ಸದಸ್ಯ:J.varshini/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸಿಂಥೇರಿ ಬಂಡೆ (ಸಿಂಥೇರಿ ರಾಕ್)[ಬದಲಾಯಿಸಿ]

ದಾಂಡೇಲಿ ವನ್ಯಧಾಮದ ದಟ್ಟವಾದ ಅರಣ್ಯ ಪ್ರದೇಶದಲ್ಲಿರುವ ಒಂದು ಬಂಡೆ. ಈ ಶಿಲೆಯು ಸುಮಾರು ೩೦೦ ಅಡಿ ಎತ್ತರದ ಮತ್ತು ಕಡಿದಾದ ಬಂಡೆ. ಈ ಕಡಿದಾದ ಬಂಡೆಯು ಶಿಥಿಲೀಕರಣದಿಂದಾದ ಒಂದು ಬೃಹತ್ ಭೂ ರಚನೆ. ಸಿಂಥೇರಿ ಬಂಡೆಯು ಕಾನೇರಿ ನದಿಯ ತಟದಲ್ಲಿದೆ.ದಾಂವೇಲಿಯಿಂದ ಯರಮುಖಕ್ಕೆ (ಗುಂದಕ್ಕೆ) ಹೋಗುವ ಮಾರ್ಗದಲ್ಲಿ ಕಾಣಸಿಗುತ್ತದೆ.೧೯೩೦ ಜನಗಣತಿಯ ಪ್ರಕಾರ ಡಾಂಡೇಲಿಯ ಜನಸಂಖ್ಯೆ ಕೇವಲ ೫೧೫ ಆಗಿತ್ತು. ಪ್ರಧಾನವಾಗಿ ಹೆಚ್ಚಿನ ಜನರು ಅರಣ್ಯ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿದರು.ಅಲ್ಲಿನ ನಿವಾಸಿಗಳು ಕೊಂಕನಿ ,ದೇವಾಲಿ ಹಾಗು ಮರಾಟಿ ಜನಾಂಗಕ್ಕೆ ಸೇರಿದವರಾಗಿದ್ದರ. thumb|ಸಿಂಥೇರಿ ಸ್ಥಳಿಯ ದಂಥಕಥೆಯ ಪ್ರಕಾರ ಡಾಂಡೇಲಪ್ಪ ಎಂಬ ಸೇವಕ , ಸ್ವಾಮಿನಿಷ್ಟೆಗೋಸ್ಕರ ತನ್ನ ಜೀವವನ್ನೇ ತ್ಯಾಗಮಾಡಿದನು.ಆದುದರಿಂದ ಈ ನಗರವನ್ನು ಡಾಂಡೇಲಿ ಎಂದು ಕರೆಯಲಾಗಿದೆ.ಡಾಂಡೇಲಿ ಹಲವಾರು ಬೆಲೆಬಾಳುವ ಮರಗಳಿಗೆ,ಪ್ರಾಣಿಗಳಿಗೆ ಹಾಗು ಸಾರಿಸೃಪಗಳಿಗೆ ಮನೆಯಾಗಿದೆ.ಡಾಂಡೇಲಿಯಲ್ಲಿ ಸ್ಕೈ ಪಾಯಿಂಟು,ಡಾಂಡೇಲಪ್ಪ ದೇವಸ್ಥಾನ ,ಕವಾಲ ಗುಹೆಗಳು,ಮೋಲಂಗಿ,ಸುಪಾ ಅಣೆಕಟ್ಟು ಹಾಗು ಶಿರೊಲಿ ಶಿಕರದಂತಹ ಪ್ರವಾಸಿ ತಾಣಗಳಿಗೆ ಬರವೇನಿಲ್ಲ. ಸಿಂಥೇರಿ ಬಂಡೆಗಳು ಬೆಳಗಾವಿಯಿಂದ ಸುಮಾರು ೧೦೦ಕಿಲೊಮೀಟರ್ ದೂರವಿರುವ ಡಾಂಡೇಲಿ ವನ್ಯ ಜೀವಿಗಳ ಅಭಿಯಾರಣ್ಯ ದಲ್ಲಿ ಇದೆ. ಕಪ್ಪು ಚಿರತೆಗಳು ಇಲ್ಲಿ ಬಿಟ್ಟರೆಏಷ್ಯಾದ ಬೇರೆ ಯಾವ ಪ್ರದೇಶದಲ್ಲಿ ನೋಡಲು ಸಿಗುವುದಿಲ್ಲ.ಡಾಂಡೇಲಿಯಲ್ಲಿರುವ ೭ ಆಕರ್ಶಣೆಗಳಲ್ಲಿ ಸಿಂಥೀರಿ ಬಂಡೆಗಳು ಮೊದಲನೆಯ ಸ್ಥಾನವನ್ನು ಪಡೆದುಕೊಂಡಿದೆ .ಸಾವಿರಾರು ವರ್ಷಗಳ ಹಿಂದೆ ಆದ ಜ್ವಾಲಾಮುಖಿಯ ಚಿಮ್ಮುವಿಕೆಯಿಂದ ಸಿಂಥೀರಿ ಬಂಡೆಗಳು ಹೆಚ್ಚಾಗಿ ಸುಣ್ಣದಾಂಶ ದಿಂದ ರೂಪಗೊಂಡಿವೆ.೨೦ನೇ ಶತಮಾನದಲ್ಲಿ ಸಿಂತೇರ ಏಂಬ ಇಂಗ್ಲೀಷ ಮಹಿಳೆ ಇದನ್ನು ಅನ್ವೇಷಿಸಿದ ನಂತರ ಈ ಪ್ರದೇಶಕ್ಕೆ ಸಿಂಥೇರಿ ಬಂಡೆಗಳು ಎಂದು ಹೆಸರುಬಂತು.ಸಿಂಥೇರಿ ಬಂಡೆಗಳು ಹಲವಾರು ಜೇನು ಗೂಡುಗಳು,ಪಾರಿವಾಳಗಳು ಹಾಗು ಪುಟ್ಟ ಪುಟ್ಟ ಪಕ್ಷಿಗಳ ವಾಸಸ್ಥಾನವಾಗಿದೆ .ಕಾಡಿನಲ್ಲಿ ಒಂದು ರೋಮಾಂಚಕ ಜೀಪ್ ಸವಾರಿ ಮಾಡಿದರೆ ನಾವು ಈ ಸ್ಥಳವನ್ನು ತಲುಪುತ್ತೇವೆ .೨೦೦ ಹೆಜ್ಜೆ ಕೆಳಗೆ ನಡೆದರೆ ಕನೇರಿನದಿ ಹಾಗು ಅದರ ಮಡಿಲ್ಲಲಿರುವ ದೈತ್ಯ ಕಲ್ಲಿನ ರಚನೆಯನ್ನು ನೋಡಬಹುದು.ಬದಿಯಲ್ಲಿ ಸಣ್ಣ ಸಣ್ಣ ಕಾಂಕ್ರೀಟ್ ಕಟ್ಟಡ್ಡಗಳು ಸ್ಥಾಪಿಸಲಾಗಿದೆ . ಪ್ರತಿ ಗೋಪುರದ ಮೇಲಿರುವ ವಿವಿಧ ರೀತಿಯ ಶಿಲೆಗಳು ನಮ್ಮನ್ನು ಆಕರ್ಷಿಸುತ್ತದೆ.ಇಲ್ಲಿನ ಹಲವಾರು ಗುಹೆಗಳಿಗೆ ಪ್ರವೇಶ ನಿಷೇದಿಸಲಾಗಿದೆ.ಬಹಳ ಆಸಕ್ತಿ ಇರುವವರು ಅರಣ್ಯ ಇಲಾಖೆಯವರಿಂದ ವಿಷೇಶ ಅನುಮತಿಯನ್ನು ಪಡೆಯಬೇಕಾಗುತ್ತದೆ. .[೧] thumb|ಸಿಂಥೇರಿಯ ಬಂಡೆಗಳು

ಸಿಂಥೇರಿಯ ಶಿಲ್ಪಕಲೆಗಳು[ಬದಲಾಯಿಸಿ]

ಸಿಂಥೇರಿಯಲ್ಲಿ ವಿವಿಧ ರೀತಿಯ ಶಿಲೆಗಳನ್ನು ನೋಡಬಹುದು.ಪ್ರತಿ ಶಿಲೆಯು ,ಅದರ ಇತಿಹಾಸ ಹಾಗು ಅದರ ಮಹತ್ವವನ್ನು ತಿಳಿಸಿಕೊಡುತ್ತದೆ. ೧.ಮೊದಲನೇಯದಾಗಿ ,ಪದರಗಳ್ಳುಳ ಕಬ್ಬಿಣಾಂಶ ಹೋಂದಿರುವ ಶಿಲೆ: ಇದರಲ್ಲಿ ಸರದಿಯಾಗಿ ಬೆಣಚ್ಚುಕಲ್ಲು ಹಾಗೂ ಕಬ್ಬಿಣದ ಅದಿರನ್ನು ಕಾಣಬಹುದು. ೨.ಎರಡನೇಯದಾಗಿ,ಡೈಕ ಶಿಲೆ:ಇದು ಹೈಪಬೈಸ್ಸಲ್ ಅಗ್ನಿಶಿಲೆ.ಈ ಶಿಲೆಯನ್ನು ಪುರಾತನರು ಚಿನ್ನವನ್ನು ಒಳಗೊಂಡಂತಹ ಕಲ್ಲನ್ನು ಅರಿಯಲು ಉಪಯೋಗಿಸುತ್ತಿದ್ದರು ೩. ಫಿಲೈಟ್:ಇದು ಒಂದು ಅಪರೂಪದಶಿಲೆ ಇದರಲ್ಲಿ ಅನೇಕ ತೆಳ್ಳನೆಯ ಪದರಗಳನ್ನು ನೋಡಬಹುದು .ಕಡಿಮೆ ಶಾಖದಿಂದ ಆಗಿರುವ ಶಿಲೆ . ೪. ಚರ್ಟ ವುಳ್ಳ ಬೆಣಚು ಕಲ್ಲಿನವಾಡಿ:ಚರ್ಟ ಇದೊಂದು ಬೆಣಚು ಕಲ್ಲಿನಪ್ರಕಾರ .ಇದು ಗದಗಿನ ಚಿನ್ನದ ನಿಕ್ಷೇಪದ ಕೆಲ ಸ್ಥಳದಲ್ಲಿ ಚಿನ್ನವನ್ನು ಹೊಂದಿರುವ ಬೆಣಚುಕಲ್ಲು ಪತ್ತೆಹಚ್ಚಲು ಮಾರ್ಗದರ್ಶಿಯಂತೆ ಸಹಾಯಮಾಡುವುದು. ೫.ಬೆಣಚು ಕಲ್ಲಿನ ಪೊರಾಫೈರಿ:ಇದು ಒಂದು ವೋಲ್ಕಾನಿಕ್ ಶಿಲೆಯಾಗಿದೆ.ಇದರಲ್ಲಿ ಅನೇಕ ದೊಡ್ಡ ಗಾತ್ರದ ಬೆಣಚುಗಳನ್ನು ನೋಡಬಹುದು. ೬.ಲ್ಯಾಟರೈಟ್:ಇದು ಉಷ್ಣವಿರುವ ಹಾಗು ಹೆಚ್ಚಾಗಿ ಮಳೆಯಾಗುವ ಪ್ರದೇಶಗಳಲ್ಲಿ ಹಾಗೂ ಕರಾವಳಿ ಪ್ರದೇಶಗಳಲ್ಲಿ ಕಾಣಿಸಿಕೊಳ್ಳುವ ಅಪರೂಪದ ಶಿಲೆ.ಇದರಲ್ಲಿ ಅನೇಕ ರಂಧ್ರಗಳು ಇರುತ್ತವೆ.ಇದು ಜಲಯುಕ್ತ ಆಮ್ಲಜೀಕರಣವಾದ ಕಬ್ಬಿಣವನ್ನು ಒಳಗೊಂಡಿರುತ್ತದೆ. ೭. ಗ್ರೇವ್ಯಾಕ್:ಇದು ಮರಳು ಶಿಲೆಯ ಒಂದು ವಿಧ.ಮೂಲತಹ ಅರನೇಶಿಯಸ್ ಜಲಕ ಶಿಲೆಇದರ ಕಣಗಳ ಗಾತ್ರ೧/೧೬.೨ಮಿ.ಮೀ ಮಾತ್ರ.ಈ ಮಾದರಿಯಲ್ಲಿಗಂಧಕವುಳ್ಳ ಅನೇಕ ಖನಿಜಗಳಿರುತ್ತವೆ.ಚಿನ್ನವನ್ನು ಹೊಂದಿರುವ ಬೆಣಚು ಸಹ ನೋಡಬಹುದು. ೮. ಸ್ಥಂಭಕಾರದ ಆಂಡಸೈಡ: ಈ ಕಲ್ಲಿನ ವಿಷೆಶತೆಯೇನೆಂದರೆ ಇದರ ಸ್ತಂಬಕಾರದ ಮಾದರಿಗಳನ್ನು ಜೋಡಿಸಿದಾಗ ಇವುಗಳ ಮೆಲೆ ವಿಶಿಷ್ಟ ರೂಪವನ್ನು ಪಡೆಯುತ್ತದೆ. ೯.ಕ್ಲೋರೈಟ್ ಸೆರಿಸೈಟ್ ಶಿಷ್ಟ:ಇದರ ವಿಷೇಶತೆ ಏನೆಂದರೆ ಇದರಲ್ಲಿರುವ ಖನಿಜಗಳು ಸಮಾನಾಂತರ .ಈ ಮಾದರಿಯಲ್ಲಿ.ಕ್ಲೋರೈಡ್ ಹಾಗು ಸೆರಿಸೈಟ್ ಖನಿಜಗಳು ಅಧಿಕವಾಗಿರುವುದರಿಂದ ಇದಕ್ಕೆ ಕ್ಲೋರೈಟ್ ಸೆರಿಸೈಟ್ ಶಿಷ್ಟ ಎಂದು ಹೆಸರುಬಂದಿದೆ. ಈಮಾದರಿಯಲ್ಲಿ ಹಾಲಿನ್ಂತಹ ಬಣ್ಣದ ಬೆಣಚುಕಲ್ಲು ಈ ಶಿಲೆಯನ್ನು ಭೇದಿಸಿ ಬಂದಿರುವುದನ್ನು ನಾವು ನೋಡಬಹುದು..[೨]

ಉಲ್ಲವಿ ಎಂಬ ಹೆಸರಾಂತ ಮಂದಿರವು ಇದರ ಸಮೀಪದಲ್ಲಿದೆ. ಆದುದರಿಂದ ದೇವಸ್ಥಾನಕ್ಕೆ ಹೋಗಿ ಬರುವ ಜನರು ಈ ಸ್ಥಳಕ್ಕೆ ಹೋಗಿಯೇ ತೀರುತ್ತಾರೆ.ಉಲ್ಲವಿ ದೇವಸ್ಥಾನದಲ್ಲಿ ಜಾತ್ರೆ ನೆಡೆದಾಗ ಈ ಪ್ರಶ ವಿಹಾರಸ್ವರ್ಗವಾಗುವುದರಲ್ಲಿ ಸಂಶಯವೇ ಇಲ್ಲ.ಪ್ರಕೃತಿಪ್ರಿಯರಿಗೆ ಮರೆಸುವಂತಹ ಸ್ಥಳ.ಭೂವಿಜ್ಯಾನಿಗಳಿಗೆ ಈ ಜಾಗವವನ್ನು ಎಲ್ಲಿಲದೆ ಕುತೂಹಲ.ವೈಟ್ ವಾಟರ್ ರಾಫಟ್ಟಿಂಗ್ ಇಲ್ಲಿ ಬಹಳ ಮನೋಹರವಾಗಿರುತ್ತದೆ.ಇಂತಹ ಪ್ರಮುಖ ಸ್ಥಳ ನಮ್ಮ ಕರ್ನಾಟಕದಲ್ಲಿ ಇರುವುದು ಹೆಮ್ಮೆ ಪಡುವ ವಿಷಯವೇ ಸರಿ. thumb|ಸಿಂಥೇರಿ ಬಂಡೆಗಳು ಪ್ರವಾಸಿ ಕೇಂದ್ರವಾಗಿರುವ ಕಾರಣ ಇದಕ್ಕೆ ಇದರದ್ದೇ ಆದ ಅವಗುಣಗಳು ಇವೆ. ಕೆಲವು ಗೋಪುರಗಳ ಹೀನಾಯ ಸ್ಥಿತಿಯನ್ನು ನೋಡಲು ಬೇಸರವಗುತ್ತದೆ. ಈ ಪ್ರದೇಶ ನೋಡಲು ಎಷ್ಟು ಸುಂದರವಾಗಿದೆಯೋ ಅಷ್ಟೆ ಅಪಾಯಕಾರಿಯಾದದ್ದು. ನೀರಿನ ಹರಿವು ಬಹಳ ಪ್ರಬಲವಾಗಿದೆ.ಇಲ್ಲಿಯವರೆಗೆ ಸುಮಾರು ೧೨ ಜೀವಿಗಳ ಬಲಿಯನ್ನು ತೆಗೆದುಕೊಂಡಿದೆ .ಸರ್ಕಾರ ಈ ಸ್ಥಳವನ್ನು ಅಭಿವೃದ್ಧಿ ಪಡಿಸಲು ಹಲವಾರು ಕ್ರಮಗಳನ್ನು ತೆಗೆದು ಕೊಂಡಿದೆ.ಜನರಿಗೆ ಇಂತಹ ಸ್ಥಳಗಳನ್ನು ಸಂರಕ್ಷಿಸುವುದರ ಬಗ್ಗೆ ಹೆಚ್ಚು ಅರಿವು ಮೂಡಿಸಬೇಕು.ಸಿಂಥೀರಿ ಬಂಡೆಗಳು ಯಾನ ಹಾಗು ಕವಾಲ ಗುಹೆಗಳಿಗೆ ಹೋಲುತ್ತವೆ ಎಂದು , ಸ್ಥಳಕ್ಕೆ ಭೀಟಿ ನೀಡಿದ ಜನರ ಅಭಿಪ್ರಾಯಿಸುತ್ತಾರೆ.

ಉಲೇಖನಗಳು[ಬದಲಾಯಿಸಿ]

  1. syntherirocks.blogspot.com
  2. www.myyatradiary.com/2012/01/syntheri-rocks-at-dandeli-western-ghats.html