ಸದಸ್ಯ:Ganashree devika/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಗುರು ಗ್ರಹಶೋಧಕ 'ಜುನೋ' ಕಕ್ಷೆಗೆ ನಾಸಾ ವಿಜ್ಷಾನಿಗಳ ಅಮೋಘ ಸಾಹಸಗಾಥೆ ಅಮೇರಿಕದ ಬಾಹ್ಯಕಾಶ ಸಂಶೋಧನಾ ಸಂಸ್ಥೆ' ನಾಸಾ' (ನ್ಯಾಶನಲ್ ಎರೋನಾಟಿಕ್ಸ್ ಏಂಡ್ ಸ್ಪೇಸ್ ಅಡ್ಮಿನಿಸ್ಟೆಷನ್ - ಎನ್ಎಎಸ್ಎ) ಕಳುಹಿಸಿರುವ ಬಾಹ್ಯಾಕಾಶ ನೌಕೆಯು ಐದು ವರ್ಷಗಳ ಸುದೀರ್ಘ ಪ್ರಯಾಣದ ಬಳಿಕ ಸೋಮವಾರ ಗುರು ಗ್ರಹವನ್ನು ತಲುಪಿದೆ. ತಾನು ಗುರುವಿನ ಧ್ರುವಗಳ ಸುತ್ತ ಪ್ರದಕ್ಷಿಣೆ ಬರುತ್ತಿರುವಾಗ ಸೌರಶಕ್ತಿ ಚಾಲಿತ ಬಾಹ್ಯಾಕಾಶ ನೌಕೆ 'ಜುನೋ' ಸಂದೇಶ ಕಳುಹಿಸಿದಾಗ ನಾಸಾ ಜೆಟ್ ಪ್ರೊಪಲ್ಯನ್ ಪ್ರಯೋಗಾಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಭೂ ನಿಯಂತ್ರಕರು ಸಂತೋಷದಿಂದ ಕರತಾಡಗೈದರು. ಜುನೊ ತನ್ನ ಗುರಿಯನ್ನು ತಲುಪುತ್ತಿದ್ದಂತೆಯೇ ತನ್ನ ವೇಗವನ್ನು ಕಡಿಮೆ ಮಾಡಲು ರಾಕೆಟೊಂದನ್ನು ಉಡಾಯಿಸಿತು ಹಾಗೂ ನಿಧಾನವಾಗಿ ಗುರುವಿನ ಕಕ್ಷೆಯಲ್ಲಿ ಸೇರಿಕೊಂಡಿತು. ಅದು ಇನ್ನು ಗ್ರಹಗಳ ರಾಜನ ಶೋಧ ಕಾರ್ಯಗಳನ್ನು ನಡೆಸಲಿದೆ. ಗುರು ಮತ್ತು ಭೂಮಿಗಳ ನಡುವಿನ ಸಂದೇಶ ವಿನಿಮಯದ ಸಮಯ ವ್ಯತ್ಯಾಸದ ಹಿನ್ನೆಲೆಯಲ್ಲಿ , ನೌಕೆಯು ಗುರು ಗ್ರಹದ ಕಕ್ಷೆಯನ್ನು ಸೇರುವ ಸಮಯದಲ್ಲಿ ಅದನ್ನು ಸ್ವಯಂ ಚಾಲನೆ (ಅಟೋ ಪೈಲಟ್) ಸ್ಥಿತಿಯಲ್ಲಿ ಇಡಲಾಗಿತ್ತು. ೧.೧ ಬಿಲಿಯನ್ ಡಾಲರ್ (ಸುಮಾರು ೭,೪೬೯ ಕೋಟಿ ರೂಪಾಯಿ) ವೆಚ್ಚದ ಯೋಜನೆ ಇದಾಗಿದ್ದು, ಜುನೋ ಮುಂದಿನ ೨೦ ತಿಂಗಳುಗಳಲ್ಲಿ ಗುರು ಗ್ರಹದ ನಿಕಟ ಚಿತ್ರಗಳನ್ನು ಭೂಮಿಗೆ ಕಳುಹಿಸಲಿದೆ. ಸೂರ್ಯನಿಂದ ಈದನೆ ಸ್ಥಾನದಲ್ಲಿರುವ ಗುರು ಗ್ರಹ, ಸೌರವ್ಯೂಹದ ಅತ್ಯಂತ ದೊಡ್ಡ ಗ್ರಹವಾಗಿದೆ. ಇದು ಅನಿಲ ಗ್ರಹವಾಗಿದ್ದು, ಕಲ್ಲು ಮಣ್ಣಿನ ಭೂಮಿ ಮತ್ತು ಮಂಗಳನಂತಲ್ಲ. ರೋಮನ್ ಪುರಾಣದಲ್ಲಿ ಬರುವ ಜುಪಿಟರ್ (ಗುರು ಗ್ರಹ)ನ ಮೋಡಗಳನ್ನು ಕೊರೆಯುವ ಪತ್ನಿ ಜುನೋ ಹೆಸರನ್ನು ಈ ಬಾಹ್ಯಾಕಾಶ ನೌಕೆಗೆ ಇಟ್ಟಿರುವುದನ್ನು ಸ್ಮರಿಸಬಹುದಾಗಿದೆ. ಇದು ಗುರು ಗ್ರಹಕ್ಕೆ ಸಂಬಂಧಿಸಿದ ಎರಡನೆ ಬಾಹ್ಯಾಕಾಶ ಯೋಜನೆಯಾಗಿದೆ. ೧೯೮೯ ರಲ್ಲಿ ಹಾರಿಸಲಾದ ಗೆಲಿಲಿಯೊ ಸುಮಾರು ಒಂದು ದಶಕದ ಕಾಲ ಗುರು ಗ್ರಹಕ್ಕೆ ಪ್ರದಕ್ಷಿಣೆ ಬಂದಿತು.