ಸದಸ್ಯ:TCsshetty/ನನ್ನ ಪ್ರಯೋಗಪುಟ3
ಲಿಯೋ ಡಿ'ಸೋಜ | |
---|---|
ಜನನ | ಮಾರ್ಚ್ ೧, ೧೯೩೨ ಕದ್ರಿ, ಮಂಗಳೂರು[[೧]] |
ವಾಸ | ಭಾರತ |
ರಾಷ್ಟ್ರೀಯತೆ | ಭಾರತೀಯ |
ಕಾರ್ಯಕ್ಷೇತ್ರಗಳು | ಸಸ್ಯಶಾಸ್ತ್ರ |
ಸಂಸ್ಥೆಗಳು | ಮಾಕ್ಸ್ ಪ್ಲಾಂಕ್ ಜರ್ಮನಿ[[೨]] ಸೈಂಟ್ ಜೋಸೆಫ್ ಕಾಲೇಜು ಬೆಂಗಳೂರು ಸೈಂಟ್ ಅಲೋಸಿಯಸ್ ಕಾಲೇಜು ಮಂಗಳೂರು[[೩]] |
ಅಭ್ಯಸಿಸಿದ ಸಂಸ್ಥೆ | ಮಾಕ್ಸ್ ಪ್ಲಾಂಕ್ ಜರ್ಮನಿ |
ಡಾಕ್ಟರೆಟ್ ಸಲಹೆಗಾರರು | ಜೋಸೆಫ್ ಸ್ಟ್ರಾಬ್ |
ಗಮನಾರ್ಹ ಪ್ರಶಸ್ತಿಗಳು | ಸಂದೇಶ ಪ್ರಶಸ್ತಿ |
ಲಿಯೋ ಡಿ'ಸೋಜ [[ರೋಮನ್ ಕಥೊಲಿಕ್[[೪]]]] ಮೂಲದ ಭಾರತೀಯ ಸಸ್ಯವಿಜ್ಞಾನಿ. ಅನ್ಯಯಿಕ ಸಸ್ಯಶಾಸ್ತ್ರದ ಪ್ರಯೋಗಾಲಯ ಸ್ಥಾಪಸಿ ಅಂಗಾಂಶ ಕಸಿಯ ಮೂಲಕ ಗೇರು ಬೀಜದ ಕ್ಕೃಷಿಯ ಬೆಳವಣಗೆಯಲ್ಲಿ ಪ್ರಮುಖ ಪಾತ್ರವನ್ನು ಇವರು ವಹಿಸಿದರು. ಇವರು ಸೈಂಟ್ ಅಲೋಸಿಯಸ್ ಕಾಲೇಜು ಮಂಗಳೂರಿನಲ್ಲಿ ಸಸ್ಯ ಶಾಸ್ತ್ರದ ಪ್ರಾಧ್ಯಾಪಕರಾಗಿದ್ದರು.
ಆರಂಭಿಕ ಜೀವನ
[ಬದಲಾಯಿಸಿ]ಲಿಯೋ ಡಿ'ಸೋಜ ಮಂಗಳೂರಿನ ಕದ್ರಿಯಲ್ಲಿ ರೋಮನ್ ಕಥೊಲಿಕ್ ಕುಟುಂಬದಲ್ಲಿ ೧೯೩೨ ರ ಮಾರ್ಚ್ ೧ ರಂದು ಜನಿಸಿದರು. ಅವರ ತಂದೆ ಸಿಪ್ರಿಯಾನ್ ಡಿ'ಸೋಜ ಮತ್ತು ಅವನ ತಾಯಿ ತೆರೇಸಾ ಡಿ'ಸೋಜ. ಮಂಗಳೂರಿನ ಸೈಂಟ್ ಅಲೋಸಿಯಸ್ ಕಾಲೇಜು ಶಾಲೆಯಲ್ಲಿ ಅವರು ತಮ್ಮ ಆರಂಭಿಕ ಅಧ್ಯಯನವನ್ನು ಮಾಡಿದರು.
ವಿದ್ಯಾಭ್ಯಾಸ
[ಬದಲಾಯಿಸಿ]ಲಿಯೋ ಡಿ'ಸೋಜ ತಮ್ಮ ಕಾಲೇಜು ವಿದ್ಯಾಭ್ಯಾಸವನ್ನು ಸೈಂಟ್ ಜೋಸೆಫ್ ಕಾಲೇಜು ತಿರುಚನಾಪಳ್ಳಿಯಲ್ಲಿ ಮುಗಿಸಿದರು. ನಂತರ ಅವರು ಜರ್ಮನಿಯ ಮಾಕ್ಸ್ ಪ್ಲಾಂಕ್ ಸಂಸ್ಥೆಯಲ್ಲಿ ಹೆಚ್ಚಿನ ಅಭ್ಯಾಸಕ್ಕೆ ಸೇರುತ್ತಾರೆ. ಅಲ್ಲಿ ಅವರು ಡಾಕ್ಟರೇಟ್ ಪದವಿ ಪಡೆದರು. ಧರ್ಮಶಾಸ್ತ್ರದ ಅದ್ಯಯನವನ್ನು ಸೈಂಟ್ ಜಾರ್ಜೆನ್ ಫ಼್ರಾಂಕ್ಫಫಟ್ ನಲ್ಲಿ ಮಾಡಿದರು.
ವೃತ್ತಿಜೀವನ
[ಬದಲಾಯಿಸಿ]ರೋಮನ್ ಕಥೊಲಿಕ್ ಯೇಸು_ಸಭೆ ಗೆ ಪಾದ್ರಿಯಾಗಿ ಸೇರಿದ ಲಿಯೋ ಡಿ'ಸೋಜ ಅವರು ತಮ್ಮ ವೃತ್ತಿಜೀವನವನ್ನು ಸೈಂಟ್ ಜೋಸೆಫ್ ಕಾಲೇಜು ಬೆಂಗಳೂರಿನಲ್ಲಿ ಉಪಾನ್ಯಾಸಕರಾಗಿ ಆರಂಭಿಸಿದರು.ಅನಂತರ ೧೯೮೦ ರಿಂದ ೧೯೯೦ ರವರೆಗೆ ಸೈಂಟ್ ಅಲೋಸಿಯಸ್ ಕಾಲೇಜು ಮಂಗಳೂರಿನಲ್ಲಿ ಪ್ರಾಂಶುಪಾಲರಾಗಿ ಅನಂತರ ೧೯೯೨ ರಿಂದ ೧೯೯೮ ರ ವರೆಗೆ ಸಂಸ್ಥೆಯ ರೆಕ್ಟರ್ ಆಗಿ ಸೇವೆ ಸಲ್ಲಿಸಿದರು. ಅನ್ಯಯಿಕ ಅನ್ಯಯಿಕ ಸಸ್ಯಶಾಸ್ತ್ರದ ಪ್ರಯೋಗಾಲಯದ ನಿರ್ದೇಶಕರಾಗಿ ೧೯೮೨ರಿಂದ ಸೇವೆ ಸಲ್ಲಿಸುತ್ತಿದ್ದಾರೆ.
ಸಂಶೊಧನೆ
[ಬದಲಾಯಿಸಿ]ಅಂಗಾಂಶ ಕಸಿಯ ಮೂಲಕ ಗೇರು ಬೀಜದ ಗಿಡಗಳನ್ನು ಪ್ರಥಮ ಬಾರಿಗೆ ಮಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ.[೧]</ref>[೨]ಅವರ ಸಂಶೊಧನೆ ಅಲಂಕಾರಿಕ ವಸ್ತುಗಳು ಮತ್ತು ಔಷದೀಯ ಸಸ್ಯಗಳನ್ನು ಒಳಗೊಂಡಿದೆ. ನೋಕಟೆ [[೫]](Gnetum)[೩] ಮತ್ತು ಇತರ ಅಳಿವಿನಂಚಿನ ಮತ್ತು ಕೆಂಪುಪಟ್ಟಿಯಲ್ಲಿನ ಸಸ್ಯಗಳಾದ ಮರದರಿಸಿನ [[೬]] (Coscinium fenestratum) [೪]ಮೇಲೆ ಇವರು ಪ್ರಯೋಗಗಳನ್ನು ಮಾಡಿದ್ದಾರೆ. ೭ ಸಂಶೊಧನಾ ವಿದ್ಯಾರ್ಥಿಗಳು ಅವರಲ್ಲಿ ಸಂಶೊಧನೆ ಮಾಡಿದ್ದಾರೆ.[೫][೬] [೭] ಡಾ. ಆಲಿಸ್ ಕ್ಲಾರ ಅಗಸ್ತಿನ್ [೮]ಡಾ. ವಿನೀತ ಕಾರ್ಡೋಜ[೯], ಡಾ. ಸ್ಮಿತಾ ಹೆಗ್ದೆ [೧೦], ಡಾ. ಶಶಿಕಿರಣ್ ನಿವಾಸ್ [೧೧] ಮೊದಲಾದವರು ಪ್ರಮುಖರು.
ಪ್ರಶಸ್ತಿಗಳು
[ಬದಲಾಯಿಸಿ]ಪ್ರತಿಸ್ಟಿತ ಸಂದೇಶ ಪ್ರಶಸ್ತಿ (೨೦೦೪) [೧೨] ಯಲ್ಲಿ ಅವರಿಗೆ ಸಂದಿದೆ. ೧೯೯೩ ರಲ್ಲಿ ಜೀವಮಾನದ ಸಾಧನೆಗಗಿ ಟಾಲೆಂಟ್ ಮಿಲಾದ್ ಪ್ರಶಸ್ತಿ [೧೩]ಮತ್ತು ಇನ್ನೂ ಹಲವಾರು ಪ್ರಶಸ್ತಿಗಳು ಅವರಿಗೆ ಬಂದಿವೆ.
- ↑ https://www.ijsr.net/archive/v3i11/T0NUMTQxNDQy.pdf
- ↑ https://www.ishs.org/ishs-article/738_58
- ↑ https://pubmed.ncbi.nlm.nih.gov/30727678/
- ↑ https://www.researchgate.net/publication/297507933_ISOLATION_OF_ENDOPHYTIC_FUNGI_FROM_COSCINIUM_FENESTRATUM_GAERTN_COLBER_A_RED_LISTED_ENDANGERED_MEDICINAL_PLANT
- ↑ https://www.cabi.org/isc/abstract/19860337190
- ↑ https://agris.fao.org/agris-search/search.do?recordID=US201301170591
- ↑ https://karnatakajesuits.org/publications/publications-of-fr-leo-dsouza-sj
- ↑ https://www.linkedin.com/in/aliceclareaugustine
- ↑ https://www.linkedin.com/in/vinitha-cardoza-616b7974
- ↑ https://in.linkedin.com/in/dr-smitha-hegde-3a18835
- ↑ https://in.linkedin.com/in/shashi-kiran-nivas-2b120813
- ↑ https://timesofindia.indiatimes.com/city/mangaluru/sandesha-awards-for-hamsalekha-and-eight-others/articleshow/17954215.cms
- ↑ https://www.daijiworld.com/news/newsDisplay?newsID=132250