ಸದಸ್ಯ:GIRIJA Chavhan 123/sandbox
ನಿರ್ವಹಣೆಯ ತತ್ವಗಳು
ಪೀಠಿಕೆ :-
ಇತ್ತೀಚಿನ ದಿನಗಳಲ್ಲಿ ನಿರ್ವಹಣೆಯು ವಿಶೇಷವಾದ ಕ್ಷೇತ್ರವೆಂದು ಪರಿಗಣಿಸಲ್ಪಟ್ಟಿದೆ. ಏಕೆಂದರೆ ಇದು ಕ್ರಮಬದ್ದ ಅಧ್ಯಯನವಾಗಿದೆ ಮತ್ತು ವ್ಯವಹಾರದ ನೈಜ ಸಂದರ್ಭಗಳಲ್ಲಿ ಆಚರಣೆಗೆ ತರಲಾಗುತ್ತದೆ ಹಾಗೂ ವಿಶೇಷ ಸಂಸ್ಥೆಗಳಲ್ಲಿ ಇದರ ಬಗ್ಗೆ ಅಧ್ಯಯನ ಮಾಡಲಾಗುತ್ತದೆ. ನಿರ್ವಹಣೆ ತತ್ವಗಳನ್ನು ಅನುಸರಿಸುವುದರಿಂದ ಉತ್ಪಾದನೆ, ಮಾರಾಟ ಮತ್ತು ಲಾಭಗಳಿಕೆ ವಿಷಯದಲ್ಲಿ ರಚನಾತ್ಮಕ ಮತ್ತು ಭದ್ರಬುನಾದಿಯನ್ನು ಹಾಕಿದೆ. ನಿರ್ವಹಣೆ ಕಾರ್ಯಗಳು ಕೆಲವೊಂದು ನಿರ್ವಹಣೆ ತತ್ವಗಳ ಮೇಲೆ ಆಧಾರಿತವಾಗಿವೆ. ನಿರ್ವಹಣೆಯ ತತ್ವಗಳು ನೈಜತೆಯ ಮೂಲಭೂತ ಹೇಳಿಕೆಗಳಾಗಿದ್ದು, ಕ್ರಿಯೆಗಳಿಗೆ ಮಾರ್ಗಸೂಚಿಗಳಾಗಿವೆ. ನಿರ್ವಹಣೆ ತತ್ವಗಳ ಅಭಿವೃದ್ದಿಗೆ ಅನೇಕ ನಿರ್ವಹಣಾತಜ್ಞರು ಬಹಳವಾಗಿ ಕೊಡುಗೆಗಳನ್ನು ನೀಡಿದ್ದಾರೆ. ಅವರುಗಳಲ್ಲಿ ಪ್ರಮುಖರೆಂದರೆ ಹೆನ್ರಿಫಯೋಲ್ ಮತ್ತು ಫ್ರೆಡರಿಕ್ ವಿನ್ ಸ್ಲೋ ಟೇಲರ್. ಈ ತತ್ವಗಳು ನಿರ್ವಹಣಾ ಸಾಮರ್ಥ್ಯವನ್ನು ಹೆಚ್ಚಿಸಲು ಮತ್ತು ವೈಜ್ಞಾನಿಕ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹಾಯವಾಗಿವೆ.ಈ ತತ್ವಗಳು ಕಟ್ಟುನಿಟ್ಟಾಗಿರುವುದಿಲ್ಲ ಮತ್ತು ಸಮಯ ಸಂದರ್ಭಗಳನುಸಾರ ಇವುಗಳನ್ನು ಅನುಕೂಲಕ್ಕೆ ತಕ್ಕಂತೆ ಮಾರ್ಪಾಡಿಸಬಹುದು. ಈ* ತತ್ವಗಳು ವಿಕಸಿತಗೊಳ್ಳುತ್ತವೆ ಮತ್ತು ನಿರಂತರ ವಿಕಸನ ಪ್ರಕ್ರಿಯೆಯನ್ನು ಹೊಂದಿವೆ.
ನಿರ್ವಹಣೆ ತತ್ವಗಳ ಅರ್ಥ
ನಿರ್ವಹಣೆಯ ತತ್ವಗಳು ಸಾಮಾನ್ಯ ಮಾರ್ಗದರ್ಶನಗಳಾಗಿದ್ದು ನಿರ್ದಿಷ್ಠ ಸಂದರ್ಭಗಳಲ್ಲಿ ಮತ್ತು ಕಾರ್ಯಸ್ಥಳಗಳಲ್ಲಿ ಮಾರ್ಗ ತೋರಿಸುತ್ತವೆ. ನಿರ್ವಾಹಕರು ತೀರ್ಮಾನಗಳನ್ನು ಆಚರಣೆಗೆ ತರಲು ಈ ತತ್ವಗಳು ಸಹಾಯವಾಗುತ್ತವೆ. ಇವುಗಳು ವಿಶಾಲವಾದ ಮತ್ತು ಸಾಮಾನ್ಯ ಮಾರ್ಗದರ್ಶನಗಳಾಗಿದ್ದು, ತೀರ್ಮಾನ ತೆಗೆದುಕೊಳ್ಳಲು ಮತ್ತು ಮಾನವನ ನಡವಳಿಕೆಗಳನ್ನು ಅಭ್ಯಸಿಸಲು ಸಹಾಯ ಮಾಡುತ್ತವೆ.
ನಿರ್ವಹಣೆ ತತ್ವಗಳ ಲಕ್ಷಣಗಳು
1. ಸಾರ್ವತ್ರಿಕ ಅನ್ವಯ
2. ಸಾಮಾನ್ಯ ಮಾರ್ಗಸೂಚಿಗಳು
3. ಆಚರಣೆ ಮತ್ತು ಪ್ರಯೋಗಾತ್ಮಕ ರಚನೆ
4. ನಮನೀಯತೆ
5. ನಡವಳಿಕೆ/ವರ್ತನೆಯ ಸ್ವರೂಪ ಪ್ರಾಧಾನ್ಯತೆ
6. ಕಾರಣ ಮತ್ತು ಪರಿಣಾಮ ಸಂಬಂಧಗಳು
7. ಸಾಂದರ್ಭಿಕ/ಸಂಭವನೀಯ
ಹೆನ್ರಿ ಫಯಾಲ್ ರವರ ನಿರ್ವಹಣೆ ತತ್ವಗಳು
ಹೆನ್ರಿ ಫಯಾಲ್ (1841-1925) ಇವರು ಆಧುನಿಕ ನಿರ್ವಹಣೆಯ ಪರಿಕಲ್ಪನೆಗಳಿಗೆ ಅಪಾರವಾದ ಕೊಡುಗೆಗಳನ್ನು ನೀಡಿದ್ದಾರೆ. ಆ ಕಾರಣಕ್ಕಾಗಿ ಅವರನ್ನು “ಸಾಮಾನ್ಯ ನಿರ್ವಹಣೆಯ ಪಿತಾಮಹ” ದು ಕರೆಯಲಾಗಿದೆ. ಇವರು ಎಲ್ಲಾ ಬಗೆಯ ಆಡಳಿತಕ್ಕೆ ಅನ್ವಯವಾಗುವಂತಹ ಸಾಮಾನ್ಯ ನಿರ್ವಹಣಾ ಸಿದ್ದಾಂತ ಪ್ರತಿಪಾದಕರೂ ಹೌದು.
ಹೆನ್ರಿ ಫಯಾಲ್ ಅವರ ನಿರ್ವಹಣೆಯ 14 ತತ್ವಗಳು ಈ ಕೆಳಕಂದಂತಿವೆ.
1. ಶ್ರಮವಿಭಜನೆ 2. ಅಧಿಕಾರ ಮತ್ತು ಜವಾಬ್ದಾರಿ 3. ಶಿಸ್ತು 4. ಏಕರೂಪದ ಆಜ್ಞೆ 5. ಏಕರೂಪ ನಿರ್ದೇಶನ 6. ವೈಯಕ್ತಿಕ ಆಸಕ್ತಿಯನ್ನು ಸಾಮಾನ್ಯ ಆಸಕ್ತಿಗೆ ಅಧೀನಗೊಳಿಸುವುದು 7. ಸಂಭಾವನೆ 8. ಕೇಂದ್ರೀಕರಣ ಮತ್ತು ವಿಕೇಂದ್ರೀಕರಣ 9. ಶ್ರೇಣಿಕೃತ ತತ್ವ 10. ಕ್ರಮಬದ್ಧತೆ 11. ಸಮಾನತೆ 12. ಸಿಬ್ಬಂದಿ ಸ್ಥಿರತೆ 13.ಸ್ವಯಂಪ್ರೇರಿತ ಪ್ರವೃತ್ತಿ 14.ಸಂಘಭಾವನೆ