ವಿಷಯಕ್ಕೆ ಹೋಗು

ಸದಸ್ಯ:Gowramma K B/ನನ್ನ ಪ್ರಯೋಗಪುಟ1

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪಾಶ್ರ್ವನಾಥ ಸ್ವಾಮಿ ಜಿನ ಮಂದಿರ, ಸ್ವಾದಿ ಇದನ್ನು ಶ್ರೀ 1008 ಪಾಶ್ರ್ವನಾಥ ಸ್ವಾಮಿ, ಶ್ರೀ ಪದ್ಮಾವತಿ ಅಮ್ಮನವರ ಬಸದಿಯೆಂದು ಕರೆಯುತ್ತಾರೆ. ಬಸಧಿಯ ಮೂಲನಾಯಕ ಭಗವಾನ್ ಶ್ರೀ ಪಾಶ್ರ್ವನಾಥ ಸ್ವಾಮಿ. ಬಸದಿಯು ಇಲ್ಲಿಯ ಶ್ರೀ ಆದಿನಾಥ ಸ್ವಾಮಿ ಬಸದಿಯ ಎಡಭಾಗದಲ್ಲಿದೆ. ಇದನ್ನು 2005ರಲ್ಲಿ ನೂತನವಾಗಿ ನಿರ್ಮಿಸಲಾಗಿದೆ. ಮಾತೆ ಪದ್ಮಾವತಿ ಯಕ್ಷಿ ಹಾಗೂ ಧರಣೇಂದ್ರಯಕ್ಷರನ್ನು ಇಲ್ಲಿ ಪ್ರತಿಷ್ಠಾಪಿಸಲಾಗಿದೆ. ಇದು ಸೋಂದಾ ಶ್ರೀ ಸ್ವಾದಿ ಜೈನ ಮಠದ ಆಡಳಿತದಲ್ಲಿದೆ. ಇದನ್ನು ಶ್ರೀ ಕ್ಷೇತ್ರ ಸ್ವಾದಿ ದಿಗಂಬರ ಜೈನ ಮಠದ ಪೀಠಾಧೀಶ ಪೂಜ್ಯ ಸ್ವಸ್ತಿ ಶ್ರೀ ಭಟ್ಟಾಕಳಂಕ ಭಟ್ಟಾರಕ ಸ್ವಾಮೀಜಿಯವರು ನೆಡೆಸುತ್ತಿದ್ದಾರೆ.

ಶಿರಸಿಯಿಂದ ಹುಲೇಕಲ್ ಮಾರ್ಗವಾಗಿ ಹೊರಟು ಇಲ್ಲಿಗೆ ನೇರವಾಗಿ ಬರಬಹುದು. ಒಟ್ಟು ದೂರ 18 ಕಿಲೋ ಮೀಟರ್. ಸಾರ್ವಜನಿಕ ಬಸ್ ಸೌಕರ್ಯವೂ ಇದೆ. ಇಂದು ಬಹು ಪ್ರಶಾಂತವಾಗಿರುವ ಈ ಸ್ಥಳವು ಹಿಂದು ಸೋದೆ ರಾಜ್ಯದ ರಾಜಧಾನಿಯಾಗಿತ್ತು. ಇದರ ಬಳಿಯಲ್ಲಿ ಪುರಾಣ ಪ್ರಸಿದ್ಧ ಸ್ವಾದಿ ಮಠ ಸಂಸ್ಥಾನದ ಮುತ್ತಿನ ಕೆರೆ ಇದೆ.ಶ್ರೀ ಆದಿನಾಥ ಸ್ವಾಮಿಯ ಬಸದಿಯ ಈ ಮಂದಿರದ ಬಲಭಾಗದಲ್ಲಿದೆ.[]

ಒಳವಿನ್ಯಾಸ

[ಬದಲಾಯಿಸಿ]

ಬಸದಿಯ ಗರ್ಭಗೃಹದಲ್ಲಿ ಶ್ರೀ ಪದ್ಮಾವತಿ ದೇವಿಯ ಮೂರ್ತಿಂಯೂ, ಅದರೆ ಮೇಲ್ಗಡೆ ಪೀಠದಲ್ಲಿ ಭಗವನ್ ಪಾಶ್ರ್ವನಾಥ ಸ್ವಾಮಿಯ ಪದ್ಮಾಸನಸ್ಥ ಸುಂದರ ಶಿಲಾಮೂರ್ತಿಯೂ ಇವೆ. ಸ್ವಾಮಿಯ ಶಿರದಿ ಮೇಲೆ ಬೃಗದಾಕಾರದ ಆಕರ್ಷಕ ನಾಗಘಣವಿದೆ. ಪ್ರತಿದಿನ ಪಂಚಾಮೃತ ಸಹವಾಗಿ ವಿವಿಧ ಅಭಿಷೇಕಗಳನ್ನು ಶಿಸ್ತುಬದ್ಧವಾಗಿ ನಡೆಸಲಾಗುತ್ತಿದೆ. ನೂತನ ಭಟ್ಟಾರಕರ ಪೀಠಾರೋಹಣವಾದ ಬಳಿಕ ಎಲ್ಲವೂ ಸುವ್ಯವಸ್ಥಿತವಾಗಿ ನಡೆಯುತ್ತಿದೆ.

ಹೊರಾಂಗಣ

[ಬದಲಾಯಿಸಿ]

ಬಹು ಸ್ವಚ್ಛವಾಗಿರುವ ಈ ಬಸದಿಯ ಪ್ರವೇಶದ್ವಾರವು ಬಹಳ ಸರಳವಾಗಿದ್ದು, ದ್ವಾರ ಪಾಲಕರ ಬಿಂಬಗಳಾಗಲೀ, ವರ್ಣಚಿತ್ರಗಳಾಗಲೀ ಇಲ್ಲ. ಇದನ್ನು ದಾಟಿ ಮುಂದೆ ಹೋದ ಕೂಡಲೇ ಪ್ರಾರ್ಥನಾ ಮಂಟಪ ಸಿಗುತ್ತದೆ. ಅಲ್ಲಿ ಜಾಗಟೆಗಳನ್ನು ತೂಗಿ ಹಾಕಲಾಗಿದೆ. ಮುಂದಿನ ಮಂಟಪದಲ್ಲಿ ಧರಣೇಂದ್ರ ಯಕ್ಷ ಮತ್ತು ಮದ್ಮಾವತಿ ದೇವಿಯ ಸಾನ್ನಿಧ್ಯವಿದೆ,ಶ್ರೀ ಪದ್ಮಾವತಿ ದೇವಿಯ ಬಿಂಬವು. ಕಾಲಿನ ಬಳಿಯಲ್ಲಿ ಕಕ್ಕುಟ ಸರ್ಪವಿದೆ,ಈ ಅಮ್ಮನವರ ಎದುರು ಹೂ ಹಾಕಿ ಪ್ರಸಾದ ನೋಡುವ ಪದ್ಧತಿಯೂ ಇದೆ.ಇವುಗಳಿಗೆ ಶ್ರದ್ಧಾ ಭಕ್ತಿಯಿಂದ ಪೂಜೆ ನಡೆಸಲಾಗುತ್ತದೆ. ದೇವಿಗೆ ಸೀರೆ ಉಡಿಸಿ, ಬಳೆಗಳನ್ನು ತೊಡಿಸಿ, ಹೂವಿನಿಂದ ಅಲಂಕಾರ ಮಾಡಿ ಪೂಜೆ ಮಾಡಲಾಗುತ್ತದೆ.

ಪೂಜಾ ವಿಧಾನ

[ಬದಲಾಯಿಸಿ]

ಇಲ್ಲಿಯ ಸಾನ್ನಿಧ್ಯಗಳಿಗೆ ಹರಕೆಯನ್ನು ಹೊತ್ತು ಪಾಥ್ರ್ರನೆಯನ್ನು ಮಾಡಿಕೊಂಡು ಇಷ್ಟಾರ್ಥಗಳನ್ನು ಈಡೇರಿಸಿಕೊಂಡ ಹಲವಾರು ಉದಾಹರಣೆಗಳಿವೆ. ಮಂದಿರದಲ್ಲಿ ಪ್ರತಿದಿನ ಮುಂಜಾನೆ ಅಭಿಷೇಕ ಮತ್ತು ಸಂಜೆ ಮಂಗಳಾರತಿಯ ಸೇವೆ ನಡೆಯುತ್ತವೆ. ನವರಾತ್ರಿಯ ವಿಜಯದಶಮಿ ಸಂದರ್ಭದಲ್ಲಿ ರಥೋತ್ಸವ ನಡೆಯುತ್ತದೆ. ಫಾಲ್ಗುನ ಅಷ್ಟಾಹ್ನಿಕ, ಪಾಶ್ರ್ವನಾಥ ಸ್ವಾಮಿ ಮೋಕ್ಷ ಕಲ್ಯಾಣ ಉತ್ಸವ, ದಶಲಕ್ಷಣ ಪರ್ವ, ನೂಲಹುಣ್ಣೆಮೆ, ಮಹಾವೀರ ಜಯಂತಿ, ಸಿದ್ಧ ಚಕ್ರ ಆರಾಧನೆ ಇತ್ಯಾದಿ ವಿಶೇಷ ಕಾರ್ಯಕ್ರಮಗಳು ನಡೆಯುತ್ತವೆ.ಅಲ್ಲಿ ಬ್ರಹ್ಮದೇವರ ಗುಡಿಯಿದ್ದು ಕೆಲವು ನಾಗನ ಕಲ್ಲುಗಳನ್ನು ಪೀಠದ ಮೇಲೆ ಪ್ರತಿಷ್ಠಾಪಿಸಿ ಪೂಜಿಸಲಾಗುತ್ತದೆ.

ಉಲ್ಲೇಖಗಳು

[ಬದಲಾಯಿಸಿ]
  1. ಶೇಣೈ, ಉಮಾನಾಥ ವೈ. ಕರಾವಳಿ ಕರ್ನಾಟಕದ ಜಿನ ಮಂದಿರಗಳ ದರ್ಶನ. ಉಜಿರೆ: ಮಂಜೂಶ್ರೀ ಪ್ರಿಂಟರ್ಸ್. p. ೩೪೯.