ಸದಸ್ಯ:H K SUMANTH/ನನ್ನ ಪ್ರಯೋಗಪುಟ
ಹೂವಿನಹಡಗಲಿ
[ಬದಲಾಯಿಸಿ]ವಿಜಯನಗರ ಜಿಲ್ಲೆಯ ಒಂದು ತಾಲೂಕು ಕೇಂದ್ರ. ಇದು ವಿಜಯನಗರ (ಹೊಸಪೇಱೆ) ಇಂದ ಸುಮಾರು ೭೦ ಕಿ.ಮೀ. ದೂರದಲ್ಲಿದೆ. ಈ ಊರು ಮಲ್ಲಿಗೆ ಹೂವಿಗೆ ಪ್ರಸಿದ್ಧ.
ಈ ಊರಿನ ಹೆಸರಿನ ಮೂಲದ ಬಗೆಗೆ ಹಲವು ಕಥೆಗಳಿವೆ.
ಹಿಂದೆ ವಿಜಯನಗರ ರಾಜರ ಕಾಲದಲ್ಲಿ ಮಲ್ಲಿಗೆ ಹೂವುಗಳನ್ನು ದೋಣಿಯಲ್ಲಿ ತುಂಬಿ ವಿಜಯನಗರದ ಶ್ರೀ ವಿರುಪಾಕ್ಷ ದೇವರ ಪೂಜೆಗೆ ಪ್ರತಿನಿತ್ಯ ಈ ಊರಿನಿಂದ ತುಂಗಭದ್ರಾ ನದಿ ಮೂಲಕ ಕಳಿಸಿಕೊಡಲಾಗುತಿತ್ತು. ಈ "ಹೂವಿನ ಹಡಗು" ಇಂದ "ಹೂವಿನ ಹಡಗಲಿ" ಎಂಬ ಹೆಸರು ಬಂತು ಎನ್ನುವ ಮಾತು ಇದೆ. ಈ ಊರಿಗೆ ಹೂವಿನ ಹಡಗಲಿ ಎಂದು ಹೆಸರು ಬರಲು ಈ ಊರಿನಿಂದ ಹಂಪೆಗೆ ಹೂ ಕಾರಣ ಅಲ್ಲ. ಹಂಪಿ ವಿಜಯನಗರ ನಗರ ಸಾಮ್ರಾಜ್ಯ ಸ್ಥಾಪನೆಯಾದ ಸುಮಾರು ೩೦೦ ವರ್ಷಗಳ ಮೊದಲೇ ಈ ಊರಿಗೆ ಊವಿನ ಹಡಗಲಿ (ಪೂವಿನ ಪಡಂಗಿಲೆ) ಎಂದು ಕಲ್ಯಾಣಿ ಚಾಲುಕ್ಯ ದೊರೆ ಆರನೆ ವಿಕ್ರಮಾದಿತ್ಯನ ಕಾಲದ ಚನ್ನಕೇಶವ ದೇವಸ್ಥಾನದ ಕುರಿತು ದಾಖಲಾಗಿದೆ. ಹೂವಿನ ಹಡಗಲಿ ತಾಲೂಕಿನಲ್ಲಿ ಹಿರೇ ಹಡಗಲಿ ಎಂಬ ಗ್ರಾಮದಲ್ಲಿ ಐತಿಹಾಸಿಕ ಕಲ್ಲೆಶ್ವರ ದೇವಸ್ಥಾನವಿದೆ. ಈ ದೇವಸ್ಥಾನವನ್ನು ಜಕ್ಕಣಚಾರಿ ಕೆತ್ತಿದನೆಂದು ಹೇಳುತ್ತಾರೆ, ಈ ದೇವಸ್ಥಾನದಲ್ಲಿ ಶಾತವಾಹನರ ಮೂಲ ಯಾವುದೆಂದು ತಿಳಿಸುತ್ತದೆ. ಶಾತವಾಹನರ ಮೂಲ ಕನ್ನಡ ಎಂಬುದನ್ನು ಇದು ತಿಳಿಸುತ್ತದೆ.
೪೮ ಹಳ್ಳಿಗಳನ್ನು ಒಳಗೊಂಱಿದೆ. ಅದರಲ್ಲಿ ತಾಲೂಕಿನ ಪ್ರಮುಖ ಹಳ್ಳಿಗಳು ಮತ್ತು ಊರುಗಳು ನವಲಿ, ಹೊಸ ಹೋನ್ನೂರು, ಮಾಗಳ, ಹಿರೇಹಡಗಲಿ, ಇಟ್ಟಗಿ, ಮುದೇನೂರು, ಸೋಗಿ,ಮದಲಗಟ್ಟಿ ಇತ್ಯಾದಿಗಳು.