ಸದಸ್ಯ:Dr,Vivekanand Sajjan/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಪ್ರಾಚೀನ ಕನ್ನಡ ಸಾಹಿತ್ಯದ ಸ್ವರೂಪ
ಪ್ರಾಚೀನ ಕನ್ನಡ ಸಾಹಿತ್ಯದ ಸಂದರ್ಭವು ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ತನ್ನ ಸತ್ವದ ದೃಷ್ಟಿಯಿಂದ ಅತ್ಯಂತ ಮಹತ್ವದ ಸ್ಥಾನವನ್ನು ಹೊಂದಿದೆ. ಆ ಕಾಲಘಟ್ಟವು ಪಂಪ, ಪೊನ್ನ, ರನ್ನ, ಜನ್ನ, ನಾಗಚಂದ್ರರಂತಹ ಪ್ರೌಢ ಕವಿಗಳು ಬಾಳಿ ಬದುಕಿದ ಕಾಲಘಟ್ಟವಾಗಿದ್ದು, ಸಂಸ್ಕೃತ, ಪ್ರಾಕೃತ ಭಾಷೆಗಳ ಕೃತಿಗಳು ಆ ಕಾಲಘಟ್ಟದ ಕೃತಿಗಳ ಮೇಲೆ ಪ್ರಭಾವ ಬೀರಿವೆ. 

ಪ್ರಾಚೀನ ಕನ್ನಡದ ಸಂದರ್ಭದಲ್ಲಿ ಶಾಸ್ತ್ರ ಕೃತಿಗಳು, ಕಾವ್ಯ, ಅಲಂಕಾರ ಗ್ರಂಥಗಳು ಸೇರಿದಂತೆ ವೈವಿಧ್ಯಮಯ ಪ್ರಕಾರದ ಕೃತಿಗಳು ರಚನೆಯಾಗಿರುವುದು ವಿಶೇಷವಾದ ಸಂಗತಿ. ಕನ್ನಡ ಸಾಹಿತ್ಯ ಚರಿತ್ರೆಯನ್ನು ವಿವಿಧ ರೀತಿಯಲ್ಲಿ ವರ್ಗೀಕರಿಸಲಾಗಿದೆಯಾದರೂ, ಆಯಾ ಕಾಲ ಘಟ್ಟಗಳಲ್ಲಿ ರಚನೆಯಾದ ಕೃತಿಗಳ ಭಾಷಿಕ ಅವಲೋಕನದ ಮೂಲಕ ಸ್ಥೂಲವಾಗಿ ಪ್ರಾಚೀನ ಕನ್ನಡ ಸಾಹಿತ್ಯ, ಮಧ್ಯಕಾಲೀನ ಕನ್ನಡ ಸಾಹಿತ್ಯ ಹಾಗೂ ಆಧುನಿಕ ಸಾಹಿತ್ಯ ಎಂದು ವರ್ಗೀಕರಣ ಮಾಡಲಾಗಿದೆ.

ಪ್ರಾಚೀನ ಕನ್ನಡ ಸಾಹಿತ್ಯ ಕಾಲ ಘಟ್ಟವು ರಾಜಾಶ್ರಯ, ಲೌಕಿಕ- ಆಗಮಿಕ ಕಾವ್ಯ ಧೋರಣೆಯಿಂದ ಕೂಡಿದ್ದು, ಆ ಸಂದರ್ಭದ ಕವಿಗಳು ತಾನು ಆಶ್ರಯದಲ್ಲಿದ್ದ ಅರಸನನ್ನು ರಾಮಾಯಣ ಅಥವಾ ಮಹಾಭಾರತದ ಕಥಾ ನಾಯಕರೊಂದಿಗೆ ಸಮೀಕರಿಸಿ ಲೌಕಿಕ ಕಾವ್ಯಗಳನ್ನು ಹಾಗೂ ಜೈನ ತೀರ್ಥಂಕರರ ಕಥಾನಕಗಳನ್ನು ಆಧರಿಸಿ ಆಗಮಿಕ ಕೃತಿಗಳನ್ನು ರಚಿಸಿದರು.

ಪ್ರಾಚೀನ ಕನ್ನಡ ಸಾಹಿತ್ಯದ ಪ್ರಮುಖ ಕವಿಗಳು[ಬದಲಾಯಿಸಿ]

ಪಂಪ, ಪೊನ್ನ, ರನ್ನ, ಜನ್ನ, ನಾಗಚಂದ್ರ ಕವಿಗಳು ಪ್ರಾಚೀನ ಕನ್ನಡ ಸಾಹಿತ್ಯದ ಪ್ರಮುಖ ಕೃತಿಕಾರರರೆಂದು ಪರಿಗಣಿಸಲ್ಪಟ್ಟಿದ್ದಾರೆ. ಇವರ ಕೃತಿಗಳು ಹೀಗಿವೆ. 

ಪಂಪನ ಕೃತಿಗಳು[ಬದಲಾಯಿಸಿ]

  1. ಆದಿಪುರಾಣ
  2. ವಿಕ್ರಮಾರ್ಜುನ ವಿಜಯಂ

ಪೊನ್ನನ ಕೃತಿಗಳು[ಬದಲಾಯಿಸಿ]

  1. ಶಾಂತಿಪುರಾಣ
  2. ಭುವನೈಕ ರಾಮಾಭ್ಯುದಯ

ರನ್ನನ ಕೃತಿಗಳು[ಬದಲಾಯಿಸಿ]

  • ಅಜಿತ ತೀರ್ಥಂಕರ ಪುರಾಣ
  • ಸಾಹಸಭೀಮ ವಿಜಯಂ

ನಾಗಚಂದ್ರನ ಕೃತಿಗಳು[ಬದಲಾಯಿಸಿ]

ಈ ರೀತಿ ಪ್ರಾಚೀನ ಕನ್ನಡ ಕಾಲಘಟ್ಟದ ಕವಿಗಳು ತಮ್ಮ ಕಾವ್ಯ ಧೋರಣೆಗೆ ಅನುಗುಣವಾಗಿ ಕಾವ್ಯಗಳನ್ನು ರಚಿಸಿದ್ದಾರೆ.