ಸದಸ್ಯ:Fernandes.rinnu/sandbox
ಗೆಳೆತನ-ಸ್ನೇಹ
[ಬದಲಾಯಿಸಿ]ಪ್ರಪಂಚದಲ್ಲಿ ಸುಲಭವಾಗಿ ಹಣ ಸಂಪಾದಿಸಬಹುದು ಅಥವಾ ಕಷ್ಟಪಟ್ಟಾದರೂ ಹಣ ಸಂಪಾದಿಸಬಹುದು. ಆದರೆ ಜನಗಳನ್ನು ಸಂಪಾದಿಸುವುದು ಬಹಳ ಕಷ್ಟಕರ. ಜನ ಅಂದರೆ ನಮಗೆ ಬೇಕಾದ, ನಮಗೆ ಸರಿ ಹೊಂದುವ ಜನ ಸಿಗುವುದು ದುರ್ಲಭ. ಈ ರೀತಿ ಒಳ್ಳೆಯ ಜನಗಳನ್ನು ದೊರಕಿಸಿಕೊಳ್ಳುವುದೇ ಗೆಳೆತನ. ಮತ್ತು ಗೆಳೆತನದ ಸ್ವಭಾವವನ್ನು ನಾವೂ ಬೆಳೆಸಿಕೊಳ್ಳಬೇಕು.ಗೆಳೆತನ ಶಬ್ದಕ್ಕೆ ಬಹಕ ವಿಸ್ತಾರವಾದ ವ್ಯಾಪ್ತಿಯಿದೆ. ಒಬ್ಬರಿಗೊಬ್ಬರು ಎಂತಹ ಸಮಯದಲ್ಲಿಯೇ ಆಗಲಿ ಸಹಕರಿಸಿಕೊಂಡು ಸ್ನೇಹ ಹಸ್ತವನ್ನು ನೀಡುತ್ತಾ ಒಂದಾಗಿ ಬಾಳುವುದೇ ಗೆಳೆತನದ ಗುರಿ.ಗೆಳೆತನ ಮಾಡಬೇಕಾದರೆ ಸರಿಯಾಗಿ ಯೋಚಿಸಿ ಗೆಳೆಯರನ್ನು ಆರಿಸಿಕೊಳ್ಳಬೇಕು. ನಮ್ಮ ಸ್ವಭಾವಕ್ಕೆ ತಕ್ಕ ಗೆಳೆಯರನ್ನು ಸ್ನೇಹ ಬೆಳೆಸಿದಾಗ ಇಬ್ಬರಿಗೂ ಉತ್ತಮ ಮಾರ್ಗದಲ್ಲೆ ಮುಂದುವರಿಯಲು ಸಹಾಯಕವಾಗಬೇಕು. ಸ್ನೇಹಿತರಲ್ಲಿ ಯಾವ ಭೇದಭಾವನೆಗೂ ಅವಕಾಶವಿರಬಾರದು. ಬಡವ, ಬಲ್ಲಿದ, ಬುದ್ಧಿವಂತ, ದಡ್ಡ ಎಂಬುದಂತೂ ಬರಲೇಬಾರದು.
ಗೆಳೆಯರಾದವರು ಒಳ್ಳೆಯ ಕೆಲಸಗಳ್ಳನ್ನು ಮಾಡಲು ಹೊರಟಾಗ ಉತ್ತಮ ಸಲಹೆಗಳನ್ನು ಕೊಟ್ಟು, ತಾವೂ ತಮ್ಮದೇ ಕೆಲಸವೆಂದು ತಿಳಿದು ಪಾಲ್ಗೊಳ್ಳಬೇಕು. ಗೆಳೆಯರಲ್ಲಿ ಯಾರಾದರೂ ಬಡವರಿದ್ದರೆ, ಅವರಿಗೆ ನಮ್ಮ ಕೈಲಾದ ಸಹಾಯ ಮಾಡುಬೇಕು. ಪ್ರತಿಯೊಬ್ಬರೂ ಗೆಳೆಯರಾಗಿ ಬಾಳಿ, ಉತ್ತಮ ಸ್ವಭಾವದಿಂದ ಗೆಳೆಯರನ್ನು ಸಂಪಾದಿಸಿ ಅಡ್ಡದಾರಿ ಹಿಡಿಯುವ ಗೆಳೆಯರನ್ನು ದಾರಿಗೆ ಎಳೆದು ತಂದು ಎಲ್ಲರಲ್ಲೂ ಗೆಳೆತನ ಮೂಡಿಸಿ, ಬೆಳೆಸಲು ಪ್ರಯತ್ನಿಸಬೇಕು.