ವಿಷಯಕ್ಕೆ ಹೋಗು

ಸದಸ್ಯ:Guruganesh Bhat/ನನ್ನ ಪ್ರಯೋಗಪುಟ2

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಶಿವಾನಂದ ಕಳವೆ

[ಬದಲಾಯಿಸಿ]

ಕನ್ನಡ ಕಂಡ ಮೇರು ಗ್ರಾಮೀಣ ಮತ್ತು ಪರಿಸರ ಪತ್ರಕರ್ತರಲ್ಲಿ ಶಿವಾನಂದ ಕಳವೆಯವರು ಪ್ರಮುಖರು. ಪರಿಸರ ಪರ ಕಾಳಜಿ ಮತ್ತು ಜ್ಞಾನ, ಅಪಾರ ತಿರುಗಾಟ, ಗ್ರಾಮೀಣ ಜನರ ಒಡನಾಟ ಮತ್ತು ಅಧ್ಯಯನಪೂರ್ಣ ಬರಹಗಳ ಮೂಲಕ ಹೆಸರಾದವರು ಶಿವಾನಂದ ಕಳವೆ. ಶಿರಸಿಯ ಪುಟ್ಟ ಗ್ರಾಮ ಕಳವೆಯಲ್ಲಿನ ಮಾಧ್ಯಮ ಸಂಸ್ಕೃತಿ ಅಭಿವೃದ್ಧಿ ಕೇಂದ್ರ ಪರಿಸರಾಸಕ್ತರ, ಪತ್ರಿಕೋದ್ಯಮ ವಿದ್ಯಾರ್ಥಿಗಳ ಕುತೂಹಲ ಬಿಂದು. ಹೆಸರು- ಶಿವಾನಂದ ಕಳವೆ ಹುಟ್ಟು, ಬಾಲ್ಯ- ಕಳವೆ ಶಿವಾನಂದ ಕಳವೆಯವರು ಶಿರಸಿಯ ಕಳವೆಯವರು ಜನಿಸಿದರು. ಪ್ರಾಥಮಿಕ, ಪ್ರೌಢ ಶಿಕ್ಷಣದ ಮುಗಿಸಿ ವಾಣಿಜ್ಯಶಾಸ್ತ್ರದಲ್ಲಿ ಪದವಿ ಪಡೆದ ಶಿವಾನಂದ ಕಳವೆಯವರಿಗೆ ಬರವಣಿಗೆಯ ಹುಚ್ಚು ಹತ್ತಲಾರಂಭಿಸಿತ್ತು.

 ಪರಿಸರ ಸಂರಕ್ಷಣೆ ಕುರಿತು ಶಿವಾನಂದ ಕಳವೆಯವರು ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಕೇಂದ್ರದಲ್ಲಿ ವಿವಿಧ ಶಿಬಿರಗಳನ್ನು ಏರ್ಪಡಿಸುತ್ತಾರೆ. ಕಾಡಿನಲ್ಲಿ ಶಾಲಾ ವಿದ್ಯಾರ್ಥಿಗಳಿಗಾಗಿ ಪ್ರಾಕ್ಟಿಕಲ್ ಪಾಠ ಮಾಡುತ್ತಾರೆ. ನೆಲ-ಜಲ ಸಂರಕ್ಷಣೆ ಮತ್ತು ಜನಜಾಗೃತಿ ಮೂಡಿಸುವ ಕಾರ್ಯದಲ್ಲಿ ಕಳವೆಯವರದ್ದು ದೊಡ್ಡ ಹೆಸರು. ಶಿರಸಿ ಸಮೀಪದ ನೀರ್ನಳ್ಳಿಯಲ್ಲಿರುವ ‘ಮಲೆನಾಡ ಮಳೆಕೇಂದ್ರ’ದ ರೂವಾರಿ ಇವರು.
ಈಸ್ಟ್ ಇಂಡಿಯ ಕಂಪನಿಯ ನಿರ್ದೇಶನದಂತೆ ೧೮೦೧ರಲ್ಲಿ ಡಾ. ಪ್ರಾನ್ಸಿಸ್ ಬುಕಾನನ್ ಎಂಬ ವಿದೇಶಿ ಅಧ್ಯಯನ ಪ್ರವಾಸಿ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಪ್ರವಾಸ ಮಾಡಿದ. ಅಲ್ಲಿಯ ಕೃಷಿ, ಪರಿಸರ, ಪರಿಸರ, ಜನಜೀವನಗಳನ್ನು ದಾಖಲಿಸಿದ. ಇದರ ಮಹತ್ವ ಅರಿತ ಶಿವಾನಂದ ಕಳವೆಯವರು ೨೦೦೧ರಲ್ಲಿ ಬುಕಾನನ್  ತಿರುಗಿದ ಹಾದಿಯಲ್ಲಿ ಮರುಪ್ರವಾಸ ಮಾಡಿ ವಿಶಿಷ್ಟ ಸಂಗತಿಗಳನ್ನು ದಾಖಲಿಸಿದರು. ಈ ಪ್ರವಾಸದ ಬರವಣಿಗೆ ‘ಕಾಡುನೆಲದ ಕಾಲಮಾನ’

ಕಾನ್ಮನೆಗೆ ಪರಿಸರ ಆಸಕ್ತರು, ಬರಹಗಾರರು ಒಮ್ಮೆಯಾದರೂ ಭೇಟಿಕೊಡಲೇಬೇಕಾದ ತಾಣ. ನಾಡಿನ ಉದ್ದಗಲ ಸಂಚರಿಸಿದ ಶಿವಾನಂದ ಕಳವೆಯವರು ದೇಸೀ ಜ್ಞಾನದ ವಿವಿಧ ಮಜಲುಗಳ ಅಧ್ಯಯನ ನಡೆಸಿದ್ದಾರೆ. ನಡಿನ ಬಹುತೇಕ ಎಲ್ಲ ಪತ್ರಿಕೆಗಳಲ್ಲೂ ಅಂಕಣ ಬರೆದಿದ್ದಾರೆ. ಅಂಕಣಗಳು- ಮುಡೇಬಳ್ಳಿ ಮುಳ್ಳೆಹಣ್ಣು ( ಸಂಪದ.ನೆಟ್ ಅಂತರಜಾಲ ಪತ್ರಿಕೆಗೆ) ಬಹುಧಾನ್ಯ ( ಉದಯವಾಣಿ) ದಾಟ್ ಸಾಲು ( ನೀರ ಸಂರಕ್ಷಣೆಯ ಕಾರ್ಯದ ದಾಖಲಾತಿ) ಶಿವಾನಂದ ಕಳವೆಯವರ ಕಾನ್ಮನೆ ಪತ್ರಕರ್ತರ, ಹವ್ಯಾಸಿ ಬರಹಗಾರರ ಪಾಲಿನ ಅಧ್ಯಯನ ಶಾಲೆಯೆಂದೇ ಪ್ರಸಿದ್ಧವಾಗಿದೆ. ‘ಗೌರಿ ಜಿಂಕೆ’ಯ ಕಾನ್ಮನೆಗೆ ಬಂದು ಕಳವೆಯವರ ಗೆಳೆತನ ಮಾಡಿದ್ದು ಈಗ ಇತಿಹಾಸ. ಗೌರಿಯ ನೆನಪಲ್ಲಿ ಬರೆದಿದ್ದಾರೆ ಗೌರಿ ಜಿಂಕೆಯ ಆತ್ಮಕಥೆ ಬರೆದಿದ್ದಾರೆ. ಶಿವಾನಂದ ಕಳವೆಯವರ ಪುಸ್ತಕಗಳು- ಕಾನ್ ಗೌರಿ ಗೌರಿ ಜಿಂಕೆಯ ಆತ್ಮಕಥೆ ಅರಣ್ಯ ( ಕನ್ನಡ ಪುಸ್ತಕ ಪ್ರಾಧಿಕಾರದಿಂದ ಪ್ರಕಟಿತ) ಅರಣ್ಯ ಜ್ಞಾನದ ಹತ್ಯಾಕಾಂಡ ಕಂಪ್ಯೂಟರ್ ಊಟ ಹಳ್ಳಿ ಮಾರಾಟ ಪತ್ರಕರ್ತರೇ ಟೈಂ ಉಂಟಾ? ಮಳೆ ಮನೆಯ ಮಾತುಕಥೆ ಕಾನ್ ಬಾಗಿಲು ಮಣ್ಣಿನ ಓದು ಒಂದು ತುತ್ತಿನ ಕಥೆ ಕ್ಷಾಮ ಡಂಗುರ ಜಲ ವರ್ತಮಾನ ಅನ್ನ ಕೊಡುವ ಅನನ್ಯ ತೋಟ – ತದ್ರೂಪಿ ಕಾಡು ( ಜಿ. ಕೃಷ್ಣ ಪ್ರಸಾದ್ ಅವರ ಜೊತೆ ಸಂಪಾದನೆ) ಒಡಲ ನೋವಿನ ತೊಟ್ಟಿಲ ಹಾಡು ಪಶ್ಚಿಮ ಘಟ್ಟದಲ್ಲಿ ಮೋನೋಕಲ್ಚರ್ ಮಹಾಯಾನ ಕಾನ್ ಚಿಟ್ಟೆ ಹಸಿರು ಪುಸ್ತಕದ ಹಳೆಯ ಪುಟಗಳು ಕಾಡು ನೆಲದ ಕಾಲಮಾನ ಕಾನ್ಮನೆಯ ಕಥೆಗಳು ಕಾವೇರಿ ಖಂಡ ಅನಲಾಗ್ ತೋಟಗಾರಿಕೆ ಕುರಿತ ಪುಸ್ತಕ ಮುದ್ರಣ ಹಂತದಲ್ಲಿ ( ೧೫/೦೯/೨೦೧೯ ರ ಮಾಹಿತಿಯಂತೆ) ಕಳವೆಯಲ್ಲಿ ನೀರಿಂಗಿಸುವ ಪ್ರಯೋಗಕ್ಕೆ ಕೈ ಹಾಕಿ ಯಶಸ್ವಿಯಾದ ಶಿವಾನಂದ ಕಳವೆಯವರು ತಮ್ಮ ಪ್ರಯತ್ನವನ್ನು ಬೇರೆಡೆಗೂ ವಿಸ್ತರಿಸಿದರು. ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಖಾಲಿ ಜಾಗದಲ್ಲಿ ನೀರಿಂಗಿಸುವ, ಕೆರೆ ಹೂಳು ಸ್ವಚ್ಛಗೊಳಿಸುವ ಕಾರ್ಯಕ್ಕೆ ಮುಂದಾದರು. ಚಿತ್ರನಟ ಯಶ್ ಅವರ ಯಶೋಮಾರ್ಗಕ್ಕೆ ನೀರಿಂಗಿಸುವ ಕಾರ್ಯಕ್ರಮದ ಉಸ್ತುವಾರಿ ಹೊತ್ತರು. ಶಿವಾನಂದ ಕಳವೆಯವರ ನೀರಿಂಗಿಸುವ ಸಾಹಸದಿಂದ ಇಂದು ಎಷ್ಟೋ ಜನರ ನೆಲ ಹಸಿರಾಗಿದೆ. ಕರ್ನಾಟಕ ರಾಜ್ಯ ಸರ್ಕಾರ ೨೦೦೬ ರಲ್ಲಿ ಪರಿಸರ ಪತ್ರಿಕೋದ್ಯಮಿ ಪ್ರಶಸ್ತಿ ನೀಡಿ ಗೌರವಿಸಿದೆ. ಸುವರ್ಣ ಸುದ್ದಿವಾಹಿನಿಯ ಅಸಾಮಾನ್ಯ ಕನ್ನಡಿಗ ಪ್ರಶಸ್ತಿ ನೀಡಿದೆ. ಪತ್ರಕರ್ತರಿಗೆ ಪರಿಸರ ಕಾಳಜಿಯ ಪಾಠ ಹೇಳುವ ಶಿವಾನಂದ ಕಳವೆಯವರಿಗೆ ರಾಜ್ಯದ ವಿವಿಧ ಸಂಘಸಂಸ್ಥೆಗಳು ಪುರಸ್ಕರಿಸಿ ಗೌರವಿಸಿವೆ.