ಸದಸ್ಯ:Harshitha 123456/sandbox
ಅಸ್ತಮಾ
ಅಸ್ತಮಾ ರೋಗಿಗಳಿಗೆ ರೋಗದ ಧಾಳಿಯಾದಾಗ ಯಾವುದೇ ಜೌಷಧ ಸಿಗದಿದ್ದಂತಹ ಸಂದರ್ಭದಲ್ಲಿ ಬಿಸಿ ನೀರಿಗೆ ೫-೧೦ ತುಲಸಿ ಎಲೆ ಹಾಕಿಕೊಂಡು ಕುಡಿದರೆ ಸ್ವಲ್ಪ ಉಪಶಮನ ದೊರೆಯುತ್ತದೆ. ರೋಗದ ತೀವೃ ಧಾಳಿ ನಿಂತ ನಂತರ ಇದನ್ನು ಬಳಸಬಹುದು.
೩-೬ಗ್ರಾಂ ತಿಫಲ ಚೂರ್ಣವನ್ನು ಬಿಸಿ ನೀರಿನಲ್ಲಿ ಕದಡಿಕೊಂಡು ಕುಡಿಯಿರಿ. ಇದರಿಂದ ಮಲಬದ್ಧತೆ ನಿವಾರಣೆಯಾಗಿ ಅಸ್ತಮಾ ಧಾಳಿಗೆ ಅವಕಾಶ ಕಡಿಮೆಯಾಗುತ್ತದೆ.
ಬಿಸಿನೀರಿನಲ್ಲಿ ೩ ಗ್ರಾಂ ನಷ್ಟು ಕಟುಕಿ ಚೂರ್ಣವನ್ನು ಬೆರಸಿ ರಾತ್ರಿ ಮಲಗುವ ಮುನ್ನ ಸೇವಿಸಿ.
ಹಸುವಿನ ತುಪ್ಪದಲ್ಲಿ ೩ ಗ್ರಾಂ ಸೀತಾಫಲಾದಿ ಚೂರ್ಣವನ್ನು ಬೆರೆಸಿ ಸೇವಿಸಿ. ಇದರಿಂದ ಉಸಿರುನಾಳದ ಉರಿ ಕಡಿಮೆಯಾಗುತ್ತದೆ.
ಕುಡಿಯುವ ಟೀಗೆ ತುಳಸಿ ಎಲೆಯ ಮತ್ತು ಶುಂಠಿ ಚೂರುಗಳನ್ನು ಸೇರಿಸಿ ಕುಡೀಯಿರಿ
ಒಂದು ಚಮಚ ತುಳಸಿ ಎಲೆಯ ರಸಕ್ಕೆ ಒಂದು ಚಮಚ ಶುಂಠಿ ರಸ ಸೇರಿಸಿ ಇದಕ್ಕೆ ಒಂದೆರಡು ತೊಟ್ಟು ಜೇನುತುಪ್ಪ ಸೇರಿಸಿ ಕುಡಿದರೆ ಅಸ್ತಮಾ ರೋಗಿಗಳಿಗೆ ಒಳ್ಳೆಯದು.
ಬೆಳ್ಳುಳ್ಳಿಯನ್ನು ಅರೆದು ರಸವನ್ನು ಹಿಂಡಿಕೊಳ್ಳಿ. ಒಂದು ಟೀ ಚಮಚ ಬಿಸಿ ನೀರು ಬೆರೆಸಿ ದಿನಕ್ಕೆರಡು ಬಾರಿ ಕುಡಿಯಿರಿ. ಇದನ್ನು ಮೂರು ತಿಂಗಳ ಕಾಲ ಮಾಡಿದರೆ ಅಸ್ತಮಾ ಉಪಶಮನವಾಗುತ್ತೆದೆ.
ಕುಸುಬೆ ಬೀಜದ ಪುಡಿ ಅರ್ಧ ಚಮಚದಷ್ಟು ತೆಗೆದುಕೊಳ್ಳಿ. ಇದಕ್ಕೆ ಸ್ವಲ್ಪ ಜೇನುತುಪ್ಪ ಬೆರೆಸಿ ದಿನಕ್ಕೊಮ್ಮೆ ತೆಗೆದುಕೊಂಡರೆ ಅಸ್ತಮಾ ರೋಗಿಗಳು ಒಳ್ಳೆಯದು. ಇದು ಕಫವನ್ನು ಕರಗಿಸಿ ರೋಗಿಗಳಿಗೆ ನೆಮ್ಮದಿ ನೀಡುತ್ತದೆ.
೩ ಲೋಟ ನೀರಿಗೆ ಒಂದು ಹೊಡಿ ನುಗ್ಗೆ ಸೊಪ್ಪು ಹಾಕಿ ೫ ನಿಮಿಷಗಳ ಕಾಲ ಕುದಿಸಿ ಇದಕ್ಕೆ ಒಂದು ಚೂರು ಉಪ್ಪು, ಕರಿಮೆನಸಿನಪುಡಿ ಬೆರಸಿ ಕುಡಿಯಿರಿ
ಹಾಗಲಕಾಯಿ ಗಿಡದ ಬೇರನ್ನು ಅರೆದು ಒಂದು ಚಮಚ ಜೇನುತುಪ್ಪ ಅಥವಾ ತುಳಸಿ ಎಲೆಯ ರಸ ಸೇರಿಸಿ ಪ್ರತಿರಾತ್ರಿ ಒಂದು ತಿಂಗಳ ಕಾಲ ಸೇವಿಸಿದರೆ ಅಸ್ತಮಾ, ಬ್ರಾಂಕೈಟಿಸ್, ನೆಗಡಿ ಇವನ್ನು ನಿಯಂತ್ರಿಸಬಹುದು.