ಸದಸ್ಯ:Gethraj d'soza

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನನ್ನ ಜೀವನ:

ನನ್ನ ಹೆಸರು ಗೀತ್ ರಾಜ್ ಡಿ'ಸೋಜ. ನಾನು 13/9/1998ರಂದು ಮಂಗಳೂರಿನ ಕುಲಾಸೊ ಆಸ್ಪತ್ರೆಯಲ್ಲಿ ಜನಿಸಿದೆನು. ನನಗೆ ಈ ಸುಂದರ ಜೀವ ನೀಡಿದ ನನ್ನ ಹೆತ್ತವರಿಗೆ ನಾನು ಸದಾ ಚಿರ‌‌ಋಣಿಯಾಗಿದ್ದೇನೆ. ನಾನು ಚೆನ್ನಾಗಿ ಓದಿ ಒಂದು ಉತ್ತಮ ಕೆಲಸಕ್ಕೆ ಸೇರಿ ನನ್ನ ಹೆತ್ತವರನ್ನು ಚೆನ್ನಾಗಿ ನೋಡಿಕೊಳ್ಳುವದು ನನ್ನ ಜೀವನದ ಉದ್ದೇಶ. ಪ್ರಸ್ತುತ ನಾನು ನನ್ನ ಕುಟುಂಬದ ಜೊತೆ ಎಲ್ಯಾರ್ ಪದವು ಎಂಬಲ್ಲಿ ವಾಸವಾಗಿದ್ದೇನೆ. ನನ್ನ ಶಿಕ್ಷಣ ಪ್ರಾರಂಭವಾದದ್ದು, ಫಜೀರಿನ ಸಂತ ಜೋಸೆಫರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ. ನಂತರ ತೊಕ್ಕೊಟ್ಟಿನ ಸಂತ ಸೆಬೆಸ್ಟಿಯನ್ ಪ್ರೌಢಶಾಲೆ ಮತ್ತು ಕಾಲೇಜಿನಲ್ಲಿ ನನ್ನ ಪ್ರೌಢ ಮತ್ತು ಪದವಿ ಪೂರ್ವ ಶಿಕ್ಷಣವನ್ನು ಮುಗಿಸಿ, ಪ್ರಸ್ತುತ ನಂತೂರಿನ ಪದುವಾ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನಲ್ಲಿ ಉನ್ನತ ವಿದ್ಯಾಭ್ಯಾಸವನ್ನು (ಬಿಬಿಎ) ಮಾಡುತ್ತಿದ್ದೇನೆ.

ನನ್ನ ಹವ್ಯಾಸ:

ಹಾಡುಗಾರನಾಗುವುದು. ಇದು ನನ್ನ ತಂದೆಯ ಆಸೆ. ನನ್ನ ತಂದೆ ನನಗೆ ಕೊಟ್ಟಿರುವ ಹೆಸರು ಗೀತ್‍ರಾಜ್. ಗೀತ್ ಅಂದರೆ ಹಾಡು, ರಾಜ್ ಅಂದರೆ ಅರಸ. ಒಟ್ಟಿನಲ್ಲಿ ನನ್ನ ಹೆಸರಿನ ಅರ್ಥ: ಹಾಡಿನ ಅರಸ. ಇದಲ್ಲದೇ, ಸಾಮಾನ್ಯವಾಗಿ ಎಲ್ಲರಂತೆ ಆಟ ಆಡುವುದು, ದೂರದರ್ಶನ ವೀಕ್ಷಣೆ, ಕಾಲೇಜಿಗೆ ಗೈರು ಹಾಜರಾಗಿ ಚಿತ್ರಮಂದಿರಕ್ಕೆ ಹೋಗಿ ಬೇರೆ ಬೇರೆ ಭಾಷೆಯ ಚಲನಚಿತ್ರಗಳನ್ನು ನೋಡುವುದು, ಜಂಗಮವಾಣಿಯನ್ನು ಬಳಸುವುದು ಕೂಡ ನನ್ನ ಹವ್ಯಾಸ.

Typed by: Wilben D' Souza (Prop: Souza Xerox, Eliyar Padav)