ಸದಸ್ಯ:Hemavati s k/sandbox

ವಿಕಿಪೀಡಿಯ ಇಂದ
Jump to navigation Jump to search
 ನುಡಿಸಿರಿ ರಾಷ್ಟ್ರೀಯ ಸಾಂಸ್ಕ್ರತಿಕ ಹಬ್ಬದ ಈ ವೆದಿಕೆಯಲ್ಲಿ ಮಾದ್ಯಮದ ಬಗ್ಗೆ ಮಾತನಾಡುವುದಾಗಲಿ ಒಂದು ತಲ್ಲಣ.ಹತ್ತಾರು ಸಾವಿರ ಜನ ಸೇರಿರುವ ಈ ಸುಂದರ ಮಂಟಪದ ಒಳಗೆ ಬರುವಾಗ ತವಕ.ಬಂದ ಮೇಲೆ ಇಷ್ಟೊಂದು ಸಂಖ್ಯೆಯ ಜನರನ್ನು ನೋಡಿ ತಲ್ಲಣವಾಗುತ್ತಿದೆ.

ಇದಕ್ಕೆ ಇನ್ನೊಂದು ಕಾರಣವಿದೆ.ಈ ಮೂರು ದಿನಗಳ ವತ೯ಮಾನದ ತಲ್ಲಣಗಳ ಕುರಿತಾದ ಗೋಷ್ಟಿಗಳಲ್ಲಿ ಅತೀ ಸೂಕ್ಷ್ಮವಾದ ವಿಷಯದ ಗೋಷ್ಟಿ ಯಾವುದಾದರು ಇದ್ದರೆ ಅದು ಮಾದ್ಯಮದ ಗೋಷ್ಟಿಯೇ ಇರಬೆಕು.ಯಾಕೆಂದರೆ ಒಂದು ವಾಕ್ಯ ತಪ್ಪಿ ನುಡಿದರೂ ಕೋಲಾಹಲವಾಗುವ ಗೋಷ್ಡಿ ಇದು.ಏನು ಹೇಳಿದರೂ ಅವರಲ್ಲ ಇವರಿಗೆ ಬೇಸರವಾಗಬಹುದು.ನಮ್ಮ ಸಮಾಜ ಇಂದು ಎಷ್ಟು ಸೂಕ್ಷ್ಮವಾಗಿದೆ ಎಂದರೆ ಭಯದ ನೆರಳಲ್ಲಿ ನಮ್ಮ ಅಭಿವ್ಯಕ್ತಿ ಆಗಬೇಕಿದೆ.ಇನ್ನೂರಕ್ಕೂ ಹೆಚ್ಚು ಮಾದ್ಯಮ ಪ್ರತಿನಿಧಗಳು ನನ್ನೆದುರಿಗೆ ಇದ್ದಾರೆ.ಜೊತೆಗೆ ಮಾದ್ಯಮದ ಹತ್ತಾರು ಸಾವಿರ ಫಲಾನುಭವಿಗಳು ಇದ್ದಾರೆ.ವತ೯ಮಾನದಲ್ಲಿ ಸಮಾಜಕ್ಕೆ ಮಾದ್ಯಮದ ಬಗ್ಗೆ ಹಾಗೂ ಮಾದ್ಯಮದವರಿಗೆ ಸಮಅಜದ ಬಗ್ಗೆ ಒಂದು ರೀತಿಯ ಆಕ್ಷೇಪ,ಆತಂಕ,ತಲ್ಲಣ ಎಲ್ಲವೂ ಇದೆ.ಆದ್ದರಿಂದ ವರ೯ಮಾನದ ಮಾದ್ಯಮ ತಲ್ಲಣದ ಬಗ್ಗೆ ಮಾತನಾಡುವುದು ಕತ್ತಿಯ ಅಲುಗಿನ ಮೇಲೆ ನಡೆಯುವ ಕೆಲಸ.

           ನಾವೆಲ್ಲರೂ ಮಾದ್ಯಮದ ಫಲಾನುಭವಿಗಳು.ದಿನಾ ಬೆಳಿಗ್ಗೆ ಎದ್ದರೆ ಸಾಕು ಪತ್ರಿಕೆ ಮನೆ ಎದುರು ಬಂದು ಬೀಳುತ್ತದೆ.ರೇಡಿಯೋ,ಡಿವಿ,ಈಗ ಇಂಟನೆ೯ಟ್ ಎಲ್ಲಾ ಮಾದ್ಯಮಗಳು ಏಕ ಕಾಲಕ್ಕೆದಾಳಿ ಮಾಡುತ್ತವೆ.