ಸದಸ್ಯ:Jagapai/ನನ್ನ ಪ್ರಯೋಗಪುಟ2

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಶ್ರೀ ಬೈಜನಾಥ್ ಸಿಂಗ್[ಬದಲಾಯಿಸಿ]

ಭಾರತದಲ್ಲಿ ಶಾಂತಿಗಾಗಿ ಕೊಡಮಾಡುವ ಅತ್ಯುನ್ನತ ಶೌರ್ಯ ಪ್ರಶಸ್ತಿಯಾದ ಅಶೋಕಚಕ್ರವನ್ನು ಮರಣೋತ್ತರವಾಗಿ ಪಡೆದವರು


ಜನನ: ಚಹಿಪುರ ಗ್ರಾಮ, ಭಿಂಡ್ ಜಿಲ್ಲೆ, ಮಧ್ಯಪ್ರದೇಶ


ಮರಣ: ಅಕ್ಟೋಬರ್ ೨೨, ೧೯೬೯ ಚಹಿಪುರ ಗ್ರಾಮ, ಭಿಂಡ್ ಜಿಲ್ಲೆ, ಮಧ್ಯಪ್ರದೇಶ ನಾಗರಿಕ: ಭಾರತೀಯ ರಾಷ್ಟ್ರೀಯತೆ: ಭಾರತ


ತಂದೆ: ಶ್ರೀರೂಪ್ ಸಿಂಗ್


ಶ್ರೀರೂಪ್ ಸಿಂಗ್ ರವರ ಮಗನಾಗಿ ಚಹಿಪುರ ಗ್ರಾಮ, ಭಿಂಡ್ ಜಿಲ್ಲೆ, ಮಧ್ಯಪ್ರದೇಶದಲ್ಲಿ ಜನಿಸಿದ ಶ್ರೀಬೈಜನಾಥ್ ಸಿಂಗ್ ಸೈನ್ಯಕ್ಕೆ ಸೇರುವ ಪರಂಪರೆ ಇರುವ ಕುಟುಂಬದಲ್ಲಿ ಜನಿಸಿದರು. ಭಿಂಡ್ ಜಿಲ್ಲೆಯಲ್ಲಿರುವ ಬೈಜನಾಥ್ ಸಿಂಗ್ ರವರ ಗ್ರಾಮವಿರುವ ಪ್ರದೇಶವು ದರೋಡೆಕೋರರಿಗಾಗಿ ಕುಖ್ಯಾತಿ ಪಡೆದಿತ್ತು. ಕೆಲವೇ ಕೆಲವು ಸಂಖ್ಯೆಯಲ್ಲಿರುವ ಈ ದರೋಡೆಕೋರರು ಇಡೀ ಗ್ರಾಮವನ್ನು ಲೂಟಿಮಾಡಿ ಹೋಗುತ್ತಿರುವುದು ಬೈಜನಾಥ್ ಗೆ ಬಹಳ ಕಳವಳಕ್ಕೀಡುಮಾಡಿತ್ತು. ತಾನಿರುವ ಪ್ರದೇಶವನ್ನು ಈ ದರೋಡೆಕೋರರಿಂದ ಮುಕ್ತಗೊಳಿಸಲು ಮತ್ತು ಅವರು ಇನ್ನೊಮ್ಮೆ ಇಂತಹ ಕೆಲಸಮಾಡಲು ಹಿಂಜರಿಯಲು ಬೈಜನಾಥ ರವರು ತೋರಿದ ಸಾಹಸ ಅವರನ್ನು ಮಾದರಿ ಸೈನಿಕನಾಗಿಸಿತು. ದರೋಡೆಕೋರರು ಆಗಾಗ ಬಂದು ಕೆಲವರನ್ನುಕನಿಕರವಿಲ್ಲದೆ ಕೊಂದು ಲೂಟಿಮಾಡಿ ಹೋಗುತ್ತಿದ್ದರು. ಹೀಗಿರುವಾಗ ಒಮ್ಮೆ ಓಕ್ಟೋಬರ್ ೨೨, ೧೯೬೯ರಂದು ದರೋಡೆಕೋರರು ಬಂದು ಮಲ್ಪುರಾ ಮತ್ತು ರಾವುಳಿ ಗ್ರಾಮದವರಾದ ಶ್ರೀ ಮೊಹರ್ ಸಿಂಗ್ ಮತ್ತು ಶ್ರೀ ಉದಯ್ ಸಿಂಗ್ ಎಂಬವರನ್ನು ಕೊಂದರು. ಮರಳುವಾಗ ಇನ್ನೊಬ್ಬ ಗ್ರಾಮಸ್ತನನ್ನೂ ಕೊಂದರು. ಚಹಿಪುರ್ ಗ್ರಾಮದವರಾದ ಬೈಜನಾಥ್ ಸಿಂಗ್ ರಿಗೂ ಗುಂಡಿನ ಶಬ್ದ ಕೇಳಿಸಿತು. ಆ ಕೂಡಲೆ ತನ್ನ ಕೋವಿಯನ್ನು ಹಿಡಿದು ದರೋಡೆಕೋರರೊಂದಿಗೆ ಯುದ್ಧಮಾಡಲು ತೆರಳಿದನು. ದರೋಡೆಕೋರರ ಸಂಖ್ಯೆ ಜಾಸ್ತಿ ಇದೆ ಎಂದು ಗ್ರಾಮಸ್ತರು ಆತನನ್ನು ತಡೆಯಲು ಪ್ರಯತ್ನಿಸಿದರೂ ಲೆಕ್ಕಿಸದೆ ಅವರನ್ನು ಅಟ್ಟಿಸಿಕೊಂಡು ಹೋದನು. ಸುಮಾರು ೧ ಕಿ.ಮೀ ದೂರದಲ್ಲಿ ಶತ್ರುಗಳನ್ನು ಅವನು ಕಂಡನು ಮತ್ತು ಕೂಡಲೆ ಗುಂಡನ್ನು ಅವರ ಮೇಲೆ ಚಲಾಯಿಸಿದನು. ಅವರೂ ಕೂಡ ಆತನ ಮೇಲೆ ಪ್ರತಿದಾಳಿ ಮಾಡಿದರು. ಸುಮಾರು ೩೦ ನಿಮಿಷಗಳಕಾಲ ಯುದ್ಧನಡೆಯಿತು. ಬೈಜನಾಥ್ ಸಿಂಗ್ ಒಬ್ಬನೇ ಅವರೊಡನೆ ಕಾದಾಡುತ್ತಿದ್ದನು. ದರೋಡೆಕೋರರು ಆತನನ್ನು ಸುತ್ತುವರೆಯಲು ತೊಡಗಿದರು. ಅಪಾಯವನ್ನರಿತ ಬೈಜನಾಥ್ ಸಿಂಗ್ ಸುರಕ್ಷಿತ ಸ್ಥಳಕ್ಕೆ ಹೋಗಲು ಪ್ರಯತ್ನಿಸುತ್ತಿರುವಾಗಲೇ ದರೋಡೆಕೋರರ ಗುಂಡಿಗೆ ಹುತಾತ್ಮನಾದನು.


ಆತನ ಅಗಾಧವಾದ ಶೌರ್ಯವನ್ನು ಪರಿಗಣಿಸಿ ಭಾರತ ಸರಕಾರವು ಮರಣೋತ್ತರವಾಗಿ ಅಶೋಕ ಚಕ್ರ[[೧]]ವಿತ್ತು ಗೌರವಿಸಿತು.

ಉಲ್ಲೇಖಗಳು[ಬದಲಾಯಿಸಿ]

[೧]

  1. https://gallantryawards.gov.in/Awardee/baij-nath-singh