ಸದಸ್ಯ:Jafer sadik/ನನ್ನ ಪ್ರಯೋಗಪುಟ
ಗೋಚರ
ಸುರಹೊನ್ನೆ ಪಿನ್ನೆಕಾಯಿ, ಸುಡಾಬು, ಹೂ ಹೊನ್ನೆ ಎಂಬ ಹೆಸರಿನಿಂದಲೂ ಕರೆಯಲ್ಪಡುವ "ಸುರಹೊನ್ನೆ" ಮರ ನಿತ್ಯ ಹರಿದ್ವರ್ಣದ ಕಾಡುಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಅದಲ್ಲದೆ ಕರ್ನಾಟಕದ ಕರಾವಳಿ ಪ್ರದೇಶದಲ್ಲಿ ಜಂಬ್ಬಿಟ್ಟಿಗೆ ಮಣ್ಣಿನಲ್ಲಿಯು ಕಂಡುಬರುತ್ತದೆ. ಈ ಮರದ ವಿಶೇಷತೆ ಎಂದರೆ ಕಾಂಡ ಕುಳ್ಳಗೆ, ದಪ್ಪಗಿದ್ದು ಅನೇಕ ವೇಳೆ ಅಂಕು- ಡೊಂಕಾಗಿರುತ್ತದೆ. ಹಚ್ಚಹಸಿರಿನ ಹೊಳಪಿನ ಎಳೆಗಳು ನೋಡಲು ಆಕರ್ಷನೀಯ. ಗಿಡದ ಎಳೆ,ಹೂ ಗಳನ್ನು ಅಲಂಕಾರಕ್ಕೆ ಹೆಚ್ಚಾಗಿ ಬಳಸುತ್ತಾರೆ. ಬಿಳಿಬಣ್ಣದ ಹೂವುಗಳು ಚಳಿಗಾಳದಲ್ಲಿ ಅರಳಿದರೆ, ಹಸಿರು ಹಳದಿ ಬಣ್ಣಗಳು ಹೂ ಮಾರ್ಚ್ ತಿಂಗಳ ಸುಮಾರಿಗೆ ಅರಳುತ್ತದೆ. ಹಣ್ಣುಗಳನ್ನು ಸಾಮಾನ್ಯವಾಗಿ ಬಾವಲಿ ತಿನ್ನುವುದು, ಮತ್ತು ಅಲ್ಲಲ್ಲಿ ತಿಂದು ಹಾಕುವುದರಿಂದ ಬೀಜ ಬಿತ್ತಲು ಸಹಾಯವಾಗುವುದು. ಹೆಚ್ಚು ಗಾಳಿ ಇದ್ದಲ್ಲಿ ಮರ ಮುರಿದು ಬೀಳುವ ಸಂದರ್ಭಗಳು ಬಹಳಷ್ಟಿದೆ. ಬೀಜದ ಜೀವಶಕ್ತಿ ಹೆಚ್ಚುಕಾಲವಿಲ್ಲದಿರುದರಿಂದ, ಬೆಳೆದ ಕೂಡಲೇ ಹಣ್ಣುಗಳಿಂದ ಬಿಡಿಸಿ ಬೀಜಬಿತ್ತಿ ಕೃತಕ ಪುನರುತ್ಪತಿ ಆಗುತ್ತದೆ. ಮರದ ದಾರುವು ಇನ್ನಷ್ಟು ಸಹಕಾರಿ ಗೃಹನಿರ್ಮಾಣ, ಕೃಷಿ ಉಪಕರಣಗಳಿಗೆ ಬಳಕೆಯಾಗುತ್ತದೆ. ಇನ್ನೂ ಬೀಜದಿಂದ ಬರುವ ಎಣ್ಣೆ, ಬೆಂಕಿ ಉರಿಸಲು, ದೋಣಿಗಳಿಗೆ ಹಚ್ಚಲು ಬಳಸುತ್ತಾರೆ. ಒಟ್ಟಾರೆಯಾಗಿ ಈ ಮರ ಸಾಕಷ್ಟು ಉಪಯುಕ್ತವಾಗಿದೆ.