ಸದಸ್ಯ:HARINI/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
                              
                                                                             ದೌರ್ಬಲ್ಯವೇ ಮರಣ

ಗಾಳಿ, ನೀರು, ಬೆಳಕು, ಭೂಮಿ, ಆಕಾಶ, ಆಹಾರ – ಇವೆಲ್ಲ ಜೀವಿಗಳು ಜೀವಿಸಲು ಅತ್ಯಗತ್ಯವಾಗಿರುವ ಶಕ್ತಿಗಳಾಗಿವೆ. ನಮಗೆ ಜೀವಿಸಲು ನೆರವಾದ ಈ ಶಕ್ತಿಗಳನ್ನು ಮನುಷ್ಯ ಪುರಾತನ ಕಾಲದಿಂದಲೂ ಒಂದಿಲ್ಲೊಂದು ರೀತಿಯಲ್ಲಿ ಪೂಜಿಸುತ್ತ ಅವುಗಳಿಗೆ ಕೃತಜ್ಞತೆಯನ್ನು ಸಲ್ಲಿಸುತ್ತಾ ಬಂದಿದ್ದಾನೆ. ಅಂತೆಯೇ ಬೆಳಕಿಗೆ ಕಾರಣನಾದ ಸೂರ್ಯನನ್ನು , ಉಸಿರಿಗೆ ಆಸರೆಯಾದ ಗಾಳಿಯನ್ನು, ಕುಡಿಯುವ ನೀರಿಗೆ ಮೂಲಗಳಾದ ನದಿಗಳನ್ನು, ಹಸಿವಿಗೆ ಆಹಾರ ನೀಡುವ ಭೂಮಿಯನ್ನು ದೈವ ಸಮಾನವಾದ ಶಕ್ತಿಗಳೆಂದು ನಮ್ಮ ಪೂರ್ವಜರು ಪೂಜಿಸುತ್ತಾ ಬಂದಿದ್ದಾರೆ. ಮನುಷ್ಯನಿಗೆ ದುಡಿಯಲು, ಜೀವಿಸಲು ಬೇಕಾದ ದೈಹಿಕ, ಮಾನಸಿಕ ಶಕ್ತಿಯನ್ನೂ ಸಹ ಮೇಲೆ ತಿಳಿಸಿದ ಎಲ್ಲ ಶಕ್ತಗಳೇ ನೀಡುತ್ತವೆ.ಇಲ್ಲಿ ನಾವು ಸೂಕ್ಷ್ಮವಾಗಿ ಗಮನಿಸಬೇಕಾದ ಅಂಶವೆಂದರೆ ಈ ಜಗತ್ತಿನಲ್ಲಿ ಶಕ್ತಿಗೆ ಮತ್ತು ಶಕ್ತನಿಗೆ ಅಗ್ರ ಸ್ಥಾನವಿದೆ. ಅದೇ ಆಶಕ್ತನಿಗೆ ಯಾವುದೇ ಮನ್ನಣೆ ಅಥವಾ ಗೌರವವಿಲ್ಲ. ಆದ್ದರಿಂದ ಮನುಷ್ಯರಾದ ನಾವು ದೈಹಿಕವಾಗಿಯೂ, ಮಾನಸಿಕವಾಗಿಯೂ ಬಲಿಷ್ಠರಾಗಿರುವುದು ಶಕ್ತಿಶಾಲಿಗಳಾಗಿರುವುದು ಅತಿ ಮುಖ್ಯವಾಗಿದೆ. ನಮಗೆ ದೈಹಿಕ ಶಕ್ತಿ ಮತ್ತು ಮಾನಸಿಕ ಶಕ್ತಿ ಇದ್ದರೆ ಮಾತ್ರ ಮತ್ತೊಂದು ಮಹತ್ವಪೂರ್ಣವಾದ ಆತ್ಮಶಕ್ತಿಯನ್ನು ನಾವು ಪಡೆದುಕೊಳ್ಳಬಹುದಾಗಿದೆ. ನೀವು ಬಲಿಷ್ಟರಾಗಿದ್ದರೆ, ನಿಮ್ಮ ವೈರಿಗಳೂ ಸಹ ನಿಮಗೆ ಅಂಜಿಯಾದರೂ ಗೌರವವನ್ನು ಕೊಡುತ್ತಾರೆ. ನೀವು ದುರ್ಬಲರಾಗಿದ್ದರೆ ನಿಮಗೆ ಅತ್ಯಂತ ಹತ್ತಿರದ ನೆಂಟರೂ ರಕ್ತ ಸಂಬಂಧಿಗಳೂ ಸಹ ನಿಮ್ಮನ್ನು ತಿರಸ್ಕಾರ ಮತ್ತು ಅವಹೇಲನಕಾರಿ ದೃಷ್ಟಿಯಿಂದ ನೋಡುತ್ತಾರೆ. ಅಷ್ಟೇ ಏಕೆ ನಿಮ್ಮನ್ನು 9 ತಿಂಗಳು ಒಡಲಲ್ಲಿ ಹೊತ್ತು ಹೆತ್ತು ಮುದ್ದಿನಿಂದ ಸಾಕಿದ ತಾಯಿಯೇ ನೀವು ದುರ್ಬಲರಾಗಿ ಬೆಳೆದರೆ ನಿಮ್ಮನ್ನು ಶಪಿಸುತ್ತಾಳೆ! ಅದಕ್ಕೆಂದೇ ಪುರಂದರದಾಸರು ಹೇಳಿದ್ದು- ‘ಬಲಶಾಲಿಗೆ’ ಎಲ್ಲೆಡೆ ಸ್ನೇಹಿತರು, ಬಲಹೀನನಿಗೆ ಮಿತ್ರರೇ ಶತ್ರಗಳು.

                              ವ್ಯಕ್ತಿ ಚಾರಿತ್ರ್ಯ 

ಯಾವದೇ ಒಬ್ಬ ವ್ಯಕ್ತಿಯನ್ನು ಒಳ್ಳೆಯವನು ಅಥವಾ ಕೆಟ್ಟವನು ಎಂದು ತಿಳಿಯಬೇಕಾದರೆ ಅವನ ಹಿನ್ನಲೆ,ಅಂದರೆ ಕೌಟುಂಬಿಕ ಹಿನ್ನಲೆಯನ್ನು ಜಾಲಾಡಿಸಲಾಗುತ್ತದೆ. ಆದರೆ ಒಬ್ಬ ವ್ಯಕ್ತಿಯ ವ್ಯಕ್ತಿತ್ವವನ್ನು ನಿರ್ಧರಿಸಬೇಕಾದರೆ ಅವನ ಕೌಟುಂಬಿಕ ಹಿನ್ನಲೆಯಂತೆಯೇ ಅವನು ಬೆಳೆದ ಪರಿಸರ ಮತ್ತು ಅವನ ಅಭ್ಯಾಸಗಳನ್ನು ಪರಿಗಣಿಸುವದೂ ಅಷ್ಟೇ ಮುಖ್ಯವಾಗಿದೆ. ಏಕೆಂದರೆ ಒಬ್ಬ ವ್ಯಕ್ತಿಯ ಯಾವುದೇ ಕುಟುಂಬದವನಾಗಿದ್ದರೂ ಕಾರಣಾಂತರಗಳಿಂದ ಅವನು ಬೇರೆ ವಾತವರಣ ಪರಿಸರದಲ್ಲಿ ಬೆಳೆಯಬಹುದಾಗಿದೆ. ಆ ಪರಿಸರಕ್ಕೆ ತಕ್ಕಂತೆ ಅವನು ತನ್ನ ಅಭ್ಯಾಸಗಳನ್ನು ರೂಢಿಸಿಕೊಂಡಿರುತ್ತಾನೆ. ಉದಾಹರಣೆಗೆ ಸುಸಂಸ್ಕ್ರತ ಹಾಗೂ ಉತ್ತಮ ಸಂಸ್ಕಾರದ ಕುಟುಂಬದಲ್ಲಿ ಜನಿಸಿದ ವ್ಯಕ್ತಿಯೊಬ್ಬ ಯಾವದೋ ಕಾರಣದಿಂದ ಬಾಲ್ಯದಲ್ಲಿಯೇ ತನ್ನ ಕುಟುಂಬದಿಂದ ದೂರವಾಗಿರಬಹುದು. ಪರಿಸ್ಥಿತಿಯ ಒತ್ತಡದಿಂದ ಅಪರಾಧಿಗಳ ಗುಂಪಿನಲ್ಲಿ ಸೇರ್ಪಡೆಯಾಗಿರಬಹುದು. ಆರಂಭದಲ್ಲಿ ಆ ಗುಂಪಿನ ಹೊಂದಿಕೊಳ್ಳುವದು ಅವನಿಗೆ ಅಸಹ್ಯವೆನಿಸಿದರೂ, ಕಷ್ಟಸಾಧ್ಯವಾದರೂ ಕೊನೆಗೆ ಅನಿವಾರವಾಗಿ ಅವನು ಆ ಪರಿಸ್ಥಿತಿಗೆ ಒಗ್ಗಿಕೊಂಡು ಬಿಡುತ್ತಾನೆ. ಹೀಗಾಗಿ ಅವನು ಸಹ ಕೊಲೆ,ದರೋಡೆಗಳಂಥ ಅಪರಾಧಗಳನ್ನು ಎಸಗಬಹುದು. ಅಂಥ ವ್ಯಕ್ತಿಯನ್ನು ನಾವು ಕಂಡಾಗ ಅವನ ಕೌಟುಂಬಿಕ ಹಿನ್ನಲೆಯೇ ಅವನ ನಡತೆಗೆ ಕಾರಣ-ಎಂದು ತೀರ್ಮಾನಕ್ಕೆ ಬರುವದು ತಪ್ಪಲ್ಲವೇ ? ಏಕೆಂದರೆ ಇಲ್ಲಿ ಅವನ ನಡತೆ ಮತ್ತು ಕುಟುಂಬಕ್ಕೆ ಯಾವ ಸಂಬಂಧವೂ ಇರುವದೇ ಇಲ್ಲ. ಆದ್ದರಿಂದ ಅನೇಕ ಅಭ್ಯಾಸಗಳ ಮೊತ್ತವಾದ ಸಂಸ್ಕಾರಗಳೇ ಒಗ್ಗೂಡಿ ನಮ್ಮ ಚಾರಿತ್ರ್ಯ ಅಥವಾ ನಡತೆಯನ್ನು ನಿರ್ಮಿಸುತ್ತವೆ. ಈ ಕಾರಣದಿಂದ “ಪುನರಾವರ್ತಿತ ಅಭ್ಯಾಸಗಳ ಮೊತ್ತವೇ ಒಬ್ಬ ವ್ಯಕ್ತಿಯ ಚಾರಿತ್ರ್ಯ, ಪುನರಾವರ್ತಿತ ಕ್ರಿಯೆಗಳಿಂದಲೇ ಚಾರಿತ್ರ್ಯದಲ್ಲಿ ರಚನಾತ್ಮಕ ಮಾರ್ಪಡು ಸಾಧ್ಯ” ಎಂಬ ಸ್ವಾಮಿ ವಿವೇಕಾನಂದರ ಮಾತು ಇಲ್ಲಿ ಉಲ್ಲೇಖನಾರ್ಹವಾಗಿದೆ.