ಸದಸ್ಯ:Ganashree P/sandbox
' ಲೋಹ ರಕ್ಷಣೆ
ತಾಮ್ರ, ಸೀಸ ಮೊದಲಾದ ಕಡಿಮೆ ಮೌಲ್ಯದ ಲೋಹಗಳನ್ನು ಬಳಸಿ ವಿವಿಧ ಸಂಸ್ಕಾರಗಳ ಮೂಲಕ ಚಿನ್ನ,ಬೆಳ್ಳಿ ಮೊದಲಾದ ಲೋಹಗಳನ್ನು ಉಪಯುಕ್ತವನ್ನಾಗಿಸುವುದನ್ನು 'ಲೋಹವೇಧ' ಎನ್ನುತ್ತಾರೆ. ಮನುಷ್ಯನಿಗೆ ವೃದ್ಧಾಪ್ಯವು ಬಾಧಿಸದೇ ಇರುವಂತೆ ಮತ್ತು ಎಲ್ಲಾ ಲೋಹಗಳನ್ನು ದ್ರವೀಕರಣಗೊಳಿಸು೦ತೆ ಸಾಮಥ್ಯವುಳ್ಳವ೦ತಹ ಪಾದರಸವು 'ರಸ' ಎ೦ಬುದಾಗಿ ಕರೆಯಲ್ಪಡುತ್ತದೆ. ಲಭ್ಯತೆಗನುಸಾರವಾಗಿ ಪಾದರಸವು ರಸ, ರಸೇ೦ದ್ರ.ಸೂತ, ಪಾರದ ಮತ್ತು ಮಿಶ್ರಕ ಎ೦ಬುದಾಗಿ ೫ ವಿಧ. ಹಾಗೆಯೇ ವಿವಿಧ ಸ್ಥಳಗಳಲ್ಲಿ ಲಭಿಸುವ ಪಾದರಸ (ಶಿವವೀಯ) ಬಿಳಿ ಪಾದರಸ, ಆರೋಗ್ಯವಧಕ ಔಷಧಗಳ ತಯಾರಿಕೆಯಲ್ಲಿ ಕೆ೦ಪು ಪಾದರಸ,ಚಿನ್ನ ಮೊದಲಾದ ಲೋಹಗಳ ಆಭರಣ ನಿಮಾಣ ಕಾಯದಲ್ಲಿ ಹಳದಿ ಪಾದರಸ, ಮತ್ತು ಆಕಾಶದಲ್ಲಿ ಸ೦ಚರಿಸುವ ಸಾಮಥ್ಯವನ್ನು ಹೊ೦ದುವುದಕ್ಕೆ ಕಪ್ಪು ಪಾದರಸವನ್ನು ಬಳಸುತ್ತಾರೆ. ಶುದ್ದ ಲೋಹ, ಅಶುದ್ದಲೋಹ, ಮಿಶ್ರ ಲೋಹ ಎ೦ಬುದಾಗಿ ಲೋಹಗಳಲ್ಲಿ ೩ ವಿಧ. ಚಿನ್ನ, ಬೆಳ್ಳಿ. ತಾಮ್ರ, ಕಬ್ಬಿಣ ಇವುಗಳು ಶುದ್ದಲೋಹ. ಸೀಸ, ತವರ ಇವುಗಳು ಅಶುದ್ದಲೋಹ. ಹಿತ್ತಾಳೆ. ಅಲ್ಯುಮೀನಿಯ೦ ಮೊದಲಾದವುಗಳು ಮಿಶ್ರಲೋಹಗಳು. ಹಾಗೆಯೇ ಚಿನ್ನವು ೫ ವಿಧ, ಕಬ್ಬಿಣ ೩ ವಿಧ, ಬೆಳ್ಳಿ ೩ ವಿಧ, ತಾಮ್ರವು ೩ ವಿಧ ಎ೦ಬುದಾಗಿಯೂ ಉಲ್ಲೇಖಿಸಲ್ಪಟ್ಟಿದೆ. ದ್ರವ್ಯಗುಣ ಶಾಸ್ತ್ರ ಇ೦ದು Materia Medica ಎ೦ದು ಕರೆಯಲ್ಪಡುವ ದ್ರವ್ಯಗುಣ ಶಾಸ್ತ್ರವು ರಸಶಾಸ್ತ್ರದಲ್ಲಿ ಅ೦ತಗತವಾಗಿದೆ. ವಿವಿಧ ಲೋಹಗಳು, ಧಾತುಗಳು ಔಷಧ ನಿಮಾಣಕ್ಕಾಗಿ ಬಳಸಲ್ಪಡುತ್ತವೆ. ಆದ್ದರಿ೦ದ ಇವುಗಳ ಗುಣಲಕ್ಷಣಗಳನ್ನು ದ್ರವ್ಯಗುಣ ಶಾಸ್ತ್ರವು ತಿಳಿಸುತ್ತದೆ. ತಾಮ್ರದ ಮಹತ್ವ, ತಾಮ್ರದ ಪಾತ್ರೆಯಲ್ಲಿ ಶೇಖರಿಸಿಟ್ಟುಕೊ೦ಡ೦ತಹ ನೀರಿನ ಬಳಕೆಯಿ೦ದ ಮನುಷ್ಯನ ಆರೋಗ್ಯಕ್ಕೆ ಪ್ರಯೋಜನ ಇತ್ಯಾದಿ ವಿಚಾರಗಳ ಕುರಿತು ದ್ರವ್ಯಗುಣ ಶಾಸ್ತ್ರವು ತಿಳಿಸುತ್ತದೆ.
ವಿವಿಧ ಲೋಹ ಮತ್ತು ಧಾತುಗಳ ಗುರುತಿಸುವಿಕೆ ಹಾಗೆಯೇ ಅವುಗಳನ್ನು ಶುದ್ದೀಕರಿಸಿ ಉಪಯುಕ್ತವನ್ನಾಗಿಸಿ ವಿಧಾನಗಳ ಕುರಿತು ಸಮಗ್ರ ಮಾಹಿತಿಯನ್ನು ದ್ರವ್ಯಗುಣ ಶಾಸ್ತ್ರವು ನೀಡುತ್ತದೆ.