ಸದಸ್ಯ:Hampesh K S/ನನ್ನ ಪ್ರಯೋಗಪುಟ3
ಜ್ಞಾನೇಂದ್ರಿಯಗಳು
[ಬದಲಾಯಿಸಿ]ಜಗತ್ತಿನ ವಿಚಾರದ ಅರಿವಿಗೆ ಮತ್ತು ಜ್ಞಾನಕ್ಕೆ ಇಂದ್ರಿಯಗಳೇ ಕಿಟಕಿಗಳು. ಈ ಕಿಟಕಿಗಳ ಮೂಲಕವೇ ರೂಪ, ಶ್ರವಣ, ರಸನ, ಗಂಧ, ಮತ್ತು ಸ್ಪರ್ಷಗಳ ಅರಿವಾಗುವುದು. ಈ ಅರಿವಿಲ್ಲದಿದ್ದರೆ ಮನುಷ್ಯ ಬದುಕುವುದು ಕಷ್ಟ. ಈ ಇಂದ್ರಿಯಗಳು ಸಮರ್ಪಕವಾಗಿ ಕೆಲಸ ಮಾಡಿದರೆ ವ್ಯಕ್ತಿ ತನ್ನ ಹೊರಪ್ರಪಂಚಕ್ಕೆ ಸರಿಯಾಗಿ ಹೊಂದಿಕೊಳ್ಳಬಲ್ಲ. ಜನಸಾಮಾನ್ಯರು ಮನುಷ್ಯನಲ್ಲಿ ಪಂಚೇಂದ್ರಿಯಗಳಿವೆ ಎಂದು ಮಾತ್ರ ತಿಳಿದಿದ್ದಾರೆ. ಅವುಗಳೆಂದರೆ ದರ್ಶನೇಂದ್ರಿಯ, ಶ್ರವಣೇಂದ್ರಿಯ, ರಸನೇಂದ್ರಿಯ, ಘ್ರಾಣೇಂದ್ರಿಯ ಮತ್ತು ಸ್ಪರ್ಶೇಂದ್ರಿಯ. ಇವುಗಳೇ ಅಲ್ಲದೆ ಯಾತನೇಂದ್ರಿಯಗಳು, ಶೀತೇಂದ್ರಿಯಗಳು, ಉಷ್ಣೇಂದ್ರಿಯಗಳು, ಸಮತೋಲನೇಂದ್ರಿಯ ಇತ್ಯಾದಿಗಳಿವೆ. ಈ ಒಂದೊಂದು ಇಂದ್ರಿಯಕ್ಕೂ ತನ್ನದೇ ಆದ ಅಂಗರಚನೆ ಮತ್ತು ಪ್ರವೃತ್ತಿಗಳಿವೆ. ಆದ್ದರಿಂದಲೇ ನಾವು ಕಣ್ಣುಗಳಿಂದ ನೋಡುತ್ತೇವೆ, ಕಿವಿಗಳಿಂದ ಕೇಳುತ್ತೇವೆ, ನಾಲಗೆಯಿಂದ ರುಚಿ ನೋಡುತ್ತೇವೆ, ಮೂಗಿನಿಂದ ವಾಸನೆಯನ್ನು ತಿಳಿಯುತ್ತೇವೆ. ಸಮತೋಲನೇಂದ್ರಿಯದಿಂದ ನಮ್ಮ ಶರೀರದ ವಿವಿಧ ಭಂಗಿಗಳನ್ನು ಅರಿಯುತ್ತೇವೆ. ಚರ್ಮೇಂದ್ರಿಯಗಳಿಂದ ಸ್ಪರ್ಶ, ಯಾತನೆ, ಶೀತ, ಉಷ್ಣ, ಚಲಿಸುವ ದಿಕ್ಕು ಮತ್ತು ಮಾಂಸ ಖಂಡಗಳಿಂದ ತೂಕ ಇವುಗಳ ಅನುಭವವಾಗುತ್ತದೆ. ರಚನೆ ಮತ್ತು ಇಂದ್ರಿಯಗಳ ಕಾರ್ಯವಿಧಾನಗಳಿಂದ ಹೊರಜಗತ್ತಿನ ವಿವರಗಳು ನರವಾಹಿಗಳ ರೂಪದಲ್ಲಿ ನರಕೇಂದ್ರವನ್ನು ತಲುಪಿ ಆ ವಸ್ತುವಿನ ಪ್ರತ್ಯಕ್ಷಾನುಭವವಾಗುತ್ತದೆ.
ದರ್ಶನೇಂದ್ರಿಯಗಳು
[ಬದಲಾಯಿಸಿ]ಎಲ್ಲಾ ಇಂದ್ರಿಯಗಳಿಗಿಂತ ಅತಿ ಮುಖ್ಯವಾದ ಇಂದ್ರಿಯವೆಂದರೆ ದರ್ಶನೇಂದ್ರಿಯ. ಅಂದರೆ ಕಣ್ಣು. ಈ ಇಂದ್ರಿಯ ಇತರೆ ಇಂದ್ರಿಯಗಳೊಂದಿಗೆ ಸಹಕಾರಿ ಆಯಾ ಇಂದ್ರಿಯ ಪ್ರಚೋದನೆಯ ಮತ್ತೊಂದು ಮುಖದ ಪರಿಚಯಮಾಡಿಕೊಂಡಿದೆ. ಆದುದರಿಂದಲೇ ನಾವು ಒಬ್ಬರು ಹಾಡುವುದನ್ನು ಮತ್ತು ಮಾತನಾಡುವುದನ್ನು ಕೇಳುವಾಗ ಆವರನ್ನು ನೋಡುತ್ತೇವೆ. ಉಪಾಧ್ಯಾಯರು ಹೇಳುವುದನ್ನು ಕೇಳುವಾದ ಅವರ ಕೈಕಾಲುಗಳ ಚಲನೆ, ಮುಖ, ಮತ್ತು ಕಣ್ಣುಗಳು ವ್ಯಕ್ತಪಡಿಸುವ ವಿವರಗಳಿಂದ, ಉಪನ್ಯಾಸ ಪೂರ್ಣವಾಗಿ ಅರ್ಥವಾಗುತ್ತದೆ. ಕೇವಲ ಕೇಳುವುದರಿಂದ ಅರ್ಥವಾಗದಿರುವುದು. ಕೇಳುವಿದರ ಜೊತೆಗೆ ನೋಡುವುದರಿಂದ ಇನ್ನೂ ಚೆನ್ನಾಗಿ ಅರ್ಥವಾಗುತ್ತದೆ. ಹಾಗೆಯೇ ತಿನ್ನುವಾಗ, ವಾಸನೆ, ನೋಡುವಾಗ ಆ ವಸ್ತುಗಳನ್ನು ಕಣ್ಣುಗಳಿಂದ ನೋಡುತ್ತೇವೆ.
ಕಣ್ಣುಗಳನ್ನು ವಿಜ್ಞಾನಿಗಳು ಕ್ಯಾಮರಾಕ್ಕೆ ಹೋಲಿಸುತ್ತಾರೆ. ಕ್ಯಾಮರಾದ ಸಮಸ್ತ ಸೂಕ್ಷ್ಮ ರಚನೆಗಳ ರಕ್ಷಣೆಗಾಗಿಯೇ ಹೊರಗೆ ಒಂದು ಲೋಹದ ಡಬ್ಬ ಅಥವಾ ಪೆಟ್ಟಿಗಟ ಇರಿತ್ತದೆ. ಹಾಗೆಯೇ ಕಣ್ಣಿಗೂ ಗಟ್ಟಿಯಾದ ಮತ್ತು ಬಿಳುಪಾದ ಹೊರ ಹೊದಿಕೆ ಇದೆ. ಇದನ್ನೇ ದೃಢಪಟಲ ಎನ್ನುತ್ತಾರೆ. ಅದರ ಒಳಗೆ ಮತ್ತೊಂದು ಕಪ್ಪಾದ ಪದರವಿದೆ. ಇದೇ ರಕ್ತಪಟಲ. ಈ ರಚನೆಯಿಂದಲೇ ಬೆಳಕಿನ ಕಿರಣಗಳು ಕಣ್ಣಿನ ಮುಂಭಾಗದಿಂದ ಬಿಟ್ಟು ಮತ್ತಾವ ಕಡೆಯಿಂದಲೂ ಕಣ್ಣಿನ ಒಳಕ್ಕೆ ಹೋಗವಾರವು. ಇದರ ಮೇಲೆ ಕಣ್ಣಿನ ಒಳಗೆ ಮತ್ತೊಂದು ತೆಳುವಾದ ಪದರವಿದೆ. ಇದನ್ನೆ ದೃಷ್ಠಿಪಟಲವೆನ್ನುತ್ತಾರೆ. ಇದರಲ್ಲಿಯೇ ದರ್ಶನಗ್ರಾಹಿಗಳಾದ ಸಲಾಕೆಗಳು ಮತ್ತು ಶಂಕುಗಳು ವಿತರಣೆಯಾಗಿರುವುದು. ಸಲಾಕಿಗಳು ಮುಂದೆ ಬೆಳಕಿನಲ್ಲಲ್ಲದೆ ಕತ್ತಲಲ್ಲೂ ಕೆಲಸಮಾಡುತ್ತವೆ. ಇವು ಕಣ್ಣಿನ ಅಂಧ ಬಿಂದುವಿನ ಬಲ ಭಾಗಕ್ಕೆ ಸ್ವಲ್ಪ ದೂರದಲ್ಲಿ ಅಸಂಖ್ಯಾತವಾಗಿ ಕೇಂದ್ರೇಕೃತವಾಗಿರುತ್ತವೆ. ಇದೇ “ಪೋವಿಯ” ಎನ್ನುವ ಕ್ಷೇತ್ರ. ಇಲ್ಲಿಂದ ಪರಿಧಿ ಎಡೆಗೆ ಹೋದಂತೆಲ್ಲಾ ಶಂಕುಗಳ ಸಂಖ್ಯೆ ತಗ್ಗುತ್ತಾ ಬಂದು ಸಲಾಕಿಗಳು ಹೆಚ್ಚಾಗುತ್ತದೆ. ಯಾವ ಪ್ರಚೋದನೆಯಾದರೂ ಈ ಪೋವಿಯ ಕ್ಷೇತ್ರವನ್ನು ತಲುಪಿದರೆ ಅದು ಚೆನ್ನಾಗಿ ಸ್ಪಷ್ಟವಾಗಿ ಕಾಣುತ್ತದೆ. ಇದು ಅತಿ ಸೂಕ್ಷ್ಮವಾದ ಕ್ಷೇತ್ರವದುದರಿಂದ ವರ್ಣಪೂರಿತ ವಸ್ತುಗಳನ್ನು ಗ್ರಹಿಸಬಲ್ಲದು. ಇದರ ಎಡಭಾಗಕ್ಕಿರುವ ಆಂಧ ಬಿಂದುವಿನ ಸ್ಥಳದಲ್ಲಿ ಸಲಾಕಿಗಳು ಮತ್ತು ಶಂಕುಗಳು ಇರುವುದಿಲ್ಲ. ಇಲ್ಲಿಂದಲ್ಲೇ ಕಣ್ಣಿನ ನರಗಳು ಮಸ್ತಿಷ್ತಕ್ಕೆ ಹಾದುಹೋಗುವುದುರಿಂದ ಈ ಕ್ಷೇತ್ರ ಯಾವ ಪ್ರಚೋದನೆಯನ್ನು ಗ್ರಹಿಸಬಲ್ಲದು. ಇದರ ಎಡಭಾಗಕ್ಕಿರುವ ಆಂಧ ಬಿಂದುವಿನ ಸ್ಥಳದಲ್ಲಿ ಸಲಾಕಿಗಳು ಮತ್ತು ಶಂಕುಗಳು ಇರುವುದಿಲ್ಲ. ಇಲ್ಲಿಂದಲೇ ಕಣ್ಣಿನ ನರಗಳು ಮಸ್ತಿಷ್ತಕ್ಕೆ ಹಾದುಹೋಗುವುದರಿಂದ ಈ ಕ್ಷೇತ್ರ ಯಾವ ಪ್ರಚೋದನೆಯನ್ನು ಗ್ರಹಿಸುವುದಿಲ್ಲ. ಪ್ರತಿಯೊಂದು ಕಣ್ಣಿನಲ್ಲೂ ಇಂತಹ ಒಂದು ಅಂಧಂಬಿಂದುವಿರುವುದು ಸಾಮಾನ್ಯ. ಈಗ ಕಣ್ಣಿನ ಮುಂಭಾಗಕ್ಕೆ ಬರೋಣ. ಕಣ್ಣಿನ ಮುಂಭಾಗದಲ್ಲಿ ಉಬ್ಬಿಕೊಂಡಿರುವ ಪಾರದರ್ಶಕದಂಥ ಪದರವೇ ಕಾರ್ನಿಯ. ಇದರ ಹಿಂದೆ ಒಂದು ಕಾಸಿನಗಲದ ಕಪ್ಪಾದ ಅಥವಾ ನೀಲಿ ಬಣ್ಣದ ಅಥವಾ ಕಂದುಬಣ್ಣದ ಬಿಲ್ಲೆಯಿದೆ. ಇದೇ ಕನೀನಿಕಾ ಪಟಲ. ಇದರ ಮಧ್ಯದಲ್ಲಿರುವ ಒಂದು ಸಣ್ಣ ರಂಧ್ರಕ್ಕೆ ಪಾಪೆ ಎಂದು ಹೆಸರು. ಈ ರಂಧ್ರದ ಸುತ್ತ ಎರಡು ರೀತಿಯ ಮಾಂಸಖಂಡಗಳಿವೆ. ಇವು ಸಮಯಕ್ಕೆ ತಕ್ಕಂತೆ ಕಣ್ಣಿನ ರಂಧ್ರವನ್ನು ಅಗಲವಾಗಿಯೂ ಮತ್ತು ಕಿರಿದಾಗಿಯೂ ಮಾಡುತ್ತವೆ. ಬೆಳಕು ಅತಿಯಾದರೆ ರಂಧ್ರ ಕಿರಿದಾಗಿಯೂ ಮಾಡುತ್ತವೆ. ಬೆಳಕು ಅತಿಯಾದರೆ ರಂಧ್ರ ಕಿರಿದಾಗುತ್ದೆ ಮಂಕಾದರೆ ಅಗಲವಾಗುತ್ತದೆ. ಇದರಿಂದ ಸ್ವಲ್ಪ ಹಿಂದೆ ಮಸೂರ ಇದೆ. ಇದನ್ನು ಸಿಲಿಯರಿ ಮಾಂಸಖಂಡಗಳು ಎರಡೂ ಪಕ್ಕಗಳಲ್ಲೂ ಹಿಡಿದುಕೊಂಡಿವೆ.
ಶ್ರವಣೇಂದ್ರಿಯ (ಕಿವಿ) ದರ್ಶನೇಂದ್ರಿಯನ್ನು ಬಿಟ್ಟರೆ ಅತಿ ಮುಖ್ಯವಾದ ಇಂದ್ರಿಯವೆಂದರೆ ಶ್ರವಣೇಂದ್ರಿಯ. ಇದರ ಸಹಾಯದಿಂದಲೇ ಕೇಳುವ ಶಬ್ಭಗದ್ಧಲವೇ ಅಥವಾ ಸಂಗೀತವೇ, ಧ್ವನಿ ಯಾರದು, ಯಾವ ದಿಕ್ಕಿನಿಂದ ಬರುತ್ತದೆ ಎಂಬೆಲ್ಲ ವಿಷಯಗಳನ್ನು ನಾವು ಅರಿಯುತ್ತೇವೆ. ದೂರದಿಂದಲೇ ಪರಿಚಿತರನ್ನು ಗುರುತಿಸುತ್ತೇವೆ. 1. ಪಿನ್ನ, 2. ಕಿವಿಯ ತಮಟೆ, 3, ನಡುಗಿವಿ, 4. ಕರ್ಣಾವರ್ತ, 5. ಅರ್ಧವೃತ್ತಾಕಾರದ ಸಮತೋಲನೇಂದ್ರಿಯ, 6. ಈಶ್ಚಿಯನ್ ನಾಳ. ಕಿವಿಯನ್ನು ಮೂರು ಭಾಗಗಳಾಗಿ ವಿಭಜಿಸಬಹುದು- ಹೊರಗಿವಿ, ನಡುಗಿವಿ, ಮತ್ತು ಒಳಗಿವಿ ಎಂದು. ಹೊರಗೆ ಕಾಣುವುದೇ ಪಿನ್ನ ಅಲ್ಲಿಂದ ಒಳಕ್ಕೆ ಒಂದು “ಎಸ್” ಆಕಾರದ ಮಾರ್ಗವಿದೆ. ಇದರ ತುದಿಯಲ್ಲಿ ಕಿವಿಯ ತಮಟೆ ಇದೆ. ಅಲ್ಲಿಂದ ಮುಂದೆ ಪೊಟರೆ ಇದೆ. ಅದೇ ನಡುಗಿವೆ, ಇಲ್ಲಿ ಮೂಳೆಗಳನ್ನು ಬಿಟ್ಟರೆ ಮತ್ತೇನೂ ಇಲ್ಲ. ಈ ಮೂರು ಮೂಳೆಗಳು ಕಿವಿಯ ತಮಟೆಯಿಂದ ಒಳಗಿವಿಯಿಂದ ಬಾಯಿಯವರೆಗೆ ಜೋಡಿಸಿಕೊಂಡಿರುತ್ತದೆ, ಮೊದಲನೇ ಸುತ್ತಿಗೆ ಮೆಲುಸ್, ಅದರಿಂದ ಮುಂದೆ ಇಂಕೆಸ್ ಮತ್ತು ರಿಕಾಪುಗಳಿವೆ. ರಸನೇಂದ್ರಿಯ (ನಾಲಿಗೆ) ರಸನೇಂದ್ರಿಯದ ಸಹಾಯದಿಂದ ತಿನಿಸುಗಳ ರುಚಿ ನೋಡುತ್ತೇವೆ. ರುಚಿ ಹಿತವಾಗಿದ್ದರೆ ತಿನ್ನುತ್ತೇವೆ. ಅಹಿತವಾಗಿದ್ದರೆ ಉಗುಳಿಬಿಡುತ್ತೇವೆ. ನಾಲಗೆಯಲ್ಲಿ ಗುಳ್ಳೆಗಳ ಆಕಾರದ ಅನೇಕ ಪಾಪಿಲೆಗಳಿವೆ. ನಾಲಿಗೆ ಹಿಂಭಾಗದಲ್ಲಿ ದಪ್ಪವಾಗಿ ಇರುವ 7 ಮತ್ತು 9 ಪಾಲೆಗಳಿವೆ. ಇವಿಗಳಿಗೆ, ಸರ್ ಕಂವಲೇ ಪಾಪಿಲೆಗಳಿಂದು ಹೆಸರು. ಇವು “ವಿ” ಆಕಾರದಲ್ಲಿ ಸಾಲಗಿ ವಿತರಣೆಯಾಗಿವೆ. ಇವುಗಳೇ ಅವುದೆ ಅನೆಕ ಸಣ್ಣ ಪಾಪಿಲೆಗಳು ನಾಲಗೆಯ ಮೇಲಿವೆ. ಅವುಗಳಿಗೆ ಪುಂಗಿ ರೂಪದ ಪಾಪಿಲೆಗಳೆಂದು ಹೆಸರು. ಒಂದೊಂದು ಪಾಪಿಲೆಯಲ್ಲೂ ಸುಮಾರು 245 ರಸನ- ಮೊಗುಗಳಿರುತ್ತವೆ. ಇವುಗಳ ಬುಡದಲ್ಲಿ ರಸನ- ಸಂವೇದನೆ ನರಗಳು ಅಂಟಿಕೊಂಡಿರುತ್ತವೆ. ಈ ಮೊಗ್ಗುಗಳೇ ರಸಾನಿಭವಕ್ಕೆ ಕಾರಣ. ನಾವು ತಿಂದ ಆಹಾರ ದ್ರವದಲ್ಲಿ ಕರಗಿ ನಾಲಿಗೆಯಲ್ಲಿರುವ ರಸನ ಮೊಗ್ಗುಗಳಿಗೆ ಇಳಿದು ಅದನ್ನು ಪ್ರಚೋದಿಸುತ್ತವೆ. ನಾಲಿಗೆಯ ತುದಿ ಸಿಹಿ, ಹಿಂಭಾಗ ಕಹಿ, ಅಕ್ಕಪಕ್ಕಗಳು ಹುಳಿ, ಎಲ್ಲ ಭಾಗಗಳು ಉಪ್ಪನ್ನು ಗ್ರಹಿಸುತ್ತವೆ. ಹೀಗೆ ನಾಲಗೆಯಲ್ಲಿ ನಾಲ್ಕು ರುಚಿಗಳಿಗೆ ನಾಲ್ಕು ಕ್ಷೇತ್ರಗಳಿವೆ. ಘ್ರಾನೇಂದ್ರಿಯ (ಮೂಗು) ಘ್ರಾನೇಂದ್ರಿಯದ ಮೂಲಕ ನಾವು ತಿನ್ನುವ ಆಹಾರದ ವಾಸನೆಯನ್ಮು ಸವಿದು ಆನಂತರ ತಿನ್ನುತ್ತೇವೆ ಅಥವಾ ತಿರಸ್ಕರಿಸುತ್ತೇವೆ. ಹೀಗೆ ನಾವು ನಮ್ಮ ಆಹಾರದ ಆಯ್ಕೆಯನ್ನು ವಾಸನೆಯ ಆಧಾರದ ಮೆಲೆ ಮಾಡುತ್ತೇವೆ. ರಸನ ಮತ್ತು ಘ್ರಾಣೇಂದ್ರಿಯಾಗಳನ್ನು ಯಮಳೇಂದ್ರಿಯಗಳೆನ್ನುತ್ತಾರೆ. ಇವೆರಡೂ ಒಂದನ್ನೋಂದು ಅವಲಂಬಿಸಿದೆ.
ಚರ್ಮೇಂದ್ರಿಯಗಳು (ಚರ್ಮ) ಚರ್ಮದಡಿಯಲ್ಲಿ ಐದು ವಿಧವಾದ ಇಂದ್ರಿಯ ಬಿಂದುಗಳಿವೆ. ಎಂದರೆ 1.ಮೇಸ್ನರ್ನ ಕರ್ಣಿಕೆ 2.ಮುಕ್ತ ನರ ಕೊನೆಗಳು 3.ಕ್ರೂಸೆಕೊನೆ ಬಲ್ಪುಗಳು4,ರುಫನಿ ಕೊನೆಗಳು ಮತ್ತು 5, ಪೆಸಿನಿಯನ್ ಕರ್ಣಿಕೆ. ಈ ಇಂದ್ರಿಯ ಬಿಂದುಗಳು ಶರೀರದ ಒಂದೊಂದು ಭಾಗದಲ್ಲಿ ಒಂದೊಂದು ಪ್ರಮಾಣದಲ್ಲಿ ವಿತರಣೆಯಾಗಿದೆ. ಸ್ಪರ್ಶೀದ್ರಿಯಾಗಳು ಒಂದು ಚದರ ಸೆಂಟಿಮೀಟರ್‍ನಲ್ಲಿ 25 ಬಿಂದುಗಳಿರುತ್ತವೆ. ಎಂದೂ, ಯಾತನೆ ಬಿಂದುಗಳು 100 ರಿಂದ 125 ಇರುತ್ತದೆ. ದೈಹಿಕಸಮತೋಲನೇದ್ರಿಯ.ಸ ಒಂಗಿವಿಯಲ್ಲಿರುವ ಈ ಇಂದ್ರಿಯದಲ್ಲಿ ಮೂರು ಅರ್ಧ ವ್ಯತ್ತಾಕಾರದ ನಾಳೆಗಳಿವೆ. ಪ್ಪತಿಯೊಂದರ ಬುಡದಲ್ಲಿ ದಂಟಿನಂತಹ ದಪ್ಪವಾದ ಅಂಪುಲೆ ಎಂಬ ಅಂಗವಿರುತ್ತಿದೆ. ಅದರಲ್ಲಿ ಕ್ರಿಸ್ಟ ಎಂಬ ವಸ್ತುವಿದೆ. ಇದರಲ್ಲಿ ಕೂದಲಿನ ಗಾತ್ರದ ನರತುದಿಗಳಿವೆ. ಮೂರು ಕಾಲುವೇಗಳಲ್ಲೂ ಎಂಡೋಲಿಂಪ್ ಎಂಬ ದ್ರವ ತುಂಬಿರುತ್ತದೆ. ಹೀಗೆ ನಮ್ಮ ಶರೀರದ ವಿವಿಧ ಇಂದ್ರಿಯಗಳು ವಿವಿಧ ಪ್ರಚೋದನೆಗಳ ಅನುಭವವನ್ನು ಉಂಟುಮಾಡಿ ಸೂಕ್ತ ರೀತಿಯಲ್ಲಿ ಅವುಗಳಿಗೆ ಅನುಕ್ರಿಯೆ ಅಥವಾ ಪ್ರತಿಕ್ರಿಯೆ ತೋರಲು ಸಹಾಯ ಮಾಡುತ್ತವೆ. ಇವುಗಳಿಲ್ಲದೆ ಮನುಷ್ಯ ಬದುಕಲಾರ.