ಸದಸ್ಯ:Gowramma K B/ನನ್ನ ಪ್ರಯೋಗಪುಟ5
ಅಕ್ಕಂಗಳ ಶ್ರೀ ಚಂದ್ರನಾಥ ಸ್ವಾಮಿ ಬಸದಿ, ವೇಣೂರು
ಸ್ಥಳ
[ಬದಲಾಯಿಸಿ]ಈ ಬಸದಿಯು ವೇಣೂರು ಶ್ರೀ ಬಾಹುಬಲಿ ಸ್ವಾಮಿ ಬೃಹನ್ಮೂರ್ತಿಯ ಎದುರಿಗಿರುವ ಪ್ರಾಂಗಣದ ತುದಿಯ ಎಡಬಾಗದಲ್ಲಿ ಪೂರ್ವಕ್ಕೆ ಮುಖಮಾಡಿ ಇದೆ.
ಇತಿಹಾಸ
[ಬದಲಾಯಿಸಿ]ಇದರ ಜಗಲಿಯಲ್ಲಿ ಒಂದು ಬೃಹತ್ತ ಶಿಲಾಶಾಸನವಿದೆ.ಅದರ ಅನುಸಾರ ಈ ಬಸದಿಯನ್ನು ವೇಣೂರಿನ ಅಜಿಲ ಅರಸ ತಿಮ್ಮರಾಜ ಓಡೆಯನ ಹಿರಿಯ ರಾಣಿಯಾದ ಪಾಂಡ್ಯಕ್ಕ ದೇವಿ ಮತ್ತು ಮಲ್ಲಿದೇವಿ ಎಂಬುವವರು ನಿರ್ಮಿಸಿದ್ದರು.ಅವರು ಅರಸರ ರಾಣಿಯರ ಪೈಕಿ ಹಿರಿಯವರಾಗಿದ್ದ ಕಾರಣ ಅಥವಾ ಗೌರವಾರ್ಥ ಅವರನ್ನು ಇತರರು ಅಕ್ಕಂಗಳು ಎಂದು ಕರೆಯುತ್ತಿದ್ದರು. ಆದುದರಿಂದ ಇದನ್ನು ಅಕ್ಕಂಗಲ ಬಸದಿಯೆಂದು ಕರೆಯಲಾಗಿದೆ.ಈ ಶಾಸನವು ಈರಾಣಿಯರ ಬಗ್ದಗೆ ಇನ್ನಷ್ಟು ಪರಿಚಯವನ್ನು ಕೊಡುತ್ತದೆ. ಅವರು ಕೊಂಬೆಟ್ಟು ಬಳಿಯ ಅರಸಕ್ಕಬ್ಬೆ ಎಂಬುವವರ ಮಗನಾದ ಪಾಂಡ್ಯಪ್ಪರೆಯ ಎಂಬುವನ ಮಗಳಂದಿರು,ಅವರಲ್ಲಿ ಒಬ್ಬಾಕೆ ವರ್ದಮಾನಕ್ಕ, ಇನ್ನೊಬ್ಬಳು ಮಲ್ಲಿದೇವಿ.ಇವರಿಬ್ಬರು ಸೇರಿ ಈ ಬಸದಿಯನ್ನು 1526ನೆಯ ಶಾಲಿವಾಹನ ಶಕ ಕ್ರಿ.ಶ.160ನೇ ಇಸಿವಿಯಲ್ಲಿ ಶೋಭಕೃತು ಸಂವತ್ಸರದ ಮೀನ ಮಾಸದಲ್ಲಿ ನಿರ್ಮಿಸಿದರು. ವಿನಿಯೋಗಗಳಿಗಾಗಿ ಪಾಪಿತಡುಕ ಎಂಬ್ಬಲ್ಲಿಯ ತಾಳೆತಿಮರು, ಕೈತಿಮರು ಬಾರಂಬುನೊಜದ ಮಾಚಿಲ ತಿಮರು, ಬಿನೋತಿಮರು ಹಾಗೂ ಇನ್ನೂ ಕೆಲವು ಗದ್ದೆಗಳನ್ನು ಉಂಬಳಿಯಾಗಿಬಿಟ್ಟಿದ್ದರು.ಈ ಬಸದಿಯ ನಿರ್ಮಾಣ ಕಾಲದಲ್ಲಿ ಇದನ್ನು ಪೂರ್ಣಶಿಲಾಮಯವಾಗಿ ನಿರ್ಮಿಸಿರಬೇಕು.ಅದರ ಲಕ್ಷಣಗಳು ಇಲ್ಲಿ ಕಂಡುಬರುತ್ತವೆ.ಇದು ೬-೬-೧೯೫೩ ಇನ್ನೊಮ್ಮೆ ಜೀರ್ಣೋದ್ದಾರವಾಗಿದ್ದೆ.[೧]
ವಿನ್ಯಾಸ
[ಬದಲಾಯಿಸಿ]ಈ ಬಸದಿಯು ಗಾತ್ರದಲ್ಲಿ ತುಂಬಾ ಚಿಕ್ಕದು.ಆದರೆ ಪ್ರಾರ್ಥನಾ ಮಂಟಪ ಮತ್ತು ಗರ್ಭಗೃಹಗಳು ಸುಮಾರು 1, 1/2 ಅಡಿ ಎತ್ತರದ ಇದೆ. ಇದರ ಒಳಗೆ ಅಮೃತ ಶಿಲೆಯ ಭಗವಾನ್ ಚಂದ್ರನಾಥ ಸ್ವಾಮಿಯ ಸುಂದರ್ ಮೂರ್ತಿ ಇದೆ. ಬದಲಾಗಿ ಶ್ರೀ ಪದ್ಮಾವತಿ ಅಮ್ಮನವರ ಒಂದು ಬಿಂಬವಿದೆ. ಹೊರಗೆ ಚಂದ್ರಕಾಂತ ಶಿಲಯ ಚಾವಡಿ ಇದೆ. ಇದು ಮಾತೃಶ್ರೀ ರತ್ನಮ್ಮನವರ ಕೊಡುಗೆ ಎಂದು ನಮೂದಿಸಲಾಗಿದೆ.
ಉಲ್ಲೇಖಗಳು
[ಬದಲಾಯಿಸಿ]- ↑ ಶೇಣೈ, ಉಮಾನಾಥ ವೈ. ಕರಾವಳಿ ಕರ್ನಾಟಕದ ಜಿನ ಮಂದಿರಗಳ ದರ್ಶನ. ಉಜಿರೆ: ಮಂಜೂಶ್ರೀ ಪ್ರಿಂಟರ್ಸ್. p. ೧೯೦.