ಸದಸ್ಯ:HSshishira/sandbox
ಬೆಳ್ಳಕ್ಕಿ ಹೂವು
ಬಿಳಿ ಬೆಳ್ಳಕ್ಕಿ ಹೂವಿನ ಸಸ್ಯ ಎಂದು ಕರೆಯಲ್ಪಡುವ ಹಬೆನೇರಿಯಾ ರೇಡಿಯೇಟಾ ಒಂದು ಏಕದಳ ಸಸ್ಯವಾಗಿದ್ದು ಜಪಾನಿನ ಪ್ರಸಿದ್ದ ಆರ್ಕಿಡ್ ಪ್ರಬೇಧವಾಗಿದೆ. ಆರ್ಕಿಡೇಸಿಯೆ ಕುಟುಂಬಕ್ಕೆ ಸೇರಿದ್ದು, ವೈಜ್ಞಾನಿಕ ಹೆಸರು ಪೆಕ್ಟೀಲಿಸ್ ರೇಡಿಯೇಟಾ.
ಹೆಚ್ಚಾಗಿ ಚೀನಾ, ಜಪಾನ್, ಕೊರಿಯಾ ಮತ್ತು ರಷ್ಯಾಗಳ ಹುಲ್ಲುಗಾವಲಿನ ತೇವಾಂಶಭರಿತ ಹಾಗೂ ಜೌಗು ಪ್ರದೇಶಗಳಲ್ಲಿ ಹೆಚ್ಚಾಗಿ ಕಂಡುಬರುವ ಸಸ್ಯವಿದು. ಸೊಗಸಾದ ಬಿಳಿ ಹೂವುಗಳಿಂದಾಗಿ ಬಿಳಿ ಬೆಳ್ಳಕ್ಕಿ ಹೂವಿನ ಸಸ್ಯ ಎಂದು ನಮ್ಮಲ್ಲಿ ಕರೆಯುತ್ತಾರೆ. ಜಪಾನಿಗರು ಇದನ್ನು 'ಸಾಗಿಸೋ' ಎನ್ನುತ್ತಾರೆ.
ಗಿಡದ ಕಾಂಡದ ಗೆಡ್ಡೆಯ ಮೇಲೆ ಹೂವು ಹುಲ್ಲಿನಂತೆ ಬೆಳೆಯುತ್ತದೆ.ಇದರ ಎಲೆಗಳು ಐದರಿಂದ ಇಪ್ಪತ್ತು ಸೆಂ.ಮೀ. ಉದ್ದವಿದ್ದು, ಒಂದು ಸೆಂಟಿಮೀಟರ್ ನಷ್ಟು ಉದ್ದವಾದ ಪ್ರತೀ ಗೋನೆಯು ಋತುಮಾನಕ್ಕೆ ತಕ್ಕಂತೆ ಹಳೆಯ ಹೂವನ್ನು ಉದುರಿಸಿ ಹೊಸ ಹುವುಗಳನ್ನು ಬಿಡುತ್ತದೆ.
ಜುಲೈ ಅಂತ್ಯದಿಂದ ಪ್ರಾರಂಭಿಸಿ ಆಗಸ್ಟ್ ವರೆಗೂ ಹೂ ಬಿಡುತ್ತದೆ. ಹೂವಿನ ದಳಗಳು ಬಿಳಿ ಬಣ್ಣದಿಂದ ಕೂಡಿದ್ದು, ನಾಲ್ಕು ಸಂಟಿಉಮೀಟರ್ ನಷ್ಟು ಉದ್ದವಾಗಿರುವುದರಿಂದ ಹಾಗೂ ಹೂವು ಉದ್ದವಾಗಿ ನೀಳಾಕಾರವಾಗಿ ಚಾಚಿಕೊಂಡಿದ್ದು ಹಾರುತ್ತಿರುವ ವಿಮಾನ ಅಥವಾ ಬಿಳಿ ಬೆಳ್ಳಕ್ಕಿಯನ್ನು ಹೋಲುತ್ತದೆ. ಅಧಿಕ ಪ್ರಮಾಣದಲ್ಲಿ ಮಕರಂದವನ್ನು ಉತ್ಪಾದಿಸುವ ಹೂಗಳು ಅದಕ್ಕಾಗಿಯೇ ಹೆಚ್ಚು ದುಂಬಿಗಳನ್ನು ಆಕರ್ಷಿಸುತ್ತವೆ.
ಅಧಿಕ ಉಷ್ಣಾಂಶದ ಸಮಯದಲ್ಲಿ ಬೇಗನೆ ಒಂಗುವ ಈ ಸಸ್ಯವನ್ನು ಹೆಚ್ಚೆಂದರೆ ಎರಡು ಋತುಗಳವರೆಗೆ ಮಾತ್ರ ಕಾಪಾಡಬಹುದು. ಸಣ್ಣಗಡ್ಡೆಯಿಂದ ಬೆಳೆಯುವ ಈ ಸಸ್ಯವು ನಂತರ ಗಡ್ಡೆಯನ್ನೇ ಬೇರುಗಳನ್ನಾಗಿ ಮಾರ್ಪಡಿಸಿಕೊಳ್ಳುತ್ತದೆ. ಹಬೆನೇರಿಯಾ ರೇಡಿಯೇಟಾ ಹೆಚ್ಚಾಗಿ ಕಂಡುಬರುವ ಭೂಭಾಗದಲ್ಲಿ ನಗರೀಕರಂ ಭರದಿಂದ ನಡೆಯುತ್ತಿದ್ದು, ಈ ಸಸ್ಯ ಪ್ರಬೇಧ ಅಪಾಯದ ಅಂಚಿನಲ್ಲಿದೆ. ಹೂಗಳು ಮಾಲಿನ್ಯಕ್ಕೆ ತುತ್ತಾಗಿ ಮಾರುಕಟ್ಟೆಯಲ್ಲಿ ಬೇಡಿಕೆ ಕುಸಿತವೂ ನಡೆದಿದೆ. ಇತ್ತೀಚಿನ ವರ್ಷಗಳಲ್ಲಿ ದ್ವೀಪ ಪ್ರದೇಶಗಳಲ್ಲಿ ಮಾತ್ರ ಈ ಸಸ್ಯ ಕಂಡುಬರುತ್ತದೆ.