ವಿಷಯಕ್ಕೆ ಹೋಗು

ಸದಸ್ಯ:Gowda Preetham/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

'೧)''ತಾಯಿ ತೋರಿದ ಪ್ರೀತಿಯು ದೇವರ ಪ್ರೀತಿಗೆ ಸಮಾನ

ನಾ ಉದರದಲ್ಲಿ ಜನ್ಮಪಡೆದಾಗಲಿಂದ ನಾ ಬೆಳೆದು ದೊಡ್ದವನಾಗುವರೆಗೂ, ನನಗೆ ಆಸರೆಯಾಗಿ ನಿಲ್ಲುವಳು ಒಬ್ಬಳೇ. ಅವಳೇ ನನ್ನ ಅಮ್ಮ, ನನ್ನ ಪ್ರೀತಿಯ ತಾಯಿ.

ತನ್ನತನವನ್ನು ಮರೆತು ದುಡಿಯುವಳು; ತನ್ನ ಮಕ್ಕಳ ಏಳಿಗೆಗಾಗಿ ಅವಳು, ಕಷ್ಟಗಳನ್ನು ತಾನೆ ನುಂಗಿ ಸುಖವನ್ನು ಕೊಡುತ್ತ, ಬೆಳೆಸಿದಳು ಅವಳು ನನ್ನನ್ನು ಪ್ರೀತಿಸಿ ಮುದ್ದಾಡುತ್ತಾ.

ಅವಳ ಅಪರಿಮಿತ ಪ್ರೀತಿಗೆ ಪ್ರತಿಯಾಗಿ ನಾನೇನು ಕೊಡಲಿ? ಅವಳು ತೋರಿದ ಪ್ರೀತಿ ವಾತ್ಸಲ್ಯಕ್ಕೆ ಕೊಡುಗೆಯಾಗಿ, ಅವಳ ಆಸೆಯನ್ನು ಪೂರೈಸಿ, ಅವಳ ನಿಸ್ವಾರ್ಥ ಸೇವೆಗೆ ಚಿರಋಣಿಯಾಗಿ ಬಾಳಿ, ಅಮ್ಮ ಎಂಬ ಪಾತ್ರಕ್ಕೆ ಮೆರುಗು ನೀಡಬೇಕು.


೨)ಭಾರತ ಅಂದು-ಇಂದು

ಒಂದಾನೊಂದು ಕಾಲದಲ್ಲಿ ಭರತನು ಕಟ್ಟಿದ ನಾಡು ಹಲವು ಜಾತಿ, ಧರ್ಮ, ಭಾಷೆಗಳ ಬೀಡು ಎಲ್ಲರ ಮೈಮನ ಸೆಳೆಯುವ ಈ ಸುಂದರ ನಾಡು ಅದುವೇ ಈ ನಮ್ಮ ಭಾರತ ನಾಡು

ಶಾಂತಿ-ಕ್ರಾಂತಿ, ಹಿಂಸೆ-ಅಹಿಂಸೆ ಎಂಬ ಬಲಿಷ್ಠ ಅಸ್ತ್ರದಿಂದ ಹೊರದಬ್ಬಿದರು ಪರಕೀಯರನ್ನು ಈ ನಾಡಿನಿಂದ ಸ್ವಾತಂತ್ರ್ಯವನ್ನು ಕೊಡುಗೆಯಾಗಿ ನೀಡಿದರು ನಮಗೆ ಕಾಪಾಡಿ, ರಕ್ಷಿಸಿ ಆಡಳಿತವ ಮಾಡಿ ಎಂದು ಹೇಳಿದರುನಮಗೆ

ನಿಶಕ್ತಿಯಿಂದ ಬಳಲುತ್ತಿದೆ ಈ ನಾಡು ಭ್ರಷ್ಟಾಚಾರ ಎಂಬ ರೋಗದಿಂದ ಈ ರೋಗ ಸೃಷ್ಟಿಯಾಗಿ ಹರಡುತ್ತಿರುವುದು ಯಾರಿಂದ? ನಮ್ಮೆಲ್ಲರ ದುರಾಸೆ, ಸ್ವಾರ್ಥಕತೆಯ ಪಾಪದ ಕೊಡದಿಂದ ನಮ್ಮಿಂದ ಭರ್ತಿಯಾದ ಈ ಪಾಪದ ಕೊಡ ನಾವೇ ದೂರ ಚೆಲ್ಲಬೇಕು ಬನ್ನಿ, ಕೈ ಜೋಡಿಸಿ ಈ ಭ್ರಷ್ಟಾಚಾರ ಎಂಬ ಪಾಪದ ಕೊಡವನ್ನು ಕಿತ್ತೊಗೆಯಬೇಕು ಪುನಃ ನಮ್ಮ ನಾಡಿನ ವೈಭವ ಸರ್ವದಿಕ್ಕುಗಳಲ್ಲಿ ಪ್ರಜ್ವಲಿಸಬೇಕು.