ಸದಸ್ಯ:Divyayn/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ


ರಾಜಪ್ಪ ಮಾಸ್ತರ[ಬದಲಾಯಿಸಿ]

ತೋಟದ ರಾಜಪ್ಪ ಕರ್ನಾಟಕ ರಾಜ್ಯದ ಸೊರಬ ತಾಲ್ಲೂಕಿನ ಬೊಮ್ಮನಹಳ್ಳಿ ಗ್ರಾಮದಲ್ಲಿ ದಿನಾಂಕ ೧೩-೦೭-೧೯೫೪ ರಂದು ಜನಿಸಿದರು. ಸೊರಬ ತಾಲ್ಲೂಕಿನ ಮಾವಲಿ ಗ್ರಾಮದ ಉಮಾ ಮಹೇಶ್ವರ ಪ್ರೌಢ ಶಾಲೆಯಲ್ಲಿ ಮುಖ್ಯೋಪಾಧ್ಯರಾಗಿ ಕಾರ್ಯ ನಿರ್ವಹಿಸಿದ್ದಾರೆ. ಕರ್ನಾಟಕದ ದಲಿತ ಮತ್ತು ಪ್ರಗತಿಪರ ಚಳುವಳಿಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡ ಇವರು ಸಾಮಾಜಿಕ ಹೋರಾಟಗಾರರಲ್ಲಿ ಇವರು ಒಬ್ಬರು. ೧೯೮೬ ರಲ್ಲಿ ಚಂದ್ರಗುತ್ತಿಯಲ್ಲಿ ನಡೆಯುತ್ತಿದ್ದ ಬೆತ್ತೆಲೆ ಸೇವೆಯನ್ನು ನಿಶೇದಿಸಲು ಪ್ರೊಫೆಸರ್ ಬಿ. ಕೃಷ್ಣಪ್ಪ ನವರೊಂದಿಗೆ ಹೋರಾಟ ನಡೆಸಿದ್ದಾರೆ. ೧೯೮೯ ರ ಕರ್ನಾಟಕ ಸಾಕ್ಷರತ ಆಂದೋಲನ ಪ್ರಯೋಗದಲ್ಲಿ ಕಾರ್ಯನಿರ್ವಹಿಸಿದ್ದಾರೆ. ೧೯೯೦ ರಲ್ಲಿ ಅಕ್ಷರ ತುಂಗಾದ ಮೂಲಕ ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲುಕಿನ ಜವಾಬ್ದಾರಿಯನ್ನು ವಹಿಸಿಕೊಂಡು ಯಶಸ್ವಿಗೊಳಿಸಿಕೊಟ್ಟಿದ್ದಾರೆ. ದಲಿತರು, ಅಲ್ಪ ಸಂಕ್ಯಾತರು ಮತ್ತು ಮಹಿಳೆಯರ ಹಕ್ಕುಗಳಿಗಾಗಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಮೂಲಕ ಹೋರಾಟ ನಡೆಸಿದ್ದಾರೆ. ಸೊರಬ ತಾಲ್ಲೂಕಿನಲ್ಲಿ ನಡೆದ ವಿವಿಧ ಸಾಮಾಜಿಕ ದೌರ್ಜನ್ಯಗಳ ವಿರುದ್ಧ ಧ್ವನಿ ಎತ್ತಿ, ಅಂತರ್ಜಾತೀಯ ವಿವಾಹ ಮತ್ತು ಸರಳ ವಿವಾಹಗಳಿಗೆ ಪ್ರೋತ್ಸಾಹಿಸಿದ್ದಾರೆ.

ಚಿತ್ರ:Http://www.prajavani.net/sites/default/files/article images/2014/06/10/09sor3ep.jpg
ರಾಜಪ್ಪ ಮಾಸ್ತರ್