂ ಕಾಸ್ಟ್ ಅಚೌಂಟೆನ್ಸಿಯಲ್ಲಿ ಅತ್ಯುತ್ತಮ ಪ್ರದರ್ಷನ ನೀಡಿ ವೊಕ್ಹಾರ್ಡ್ಟ್ ಚಿನ್ನದ ಪದಕ ಹಾಗೂ ಜೆ.ಎನ್.ಬೋಸ್ ಚಿನ್ನದ ಪದಕವನ್ನು ಪಡೆದರು. ವೈಯಕ್ತಿಕ ಜೀವನ: ಕೋಚಾರ್‍ರವರು ಮುಂಬೈನಲ್ಲಿ ವಾಸವಾಗಿದ್ದಾರೆ, ಗಾಳಿ ಶಕ್ತಿಯ ಉದ್ಯಮಿ ಹಾಗೂ ಇವರ ವ್ಯಾಪಾರ ಸಹಪಾಠಿಯಾಗಿದ್ದ ದೀಪಕ್ ಕೋಚಾರ್ ಎಂಬುವವರನ್ನು ವಿವಾಹವಾದರು, ಇವರಿಗೆ ಆರತಿ ಮತ್ತು ಅರ್ಜುನ್ ಎಂಬ ಇಬ್ಬರು ಮಕ್ಕಳಿದ್ದಾರೆ, ವೃತ್ತಿಜೀವನ: ೧೯೮೪-೧೯೯೩: ೧೯೮೪ ರಲ್ಲಿ, ಕೋಚಾರ್ ಅವರು ಮ್ಯಾನೇಜ್‍ಮೆಂಟ್ ಟ್ರೈನಿಯಾಗಿ ಇಂಡಸ್ಟ್ರಿಯಲ್ ಕ್ರೆಡಿಟ್ ಅಂಡ್ ಇನ್ವೆಸ್ಟ್ಮೆಂಟ್ ಕಾರ್ಪೊರೇಶನ್ ಆಫ್ ಇಂಡಿಯಾ (ಐಸಿಐಸಿಐ) ವನ್ನು ಸೇರಿಕೊಂಡರು, ಐಸಿಐಸಿಐನಲ್ಲಿ ತನ್ನ ಆರಂಭಿಕ ವರ್ಷಗಳಲ್ಲಿ ಅವರು ಜವಳಿ, ಕಾಗದ ಮತ್ತು ಸಿಮೆಂಟ್ ಮುಂತಾದ ಕೈಗಾರಿಕೆಗಳಲ್ಲಿನ ಯೋಜನೆಗಳ ಮೌಲ್ಯಮಾಪನ ಮತ್ತು ಮೇಲ್ವಿಚಾರಣೆ ನಿರ್ವಹಿಸಿದರು. ೧೯೯೩–೨೦೦೯: ೧೯೯೦ ರ ದಶಕದಲ್ಲಿ ಐಸಿಐಸಿಐ ಬ್ಯಾಂಕ್ ಸ್ಥಾಪಿಸುವಲ್ಲಿ ಕೋಚಾರ್‍ರವರು ಪ್ರಮುಖ ಪಾತ್ರ ವಹಿಸಿದ್ದರು. ೧೯೯೩ ರಲ್ಲಿ, ಕೋಚಾರ್ ಅವರನ್ನು ಬ್ಯಾಂಕ್ ಸ್ಥಾಪನೆ ಮಾಡುವ ಜವಾಬ್ದಾರಿ ವಹಿಸಿದ್ದ ಕೋರ್ ತಂಡದ ಸದಸ್ಯರಾಗಿ ನೇಮಿಸಲಾಯಿತು. ಅವರು ೧೯೯೪ ರಲ್ಲಿ ಸಹಾಯಕ ಜನರಲ್ ಮ್ಯಾನೇಜರ್ ಆಗಿ, ನಂತರ ೧೯೯೬ ರಲ್ಲಿ ಡೆಪ್ಯುಟಿ ಜನರಲ್ ಮ್ಯಾನೇಜರ್ ಆಗಿ ಬಡ್ತಿ ಹೊಂದಿದರು. ಇವರು ೧೯೯೬ ರಲ್ಲಿ ಐಸಿಐಸಿಐ ಬ್ಯಾಂಕ್‍ನ ಹೊಸದಾಗಿ ರೂಪುಗೊಂಡ ಇನ್ಫ್ರಾಸ್ಟ್ರಕ್ಚರ್ ಇಂಡಸ್ಟ್ರಿ ಗ್ರೂಪ್‍ನ ನೇತೃತ್ವವನ್ನು ವಹಿಸಿದರು. ಇದರ ಮುಖ್ಯ ಗುರಿ ವಿದ್ಯುತ್, ದೂರಸಂಪರ್ಕ ಮತ್ತು ಸಾರಿಗೆ ಕ್ಷೇತ್ರಗಳಲ್ಲಿ ಮೀಸಲಾದ ಉದ್ಯಮದ ಪರಿಣತಿಯನ್ನು ಸೃಷ್ಟಿಸುವುದು. ೧೯೯೮ ರಲ್ಲಿ ಅವರು ವ್ಯವಸ್ಥಾಪಕರಾಗಿ ಬಡ್ತಿ ಹೊಂದಿದರು ಮತ್ತು ಐಸಿಐಸಿಐ ಬ್ಯಾಂಕಿನ ಪ್ರಮುಖ ಕ್ಲೈಂಟ್ ಗುಂಪಿನ ನೇತೃತ್ವ ವಹಿಸಿದರು, ಇವರ ನಾಯಕತ್ವದಲ್ಲಿ ಐಸಿಐಸಿಐ ಬ್ಯಾಂಕ್ ೨೦೦೦ನೇ ವರ್ಷದಲ್ಲಿ ಹೊಸದಾಗಿ ರಿಟೀಲ್ ಬ್ಯಾಂಕಿಂಗ್‍ನ್ನು ನಿರ್ಮಿಸಲು ಪ್ರಾರಂಭಿಸಿತು, ಇದು ತಂತ್ರಜ್ಞಾನ, ನವೀನತೆ, ಎಂಜಿನಿಯರಿಂಗ್, ವಿತರಣೆ ಮತ್ತು ವಿಸ್ತರಣೆಗೆ ಹೆಚ್ಚು ಒತ್ತನ್ನು ನೀಡಿತು. ಏಪ್ರಿಲ್ ೨೦೦೧ ರಲ್ಲಿ ಇವರು ಕಾರ್ಯನಿರ್ವಾಹಕ ನಿರ್ದೇಶಕಿಯಾಗಿ ಅಧಿಕಾರ ವಹಿಸಿಕೊಂಡರು, ೨೦೦೬ ರಲ್ಲಿ ಕೋಚಾರ್ ಐಸಿಐಸಿಐ ಬ್ಯಾಂಕ್‍ನ ಉಪ ವ್ಯವಸ್ಥಾಪಕಿಯಾಗಿ ನೇಮಕಗೊಂಡರು, ತದನಂತರ ೨೦೦೭ ರಿಂದ ೨೦೦೯ ರವರೆಗೆ ಇವರು ಬ್ಯಾಂಕಿನ ಮುಖ್ಯ ಹಣಕಾಸು ಅಧಿಕಾರಿ (ಸಿಎಫ್ಓ) ಮತ್ತು ಜಂಟಿ ವ್ಯವಸ್ಥಾಪಕ ನಿರ್ದೇಶಕರಾಗಿದ್ದರು. ೨೦೦೯ ರಿಂದ ಪ್ರಸ್ತುತ: ೨೦೦೯ ರಲ್ಲಿ ಕೋಚಾರ್ ಅವರನ್ನು ಬ್ಯಾಂಕ್‍ನ ವ್ಯವಸ್ಥಾಪಕ ನಿರ್ದೇಶಕಿ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ನೇಮಿಸಲಾಯಿತು, ಇದು ಭಾರತ ಮತ್ತು ವಿದೇಶಿ ಬ್ಯಾಂಕಿನ ವೈವಿಧ್ಯಮಯ ಕಾರ್ಯಾಚರಣೆಗಳಿಗೆ ಕಾರಣವಾಗಿದೆ. ಜೊತೆಗೆ ಇವರು ಬೇರೆ ಕಂಪನಿಗಳಲ್ಲಿಯೂ ಸಹ ನೇತೃರುತ್ವವನ್ನು ವಹಿಸಿದ್ದಾರೆ, ಇವರು "ಇಂಡಿಯಾ-ಜಪಾನ್ ಬಿಸಿನೆಸ್ ಲೀಡರ್ ಫೋರಮ್" ಮತ್ತು "ಯುಎಸ್-ಇಂಡಿಯಾ ಸಿ.ಇ.ಒ ಫೋರಮ್"ನ ಸದಸ್ಯರಾಗಿದ್ದಾರೆ. ಇವರು ೨೦೧೫-೧೬ರಲ್ಲಿ ಸರ್ಕಾರಿ ಸಂಸ್ಥೆಗಳ ಅಧಿಕಾರಿಗಳೊಂದಿಗೆ ೩೦ ದೇಶಗಳ ಸುಮಾರು ೭೦ ದೊಡ್ಡ ವಿಶ್ವದ ಹಣಕಾಸು ಸಂಸ್ಥೆಗಳ ವಾರ್ಷಿಕ ಸಮ್ಮೇಳನಕ್ಕೆ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳನ್ನು ಒಗ್ಗೂಡಿಸುವ "ಇಂಟರ್ನ್ಯಾಷನಲ್ ಮಾನಿಟರಿ ಕಾನ್ಫರೆನ್ಸ್"ನ ಅಧ್ಯಕ್ಷರಾಗಿದ್ದರು. ಇವರು "ಇಂಡಿಯನ್ ಬ್ಯಾಂಕ್ಸ್ ಅಸೋಸಿಯೇಷನ್"ನ ಉಪ ಅಧ್ಯಕ್ಷರಾಗಿದ್ದಾರೆ. ಕೋಚಾರ್‍ರವರು ಐ.ಐ.ಟಿ ವಡೋದರದಲ್ಲಿ ಗವರ್ನರ್ ಮಂಡಳಿಯ ಅಧ್ಯಕ್ಷರಾಗಿದ್ದಾರೆ. ಇವರು "ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಸೆಕ್ಯುರಿಟೀಸ್ ಮಾರ್ಕೆಟ್ಸ್ ಮತ್ತು ಇನ್ಸ್ಟಿಟ್ಯೂಟ್ ಆಫ್ ಇಂಟರ್ನ್ಯಾಷನಲ್ ಫೈನಾನ್ಸ್" ಮಂಡಳಿಗಳಲ್ಲಿದ್ದಾರೆ, ಇದರ ಜೊತೆಗೆ ಕೋಚಾರ್‍ರವರು ಪ್ರಧಾನ ಮಂತ್ರಿಗಳ ವ್ಯಾಪಾರ ಮತ್ತು ಕೈಗಾರಿಕಾ ಮಂಡಳಿಯ ಸದಸ್ಯರಾಗಿದ್ದಾರೆ. ಇವರು ೨೦೧೧ ರಲ್ಲಿ ವಿಶ್ವ ಆರ್ಥಿಕ ವೇದಿಕೆಯ ವಾರ್ಷಿಕ ಸಭೆಯ ಅಧ್ಯಕ್ಷರು ಸಹ ಆಗಿದ್ದರು. ಸಾಧನೆ: ಕೋಚಾರ್ ಅವರ ನಾಯಕತ್ವದಲ್ಲಿ, ಐಸಿಐಸಿಐ ಬ್ಯಾಂಕ್ ೨೦೦೧, ೨೦೦೩, ೨೦೦೪ ಮತ್ತು ೨೦೦೫ ರಲ್ಲಿ "ಅತ್ಯುತ್ತಮ ರಿಟೇಲ್ ಬ್ಯಾಂಕ್ ಇನ್ ಇಂಡಿಯಾ" ಪ್ರಶಸ್ತಿಯನ್ನು ಮತ್ತು ೨೦೦೨ ರಲ್ಲಿ "ಎಕ್ಸಲೆನ್ಸ್ ಇನ್ ರಿಟೇಲ್ ಬ್ಯಾಂಕಿಂಗ್ ಅವಾರ್ಡ್" ಅನ್ನು ಗೆದ್ದುಕೊಂಡಿತು, ಈ ಎರಡೂ ಪ್ರಶಸ್ತಿಗಳನ್ನು ಏಷಿಯನ್ ಬ್ಯಾಂಕ್‍ನಿಂದ ಸ್ವೀಕರಿಸಲಾಯಿತು. ಕೋಚರ್ ರವರು ೨೦೦೫ ರ ಬಿಸ್‍ನೆಸ್ ವುಮೆನ್ ಪ್ರಶಸ್ತಿಯನ್ನು, ದಿ ಎಕನಾಮಿಕ್ಸ್ ಟೈಮ್ಸ್ ನಿಂದ ಹಾಗೂ ೨೦೦೬ರ ಗ್ಲೋಬಲ್ ಅವಾರ್ಡ್ ಆದ ರೈಸಿಂಗ್ ಸ್ಟಾರ್ ಪ್ರಶಸ್ತಿಯನ್ನೂ ಅಂತಾರಾಷ್ಟ್ರೀಯ ರಿಟೇಲ್ ಬ್ಯಾಂಕರ್‍ನಿಂದ ಪಡೆದುಕೊಂಡರು. ಕೋಚರ್‍ರವರು ಫಾರ್ಚೂನ್ ಪಟ್ಟಿಯಲ್ಲಿ ೨೦೦೫ ರಿಂದಲೂ "ಮೋಸ್ಟ್ ಪವರ್‍ಫುಲ್ ವುಮೆನ್ ಇನ್ ಬಿಸಿನೆಸ್" ಆಗಿ ಕಾಣಿಸಿಕೊಂಡಿದ್ದಾರೆ. ಇವರು ೨೦೦೫ ರಲ್ಲಿ ಫಾರ್ಚೂನ್ ಪಟ್ಟಿಯಲ್ಲಿ ೪೭ನೇ ಸ್ಥಾನದಲ್ಲಿದ್ದರು, ೨೦೦೫ ರಿಂದ ಫೋರ್ಚೂನ್ನ "ಮೋಸ್ಟ್ ಪವರ್‍ಫುಲ್ ವುಮೆನ್ ಇನ್ ಬಿಸಿನೆಸ್" ಪಟ್ಟಿಯಲ್ಲಿ ಕೊಚಾರ್ ಸತತವಾಗಿ ಕಾಣಿಸಿಕೊಂಡಿದ್ದಾರೆ. ನಂತರ ೨೦೦೯ ರಲ್ಲಿ "ವಿಶ್ವದ ೧೦೦ ಅತ್ಯಂತ ಶಕ್ತಿಯುತ ಮಹಿಳಾ ಪಟ್ಟಿಯಲ್ಲಿ" ೨೦ ನೇ ಸ್ಥಾನವನ್ನು ಗಳಿಸಿಕೊಂಡರು. ೨೦೧೦ ರಲ್ಲಿ ಅವರು ಫೋರ್ಬ್ಸ್ ಪಟ್ಟಿಯಲ್ಲಿ ೯೨ನೇ ಸ್ಥಾನಕ್ಕೆ ಇಳಿದರು, ಆದರೆ ೨೦೧೧ ರಲ್ಲಿ ೪೩ನೇ ಸ್ಥಾನಕ್ಕೆ ಹಿಂದಿರುಗಿದರು, ೨೦೧೫ ರ ಹೊತ್ತಿಗೆ ಅವರು ಮತ್ತೆ ೩೫ನೇ ಸ್ಥಾನಕ್ಕೆ ಏರಿದರು. ೨೦೧೧ ರಲ್ಲಿ "ಬಿಸಿನೆಸ್ ಟುಡೇ" ಅವರ "ಅತ್ಯಂತ ಶಕ್ತಿಯುತ ಮಹಿಳಾ - ಹಾಲ್ ಆಫ್ ಫೇಮ್" ಪಟ್ಟಿಯಲ್ಲಿ ಕಾಣಿಸಿಕೊಂಡರು. ಬ್ಲೂಮ್ಬರ್ಗ್ ಮಾರ್ಕೆಟ್ಸ್ ಪಟ್ಟಿಯಲ್ಲಿನ "ಗ್ಲೋಬಲ್ ಫೈನಾನ್ಸಿನ ೫೦ ಅತ್ಯಂತ ಪ್ರಭಾವಿತ ವ್ಯಕ್ತಿ"ಗಳಲ್ಲಿ ಇವರೂ ಸಹ ಒಬ್ಬರಾಗಿದ್ದರು. ೨ನೇ ಜನವರಿ ೨೦೧೪ ರಲ್ಲಿ ಚಂದ ಕೋಚರ್‍ರವರು ಅಸ್ಸೋಚ್ ಲೇಡೀಸ್ ಲೀಗ್ನ ಮುಂಬೈ ವಿಮೆನ್ ಆಫ್ ದಿ ಡಿಕೇಡ್ ಅಚೀವರ್ಸ್ ಪ್ರಶಸ್ತಿಯನ್ನು ಪಡೆದುಕೊಂಡರು. ೨೦೧೧ ರಲ್ಲಿ ಏಷಿಯನ್ ಬಿಸಿನೆಸ್ ಲೀಡರ್ಶಿಪ್ ಫೋರಮ್ ಸಂಸ್ಥೆಯಿಂದ "ಎಬಿಎಲ್ಎಫ್ ವುಮೆನ್ ಆಫ಼್ ಪವರ್ ಅವಾರ್ಡನ್ನು" ಸ್ವೀಕರಿಸಿದರು. ೨೦೧೫ ರಲ್ಲಿ ಏಷಿಯಾ ಪೆಸಿಫಿಕ್ನಲ್ಲಿನ "೧೦೦ ಅತ್ಯಂತ ಶಕ್ತಿಯುತ ಮಹಿಳೆಯರ ಫಾರ್ಚೂನ್ ಪಟ್ಟಿ"ಯಲ್ಲಿ ಇವರು ಮೊದಲ ಸ್ಥಾನವನ್ನು ಗಳಿಸಿದರು.. ಆರ್ಥಿಕ ಬಿಕ್ಕಟ್ಟಿನ ಸಮಯದಲ್ಲಿ ಮತ್ತು ನಿಶ್ಚಿತ ವ್ಯಾಪಾರದ ಅಭ್ಯಾಸಗಳಿಗೆ ಬೆಂಬಲ ನೀಡುವಲ್ಲಿ ಪರಿಣಾಮಕಾರಿಯಾದ ಕೋಚಾರ್‍ರವರ ನಾಯಕತ್ವವನ್ನು ಗುರುತಿಸಿ ಇವರಿಗೆ ೨೦೧೪ ರಲ್ಲಿ ಕೆನಡಾದ "ಕಾರ್ಲೆಟನ್ ವಿಶ್ವವಿದ್ಯಾಲಯ"ವು ಡಾಕ್ಟರೇಟನ್ನು ನೀಡಿ ಗೌರವಿಸಿತು. ೨೦೧೧ ರಲ್ಲಿ ಭಾರತ ಸರ್ಕಾರವು ಇವರಿಗೆ ಅತ್ಯುನ್ನತ ನಾಗರಿಕ ಗೌರವಗಳಲ್ಲಿ ಒಂದಾದ ಪದ್ಮಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಿತು..