ಸದಸ್ಯ:Hemanth a v kumar/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪಾಳೆಯಗಾರರು ಕರ್ನಾಟಕದಲ್ಲಿ ನೆಲೆಸಿದುದು ೧೨ನೆಯ ಶತಮಾನಕ್ಕೆ ಮೊದಲು. ವಿಶೇಷವಾಗಿ ಅವರು ಬೇಡರ ಜಾತಿಗೆ ಸೇರಿದವರು.ಇವರ ಶೌರ್ಯವನ್ನು ಕಂಡು ಮುಸಲ್ಮಾನರು ಇವರನ್ನು ಅಂಜಿಕೆಯಿಲ್ಲದವರೆಂದು ಕರೆದರು.ಇವರಲ್ಲಿ ಗುಮ್ಮನಾಯಕ ವಂಶ ಮುಂಚಿನದು. ವಿಜಯನಗರದ ಸ್ಥಾಪನೆಯಾದ ಬಳಿಕ ೧ನೆಯ ಬುಕ್ಕರಾಯನು ಗುಮ್ಮನಾಯಕನು ಮನೆತನದವರನ್ನು ತನ್ನ ಸಾಮ್ರಜ್ಯದ ಅದೀನ ನಾಯಕರನ್ನಾಗಿ ಮಾಡಿಕೊಂಡನು.ವಿಜಯನಗರದ ರಾಯರಿಗೆ ಬಿಕ್ಕಟ್ಟಿನ ಪ್ರಸಂಗ ಒದಗಿದಾಗ ಇವರ ಸಹಾಯವು ಬೆಕಾಗುತಿತ್ತು. ಆಗ ಈ ವೀರನಾಯಕರು ತಮ್ಮ ಸೈನ್ಯವನ್ನು ಕತ್ತಿಕೊಂಡು ಹೋಗಿ ಯುದ್ಧ ಮಾಡುತ್ತಿದ್ದರು. ಹೀಗೆ ಸಹಾಯ ಮಾಡುವುದಕ್ಕು ವಿಶೇಷವಾಗಿ ತಮ್ಮ ಸತ್ವ ಸಂರಕ್ಷಣೆಗೂ ಹೊಸ ರಾಜ್ಯಗಳನ್ನು ಅಂಗಯ್ಗಳವಡಿಸಿಕ್ಕೊಳುವುದ್ದಕ್ಕು ಈ ನಾಯಕರು ತಮ್ಮ ದಂಡನ್ನು ಯಾವಗಲೂ ಅತ್ತಿಂದಿತ್ತ ಓಯ್ಯಬೇಕಾಗುತ್ತಿತ್ತು. ಹೀಗೆ ಪರಿಭ್ರಮಿಸುತ್ತಿರುವ ಪಡೆಗೆ ಪಾಳೆಯವೆಂದು ಅದರ ನಾಯಕರಿಗೆ ಪಾಳೆಯಗಾರರೆಂದು ಹೆಸರು. ಈ ಪಾಳೆಗಾರರ ಪೂರ್ವಜರು ವಿಜಯನಗರದ ರಾಜ್ಯಾರಂಭಕ್ಕೆ ಮುಂಚೆಯೆ ಇಲ್ಲಿ ಬೀಡುಬಿಟ್ಟಿದ್ದರು ಕರ್ನಾಟಕ ಸಿಂಹಾಸನ ಸ್ಥಾಪನೆಯಾದ ಬಳಿಕವೆ ಪಾಳೆಯಗಾರರೆಂಬ ಹೆಸರು ಪ್ರಚಾರಕ್ಕೆ ಬಂದಿತು. ಗುಮ್ಮನಾಯಕ ವಂಶದ ಪಾಳೆಗಾರರ ಮಧ್ಯಕಾಲದಲ್ಲಿ ಇನ್ನೊಂದು ಪಾಳೆಯಗಾರರ ಮನೆತನವು ಪ್ರಬಲವಾಯಿತು.ಅದೆಂದರೆ ಮತ್ತಿ ಪಾಳೆಯಗಾರರು.ನಮ್ಮ ಕಥಾನಾಯಕನಾದ ಮತ್ತಿಯ ತಿಮ್ಮಣ್ಣನಾಯಕನೆಂಬ ಕೆಚ್ಚೆದೆಯ ಕಟ್ಟಾಳು ಈ ಮತ್ತಿ ಪಾಳೆಯಗಾರರ ವಂಶದ ಮೂಲಪುರುಷ.

                  ವಾಲ್ಮೀಕಿ ಗೋತ್ರವದವರೆಂದು ಹೆಳಲ್ಪಡುವ ಕಾಮಗೇತಿ ವಂಶದಲ್ಲಿ ಹುಟ್ಟಿದ ಸಬ್ಬಗಡಿ ಓಬನಾಯಕ,ಜಡವಿನಾಯಕ, ಬುಳ್ಳನಾಯಕ ಎಂಬ ಸಹೋದರರು ಉತ್ತರದಿಂದ ಬಂದರು. ತಮ್ಮ ಸಂಗಡ ಪರಿವಾರವು ಮನೆದೇವರಾದ ಅಹೋಬಲ ನರಸಿಂಹ ಮೂರ್ತಿಯ ಪೆಟ್ಟಿಗೆ,ತುರುಗಳು,ಕುರಿಗಳು,ಬಂಡೆಗಳು ಮುಂತಾದ ಕಂಪಳವನ್ನು ಅವರು ಹೊರಡಿಸಿದ್ದರು. ಹಾದಿಯಲ್ಲಿ ವಿರೂಪಾಕ್ಷರನ್ನು ಸಂದರ್ಶಿಸಿ ಹಂಪಿಯ ಸೊಬಗನ್ನು ನೋಡಿಕೊಂಡು ಮುಂದೆಸಾಗಿದರು. ಆಗ ಆನೆಗೊಂದಿಯ   ವಿರೂಪಾಕ್ಷರ ಪೂಜಾರಿಯಾದ ಕರಿ ಜೋಯಿಸ, ವಿರೂಪಾಕ್ಷ ಜೋಯಿಸ ಎಂಬ್ಬಿಬರ ಹುಡುಗರ ಈ ನಾಡ ತಳವಾರರ ಬೆನ್ನುಹತ್ತಿ ಬಂದರು.ಆ ಮೂವರು ನಾಯಕರು ಬಳಿ ಚೊಡಿನ ಬಳಿಯಲ್ಲಿ ರೊಪ್ಪ  ಹಾಕಿಕಂಡಿದ್ದು  ಮೂರು ತಿಂಗಳು ಕಾಲ ಕಳೆದರು. ಆ ಬಿಳಿ ಚೊಡಿನ ಜೋಯಿಸರಿಗೆ ಮಕ್ಕಳಿಲ್ಲದ್ದರಿಂದ ಈ ನಾಯಕರ ಹತ್ತಿರವಿದ್ದ ಇಬ್ಬರು ಪೂಜಾರಿಗಳ ಹುಡುಗರನ್ನು ಭೋಗಪಟ್ಟಿ ಬರಿಸಿಕೊಟ್ಟು ತಮ್ಮ ತರುವಾಯಕ್ಕಾಗಿ ನಿಯಮಿಸಿಕೊಂಡರು.ಆ ನಾಯಕರ ಮುಂದೆ ನೀರುತಡಿ ಎಂಬ ಊರ ನೆರೆಯಲ್ಲಿ ತಂಗದ್ದಿರು.ಅಲ್ಲಿ ಒಂದು ಗುಡಿಯನ್ನು ಕಟ್ಟಿಸಿ ಕುಲದೆವತೆಯನ್ನು ಸ್ಥಾಪನೆ ಮಾಡಿದರು.ಬರಬರುತ್ತ ಅವರು ಸುತ್ತಮುತ್ತಲಿನ ಹಳ್ಳಿಗಳಲ್ಲಿದ್ದು ಕೊಂಡು ಆ ದೇವರಿಗೆ ನಡೆದುಕೊಳ್ಳುತ್ತಿದ್ದರು. ಇಷ್ಟೆಲ್ಲಾ ಈ ತಿಮ್ಮಣ್ಣ ನಾಯಕನ ಪೂರ್ವವ್ರುತ್ತವಾಯಿತು. ಆ ಮೂವರು ನಾಡತಳವಾರದಲ್ಲಿ ಹಿರಿಯನಾದ ಸಬ್ಬಗ್ಗಡಿ ಓಬನಾಯಕನೇ ಈತನ ತಂದೆ.
                    ಈ ತಿಮ್ಮಣ್ಣನಾಯಕನು ಮತ್ತಿ ಗ್ರಾಮದಲ್ಲಿ ನಿಂತನು. ಆದುದರಿಂದ ಈತನಿಗೆ ಮತ್ತಿ ತಿಮ್ಮಣ್ಣನಾಯಕನೆಂದು ಹೆಸರಾಯಿತು.ಇವನ ಕಕ್ಕ ಜಡ ಕಲ್ಲುನಾಯಕನ ಮಗ ಹಿರಿಹನುಮನಾಯಕನು ಸಾಗಲೆ ಗ್ರಾಮದಲ್ಲಿ ಇದ್ದನು. ಇನ್ನೊಬ್ಬ ಕಕ್ಕ ಬುಳ್ಳನಾಯಕನ ಮಕ್ಕಳು ಚಿಕ್ಕಹನುಮನಾಯಕ ಒಬಣ್ಣನಾಯಕರು ಬಿಳಿ ಚೊಡಿನಲ್ಲಿ ವಾಸ ಮಾಡಿದರು.ತಿಮ್ಮಣ್ಣನಾಯಕನು ತನ್ನ ಸುತ್ತಮುತ್ತಲಿನ ನಾಡಿನಲ್ಲಿ ಪ್ರಬಲನಾಗುತ್ತ ನಡೆದನು. ಆಗ ವಿಜಯನಗರದ ಅವನತಿಗೆ ಆರಂಭವಾಗತೊಡಗಿತು.ಮುಸಾಲ್ಮನರೆಲ್ಲ ಒಟ್ಟು ಸೇರಿ ಕರ್ನಾಟಕ ಸಿಂಹಾಸನವನ್ನು ಕಿತ್ತೊಗೆಯಲು ಹವಣಿಸುತ್ತಿದ್ದರು.ಈ ಕೋಲಾಹಲದಲ್ಲಿ ತಮಗೆ ಆಸರವಾಗಿರಬೆಕೆಂದು ವಿಜಯನಗರದ ರಾಯರು ತಮ್ಮ ಸಾಮ್ರಾಜ್ಯದಲ್ಲಿಯ ವೀರರನ್ನು ತಮ್ಮ  ಮಿತ್ರರನ್ನಾಗಿ ಮಾಡಿಕೊಳ್ಳುತ್ತಿದ್ದರು. ಆ ಸಮಯದಲ್ಲಿ ವಿಜಯನಗರದ ಮುಖ್ಯ ಕಾರಭಾರಿಯಾಗಿದ್ದ,ರಾಜಸಂತತಿಯ ಸಾಳ್ವ ನರಸಿಂಗರಾಯನ ದೃಷ್ಟಿ ಈ ಮತ್ತಿ ತಿಮ್ಮಣ್ಣನ ಕಡೆಗೆ ಹೊರಳಿತು.ತಮ್ಮ ಸಾಮ್ರಾಜ್ಯಕ್ಕೆ ಈತನಿಂದ ವಿಶೇಷ ಸಹಾಯವಾಗಬಹುದೆಂದು ಈತನ ಧೀರ ವ್ರುತ್ತಿ ವೀರ ಕಳೆಗಳಿಂದ ಗುರುತು ಹಿಡಿದು ಹೊಳಲಕೆರೆಯ ನಾಯಕತನವನ್ನು ಈ ತಿಮ್ಮಣ್ಣನಾಯಕನಿಗೆ ಕೊಡಿಸಿದನು. ಈತನು ವಿಜಯನಗರದ ರಾಯರ ವಿಶೇಷ ಗೌರವಕ್ಕೆ ಪಾತ್ರನಾಗಿ ಹಿರಿಯೂರ ನಾಯಕತನವನ್ನು ಕೆಲವು ದಿನಗಳಲ್ಲಿ ಪಡೆದುಕೊಂಡನು. ಚಿಲ್ಲಹಳ್ಳಿಯ ಓದುವ ತಿಮ್ಮವ್ವ ಎಂಬುವಳು ಈ ತಿಮ್ಮಣ್ಣನಾಯಕನನ್ನು ಮದುವೆಯಾದಳು.
                  ಮುಂದೆ ನಾಲ್ಕು  ವರ್ಷಗಳವರೆಗೆ ತಿಮ್ಮಣ್ಣನಾಯಕನು ರಂಗಪಟ್ಟಣ್ಣವನ್ನು ಕಟ್ಟಿಸಿದನು. ಆದರೆ ಎರಡು ವರ್ಷಗಳಲ್ಲಿಯೆ ತರಿಕೆರೆಯ ಫೂವಳ ಹನುಮಪ್ಪನು ಐದು ಗ್ರಾಮಗಳನ್ನು ತೆಗೆದುಕೊಂಡು ಹೊಸದಾಗಿ ಕಟ್ಟಿದ ಆ ರಂಗಪಟ್ಟಣ್ಣಕ್ಕೆ ಲಗ್ಗೆ ಇಟ್ಟನು.ಇದನ್ನು ಕೇಳಿದೊಡನೆ ತಿಮ್ಮಣ್ಣನಾಯಕನು ಭುಗಿಭುಗಿಲ್ಲೆಂದು ಸಿಟ್ಟಾಗಿ ಕಟ್ಟಿರುಳಿಲ್ಲಿಯೆ ಪಾಳೆಯವನ್ನೆತ್ತಿಕೊಂಡು ನೂಲೋಕಣಿವೆಯಲ್ಲಿ ಹಾಯ್ದು ದುರ್ಗದ ಗುಡ್ಡಕ್ಕೆ ಬಂದನು. ಅಷ್ಟರಲ್ಲಿ ವೈರಿಗಳು ಅದನ್ನು ಸೂರೆಗೊಂಡು ಹಾಳುಮಾಡಿದ್ದರು. ಮುಂದೆ ೩೫ ವರ್ಷಗಳ ಬಳಿಕ ತಿಮ್ಮಣ್ಣನಾಯಕನ ಮೊಮ್ಮಗ್ಗನ ಮತ್ತೆ ಅದುನ್ನು ಕಟ್ಟಿಸಿದನು. ರಂಗಪಟ್ಟಣ್ಣವು ಮುಗ್ಗಿದ್ದ ಬಳಿಕ ತಿಮ್ಮಣ್ಣನಾಯಕನು ಮೇಲ್ದುರ್ಗದಲ್ಲಿಯೇ ನಿಂತನು.ಅಲ್ಲಿ ಆತನಿಗೆ ಸಿದ್ದಪುರುಷರ ದರ್ಶನವಾಯಿತು.ಸಳನಿಗೆ ಜಿನಮುನಿಯೂ ಹುಕ್ಕನಿಗೆ ವಿದ್ಯಾರಣ್ಯರು ಮಾರ್ಗದರ್ಶಕರಾದಂತೆ ತಿಮ್ಮಣ್ಣನಾಯಕನಿಗೆ ಆ ಸಿದ್ಧ ಪುರುಷರು ಆದಿ ತೋರಿಸಿದರು. "ಅರಿತು ನಡೆದರೆ ಆರು ಪಟ್ಟ,ಮರೆತು ನಡೆದರೆ ಮೂರು ಪಟ್ಟ" ಎಂದು ಅವರು ಉಪದೇಶಿಸಿದರು. ತಿಮ್ಮಣ್ಣನಾಯಕನು ಆ ಸಿದ್ಧರ ಅಪ್ಪಣ್ಣೆಯಂತೆ ಅಲ್ಲಿಯೇ ಇದ್ದು ಮೆಲ್ದುರ್ಗದ ಕೋಟೆಯನ್ನು ಅರಮನೆಯನ್ನು ಕಟ್ಟಿಸಿದನು. 
                    ತಿಮ್ಮಣ್ಣನಾಯಕನು ಇನ್ನೂ ಪ್ರೌಢಾವಸ್ತೆಯಲ್ಲಿ ಕಾಲಿಕ್ಕುತ್ತಿರುವಾಗಲೆ ತಾಳಿ ಕೋಟೆಯ ಕಾಳಗವಾಗಿ ವಿಜಯನಗರದ ಸಾಮ್ರಾಜ್ಯವು ಪತನವಾಯಿತು.ಆಗ ತಿಮ್ಮಣ್ಣ ನಾಯಕನ ತಂದೆಯವರು ಈ ಕಡೆ ಬಂದು ೮-೯ ವರ್ಷಗಳು ಮಾತ್ರವೆ ಆಗಿದ್ದವು.ಈತನ ಪಾಳೆಯವು ಚಿಕ್ಕದ್ದಾಗಿದ್ದರಿಂದ ಈತನಿಗೆ ಯುದ್ಧಕ್ಕೆ ಹೋಗುವ ಪ್ರಸಂಗ ಬರಲಿಲ್ಲ.ಜನರ ಕಣ್ಣಿಗೆ ಕಾಣುವಷ್ಟು ತಿಮ್ಮಣ್ಣನಾಯಕನು ಬಲಿತುದೆಂದರೆ ವಿಜಯನಗರವು ನಷ್ಟವಾದ ಬಳಿಕ.ಆಗಲು ವಿಜಯನಗರದ ಅರಸು ಮನೆತನದವರು ಬೇರೆ ಬೇರೆ ಕಡೆಗೆ ರಾಜಧಾನಿಗಳನ್ನು ಮಾಡಿಕೊಂಡು ಆಳುತ್ತಲ್ಲೆ ಇದ್ದರು. ದಿನದಿನಕ್ಕೆ ಸೊರಗುತ್ತ ನೆಡೆದ ವಿಜಯನಗರದವರು ಬೆಳೆಯುತ್ತಾ ನಡೆದ ತಿಮ್ಮಣ್ಣನಾಯಕನ್ನನ್ನು ಮೆಚ್ಚಿಸಿಕೊಳ್ಳಬೇಕಾಯಿತು.ಅದಕ್ಕಾಗಿ ಅವರು ಚಿತ್ರದುರ್ಗದವರ ಮೆಲ್ದುರ್ಗಗಳ ನಾಯಕತ್ವವನ್ನು ತಿಮ್ಮಣ್ಣನಾಯಕನಿಗೆ ಕೊಟ್ಟರು. ಆ ವಿರೂಪಾಕ್ಷ ಜೊಯಿಸನ ಮಗ ಪರಶುರಾಮಪ್ಪನು ಸರ್ವಾದಿಕಾರಿಯಾದನು.ಪರಶುರಾಮಪ್ಪನ ನಂಬಿಕೆಯ ವ್ರುತ್ತಿಗೆ ಸಂತುಷ್ಟನಾದ ತಿಮ್ಮಣ್ಣನಾಯಕನು ಆತನ ಪರಂಪರೆಗೆಲ್ಲ "ಹರಿಯದ ಹಚ್ಚದ ಮುರಿಯದ ಒಡವೆ" ಆಗಬೇಕೆಂದು ಕೆಲವು ಹಳ್ಳಿಗಳ ಸೇನು ಭೂಗತನವನ್ನು ಆತನಿಗೆ ಕೊಟ್ಟನು.ಆ ಬಗ್ಗೆ ಶಿಖಾಮೊಹರು ರುಜುವಿನಿಂದ ಶಾಸನ ಬರೆದುಕೊಟ್ಟರು. ಇದು ತಿಮ್ಮಣ್ಣನಾಯಕನ ಆಯುಷ್ಯದ ಆದಿ ಭಾಗದ ಚರಿತ್ರೆಯಾಯಿತು.