ಸದಸ್ಯ:Gopala Krishna A/Anoop Rao

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Anoop Rao

ನಾವು ಈ ಬಾರಿ ಪರಿಚಯಿಸುತ್ತಿರುವ ವಿಕಿಪೀಡಿಯ ಸಾಧಕರು ಅನೂಪ್ ರಾವ್.
ಇವರು ಮೊದಲಿಗೆ ‍FANDOM ನಲ್ಲಿ VSTF ಸದಸ್ಯರಾಗಿದ್ದರು. ವಿಕಿಯಾದಲ್ಲಿ ಇವರು ಸ್ಪ್ಯಾಮ್, ವಿಧ್ವಂಸಕತೆ, ಸೂಕ್ತವಲ್ಲದ ಅಪ್‌ಲೋಡುಗಳನ್ನು ತೆಗೆದುಹಾಕುವ ಕೆಲಸವನ್ನು ಮಾಡಿದ್ದಾರೆ. ಅಲ್ಲಿ ಇವರು ವಿಕಿ ಬಗ್ಗೆ ತಮ್ಮ ಜ್ಞಾನವನ್ನು ಹೆಚ್ಚಿಸಿಕೊಂಡರು. ಅಲ್ಲಿ ಕಲಿತ ವಿಷಯಗಳು ಕನ್ನಡ ವಿಕಿಪೀಡಿಯದಲ್ಲಿ ತಾಂತ್ರಿಕವಾಗಿ ತುಂಬಾ ಮುಖ್ಯ ಪಾತ್ರವಹಿಸಿದೆ. ಇವರಿಗೆ ಸಮಯ ಸಿಕ್ಕಾಗ ತಾಂತ್ರಿಕ ಕೆಲಸಗಳನ್ನು ಮಾಡುವುದು, ಟೆಂಪ್ಲೇಟು, CSS ಸಹಾಯದಿಂದ ಡಿಸೈನ್ಗಳನ್ನು ಮಾಡುವುದು ಇತ್ಯಾದಿ.
ಕನ್ನಡ ವಿಕಿಪೀಡಿಯದ ನಿರ್ವಾಗಕರಲ್ಲಿ ಅನೂಪ್‌ರವರೂ ಒಬ್ಬರು. ಇವರು ನಿರ್ವಾಹಕರಾಗಿ ಅನೇಕ ತಾಂತ್ರಿಕ ಕೆಲಸಗಳನ್ನು ಕನ್ನಡ ವಿಕಿಪೀಡಿಯದಲ್ಲಿ ಮಾಡಿದ್ದಾರೆ. ತಾಂತ್ರಿಕ ಕೆಲಸಗಳಲ್ಲದೇ ಇತರ ಲೇಖನ ಬರೆಯುವುದು, ಸಮುದಾಯಕ್ಕೆ ತಾಂತ್ರಿಕ ತರಬೇತಿ ನೀಡುವ ಕೆಲಸವನ್ನೂ ಮಾಡಿದ್ದಾರೆ ಮತ್ತು ಮಾಡುತ್ತಿದ್ದಾರೆ. ಇವರು ಭಾರತೀಯ ಭಾಷೆಗಳಾದ ಕನ್ನಡ ಮತ್ತು ಹಿಂದಿಯಲ್ಲಿ FANDOMನಲ್ಲಿ ಮಾಡುತ್ತಿರುವ ಕೆಲಸಗಳಿಗಾಗಿ ಸಿಬ್ಬಂಧಿಗಳಿಂದ ಪುರಸ್ಕೃತಗೊಂಡಿದ್ದಾರೆ. [೧][೨]