ಸದಸ್ಯ:Jaison nazareth/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಬೇಕಲ ರಾಮನಾಯಕ

ಕಾಸರಗೋಡಿನ ಖ್ಯಾತನಾಮರಾದ ಕನ್ನಡ ಸಾಹಿತಿಗಳಲ್ಲಿ ಒಬ್ಬರು ದಿ| ಬೇಕಲ ರಾಮನಾಯಕರು. ಕಾಸರಗೋಡು ಜಿಲ್ಲೆಯ ಐತಿಹಾಸಿಕ ಕೇಂದ್ರಗಳಲ್ಲಿ ಒಂದಾದ 'ಬೇಕಲ'ದಲ್ಲಿ ೨೬-೧೦-೧೯೦೨ರಂದು ಸಿದ್ಧಯ್ಯ - ಮಂಜಮ್ಮ ದಂಪತಿಗಳ ಮಗನಾಗಿ ಜನಿಸಿದ ಇವರ ವಿಧ್ಯಾಭ್ಯಾಸವು ಮಂಗಳೂರಿನ ಗಣಪತಿ ಹೈಸ್ಕೂಲಿನಲ್ಲಿ ಜರಗಿತು.೧೯೧೭ರಲ್ಲಿ ಎಸ್. ಎಸ್. ಎಲ್. ಸಿ. ತೇರ್ಗಡೆ ಹೊಂದಿದ ನಾಯಕರು ಮುಂದೆ ಸುಮಾರು ಐದು ವರ್ಷಗಳ ಕಾಲ ಬೇಕಲದಲ್ಲೇ ಇದ್ದು ಪರಿಸರದ ಕೋಟೆಗಳನ್ನೂ ವೀರಗಲ್ಲು, ಮಾಸ್ತಿಗಲ್ಲು, ಶಾಸನಗಳನ್ನು ಆಸಕ್ತಿಯಿಂದ ಅಭ್ಯಾಸ ಮಾಡಿದರು. ೧೯೨೨ರಲ್ಲಿ ಮಂಗಳೂರಿನ ಸರ್ಕಾರಿ ಕಾಲೇಜಿನಲ್ಲಿ ಜೂನಿಯರ್ ಇಂಟರ್ ಮೀಡಿಯೆಟ್ ತರಗತಿಗೆ ಸೇರಿಕೊಂಡಿರಾದರೂ ವ್ಯಾಸಂಗವನ್ನು ಮುಂದುವರಿಸುವಲ್ಲಿ ಅಸಮರ್ಥರಾದರು. ೧೯೨೭ರಲ್ಲಿ‌ ಸೆಕೆಂಡರಿ ಟೀಚರ್ಸ್ ಟ್ರೇನಿಂಗನ್ನು ಯಶಸ್ವಿಯಾಗಿ ಪೂರೈಸಿದ ಬೇಕಲರು ಮುಂದೆ ನಾಲ್ಕೈದು ವರ್ಷಗಳ ಕಾಲ ಹಂಗಾಮಿ ಅಧ್ಯಾಪಕನಾಗಿ ಗ್ರಂಥಪಾಲಕನಾಗಿ ಕಾರ್ಕಳ, ಮಂಗಳೂರು, ಕುಂಬಳೆ ಮುಂತಾದೆಡೆಗಳಲ್ಲಿ ಸೇವೆ ಸಲ್ಲಿಸಿದರು. ೧೯೩೩ ರಿಂದ ೧೯೬೨ರ‌ ವರೆಗೆ ಕಾಸರಗೋಡಿನ ಬಿ. ಇ. ಎಂ. ಹೈಸ್ಕೂಲಿನಲ್ಲಿ ಹಿರಿಯ ಪ್ರಾಥಮಿಕ ವಿಭಾಗದ ಅಧ್ಯಾಪಕನಾಗಿ ನಿಷ್ಠಯಿಂದ ದುಡಿದರು. ಸತತಾಧ್ಯಯನ ಶೀಲರಾದ ಅವರು ನಡುವೆ ಮದ್ರಾಸು ವಿಶ್ವವಿದ್ಯಾಲಯದ 'ವಿದ್ವಾನ್' ಪರೀಕ್ಷೆಗೆ ಖಾಸಗಿ ವಿದ್ಯಾರ್ಥಿಯಾಗಿ ಬರೆದರು.ಅಧ್ಯಯನ ತನ್ನ ಮರದ ನಾಯಕರು ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಅದ್ಯಪಕರಾಗಿದರು .೧೯೨೩ ರಲ್ಲಿ ದೇವಕಿ ಅಮ್ ನೊಂದಿಗೆ ಅವರ ವಿವಾಹವಾಗಿತ್.೩ ಗ೦ಡು ಮಕ್ಕಳು ೨ ಹೆಣ್ಣು ಮಕ್ಕಳುಮಕ್ಕಳನ್ನು ಪಡೆದ ಈ ದಂಪತಿಗಳದು ಸ೦ತ್ಪಪ ಹಾಗೂ ಕುಟುಂಬವಾಗಿತು.

೧೯೬೨ ರಲ್ಲಿ ಅದ್ಯಪಕ ಹುದೆಯಿ೦ದ ನಿವ್ರತರಾದ ಇವರು ೨೧-೧೧-೧೯೬೯ ರಂದು ತನ್ನ ೨೦ ನೆ ಹರದಲಿ ಇಹಲೋಕವಇಹಲೋಕದ ಕಣ್ಮರೆಯಾಕಣ್ಮರೆಯಾದರು.ಇವರು ಕಾಸರಗೋಡಿಗೆ ಸಂಬಂಧಿಸಿದ ಅಂಥ ಐತಿಹ್ಯಗಳು ಸಂಗಹಿಸಿ ಕತೆಗಳು ಹಣದಿದಾರೆ.ಕೊಟೆಯ ಕತೆಗಳು,ಬಾಳಿದ ಹೆಸರು ಮತ್ತು ತೆಂಕನಾಡ ಐತಿಹ್ಯಗಳು ಆರು ಕಥಗುಚಗಳಲಿ ರಾಮನಾಯಕರ ಐತಿಹ್ಯ ಕತೆಗಳು ಸಂಕಲಿತವಾಗಿದೆ. ಬೇಕಲ ರಾಮನಾಯಕರು 'ರಾಮಕ್ಷತ್ರಿಯ' ಎಂಬ ಸಮುದಾಯಕ್ಕೆ ಸೇರಿದವರು. ಇಕ್ಕೇರಿ ನಾಯಕರ ಕಾಲದಲ್ಲಿ ಯುದ್ಧಗಳಲ್ಲಿ ಕಾದುವುದಕ್ಕೂ ಗೆದ್ದ ಕೋಟೆಗಳನ್ನು ಸಾಯುವುದಕ್ಕೂ ರಾಮಕ್ಷತ್ರಿಯರನ್ನೂ ಇಲ್ಲಿಗೆ ಕರೆತರಲಾಯಿತು ಎಂಬುದು ಪ್ರತೀತಿ.ರಾಮಕ್ಷತ್ರಿಯರಿಗೂ ರಾಮಕ್ಷತ್ರಿಯರಿಗೂಭಾಜ್ಯವಾದ  ನಂಟು ಇದೆ ಎಂಬುದರಲ್ಲಿ ಎರಡು ಮಾತಿಲ್ಲ ಹಾಗೆ, ಸಹಜವಾಗಿಯೇ ರಾಮನಾಯಕರಿಗೆ ಕೋಟೆಗಳ ಬಗ್ಗೆ ವಿಶೇಷವಾದ ಆಸಕ್ತಿಯಿತ್ತು. ಅವರು ಹುಟ್ಟಿ ಬೆಳೆದ ಪರಿಸರವು ಕೋಟೆಗಳ ನಾಡಾಗಿತ್ತು‌. ಕೋಟೆಗಳ ಇತಿಹಾಸ, ಜಾನಪದ, ವೀರಯೋಧರ ಕುರಿತಾದ ಐತಿಹ್ಯಗಳು ಅವರ ಆಸಕ್ತಿಯನ್ನು ಉದ್ದೀಪ್ತಗೊಳಿಸಿದವು. ಎಸ್. ಎಸ್. ಎಲ್. ಸಿ. ಪಾಸಾಗಿ ಮನೆಯಲ್ಲೇ ಉಳಿದ ಆ ನಾಲ್ಕು ವರ್ಷಗಳಲ್ಲಿ ಕೋಟೆಗಳು, ವೀರಗಲ್ಲು, ಮಾಸ್ತಿಗಲ್ಲುಗಳು, ಶಾಸನಗಳು, ಜನಪದ ಗೀತೆಗಳು ಜನಪದ ಕತೆಗಳು ಮೊದಲಾದವುಗಳ ಬಗ್ಗೆ ಅವರು ಸ್ವತಂತ್ರವಾಗಿ ಚಿಂತನೆ ನಡೆಸಿರಬೇಕು. ಇದರ ಸತ್ಫಲವಾಗಿಯೇ ಮೇಲಿನ ಕೃತಿಗಳು ರಚಿತವಾಗಿರ ಬೇಕೆಂದು ಊಹಿಸಬಹುದಾಗಿದೆ.

ರಾಮನಾಯಕರು ರಾಮನಾಯಕರಗಿಯೇ ಬರೆದ ಕವನಗಳ ಸಂಕಲನ 'ಸಚಿತ್ರ ಬಾಲಗೀತೆ'. ತಮ್ಮ ರಚನೆಗಳೊಂದಿಗೆ ಅನ್ಯರ ರಚನೆಗಳನ್ನೂ ಇದರಲ್ಲಿ ಸೇರಿಸಿಕೊಂಡಿದ್ದಾರೆ. ದೀರ್ಘಕಾಲ ಎಳೆಯ ಮಕ್ಕಳ ಮೆಚ್ಚಿನ ಅಧ್ಯಾಪಕರಾಗಿದ್ದ ಅವರಿಂದ ಸಹಜವಾಗಿಯೇ ಮಕ್ಕಳ ಕವನಗಳು ಸೃಷ್ಟಿಗೊಂಡಿವೆ. ಅಂಥ ಕವನಗಳಲ್ಲಿ ಅಭಿನಯ ಗೀತೆಗಳಿವೆ; ಹಳೆಯ ಹಾಡಿನ ಧಾಟಿಯ ಪದ್ಯಗಳಿವೆ. ಗಾಳಿಪಟ, ಚೆಂಡು, ಬುಗರಿ ಮುಂತಾದ ಮಕ್ಕಳ ಲೋಕದ ವಸ್ತುಗಳನ್ನುಳ್ಳ ಪದ್ಯಗಳು ತುಂಬ ಸೊಗಸಾಗಿ ಬಂದಿರುವುದನ್ನು ಕಾಣಬಹುದಾಗಿದೆ.

‌‌ ಕಾಸರಗೋಡು, ಕುಂಬಳೆ ಸೀಮೆ, ರಾಮಕ್ಷತ್ರಿಯ ಜನಾಂಗದ ಇತಿವೃತ್ತ, ಇಕ್ಕೇರಿ ನಾಯಕರ ಆಳಿಕೆ, ಬೇಕಲ ಕೋಟೆ ಮುಂತಾದವುಗಳ ಕುರಿತು ರಾಮನಾಯಕರು ಸಂಶೋಧನಾತ್ಮಕ ಲೇಖನಗಳನ್ನು ಬರೆದಿದ್ದಾರೆ. ಅವರು ಸಂಗ್ರಹಿಸಿದ ಮಾಹಿತಿಗಳು, ವಿಶ್ಲೇಷಿಸಿದ ವಿಧಾನ, ಕೈಗೊಂಡ ತೀರ್ಮಾನ ಎಲ್ಲವೂ ಸಮರ್ಥನೀಯವಾಗಿವೆ. ನಮ್ಮ ಪ್ರಾಚೀನ ಸಹಕಾರ ಸಂಘಗಳ ಬಗ್ಗೆ ವೈಚಾರಿಕ ಲೇಖನವೋಂದನ್ನು ಪ್ರಕಟಿಸಿದ್ದಾರೆ.

ರಾಮನಾಯಕರು ಊರೆಲ್ಲ ತಿರುಗಾಡಿ ಕೋಟೆ ಸಮುದಾಯದಲ್ಲಿ ಪ್ರಚಲಿತವಿದ್ದ ಹಲವಾರು ಜನಪದ ಹಾಡುಗಳನ್ನು ಸಂಗ್ರಹಿಸಿ ವಿಶ್ಲೇಷಿಸಿದ್ದಾರೆ. ಸುಬ್ಬಪ್ನ ಹಾಡು, ತುಂಬೆ ಹಾಡು, ಗಿಂಡಿ ಪೂಜೆ, ಕೌಲಿ ಹಾಡು ಮುಂತಾದವು ಅವುಗಳಲ್ಲಿ ಮುಖ್ಯವಾದುವು 'ತುಳುವಾಲ ಬಲಿಯೇಂದ್ರ' ಎಂಬ ತುಳು 'ಸಂಧಿ'ಯ ಕತೆಯನ್ನು ಅವರು ಸಂಗ್ರಹಿಸಿದ್ದಾರೆ.

'ವಾಸಿಷ್ಠ ರಾಮಾಯಣ' ಎಂಬ ಅಪೂರ್ವ ಸಾಂಗತ್ಯ ಕಾವ್ಯವನ್ನು ಸಂಪಾದಿಸಿ ಪ್ರಕಟಿಸುವ ಮೂಲಕ ಗ್ರಂಥ ಸಂಪಾದನೆಯ ಕ್ಷೇತ್ರದಲ್ಲಿ ತನಗಿರುವ ಆಸಕ್ತಿಯನ್ನು ಪ್ರಕಟಿಸಿದ್ದಾರೆ.

ಬೇಕಲ ರಾಮನಾಯಕರು ಒಬ್ಬ ಶ್ರೇಷ್ಠ ಅಧ್ಯಾಪಕರಾಗಿ ಮಕ್ಕಳಲ್ಲಿ ಉತ್ತಮ ಮೌಲ್ಯಗಳನ್ನು ತುಂಬಿದವರು. ತನಗಿರುವ ಸವಲತ್ತುಗಳು ಸೀಮಿತವಾಗಿದ್ದರೂ ಪರಿಶ್ರಮದಿಂದ ಸಾಹಿತ್ಯ ಸಂಗ್ರಹ ಮತ್ತು ಬರವಣಿಗೆಯ ಮೂಲಕ ಕನ್ನಡ ನಾಡು ನುಡಿಯ ಸೇವೆ ಮಾಡಿದವರು. ಕಾಸರಗೋಡಿನಲ್ಲಿ ಕನ್ನಡ ಜಾನಪದ ಅಧ್ಯಯನ ಮಾಡಿದ ವಿದ್ವಾಂಸರ ಸಾಲಿನಲ್ಲಿ ಇವರ ಹೆಸರು ಮೊತ್ತಮೊದಲಿಗೆ ಬರುತ್ತದೆ ಎಂಬುದು ಗಮನಾರ್ಹವಾದುದು.