ವಿಷಯಕ್ಕೆ ಹೋಗು

ಸದಸ್ಯ:Gagana shetty

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
            ನನ್ನ ಹೆಸರು ಗಗನ ಶೆಟ್ಟಿ.ನಾನು ೮ನೇ ನವಂಬರ್ ೨೦೦೦ದಂದು ಮಂಗಳೂರಿನ ತುಳು ಭಾಷೆ ಮಾತನಾಡುವ ತುಳುವ ಬಂಟ ಕುಟುಂಬದಲ್ಲಿ ಜನಿಸಿರುತ್ತೇನೆ.ನನ್ನ ತಂದೆಯ ಹೆಸರು ಅಶೋಕ ಶೆಟ್ಟಿ.ನನ್ನ ತಾಯಿ ಸುವಾಸಿನಿ ಶೆಟ್ಟಿ.ನನಗೆ ಓರ್ವ ಅಣ್ಣನಿದ್ದಾನೆ. ಅವನ ಹೆಸರು ಗೌರವ್ ಶೆಟ್ಟಿ.ಅವನು ಕ್ರೈಸ್ಟ್ ಯೂನಿವರ್ಸಿಟಿಯಲ್ಲಿ ಅವನ ಪದವಿಪೂರ್ವ ಅಧ್ಯಯನವನ್ನು ಮುಗಿಸಿ ಪ್ರಸ್ತುತ ಒಂದು ಸಂಸ್ಥೆಯಲ್ಲಿ ಸಂಶೋಧನಾ ಮುಖ್ಯಸ್ಥನಾಗಿ ಕಾರ್ಯ ನಿರ್ವಹಿಸುತ್ತಿದ್ದಾನೆ.ನನ್ನ ತಂದೆ ನಮ್ಮ ಊರಿನಲ್ಲಿ ಜಿನಸಿ ವ್ಯಾಪಾರ ಮಾಡುತ್ತಿದ್ದರು.ನನ್ನ ತಂದೆಗೆ ಅವರ ಕೆಲಸದ ಮೇಲಿದ್ದ ಆಸಕ್ತಿ ಹಾಗು ಶ್ರದ್ಧೆ ನನ್ನ ಜೀವನದಲ್ಲಿ ಶಾಶ್ವತ ಪರಿಣಾಮನ್ನು ಬೀರಿದೆ.ಅನಾರೋಗ್ಯದಿಂದ ಬಳಲುತ್ತಿದ್ದ ನನ್ನ ತಂದೆ ೩ ತಿಂಗಳುಗಳ ಹಿಂದೆಯಷ್ಟೆ ದೈವಾಧೀನರಾದರು. ಆದರೆ ಅವರ ಜೀವನದ ಆದರ್ಷಗಳು ನನಗೆ ಸ್ಪೂರ್ತಿದಾಯಕವಾಗಿದೆ.
          ನಾನು ಬೆಂಗಳೂರಿಗೆ ನನ್ನ ಪದವಿಪೂರ್ವ ಅಧ್ಯಯನವನ್ನು ಪೂರೈಸಲು ಬಂದಿರುತ್ತೇನೆ.ಪ್ರಾಥಮಿಕ ಹಾಗು ಪ್ರೌಢಶಾಲಾ ಶಿಕ್ಷಣವನ್ನು ನಾನು ಮಂಗಳೂರಿನಲ್ಲಿಯೇ ಮುಗಿಸಿರುತ್ತೇನೆ.ಸುತ್ತ ಸಮುದ್ರಗಳಿಂದ ತುಂಬಿರುವ ಪ್ರದೇಶ ಅದು. ಪರಶುರಾಮ ಸೃಷ್ಟಿಸಿರುವ ಮಂಗಳೂರು ತುಂಬಾ ಸುಂದರವಾದ ಪ್ರದೇಶ.ಅಲ್ಲಿನ ನಾಗಾರಾಧನೆ ಹಾಗು ದೈವಾರಾಧನೆ ಬಹಳ ಪ್ರಸಿದ್ದವಾದುದು.ಹಸಿರಿನಿಂದ ತುಂಬಿರುವ ಊರು ಅದು.ನನಗೆ ಭಾರತೀಯ ಶಾಸ್ತ್ರೀಯ ಸಂಗೀತ ಹಾಗು ನೃತ್ಯದಲ್ಲಿ ಅಪಾರವಾದ ಆಸಕ್ತಿ ಇದೆ. 
          ಶಾಸ್ತ್ರೀಯ ಸಂಗೀತದಲ್ಲಿ ಜ್ಯೂನಿಯರ್ ಗ್ರೇಡ್ ಪರೀಕ್ಷೆಯಲ್ಲಿ ಹಾಗು ಭರತನಾಟ್ಯದಲ್ಲಿ ವಿದ್ವತ್ ಗ್ರೇಡ್ ಪರೀಕ್ಷೆಯಲ್ಲಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣಳಾಗಿರುತ್ತೇನೆ.ವಿದುಷಿ ಡಾ.ನಯನ ಸತ್ಯನಾರಾಯಣ ನನ್ನ ನೃತ್ಯ ಗುರುಗಳು.ಹದಿನೈದು ವರ್ಷಗಳಿಂದ ನಾನು ನಾಟ್ಯಾಭ್ಯಾಸವನ್ನು ಮಾಡುತ್ತಿದ್ದೇನೆ ಹಾಗು ನಾಲ್ಕು ವರ್ಷಗಳಿಂದ ಸಂಗೀತ ಅಭ್ಯಾಸವನ್ನು ಮಾಡುತ್ತಿದ್ದೇನೆ.ನಾಟ್ಯಕ್ಷೇತ್ರದಲ್ಲಿ ನನಗೆ ಆಸಕ್ತಿ ಇರುವುದರಿಂದ ನಾನು ಅದರಲ್ಲಿ ಮುಂದೆ ಅನೇಕ ಸಾಧನೆಗಳನ್ನು ಮಾಡಬೇಕೆಂದುಕೊಂಡಿದ್ದೇನೆ.ಭಾರತದ ವಿವಿಧ ಭಾಗಗಳಲ್ಲಿ ನಾನು ನನ್ನ ನೃತ್ಯ ಕಾರ್ಯಕ್ರಮಗಳನ್ನು ನೀಡಿರುವುದಲ್ಲದೆ ಅನೇಕ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿವಿಧ ಪ್ರಶಸ್ತಿಗಳಿಗೆ ಪಾತ್ರಳಾಗಿದ್ದೇನೆ.ಇದಲ್ಲದೆ ನನಗೆ ಭಾರತೀಯ ಸಂಸ್ಕೃತಿ ಹಾಗು ಆಚಾರ ವಿಚಾರಗಳ ಬಗ್ಗೆ ಹೆಚ್ಚಿನ ಆಸಕ್ತಿ ಇದೆ. ಭಾರತೀಯ ಸಂಸ್ಕೃತಿ ಬಹಳ ವಿಶಾಲವಾಗಿದೆ ಹಾಗು ವೈವಿಧ್ಯಮಯವಾಗಿದೆ.ಇದೇ ನನಗೆ ಅದರ ಕಡೆಗೆ ಆಸಕ್ತಿ ಬರುವ ಹಾಗೆ ಮಾಡಿದೆ. ನನಗೆ ಪ್ರಯಾಣ ಮಾಡುವುದೆಂದರೆ ಪಂಚಪ್ರಾಣ. "ದೇಶ ಸುತ್ತಿ ನೋಡು,ಕೋಶ ಓದಿ ನೋಡು" ಎಂಬ ಪ್ರಸಿದ್ದ ಗಾದೆ ಮಾತಿನಂತೆ ನಾನು ನಮ್ಮ ದೇಶದ ವಿವಿಧ ಪ್ರದೇಶಗಳಿಗೆ ಭೇಟಿ ಕೊಟ್ಟು ಅಲ್ಲಿನ ಜನ,ಸಂಪ್ರದಾಯ,ಆಚಾರ ವಿಚಾರಗಳ ಬಗ್ಗೆ ತಿಳಿದುಕೊಳ್ಳಬೇಕೆಂಬ ಕುತೂಹಲವಿದೆ.
        ಆದರೆ ನನ್ನ ಆರ್ಥಿಕ ಸಮಸ್ಯೆಗಳಿಂದಾಗಿ ನನಗೆ ಇಲ್ಲಿಯವರಗೂ ಹೆಚ್ಛಿನ ಜಾಗಗಳಿಗೆ ಭೇಟಿ ನೀಡುವ ಅವಕಾಶ ದೊರಕಲಿಲ್ಲ.ಓದಿನ ಕಡೆಗೆ ಬಂದರೆ ನನಗೆ ಸಂಖ್ಯಾಶಾಸ್ತ್ರದಲ್ಲಿ ಬಹಳ ಆಸಕ್ತಿ ಇದೆ.ಪ್ರಸ್ತುತ ನಾನು ಅದರಲ್ಲಿ ಪದವಿಪೂರ್ವ ಅಧ್ಯಯನವನ್ನು ಮಾಡುತ್ತಿದ್ದೇನೆ.ಮುಂದೆ ಅದೇ ಕ್ಷೇತ್ರದಲ್ಲಿ ಮುಂದುವರೆಯಬೇಕೆಂದುಕೊಂಡಿದ್ದೇನೆ.ಡೇಟಾ ವಿಶ್ಲೇಷಣದಲ್ಲಿ ನಾನು ಮುಂದೆ ಅನೇಕ ಸಾಧನೆಗಳನ್ನು ಮಾಡಬೇಕೆಂಬ ಗುರಿ ಇಟ್ಟುಕೊಂಡಿದ್ದೇನೆ.ನನ್ನ ಎಲ್ಲಾ ಸಾಧನೆಗಳಿಗೂ ನನ್ನ ತಂದೆಯೇ ಸ್ಪೂರ್ತಿ.ನಾನು ಮಧ್ಯಮ ವರ್ಗದ ಕುಟುಂಬದಲ್ಲಿ ಬೆಳೆದಿರುವ ಕಾರಣ ಎಲ್ಲಾ ತರಹದ ಸಮಸ್ಯೆಗಳನ್ನು ಎದುರಿಸಿರುತ್ತೇನೆ.ಆದ್ದರಿಂದ ನಾನು ನನ್ನಿಂದ ಸಾಧ್ಯವಾದಷ್ಟು ಸಹಾಯವನ್ನು ಸಮಾಜಕ್ಕೆ ನೀಡಬೇಕೆಂಬ ಆಶಯದಿಂದ ಲಕ್ಷ್ಯ ಎಂಬ ಸರ್ಕಾರೇತರ ಸಂಸ್ಥೆಯ ಮೂಲಕ ಸ್ಲಂ ಮಕ್ಕಳಿಗೆ ಸರಿಯಾದ ಮಾರ್ಗದರ್ಶಣವನ್ನು ನೀಡಿ ಅವರನ್ನು ಸರಿಯಾದ ದಾರಿಗೆ ತರುವ ಪ್ರಯತ್ನವನ್ನು ಮಾಡುತಿದ್ದೇನೆ.
        ಇದಲ್ಲದೆ ಲಲಿತಾ ಕಲಾ ಸದನ ಎಂಬ ನೃತ್ಯಸಂಸ್ಥೆಯನ್ನು ಪ್ರಾರಂಭಿಸಿ ೧೫ ವಿದ್ಯಾರ್ಥಿಗಳಿಗೆ ಭರತನಾಟ್ಯ ತರಬೇತಿಯನ್ನು ನೀಡುತ್ತಿದ್ದೇನೆ.ನನ್ನ ಭರತನಾಟ್ಯ ತರಬೇತಿಯಿಂದ ನನಗೆ ದೊರಕಿದ ಮೊತ್ತದ ಅರ್ಧಭಾಗವನ್ನು ನಾನು ಮಂಗಳೂರಿನ ಒಂದು ಅನಾಥಾಶ್ರಮಕ್ಕೆ ನನ್ನ ತಂದೆಯ ಹೆಸರಿನಲ್ಲಿ ದಾನ ಮಾಡುತಿದ್ದೇನೆ.ಈ ಮೂಲಕ ನಾನು ನಮ್ಮ ಸಮಾಜಕ್ಕೆ ಒಂದು ಸಣ್ಣ ಕಾಣಿಕೆಯನ್ನು ನೀಡುತ್ತಿದ್ದೇನೆ ಎಂಬ ತೃಪ್ತಿ ನನಗಿದೆ.ಮುಂದೆ ಇನ್ನು ದೊಡ್ಡ ಮೊತ್ತದಲ್ಲಿ ಸಮಾಜಕ್ಕೆ ಸಹಾಯ ಮಾಡಬೇಕೆಂದುಕೊಂಡಿದ್ದೇನೆ.
            
                                           ಧನ್ಯವಾದಗಳು.