ಸದಸ್ಯ:Janisha fernandes/sandbox
ವಿಂಕ ಇದೊಂದು ಔಷಧಿ ಗಿಡ. ದಕ್ಷಿಣ ಅಮೆರಿಕದಲ್ಲಿ ಕಳೆ ಗಿಡ. ಇಲ್ಲಿಗೆ ಬಂದ ಹೊಸತರಲ್ಲೆನೋ ತೋಟದ ಸರಹದ್ದಿನಲ್ಲೇ ಬೆಳೆಯಿತು. ಆಕರ್ಷಕವಾದ ಬಿಳಿ ಅಥವಾ ಊದಾ ಹೂಗಳನ್ನು ತಳೆಯಿತು. ಅದರ ವನ್ಯ ಜಾಯಮಾನವನ್ನು ಇಲ್ಲಿಯು ಬೆಳೆಯಿತು.ಯಾರ ಸಹಾಯವು ಇಲ್ಲದೆಯೇ ಬೆಳೆಯ ಹರವು ವಿಸ್ತಾರವಾಯಿತು. ಹುಲ್ಲು ಕೂಡ ಬೆಳೆಯದಂಥ ಬರಡು ಭೂಮಿಯನ್ನು ಮನೆಯಾಗಿಸಿಕೊಂಡಿತು. ಹೀಗೆ ಕೇವಲ ೨೦೦-೩೦೦ ವರ್ಷಗಳಲ್ಲಿ ಭಾರತ ಪೂರಾಹರಡಿಕೊಂಡಿತು. ಈಗ ಕಳೆಯಾಗಿದೆ,ಕುಪ್ಪೆಯಾಗಿದೆ. ಒಂದುವರೆ-ಎರಡವರೆ ಅಡಿ ಎತ್ತರಕ್ಕೆ ಬೆಳೆಯುವ ಪೊದರು ಗಿಡ, ವಿಂಕ. ಹೊಳೆ ಹೊಳೆಯುವ ಹಸುರೆಲೆಗಳನ್ನು ಕಳೆದು ಬೆಂಗಾಡಿನ ಏಕೀಯತೆಯನ್ನು ಒಡೆಯುತ್ತದೆ. ಎರಡು-ಮೂರು ವರ್ಷಗಳು ಬೆಳೆದು ಸಾಯುತ್ತದೆ. ಇದರಲ್ಲಿ ಬಿಳಿಯ ಅಂಟು ಹಾಲು ಸುರಿಯುತ್ತದೆ.ಆ ಹಾಲು ವಿಷಪೂರಿತವಾಗಿರುತ್ತದೆ. ಭಾರತೀಯತೆಯಲ್ಲಿ ಈ ಗಿಡ ತೋಟದಲ್ಲಿ ಕಾಣುವುದಿಲ್ಲ.ದೇವರ ಪೂಜೆಗೆ ಅರ್ಹವಲ್ಲದ ಹೂ,ಮುಡಿಯಲು ಯೊಗ್ಯವಲ್ಲದ ಹೂ ಇದಾಗಿದೆ. ಯಾರಿಗೂ ಬೇಡವಾದ ಈ ಗಿಡಕ್ಕೆ ಬ್ಗಾರತದ ಭೂ ವಾಯುಗುಣ ಅನೂಕುಲವಾಗಿದೆ. ಭಾರತೀಯ ಭಾಷೆಗಳಲ್ಲಿ ಈ ಗಿಡಕ್ಕೆ ಹೆಸರಿನ ಅಭಾವ ಕಾಣುತ್ತದೆ.