ವಿಷಯಕ್ಕೆ ಹೋಗು

ಆಶಾಪೂರ್ಣಾದೇವಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಸದಸ್ಯ:Guljar Babu/sandbox ಇಂದ ಪುನರ್ನಿರ್ದೇಶಿತ)

ಆಶಾಪೂರ್ಣಾದೇವಿ

[ಬದಲಾಯಿಸಿ]
ಆಶಾಪೂರ್ಣಾದೇವಿ
ಜನನ
ಆಶಾಪೂರ್ಣಾದೇವಿ

ಕಲ್ಕತ್
ರಾಷ್ಟ್ರೀಯತೆಭಾರತೀಯ
ವೃತ್ತಿಕವಿ

ಪರಿಚಯ

[ಬದಲಾಯಿಸಿ]
ಆಶಾಪೂರ್ಣಾದೇವಿ ಆಶಾಪೂರ್ಣ ದೇವಿ ಅವರು ಬೆಂಗಾಲಿ ಭಾಷೆಯ ಕವಿಯಾಗಿದ್ದಾರೆ.ಇವರು  ೮ ಜನವರಿ ೧೯೦೯ರಂದು  ಕಲ್ಕತ್ತದಲ್ಲಿ ಹುಟ್ಟಿದರು. ಇವರು ಅನೇಕ ಬೆಂಗಾಲಿ ಭಾಷೆಯಲ್ಲಿ ತಮ್ಮ ಕವಿತೆಗಳನ್ನು ರಚಿಸಿದ್ದಾರೆ.ಇವರಿಗೆ ೧೯೭೬ರಲ್ಲಿ ಜ್ಞಾನಪೀಠ ಪ್ರಶಸ್ತಿ  ದೊರಕಿದೆ.ಹಾಗೂ ಪದ್ಮ ಶ್ರೀ ಪ್ರಶಸ್ತಿಯೂ ೧೯೭೬ರಲ್ಲಿ ಭಾರತ ಸರ್ಕಾರ ಅವರಿಗೆ ನೀಡಿದೆ. ಅಲ್ಲದೆ ಜಬಲ್ಪುರ್ ವಿಶ್ವವಿದ್ಯಾಲಯದಿಂದ ಡಿ.ಲಿಟ್ ಪದವಿಯನ್ನು ಪಡೆದಿದ್ದಾರೆ.ಅವರ ಅನೇಕ ಕವನಗಳನ್ನು ಗುರುತಿಸಿ ರಬೀನ್ದ್ರ ಭಾರತಿ ವಿಶ್ವವಿದ್ಯಾಲಯ, ವಿಶ್ವ ಭಾರತಿ ವಿಶ್ವವಿದ್ಯಾಲಯ ಹಾಗೂ ಇನ್ನಿತರ ವಿಶ್ವವಿದ್ಯಾಲಯಗಳು ಅವರಿಗೆ ೧೯೮೯ರಲ್ಲಿ ದಕ್ಷಿಣಕೊಟ್ಟಮದಲ್ಲಿ ಸನ್ಮಾನಿಸಿವೆ. 

ಪ್ರಶಸ್ತಿಗಳು

[ಬದಲಾಯಿಸಿ]

ಅಲ್ಲದೆ ಇವರಿಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯು ೧೯೯೪ರಲ್ಲಿ ದೊರಕಿದೆ. ಆಶಾಪೂರ್ಣ ದೇವಿ ಅವರ ತಂದೆ ಹೆಸರು ಹರೆನ್ದ್ರನಾಥ್.ಇವರಿಗೆ ೧೯೫೪ರಲ್ಲಿ ದ ಲೀಲಾ ಪ್ರಶಸ್ತಿಯನ್ನು ಕಲ್ಕತ್ತ ವಿಶ್ವವಿದ್ಯಾಲಯವು ನೀಡಿದೆ. ಅಲ್ಲದೆ ಇವರಿಗೆ ಭೂತನ್ ಮೊಹಿನಿ ದಾಸಿ ಮೆಡಲ್ ಪ್ರಶಸ್ತಿಯನ್ನು ೧೯೬೬ರಲ್ಲಿ ನೀಡಲಾಗಿದೆ.ಇವರಿಗೆ ಹರನತ್ ಘೊಶ್ ಮೆಡಲ್ವರಿಂದ ಬಂಗಿಯಾ ಸಾಹಿತ್ಯ ಪರಿಶತ್ ಹಾಗೂ ಜಗತ್ತರಿಣಿ ಗೊಲ್ಡ್ ಮೆಡಲ್ ಪ್ರಶಸ್ತಿಯನ್ನು ೧೯೯೩ರಲ್ಲಿ ಕಲ್ಕತ್ತ ವಿಶ್ವವಿದ್ಯಾಲಯ ನೀಡಿದೆ. ಅವರ ಕವನಗಳು ಯಾವುದೆಂದರೆ ಚಿತ್ರಕಲ್ಪ,ಬಕುಲ್ ಕಗೆಥಾ,ಕಲ್ಯಾಣಿ,ಅಗ್ನಿಪತ್ರಿಕ,ಪ್ರಿಯ ಗಲ್ಪೊ,ಶ್ರೀಮತಿ ಸಾಥ್. ಹೀಗೆ ಅನೇಕ ಕವನಗಳನ್ನು ಬರೆದಿದ್ದಾರೆ. ೧೯೯೨ರಲ್ಲಿ ಇವರು ಒಂದು ಮುಖವಾಣಿಯನ್ನು ಬಿಡುಗಡೆ ಮಾಡುತ್ತಾರೆ.ಆ ಅವರಿಗೆ ಕೇವಲ ೧೩ ವರ್ಷಗಳು.

ಪುಸ್ತಕಗಳು

[ಬದಲಾಯಿಸಿ]

ಆ ಕವಿತೆಯ ಹೆಸರು "ಬರೆರ್ ದಕ್".ಅದರೆ ಅದನ್ನು ಪ್ರಕಟಣೆ ಮಾಡಲಿಲ್ಲ. ನಂತರ ಎರಡು ವರ್ಷಗಳ ನಂತರ ಅವರಿಗೆ ಮದುವೆ ಆಗಿ ಅವರು ಕಲ್ಕತ್ತದಿಂದ ಕ್ರಿಷ್ಣನಗರಕ್ಕೆ ಹೋಗಿ ಅಲ್ಲಿ ಅವರು ನೆಲೆಸುತ್ತಾರೆ.೧೯೨೭ರಲ್ಲಿ ಮತ್ತೆ ಅವರು ಕಲ್ಕತ್ತದಲ್ಲಿ ನೆಲೆಯೂರುತ್ತಾರೆ.ಆಶಾಪೂರ್ಣ ದೇವಿಯವರು ಮೊದಲಿಗೆ ಮಕ್ಕಳು ಓದುವ ಪುಸ್ತಕಗಳನ್ನು ಬರೆಯುತ್ತಾರೆ ಅನಂತರ ಅವರು ಕವನಗಳನ್ನು ಹಾಗೂ ಸಣ್ಣ ಕತೆಗಳನ್ನು ಬರೆಯಲು ಆರಂಭಿಸುತ್ತಾರೆ.

ಕವನಗಳು

[ಬದಲಾಯಿಸಿ]

ಆಶಾಪೂರ್ಣ ದೇವಿಯವರು ಸುಮಾರು ೨೪೨ ಕವನಗಳನ್ನು ಬರೆದಿದ್ದಾರೆ.ಅಲ್ಲದೆ ಸುಮಾರು ೩೭ ಸಣ್ಣ ಕಥೆಗಳನ್ನು ಸಹ ಬರೆದಿದ್ದಾರೆ.ಸುಮಾರು ೬೨ ಮಕ್ಕಳ ಪುಸ್ತಕಗಳನ್ನು ರಚಿಸಿದ್ದಾರೆ. ಇದು ಬಂಗಾಳಿ ಭಾಷೆಗೆ ಅವರು ನೀಡಿದ ಕೊಡುಗೆಯಾಗಿದೆ.ಇವರ ಪ್ರೊಟೆಸ್ಟ್ ಎಂಬ ಕವನವನ್ನು ಬೇರೆ ಕವಿಗಳು ಅನುವಾದಿಸಿದ್ದಾರೆ.

ಸಾಮಾಜಿಕ ಕಳಕಳಿ

[ಬದಲಾಯಿಸಿ]

ಅಶಾಪೂರ್ಣದೇವಿಯವರು ಸಾಮಾಜಿಕ ಕಳಕಳಿಯನ್ನು ಹೊಂದಿದವರಾಗಿದ್ದರು ಹಾಗೂ ಸಮಾಜದಲ್ಲಿ ನಡೆಯುತ್ತಿದ್ದ ಅನೇಕ ಮೂಢನಂಬಿಕೆಗಳ ಬಗ್ಗೆ ತಮ್ಮ ಸಾಹಿತ್ಯದ ಮೂಲಕ ಜನಜಾಗೃತಿಯನ್ನು ಮೂಢಿಸುತ್ತಿದ್ದರು.ಇದಲ್ಲದೆ ಸಮಾಜದಲ್ಲಿ ಹೆಣ್ಣು ಮಕ್ಕಳಿಗೆ ಅಗುತ್ತಿರುವ ಶೋಷಣೆ ಬಗ್ಗೆ ತಮ್ಮ ಸಾಹಿತ್ಯದ ಮೂಲಕ ಜನರಿಗೆ ತಿಳಿಸುತ್ತಿದ್ದರು.ಆಶಾಪೂರ್ಣದೇವಿಯವರು ಬಡ ಕುಟುಂಬದಲ್ಲಿ ಹುಟ್ಟಿದರು ಅವರಿಗೆ ಸಾಹಿತ್ಯದ ಬಗ್ಗೆ ಹೆಚ್ಚು ಅಸಕ್ತಿಯನ್ನು ಹೊಂದಿದ್ದರು.ಇವರು ಹೆಚ್ಚಾಗಿ ಬಂಗಾಳಿ ಭಾಷೆಯನ್ನು ಮಾತನಾಡುತ್ತಿದ್ದರು, ಅಲ್ಲದೆ ಆ ಭಾಷೆಯನ್ನು ಹೆಚ್ಚಾಗಿ ಪ್ರೀತಿಸುತ್ತಿದ್ದರು. ಇವರು ಬಂಗಾಳಿ ಸಾಹಿತ್ಯದ ಮಹಿಳಾ ವಿಭಾಗದಲ್ಲಿ ಮೊದಲಿಗರಾಗಿ ನಿಲ್ಲುತ್ತಾರೆ.ಇವರು ಬಂಗಾಳಿ ಸಾಹಿತ್ಯಕ್ಕೆ ಅವರು ನೀಡಿದ ಕೊಡುಗೆ ಅಪಾರವಾದದ್ದು. ಆಶಾಪೂರ್ಣ ದೇವಿಯವರು ಕೇವಲ ಕವನಗಳಲ್ಲದೆ ಅವರು ಕವಿತೆಗಳು,ಸಣ್ಣಕಥೆಗಳು,ಸಾಹಿತ್ಯಗಳು,ಇದಲ್ಲದೆ ಇವರು ವಿಮರ್ಶಕರಾಗಿಯೂ ತಮ್ಮ ಕಾರ್ಯಾವನ್ನು ನಿರ್ವಹಿಸಿದ್ದಾರೆ.

ಆಶಾಪೂರ್ಣದೇವಿಯವರು ತಮ್ಮ ಚಿಕ್ಕವಯಸ್ಸಿನಲ್ಲಿಯೇ ಸಣ್ಣಕಥೆಗಳನ್ನು ಬರೆಯಲು ಆರಂಭಿಸಿದರು. ಅನಂತರ ಅವರು ಹೆಚ್ಚಾಗಿ ಕವನಗಳನ್ನು ಬರೆಯಲು ಮುಂದಾಗುತ್ತಾರೆ. ಕಲ್ಕತ್ತಾ ವಿಶ್ವವಿದ್ಯಾಲಯದಲ್ಲಿ ಅವರಿಗೆ ಡಾಕ್ಟರೇಟ್ ಪ್ರಶಸ್ತಿಯನ್ನು ಪಡೆದಿದ್ದಾರೆ. ಅಲ್ಲದೆ ಇವರು ಸ್ವಯಂ ಆಸಕ್ತಿಯಿಂದ ಅವರು ತಮ್ಮ ವಿದ್ಯಾಭ್ಯಾಸವನ್ನು ಪಡೆದಿದ್ದಾರೆ.ಅಲ್ಲದೆ ಇವರಿಗೆ ಕೇವಲ ೧೫ನೇ ವರ್ಷದಲ್ಲಿಯೇ ಮದುವೆ ಮಾಡಲಾಗಿತ್ತು.ಇವರು ೨೦೦೧ರಲ್ಲಿ ಮರಣ ಹೊಂದುತ್ತಾರೆ.