ಸದಸ್ಯ:Gireesha G

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಈ ಗ್ರಾಮವು ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನಲ್ಲಿದೆ. ಇದರ ಮೊದಲ ಹೆಸರು ಹೊನ್ನಗೆರೆ. ಈ ಊರಿನಲ್ಲಿ ಮೊದಲು ೪೦ರಿಂದ ೫೦ ಕುಟುಂಬಗಳು ವಾಸವಿದ್ದವು ಇವಾಗ ೪೫೦ ರಿಂದ ೫೦೦ ಕುಟುಂಬಗಳು ವಾಸ ಇವೆ. ಇಲ್ಲಿ  ಒಂದು ಚಿನ್ನದ ಗಣಿ ಇದ್ದು ನಮ್ಮ ಪೂರ್ವಜರ ಕಾಲದಲ್ಲಿ ಈ ಚಿನ್ನದ ಗಣಿಯಲ್ಲಿ ಒಂದು ಬಾರಿ ಚಿನ್ನದ ಹದಿರನ್ನು ತೆಗೆಯಲಾಗಿದೆ.[ಬದಲಾಯಿಸಿ]

ಈ ಗಣಿಯು ನಮ್ಮ ಊರಿನ ತೆಂಕಣ ದಿಕ್ಕಿನಲ್ಲಿದೆ ಈ ಗಣಿಯ ವಿಶೇಷತೆ ಏನೆಂದರೆ ಈ ಗಣಿಯಲ್ಲಿ ಒಂದು ಸುರಂಗ ಮಾರ್ಗವಿದ್ದು ಈ ಸುರಂಗ ಮಾರ್ಗದ ಮೂಲಕ ನಡೆದರೆ ವಳಗೆರೆ ಗ್ರಾಮದಿಂದ ಅಂಬಳೆ ಗ್ರಾಮಕ್ಕೆ ಸುರಂಗ ಮಾರ್ಗದ ಮೂಲಕ ಹೋಗಬಹುದು. ಇವಾಗ ಗಣಿಯ ಕೆಲಸ ನಿಂತಿದ್ದು ತಾತ್ಕಾಲಿಕವಾಗಿ ಸುರಂಗ ಮಾರ್ಗವನ್ನು ಮುಚ್ಚಲಾಗಿದೆ ನಮ್ಮ ಊರಿನ ತೆಂಕಣ ದಿಕ್ಕಿನಲ್ಲಿ ತೆನೂರು ಮಲ್ಲಪ್ಪನವರ ದೇವಸ್ಥಾನ ಇದೆ ಮತ್ತು ಈ ಊರಿನ ಪಡುವಣ ದಿಕ್ಕಿನಲ್ಲಿ ಭೈರವೇಶ್ವರ ಸ್ವಾಮಿ ದೇವಸ್ಥಾನವಿದೆ.[ಬದಲಾಯಿಸಿ]

ಈ ದೇವಸ್ಥಾನವು ೪೮ ಗಡಿಗಳಿಗೆ ಸೇರಿರುವುದರಿಂದ ಈ ದೇವಸ್ಥಾನಕ್ಕೆ ಗಡಿ ಭೈರವೇಶ್ವರ ಎಂಬ ಹೆಸರಿದೆ. ಈ ದೇವಸ್ಥಾನದಲ್ಲಿ ಪ್ರತಿವರ್ಷ ಜನವರಿ ಅಥವಾ ಪೆಬ್ರವರಿ ತಿಂಗಳಿನಲ್ಲಿ ಹುಣ್ಣಿಮೆಯ ಮೂರು ದಿವಸಕ್ಕಿಂತಲೂ ಮೊದಲೆ ಜಾತ್ರೆಯನ್ನು ಮಾಡುತ್ತಾರೆ ಈ ಜಾತ್ರೆಯಲ್ಲಿ ವಳಗೆರೆ ,  ಹುಸ್ಕೂರು, ಶಿರಮಳ್ಳಿ, ಹೆಗ್ಗಡಹಳ್ಳಿ ಈ ೪ ಊರುಗಳಿಂದ ತೇರು ಅಥವಾ ವಾಹನವನ್ನು ಕಟ್ಟಿಕೊಂಡು ಬಂದು ದೇವರ ದರ್ಶನವನ್ನು ಮಾಡಿಕೊಂಡು ಭಕ್ತಾದಿಗಳು ಹೋಗುತ್ತಾರೆ.[ಬದಲಾಯಿಸಿ]

ಹಾಗೇಯೇ ಈ ಊರಿನ ದೇವತೆಯಾದಂತಹ ಪಾರ್ವತಿಯ ಉತ್ಸವವನ್ನು ಶಿವರಾತ್ರಿಯಾದ ನಂತರ ಗಂಡನ ಮನೆಯಾದಂತಹ ಶ್ರೀ ಶೈಲಕ್ಕೆ ಕಳುಹಿಸಿಕೊಡುತ್ತಾರೆ. ನಂತರ ೬ ತಿಂಗಳು ಕಳೆದು ನಂತರ ಅಂದರೆ ಆಗಸ್ಟ್ ತಿಂಗಳಿನಲ್ಲಿ ಆಷಾಢ ಮಾಸ ಮುಗಿದ ನಂತರ ತನ್ನ ತಂದೆಯ ಮನೆಯಾದಂತಹ ವಳಗೆರೆ ಗ್ರಾಮಕ್ಕೆ ಕರೆತರಲಾಗುತ್ತದೆ ಹಾಗೇಯೇ ಈ ಊರಿನಲ್ಲಿ ೨೦೧೪ ಪೆಬ್ರವರಿ ತಿಂಗಳಿನಲ್ಲಿ ಗಣಪತಿ ದೇವಸ್ಥಾನವನ್ನು ನಿರ್ಮಿಸಲಾಯಿತು.[ಬದಲಾಯಿಸಿ]

ಇದರ ಪ್ರತೀಕವಾಗಿ ಪ್ರತಿವರ್ಷ ಜನವರಿ ಅಥವಾ ಪೆಬ್ರವರಿ ತಿಂಗಳಿನಲ್ಲಿ ಗಣಪತಿ ಆರಾಧನೆಯನ್ನು ಮಾಡುತ್ತಾರೆ ಹಾಗೇಯೇ ಪ್ರತಿ ಶನಿವಾರ ಶನಿಮಾತ್ಮನ ಪೂಜೆಯನ್ನು ಭಜನೆ ಮಾಡಿ ಹಾಗೂ ಊರಿನ  ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ನೆರೆವೆರಿಸಲಾಗುತ್ತದೆ.ಹೀಗೆ ವಳಗೆರೆ ಗ್ರಾಮವು ತನ್ನ ಪೂರ್ವಜರ ಕಾಲದಿಂದಲೂ ಸಾಮಾಜಿಕವಾಗಿ ,ಸಾಂಸ್ಕೃತಿಕವಾಗಿ,ಧಾರ್ಮಿಕವಾಗಿ, ಆರ್ಥಿಕವಾಗಿ, ತನ್ನ ಪರಂಪರೆಯನ್ನು ಉಳಿಸಿಕೊಂಡು ಬಂದಿದೆ.                                                                                                                         [ಬದಲಾಯಿಸಿ]

  ಗಿರೀಶ ಜಿ. ವಳಗೆರೆ                                                               [ಬದಲಾಯಿಸಿ]