ಸದಸ್ಯ:Iranna.shettar/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ವಿಶ್ವ ಪುಸ್ತಕ ಮತ್ತು ಕೃತಿಸ್ವಾಮ್ಯ ದಿನ[ಬದಲಾಯಿಸಿ]

ಪ್ರತಿ ವರ್ಷದ ಎಪ್ರೀಲ್ ೨೩ರಂದು ವಿಶ್ವ ಪುಸ್ತಕ ಮತ್ತು ಕೃತಿಸ್ವಾಮ್ಯ ದಿನ (ಇದನ್ನು ಅಂತರಾಷ್ಟ್ರೀಯ ಪುಸ್ತಕ ದಿನ ಎಂದೂ ಕರೆಯುತ್ತಾರೆ). ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಆಯೋಗ (ಯುನೇಸ್ಕೊ) 1995ರಲ್ಲಿ ಮೊದಲ ಬಾರಿಗೆ ಓದುವಿಕೆ, ಪ್ರಕಾಶನ ಮತ್ತು ಕೃತಿಸ್ವಾಮ್ಯಗಳ ಬಗ್ಗೆ ಅರಿವು ಮತ್ತು ಪ್ರಚಾರ ನೀಡಲು ಈ ಕಾರ್ಯಕ್ರಮ ಹಮ್ಮಿಕೊಂಡಿತು. ಈ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಯುನೇಸ್ಕೊ ಯುವಜನತೆಯಲ್ಲಿ ಪುಸ್ತಕ ಪ್ರೇಮ, ಓದಿನ ಖುಷಿ ಅಥವಾ ಗಮ್ಮತ್ತು ಹೆಚ್ಚಿಸುವ ಮತ್ತು ಉತ್ತಮ ಲೇಖಕನ್ನು ಗೌರವಿಸುವ ಹಂಬಲ ಹೊಂದಿದೆ. ನೂರಕ್ಕೂ ಹೆಚ್ಚು ರಾಷ್ಟ್ರಗಳು ಮತ್ತು ವಿಶ್ವಾದ್ಯಂತ ಅನೇಕಾನೇಕ ಪುಸ್ತಕ ಪ್ರಕಾಶಕರು, ಪುಸ್ತಕ ವ್ಯಾಪಾರಿಗಳು, ಗ್ರಂಥಾಲಯಗಳು, ಶಾಲಾ-ಕಾಲೇಜು-ವಿಶ್ವವಿದ್ಯಾಲಯಗಳು, ಸಾಂಸ್ಕೃತಿಕ ಸಂಘಟನೆಗಳು ಮತ್ತು ಸಾಹಿತ್ಯ ವೇದಿಕೆಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಪುಸ್ತಕ ಮತ್ತು ಓದುವಿಕೆಯ ಮಹತ್ವ ಸಾರಲಿವೆ.

ವಿಲಿಯಂ ಷೇಕ್ಸಪಿಯರನ ಜನ್ಮದಿನ[ಬದಲಾಯಿಸಿ]

ಈ ದಿನ ಆಂಗ್ಲ ಸಾಹಿತ್ಯದ ಮಹಾನ್ ಸಾಹಿತಿ ವಿಲಿಯಂ ಷೇಕ್ಸಪಿಯರ್ನ ಜನ್ಮದಿನ, ಈ ದಿನವನ್ನು “ವಿಶ್ವ ಪುಸ್ತಕ ಮತ್ತು ಕೃತಿಸ್ವಾಮ್ಯ ದಿನ” ಆಚರಿಸುವುದರ ಮೂಲಕ ವಿಶ್ವದ ಎಲ್ಲ ಮಹಾನ್ ಕೃತಿಗಳಿಗೆ ಮತ್ತು ಕೃತಿಕಾರರಿಗೆ ಗೌರವ ಸಮರ್ಪನೆ ಮಾಡಲಾಗುತ್ತದೆ ಮತ್ತು ಅವರ ಸಾಮಾಜಿಕ ಮತ್ತು ಸಾಂಸ್ಕೃತಿಕ ಕೊಡುಗೆಗಳನ್ನು ಸ್ಮರಿಸಿಕೊಳ್ಳಲಾಗುವುದು.