ಸದಸ್ಯ:Dsouza reecha/sandbox
ಬೇಸಿಗೆಯಲ್ಲಿ ಹಸಿರ ತೋರಣ
[ಬದಲಾಯಿಸಿ]ಬೇಸಿಗೆ ಬಂದಿದೆ. ಬಿಸಿಲ ಬೇಗೆಯಿಂದ ಮನೆಯೊಳಗೆ ಹೊರಗೆ ಅರಾಮವಾಗಿರುವುದೇ ಅಸಹನೀಯ ಅನ್ನಿಸುತ್ತಿದೆ. ಆದ್ದರಿಂದ ಬೇಸಿಗೆ ಕಾಲದಲ್ಲಿ ಹೊರಾಂಗಣ ತಂಪಾಗಿರುವಂತೆ ನೋಡಿಕೊಳ್ಳಬೇಕು. ಅದಕ್ಕೇನು ಮಾಡಬೇಕು ಎಂಬ ವಿವರ ಇಲ್ಲಿದೆ.
ಬಿಸಿಲು ತನ್ನ ಉಗ್ರ ಸ್ವರೂಪ ತೋರಿಸಲು ಆರಂಭಿಸಿದೆ. ಆದ್ದರಿಂದ ಹೊರಾಂಗಣ, ಬಾಲ್ಕನಿ, ಟೆರೇಸ್‌ನ್ನು ಬೇಸಿಗೆ ಕಾಲಕ್ಕೆ ಸಿದ್ಧ ಪಡಿಸುವ ಮಹತ್ವದ ಕೆಲಸಕ್ಕೆ ಈಗಲೇ ಮುಂದಾಗಬೇಕು. ಆಗ ಮಾತ್ರ ಸಂಜೆಯ ಹೊತ್ತು ಈ ಸ್ಥಳಗಳಲ್ಲಿ ಕುಟುಂಬ ಸದಸ್ಯರು, ಗೆಳೆಯರ ಜೊತೆ ಆರಾಮವಾಗಿ ಹರಟೆ ಹೊಡೆಯುತ್ತಾ ಕುಳಿತುಕೊಳ್ಳಲು ಸಾಧ್ಯ.
ಬಿಸಿಲಿಗೆ ತಡೆ: ಬಿಸಿಲಿಗೆ ತಡೆಯೊಡ್ಡಲು ಬ್ಲೈಂಡ್‌ಗಳನ್ನು ಅಳವಡಿಸಬಹುದು. ಇದಕ್ಕೆ ಕರ್ಟನ್ ಅಳವಡಿಸಿದರೆ ಸೂರ್ಯನ ಪ್ರಖರ ಬೆಳಕನ್ನು ತಡೆಯುತ್ತದೆ. ಹೀಗಾಗಿ ಆರಾಮದಾಯಕ ಚೇರ್ ಮತ್ತು ಟೇಬಲ್ ಹಾಕಿ ಔಟ್‌ಡೋರ್ ಡೈನಿಂಗ್ ಸ್ಪೇಸ್ ಮಾಡಿಕೊಳ್ಳಬಹುದು. ಇನ್ನು ಮಿಸ್ಟ್ ಫ್ಯಾನ್ ಹಾಕಿದರೆ ಬೇಸಿಗೆಯಲ್ಲೂ ತಂಪು ವಾತಾವರಣ ನಿರ್ಮಾಣವಾಗುತ್ತದೆ. ತೀರಾ ಬಿಸಿಲು ಬರುತ್ತಿದ್ದರೆ ಚಾಟಿಯಾಸ್ ಹಾಕಿ ಅದನ್ನು ತಡೆಯಬಹುದು. ರಾತ್ರಿ ಹೊತ್ತು ಕೂಡ ಇಲ್ಲಿ ಊಟ ಮಾಡುವುದರಿಂದ ಪುಲ್‌ಬ್ಯಾಕ್ ಕರ್ಟನ್‌ಗಳು ಇಲ್ಲಿಗೆ ಉತ್ತಮ. ಅತಿಯಾದ ಫರ್ನಿಶಿಂಗ್ ಮಾಡದೆ ತೀರಾ ಸರಳವಾಗಿ ಇದನ್ನು ಇಟ್ಟುಕೊಳ್ಳಬೇಕು.
ಸೌಂದರ್ಯವರ್ಧಕ: ಔಟ್‌ಡೋರ್ ಡೆಕೊರೇಶನ್‌ನಲ್ಲಿ ಸಾಮಾನ್ಯವಾಗಿ ಟೆರಕೋಟಾ ಅಥವಾ ಕಲ್ಲು ಉತ್ತಮವಾಗಿ ಹೊಂದಿಕೆಯಾಗುತ್ತದೆ. ಟೆರಕೋಟಾ ಆನೆ, ಕುದುರೆ, ಒಂಟೆ ಬಳಸಿದರೆ ಅಲ್ಲಿರುವ ಗಿಡಗಳ ನಡುವೆ ವಿಶೇಷ ಆಕರ್ಷಣೆ ಒದಗಿಸುತ್ತದೆ. ಅವಶ್ಯಕವಾದರೆ ಲ್ಯಾಟಿನ್ ಮತ್ತು ಚಿಕ್ಕ ಗಂಟೆಗಳನ್ನು ಕೂಡ ತೂಗು ಹಾಕಬಹುದು. ಇದನ್ನು ಹೊರತು ಪಡಿಸಿದರೆ ವಿಗ್ರಹ, ಅನನ್ಯ ಗಾಡಿ, ಕಲ್ಲಿನ ಸ್ತಂಭ ಕೂಡ ಹೊರಾಂಗಣಕ್ಕೆ ಸೂಕ್ತವಾಗಿ ಹೊಂದಿಕೊಳ್ಳುತ್ತದೆ. ಬಾಲ್ಕನಿಯಲ್ಲಿ ತೀರಾ ಹೆಚ್ಚು ಫರ್ನಿಚರ್ ಹಾಕಬಾರದು. ಬಾಲ್ಕನಿ, ಟೆರೇಸ್, ಪಾಟಿಯೋ ಮತ್ತು ಗಾರ್ಡನ್‌ಗೆ ಪ್ರತ್ಯೇಕ ಚೇರ್‌ಗಳಿವೆ. ಅವುಗಳನ್ನು ಮಾತ್ರ ಬಳಕೆ ಮಾಡಬೇಕು. ಅವು ದೀರ್ಘ ಬಾಳಿಕೆಯ ಜೊತೆಗೆ ಎಲ್ಲಾ ವಾತಾವರಣಕ್ಕೂ ಹೊಂದಿಕೆಯಾಗುತ್ತವೆ. ಆದ್ದರಿಂದ ಯಾವಾಗಲೂ ತೇಗದ ಮರ, ಸೆರಾಮಿಕ್, ಕಲ್ಲು ಅಥವಾ ಸಿಂಥೆಟಿಕ್ ರ‌್ಯಾಟನ್ ಪೀಠೋಪಕರಣಗಳಿಗೆ ಹೆಚ್ಚು ಒತ್ತು ನೀಡಿ.