ಸದಸ್ಯ:Ganashree pushparaj/sandbox
ನನ್ನ ಹೆಸರು ಗಾನಶ್ರೀ. ನನ್ನ ತಂದೆಯ ಹೆಸರು ಆನಂದ, ತಾಯಿಯ ಹೆಸರು ಮಮತಾ. ನನ್ನ ಊರು ಕುಕ್ಕಾಜೆ.ನಾನು ನನ್ನ ಪಿ.ಯು. ವಿದ್ಯಾಭ್ಯಾಸವನ್ನು ವಿಶ್ವಮಂಗಳ ಕೊಣಾಜೆಯಲ್ಲಿ ಮಾಡಿರುತ್ತೇನೆ.ಪ್ರಸ್ತುತ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಪ್ರಥಮ ವಷದ ಬಿ.ಎಸ್ಸಿ ಯನ್ನು ಕಲಿಯುತ್ತಿದ್ದೇನೆ.ನನ್ನ ಹವ್ಯಾಸಗಳೆಂದರೆ ಕತೆ, ಕಾದಂಬರಿಗಳನ್ನು ಓದುವುದು ಹಾಗು ಸಸ್ಯಗಳಿಗೆ ನೀರು ಹಾಕುವುದು. ನನಗೆ ಪ್ರಿಯವಾದ ವಿಷಯವೇನೆಂದರೆ ಜೀವಶಾಸ್ತ್ರ. ನಮ್ಮದು ಒಂದು ಸುಂದರವಾದ ಚಿಕ್ಕ ಕುಟುಂಬ. ನಾನು ನನ್ನ ತಂದೆ ತಾಯಿ ಅಕ್ಕ ತಂಗಿಯನ್ನೊಳಗೊಂಡ ನನ್ನ ಕುಟುಂಬ ಚಿಕ್ಕ ಮನೆಯಲ್ಲಿ ಸುಂದರವಾದ ಬದುಕನ್ನು ನಡೆಸುತ್ತಿದೆ. ಮಂಗಳೂರು ಎಂಬ ಈ ಮಹಾ ನಗರದಲ್ಲಿ ಕುಕ್ಕಾಜೆ ಎಂಬ ಸಣ್ಣ ಊರಿನಲ್ಲಿ ವಾಸ್ತವ್ಯ ಹೂಡಿರುವ ನನ್ನ ಕುಟುಂಬವನ್ನು ನಾನು ತುಂಬಾ ಪ್ರೀತಿಸುತ್ತೇನೆ.
ಇನ್ನು ನನ್ನ ಕಾಲೇಜು ಜೀವನದಲ್ಲಿ ಭೇಟಿಯಾದ ನನ್ನ ಗೆಳೆಯರೆಂದರೆ ನನಗೆ ತುಂಬಾ ಇಷ್ಟ. ನಾನು ವಿಶ್ವಮಂಗಳದಲ್ಲಿ ಕಳೆದ ಪ್ರತಿಯೊಂದು ನಿಮಿಷ ಗಂಟೆ ದಿನಗಳನ್ನು ತುಂಬಾ ನೆನಪಿಸಿಕೊಳ್ಳುತ್ತೇನೆ. ಅಲ್ಲಿ ಕಳೆದ ಕ್ಷಣಗಳುನನ್ನ ಜೀವನದಲ್ಲಿ ಮರೆಯಲಾರದ ದಿನಗಳು ನನ್ನ ಗೆಳೆಯರು ನನ್ನನ್ನು ತುಂಬಾ ಪ್ರೀತಿಸುತ್ತಿದ್ದರು. ಈಗ ನನಗೆ ಆಲೋಸಿಯಸ್ ಕಾಲೇಜಿನಲ್ಲಿ ಒಳ್ಳೆಯ ಗೆಳೆಯರು ಸಿಕ್ಕಿದ್ದಾರೆ. ಅವರೊಂದಿಗೆ ಓದು ಹರಟೆ ಮುಂತಾದವುಗಳನ್ನು ಮಾಡಿಕೊಂಡು ಒಳ್ಳೆಯ ಕ್ಷಣಗಳನ್ನು ಕಳೆಯುತ್ತಿದ್ದೇನೆ.
ನನಗೆ ನನ್ನ ಅಕ್ಕ ತಂಗಿಯೆಂದರೆ ಬಹಳ ಪ್ರೀತಿ. ನನ್ನ ಅಕ್ಕ ನನ್ನ ಎಲ್ಲಾ ನೋವು ಸಂತೋಷಗಳಲ್ಲಿ ಜೊತೆಯಾಗಿ ಇದ್ದಳು. ನನ್ನ ತಂಗಿ ನನಗಿಂತ ಹತ್ತು ವಷ ಚಿಕ್ಕವಳು ಹಾಗಾಗಿ ಅವಳೊಂದಿಗೆ ಆಟವಾಡಿಕೊಂಡು ಗಲಾಟೆಮಾಡಿಕೊಂಡು ಅವಳಿಗೆ ಅವಳ ಕೆಲಸಗಳಲ್ಲಿ ಸಹಾಯ ಮಾಡಿಕೊಡುವುದು ಖುಷಿ ನೀಡುತ್ತದೆ.