ಸದಸ್ಯ:J G NAGRAJ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಜೆ ಜಿ ನಾಗರಾಜ್ ಫೆಬ್ರವರಿ 13 ೧೯೬೯ ರಲ್ಲಿ ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲ್ಲೂಕಿನ ಬೇತಮಂಗಳದಲ್ಲಿ ಜನಿಸಿದರು. ತಂದೆ ಗೋಪಾಲಕೃಷ್ಣ ಶೆಟ್ಟಿ ,ತಾಯಿ ಜೆಎಂ ರಾಜಮ್ಮ. ಇವರು ಶಿಕ್ಷಣವನ್ನು ಸರ್ಕಾರಿ ಮಾದರಿ ಹಿರಿಯಪ್ರಾಥಮಿಕ ಶಾಲೆ ಬೇತಮಂಗಲ ದಲ್ಲಿ ಅಧ್ಯಯನ ಮಾಡಿರುತ್ತಾರೆ. ಆನಂತರ ಬೆಂಗಳೂರಿನ ಜನೋಪಕಾರಿ ಶ್ರೀ ದೊಡ್ಡಣ್ಣ ಶೆಟ್ಟರ ಆಶ್ರಮದಲ್ಲಿ 8ನೇ ತರಗತಿಯಿಂದ ಎಂ. ಎ ವರೆಗೂ ಶಿಕ್ಷಣವನ್ನು ಪಡೆಯುತ್ತಾರೆ. ತದನಂತರದಲ್ಲಿ ಬೆಂಗಳೂರಿನ ಜ್ಞಾನಭಾರತಿ ವಿಶ್ವವಿದ್ಯಾಲಯದಲ್ಲಿ ಕನ್ನಡ ಎಂಎಂ ಅಧ್ಯಯನ ಮಾಡಿರುತ್ತಾರೆ. ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕರಾಗಿ ೧೯೯೭ ಸೇವೆ ಆರಂಭಿಸುತ್ತಾರೆ. ಜೆ.ಜಿ.ಎನ್. ಎಂದು ಖ್ಯಾತಿ ಪಡೆದಿರುವ ಇವರು ಸಾವಿರಾರು ವಿದ್ಯಾರ್ಥಿಗಳ ಮಾರ್ಗದರ್ಶಕರಾಗಿದ್ದಾರೆ. ೨೦೧೨-೨೦೧೫ ವರೆಗೂ ಕೋಲಾರ ಜಿಲ್ಲಾಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಸಾಹಿತ್ಯದ ಕೆಲಸಗಳನ್ನು ಅಭೂತಪೂರ್ವವಾಗಿ ನಿರ್ವಹಿಸಿದ್ದಾರೆ. ಸಂಸದೀಯ ಪಟು ಎಂ. ವಿ. ಕೃಷ್ಣಪ್ಪ ಬದುಕು ಬರಹ, ಸಾಮಾನ್ಯ ಜ್ಞಾನ, ವಿದ್ಯಾರ್ಥಿಗಳ ಕೈಪಿಡಿ, (ಸಂತ ಶಿಶುನಾಳ ಶರೀಫ ಮತ್ತು ಇತರೆ ಅನುಭವಿಗಳು, ಸಂಪಾದಕರು)ಅವನಿ ಸಾಂಸ್ಕೃತಿಕ ಅಧ್ಯಯನ, ಅಂಬೇಡ್ಕರ್ ಮತ್ತು ನಾವು, ಇದು ತಮಾಷೆಯಲ್ಲೋ ಅಣ್ಣ(ನಾಟಕ ಸಂವಿಧಾನವನ್ನು ಕುರಿತು) ರಚಿಸಿ ಈಗ ಕೋಲಾರ ಜಿಲ್ಲಾ ಸಾಹಿತಿಗಳ ಕೋಶ (೪೦೦-೨೦೨೦) ಹೊರತರುತ್ತಿದ್ದಾರೆ. ಕರ್ನಾಟಕ ರಾಜ್ಯ ಪದವಿ ಪೂರ್ವ ಕಾಲೇಜು ಉಪನ್ಯಾಸಕರ ಕೋಲಾರ ಜಿಲ್ಲಾ ಕಾರ್ಯಧ್ಯಕ್ಷರಾಗಿ, ಕನ್ನಡ ಉಪನ್ಯಾಸಕರ ಜಿಲ್ಲಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸಾಹಿತ್ಯದ ಚಟುವಟಿಕೆಗಳನ್ನು ನಿರಂತರವಾಗಿ ತೊಡಗಿಸಿಕೊಂಡಿರುವ ಇವರು ಜಿಲ್ಲಾಮಟ್ಟದ, ರಾಜ್ಯಮಟ್ಟದ ,ಅಂತರಾಷ್ಟ್ರೀಯ ಮಟ್ಟದ ಸಾಹಿತ್ಯದ ಕಾರ್ಯಕ್ರಮಗಳನ್ನು ರೂಪಿಸುತ್ತ ಇರುತ್ತಾರೆ. 'ಸಂವಿಧಾನ ಓದು ಅಭಿಯಾನ'ದ ಜಿಲ್ಲಾ ಸಂಚಾಲಕರಾಗಿ ಸಂವಿಧಾನದ ಅರಿವನ್ನು ಶಾಲಾ-ಕಾಲೇಜುಗಳಲ್ಲಿ ಸಂಘ-ಸಂಸ್ಥೆಗಳಲ್ಲಿ ಪ್ರಚುರ ಪಡಿಸುತ್ತಿದ್ದಾರೆ. ಶಾಲಾ-ಕಾಲೇಜುಗಳಲ್ಲಿ ಸಂಘ-ಸಂಸ್ಥೆಗಳಲ್ಲಿ ಸಾವಿರಾರು ಉಪನ್ಯಾಸಗಳನ್ನು ನೀಡಿರುವ ಇವರನ್ನು ಗುರುತಿಸಿ ರಾಜ್ಯಮಟ್ಟದ ಕುದ್ಮಲ್ ರಂಗರಾವ್ ಪ್ರಶಸ್ತಿ ,ಶ್ರೇಷ್ಠಉಪನ್ಯಾಸಕ , ಗುರುಶ್ರೇಷ್ಠ, ಅನಿಕೇತನ ಪ್ರಶಸ್ತಿಗಳನ್ನು ನೀಡಿ ಗೌರವಿಸಿರುತ್ತಾರೆ. 2015ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯ ಕಾರ್ಯಕ್ರಮವಾದ 'ಗಡಿ ಸಮಾವೇಶ'ವನ್ನು ಯಶಸ್ವಿಯಾಗಿ ಮುನ್ನಡೆಸಿದ್ದು ಹೆಗ್ಗಳಿಕೆಯಾಗಿದೆ. ಕೋಲಾರ ಜಿಲ್ಲೆಯಲ್ಲಿ ಮೊಟ್ಟಮೊದಲ ಬಾರಿಗೆ 17 ಸಾಹಿತ್ಯಸಮ್ಮೇಳನಗಳನ್ನು ನಡೆಸಿದ್ದರಿಂದ ಇವರನ್ನು 'ಸಮ್ಮೇಳನಗಳ ಸರದಾರ' ಎಂದು ಸಾಹಿತ್ಯಪ್ರಿಯರು, ಕನ್ನಡ ಸಾಹಿತ್ಯ ಪರಿಷತ್ತಿನ ಅಭಿಮಾನಿಗಳು ಕರೆದಿದ್ದು ಹೆಮ್ಮೆಯ ಸಂಗತಿಯಾಗಿದೆ. ನಿರಂತರವಾದ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಸಮಾಜಮುಖಿಯಾಗಿ ನಡೆಯುತ್ತಿರುವುದು ಇವರ ಹೆಜ್ಜೆ ಗುರುತುಗಳಾಗಿವೆ. ಇವರ ಮಗ ಚಾಲುಕ್ಯ ಚಕ್ರವರ್ತಿ ಸಾಹಿತ್ಯದಲ್ಲಿ ತೊಡಗಿಸಿಕೊಂಡಿದ್ದರೆ ಮಗಳು ಹಿತೈಷಿ ಹಾಡುಗಾರಿಕೆಯಲ್ಲಿ ತೊಡಗಿಸಿಕೊಂಡಿರುವುದು ಸಾಹಿತ್ಯವನ್ನು ಬೆಳೆಸುವ ಹೆಜ್ಜೆಗಳಾಗಿವೆ