ಸದಸ್ಯ:JOVITA CARROL SOANS/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಶಶಿಲೇಖಾ ಬಿಅವರು ಸಾಹಿತ್ಯದ ನಿರಂತರ ಸಾಧನೆಯಲ್ಲಿ ಸ‌ಫಲತೆಯನ್ನು ಕಂಡವರು. ಇವರು ೨೮-೫-೧೯೪೮ರಲ್ಲಿ ಗುರುವಪ್ಪ ಮತ್ತು ಕೃಷ್ಣಮ್ಮ ದಂಪತಿಗಳಿಗೆ ಹಿರಿಯಮಗಳಿಗೆ ಜನಿಸಿದರು. ತಂದೆ ತಾಯಿ ಇಬ್ಬರೂ ಶಿಕ್ಷಕರಾದುದರಿಂದ ಅಧ್ಯಯನ , ಅಧ್ಯಾಪನಗಳೆರಡನ್ನೂ ತಮ್ಮ ಸ್ವಂತ ಪರಿಶ್ರಮದಲ್ಲಿ ಮಾಡುತ್ತಿದ್ದರು. ಗುರುವಪ್ಪ ಇವರು ಒಬ್ಬ ಲೇಖಕರೂ ವಾಗ್ಮಿಗಳೂ ಆಗಿದ್ದು ಶಶಿಲೇಖಾ ಅವರ ಸಾಹಿತ್ಯ ಪ್ರೀತಿಗೆ ಇವರೇ ಮೂಲಗುರು ಮತ್ತು ಪ್ರೇರಕರು ಆಗಿದ್ದರು. ಎಂ.ಎಸ್ ಸಿ.ಪದವಿಯನ್ನು ಪಡೆದು,ಗೋಕರ್ಣನಾಥೇಶ್ವರ ಕಾಲೇಜಿನಲ್ಲಿ ವಿಜ್ಞಾನದ ಉಪನ್ಯಾಸಕ ವೃತಿಗೆ ಸೇರಿ ನಂತರ ಅದೇ ಕಾಲೇಜಿನ ಪದವಿಪೂರ್ವ ವಿಭಾಗದ ಪ್ರಾಂಶುಪಾಲರಾಗಿ ನಿವೃತರಾಗಿದ್ದಾರೆ. ಈಗ ಮೂಲ್ಕಿ ನಾರಾಯಣ ಗುರು ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.

ಕವನ ಸಂಕಲನಗಳು[ಬದಲಾಯಿಸಿ]

  1. ಗಂಧದ ಕಡ್ಡಿ
  2. ಇಪ್ಪತ್ತೊಂದರೆಡೆಗೆ
  3. ಮಾರಿಪೂಜೆ
  4. ನಮ್ಮೂರ ಮಹಾಭಾರತ
  5. ಒಂದು ಹಿಡಿ ಬೆಳಕು
  6. ಶಿಲುಬೆ
  7. ಕಂಕಣ
  8. ದೇಶಭಕ್ತಿ

ಕಥಾ ಸಂಕಲನಗಳು[ಬದಲಾಯಿಸಿ]

  1. ನೆಲದಿಂದ ಒಂದಿಷ್ಟು
  2. ಫಾತಿಮಾಬಾಯಿ
  3. ಹಸಿರು ಗಾಜಿನ ಬಳೆಗಳು
  4. ಜೀವನ ಚಕ್ರ
  5. ನೇಪಥ್ಯ
  6. ವರ್ತುಳ
  7. ಅಳತೆ

ಪ್ರಶಸ್ತಿ[ಬದಲಾಯಿಸಿ]

  • ನೆಲದಿದಂದ ಒಂದಿಷ್ಟು ಕಥಾ ಸಂಕಲನಕ್ಕೆ ಶ್ರೀಮತಿ ಸುಶೀಲಾಬಾಯಿ ಸ್ಮಾರಕ ಕಥಾ ಪ್ರಶಸ್ತಿ

ಕರಾವಳಿ ಲೇಖಕಿಯರ ವಾಚಕಿಯರ ಸಂಘದ ಸಕ್ರಿಯ ಸದಸ್ಯೆಯಾಗಿ ಹಲವು ವರ್ಷಗಳ ಕಾಲ ಕೋಶಾಧಿಕಾರಿಯಾಗಿ ಕೆಲಸ ನಿರ್ವಹಿಸಿದ್ದಾರೆ.ಪ್ರಸ್ತುತ ವೃತ್ತಿ, ಪ್ರವೃತಿಯ ಜೊತೆಗೆ ಸಂಶೋಧನೆಯಲ್ಲೂ ತನ್ನನ್ನು ತೊಡಗಿಸಿಕೊಂದಡಿದ್ದಾರೆ. ತುಳುನಾಡಿನ ಮಾಸ್ತಿಗಲ್ಲುಗಳು - ವೀರಗಲ್ಲುಗಳು ಎಂಬ ವಿಷಯದ ಬಗ್ಗೆ ರೋಹಿಣಿ ಬಿ.ಎಂ ಯವರ ಜೊತೆ ಸೇರಿ ಅಧ್ಯಯನ ಮತ್ತು ಸಂಶೋಧನೆಗಳಲ್ಲಿ ತನ್ನನ್ನು ಸಂಪೂರ್ಣ ತೊಡಗಿಸಿಕೊಂಡಿದ್ದಾರೆ.ಈ ಸಂಶೋಧನಾ ಕೃತಿ ಪ್ರಕಟಣೆಯ ಹಂತದಲ್ಲಿದೆ.